ಸಂತೋಷದ ಸ್ವರೂಪ

ಇದು ಬ್ರಿಟಿಷ್‍ ವಿಜ್ಞಾನಿ ಡೆಸ್ಮಂಡ್ ಮಾರಿಸ್ ರವರ “ದಿ ನೇಚರ್‍ ಆಫ್‍ ಹ್ಯಾಪಿನೆಸ್‍ (Nature of Happiness)” ಪುಸ್ತಕದ ಭಾಷಾಂತರ. ಡೆಸ್ಮಂಡ್‍ ಮಾರಿಸ್‍ ಲಂಡನ್ನಿನ ಪ್ರಾಣಿಸಂಗ್ರಹಾಲಯದ ನಿರ್ದೇಶಕರಾಗಿದ್ದ ವಿಭಿನ್ನ ಪ್ರಾಣಿಗಳ ನಡವಳಿಕೆಗಳನ್ನು ನಿಕಟವಾಗಿ ಕಂಡಿದ್ದರು. ಈ ಅರಿವಿನ ಹಿನ್ನೆಲೆಯಲ್ಲಿ ಮಾನವನ ನಡವಳಿಕೆಗಳನ್ನೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ್ದರು. ಈ ಪ್ರಯತ್ನಗಳ ಫಲವಾಗಿ ಅವರ ಲೇಖನಿಯಿಂದ ಬಹಳಷ್ಟು ನಡವಳಿಕೆ ಶಾಸ್ತ್ರಜ್ಞರಿಗೆ ಸ್ಪೂರ್ತಿಯಾದಂತಹ ಹಾಗೂ ನಮ್ಮಂತ ಸಾಮಾನ್ಯರಿಗೆ ವಿಜ್ಞಾನದಲ್ಲಿ ಆಸಕ್ತಿಯನ್ನುಂಟು ಮಾಡುವಂತಹ ಹತ್ತಾರು ಪುಸ್ತಕಗಳು ಹೊರಹೊಮ್ಮಿವೆ. ಅವುಗಳಲ್ಲಿ ಮಾನವನ ನಡವಳಿಕೆಗಳನ್ನು ಅತಿ ಸೂಕ್ಷ್ಮವಾಗಿ ಗಮನಿಸುವ ಮ್ಯಾನ್‍ ವಾಚಿಂಗ್, ದಿ ನೇಕೆಡ್ ಮ್ಯಾನ್, ದಿ ನೇಕೆಡ್‍ ವುಮನ್, ದಿ ನೇಕೆಡ್‍ ಏಪ್‍, ಬೇಬಿ ವಾಚಿಂಗ್‍ ಹೆಸರಿಸುವಂತಹವು. ಇವೆಲ್ಲವೂ ಹಲವು ಭಾಷೆಗಳಿಗೆ ಅನುವಾದಗೊಂಡು ಲಕ್ಷಾಂತರ ಪ್ರತಿಗಳು ಮುದ್ರಣವಾಗಿವೆಯಾದರೂ ಕನ್ನಡವಷ್ಟೆ ಬಲ್ಲ ಓದುಗರಿಗೆ ಇವು ಅಲಭ್ಯ. ಈ ಕೃತಿಗಳಲ್ಲಿ ಕಾಣಬರುವ ಜೀವವಿಜ್ಞಾನದ ದೃಷ್ಟಿಕೋನದಲ್ಲಿ ಮಾನವನ ನಡವಳಿಕೆಗಳ ವಿಶ್ಲೇಷಣೆ ಎಲ್ಲರಿಗೂ ಕುತೂಹಲವನ್ನುಂಟು ಮಾಡುವುದಷ್ಟೆ ಅಲ್ಲ, ವಿಚಾರ ಪ್ರಚೋದಕವೂ ಆಗಬಲ್ಲವು.

ಈ ದೃಷ್ಟಿಯಿಂದ ಡೆಸ್ಮಂಡ್‍ ಮಾರಿಸ್ ಅವರ  ದಿ ನೇಚರ್‍ ಆಫ್‍ ಹ್ಯಾಪಿನೆಸ್ ಎಂಬ ಪುಟ್ಟ ಕೃತಿಯನ್ನು ಇಲ್ಲಿ ಕನ್ನಡೀಕರಿಸುತ್ತಿದ್ದೆನೆ. ಇದು ಭಾಷಾಂತರದಲ್ಲಿ ನಾನು ಕೈಗೊಳ್ಳುತ್ತಿರುವ ಒಂದು ಪ್ರಯೋಗವೂ ಹೌದು. ಕೃತಿಯ ಇಂಗ್ಲೀಷ್‍ ಮೂಲವನ್ನು ಜೊತೆಗೇ ಕೊಡಬಹುದಾಗಿತ್ತಾದರೂ, ಕಾಪಿರೈಟ್‍/ಕಾನೂನು ದೃಷ್ಟಿಯಿಂದ ಅದು ಯುಕ್ತವಲ್ಲವಾದ್ದರಿಂದ ಕೇವಲ ಕನ್ನಡ ಪಾಠವನ್ನಷ್ಟೆ ಒದಗಿಸುತ್ತಿದ್ದೇನೆ. ವಾರಕ್ಕೆ ಎರಡು ಮೂರು ಪುಟಗಳನ್ನು ಭಾಷಾಂತರಿಸಿ ಹಂಚಿಕೊಳ್ಳುವ ಉಮೇದಿದೆ.

ಮೂಲಕೃತಿಯ ಮುಖಪುಟ, ಕೃತಿವಿವರಗಳ ಪುಟ ಹಾಗೂ ಕೊನೆಯ ಪುಟಗಳು ಇಲ್ಲಿವೆ.

cover1

 

 

cover2titlepage

ಜೀವನವೊಂದು ಜೀವವಿಜ್ಞಾನ ಎನ್ನುವುದನ್ನು ತಿಳಿಸಿದ ಡೆಸ್ಮಂಡ್ ಮಾರಿಸ್ ಅವರಿಗೆ ಕೃತಜ್ಞತೆಗಳೊಂದಿಗೆ ಈ ಅನುವಾದವನ್ನು ಕನ್ನಡಿಗರಿಗಾಗಿ ನೀಡುತ್ತಿದ್ದೆನೆ = ಕೊಳ್ಳೇಗಾಲ ಶರ್ಮ.

Advertisements
ಪ್ರಕಟಿತ on ಡಿಸೆಂಬರ್ 20, 2015 at 5:07 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: