
ಉಲ್ಲೇಖ: Sergio Canavero HEAVEN: The head anastomosis venture Project outline for the first human head transplantation with spinal linkage (GEMINI) Surgical Neurology International Vol. 4, Suppl. 1, S335-S342, 2013 ಮತ್ತು ಸುದ್ದಿಗಳು
ಈ ತಂತ್ರದಿಂದ ಹಲವು ಸಂದಿಗ್ಧ ಸಂದರ್ಭಗಳು ಉಂಟಾಗಬಹುದು. ಕೆಲವನ್ನಷ್ಟೆ ಲೇಖನದಲ್ಲಿ ಬರೆಯಲು ಸ್ಥಳಾವಕಾಶ ಸಿಕ್ಕಿತು. ಆದರೆ ನನ್ನ ಮಿತ್ರ ಹರ್ಷ ಕೇಳಿದ ಪ್ರಶ್ನೆ ಇನ್ನೂ ಮನಸ್ಸನ್ನು ಕೊರೆಯುತ್ತಿದೆ. ಪರಕಾಯ ಕಸಿ ಪಡೆದವನು ಯಾವ ಸಂಗಾತಿಯನ್ನು ಬಯಸಬಹುದು? ತಲೆ ಕೊಟ್ಟ ವ್ಯಕ್ತಿಯ ಸಂಗಾತಿಯನ್ನೋ, ದೇಹ ಕೊಟ್ಟ ವ್ಯಕ್ತಿಯ ಸಂಗಾತಿಯನ್ನೋ? ಸ್ವಾರಸ್ಯಕರವಾದ ಪ್ರಶ್ನೆ. ಬಹುಶಃ ಇದು ಮದುವೆ ಎನ್ನುವ ಬಂಧ ಮಾನಸಿಕವೋ, ದೈಹಿಕವೋ ಎನ್ನುವಷ್ಟೆ ಸೂಕ್ಷ್ಮ. ಕಸಿ ಪಡೆದು ಬದುಕಿದವ ಖಂಡಿತ ಯಾವುದಾದರೂ ಒಂದು ಹಾದಿಯನ್ನು ಆಯ್ದುಕೊಳ್ಳಬಹುದು. ಆದರೆ ಆಯ್ಕೆಯಾಗದ ಸಂಗಾತಿಯ ಗತಿ, ಮನಸ್ಥಿತಿ ಏನಿದ್ದೀತು?