ಸಂತೋಷದ ಸ್ವರೂಪ- ಸಂತೋಷದ ಸೆಲೆ -1

(ಅಧ್ಯಾಯ 1)

ಸಂತೋಷದ ಸೆಲೆ

ಸಂತೋಷದ ಸ್ವರೂಪ ಕುರಿತಂತೆ ಅಪಾರ್ಥವೇ ಹೆಚ್ಚು. ಸಂತೋಷವೆಂದರೆ ಮಾನಸಿಕ ಶಾಂತಿ, ತೃಪ್ತಿ ಅಥವಾ ಸುಖ ಎಂದು ಗೊಂದಲಿಸಿಕೊಳ್ಳುವುದು ಸಾಮಾನ್ಯ.  ಬದುಕು ಚೆನ್ನಾಗಿದ್ದಾಗ ಇರುವ ಭಾವವೇ ಸುಖ, ಇದ್ದಕ್ಕಿದ್ದ ಹಾಗೆ ಬದುಕು ಸುಧಾರಿಸಿದಾಗ ಉಂಟಾಗುವ ಭಾವವೇ ಸಂತೋಷ. ಇದು ಇವೆರಡರ ನಡುವಿನ ವ್ಯತ್ಯಾಸವನ್ನು ತಿಳಿಸುವ ಉತ್ತಮ ವಿವರಣೆ. ಅದ್ಭುತವಾದದ್ದೇನೋ ಆದ ತತ್ ಕ್ಷಣದಲ್ಲೇ ಭಾವನೆ ಉಕ್ಕಿ ಹರಿಯುತ್ತದೆ. ಗಾಢ ಸುಖವೆನ್ನಿಸುತ್ತದೆ. ಆನಂದ ಸ್ಫೋಟಗೊಳ್ಳುತ್ತದೆ. ನಾವು ನಿಜಕ್ಕೂ ಸಂತೋಷವಾಗಿರುವ ಕ್ಷಣ ಎಂದರೆ ಇದೇ. ದುರದೃಷ್ಟವಶಾತ್, ಇದು ಹೆಚ್ಚು ಹೊತ್ತಿರುವುದಿಲ್ಲ. ಗಾಢ ಸಂತೋಷವೆನ್ನುವುದು ಕ್ಷಣಿಕ, ತಾತ್ಕಾಲಿಕ ಭಾವ. ಇನ್ನೂ ಒಂದಷ್ಟು ಹೊತ್ತು ಈ ಸುಖದ ಭಾವ ಉಳಿಯಬಹುದು. ಆದರೆ ಆ ಖುಷಿ ಎನ್ನುವುದು ಕೂಡಲೇ ಮರೆಯಾಗಿರುತ್ತದೆ. ಸಿನಿಕನೊಬ್ಬನ ಮಾತಿನಂತೆ “ಬದುಕೆನ್ನುವುದು ಅಲ್ಲಲ್ಲಿ ಖುಷಿಯ ಕ್ಷಣಗಳೆನ್ನುವ ವಿರಾಮವಿರುವ ಸುದೀರ್ಘ ದುಃಖ”

ಹಾಗಿದ್ದರೆ ಈ ಖುಷಿಯ ಕ್ಷಣಗಳನ್ನುಂಟು ಮಾಡುವಂಥದ್ದು ಯಾವುದು? ಇದನ್ನು ತಿಳಿಯಬೇಕೆಂದರೆ ಲಕ್ಷಾಂತರ ವರ್ಷಗಳ ಅವಧಿಯಲ್ಲಿ ನಾವು – ಮಾನವನೆಂಬ ಜೀವಿ – ವಿಕಾಸವಾದ ಹಾದಿಯನ್ನು ಹೊರಳಿ ನೋಡಬೇಕು. ನಮ್ಮ ಬಲು ದೂರದ ಪೂರ್ವಜರು ಹಣ್ಣು, ಕಾಯಿಗಳು ಹಾಗೂ ಕೀಟಗಳನ್ನು ತಿನ್ನುತ್ತಿದ್ದ ಮರ-ವಾಸಿಗಳಾಗಿದ್ದರು. ಮಂಗಗಳಂತೆಯೇ ತಮ್ಮ ನಿತ್ಯ ಜೀವನದಲ್ಲಿ ಇವರೂ ಇಂತಹ ಖುಷಿಯ ಕ್ಷಣಗಳನ್ನು ಕಾಣುತ್ತಿರಲಿಲ್ಲ. ಆದರೆ ಅನಂತರ ಇವರು ತಮ್ಮ ನಿಕಟ ಸಂಬಂಧಿಗಳಿಂದ  ಹೊರಳಿ, ಬೇರೆಯದೇ ವಿಕಾಸದ ಹಾದಿಯಲ್ಲಿ ನಡೆದು ಬಂದರು. ಮರಗಳಲ್ಲಿ ಹಣ್ಣು ಹೆಕ್ಕುವ ಸುಲಭವಾದ, ಮತ್ತೆ, ಮತ್ತೆ ಮಾಡಬೇಕಾದ ಕಾಯಕವನ್ನು ಬಿಟ್ಟು ಇವರು ಬಯಲುಗಳಲ್ಲಿ ಒಟ್ಟಾಗಿ ಅಟ್ಟಾಡುತ್ತಾ ಬೇಟೆಯಾಡುವ ಶ್ರಮದ ಬದುಕನ್ನು ಆಯ್ದುಕೊಂಡರು. ಈ ಬದಲಾವಣೆಗೆ ಹೊಸ ಮಾನಸಿಕ ಸಾಮರ್ಥ್ಯವೂ ಬೇಕಾಯಿತು. ಸಹಕಾರ, ಬುದ್ದಿವಂತಿಕೆ, ಸಂವಹನ ಮತ್ತು ಧೈರ್ಯ ಹೆಚ್ಚಬೇಕಾಯ್ತು. ಸುದೀರ್ಘ ಕಾಲ ಒಂದೇ ಗುರಿಯತ್ತ ಗಮನ ಕೇಂದ್ರೀಕರಿಸುವ ಏಕಾಗ್ರತೆಯೂ ಬೇಕಾಯಿತು.

ಬಲಶಾಲಿ ಬೇಟೆಗಳನ್ನು ಬಗ್ಗುಬಡೆಯಲು ಸಹಕಾರ ಅವಶ್ಯಕ. ಬೇಟೆಯ ಉಪಾಯಗಳನ್ನು ಹೂಡಲು ಹಾಗೂ ಅಟ್ಟಾಡಿ ಕೊಲ್ಲುವ ತಂತ್ರಗಳನ್ನು ಯೋಜಿಸಲು ಸಂವಹನ ಬೇಕಿತ್ತು. ಧೈರ್ಯವೂ ಬೇಕಾಯ್ತು.  ಮಾನವನಂತಹ ಪುಟ್ಟ ಪ್ರೈಮೇಟು (ಮಂಗ, ವಾನರ, ಮಾನವರನ್ನು ಪ್ರೈಮೇಟುಗಳೆನ್ನುತ್ತಾರೆ) ಮಾರಕ ಬೇಟೆಗಾರನಾಗಬೇಕಾದರೆ ತನ್ನ ಪೂರ್ವಜರಾದ ಮಂಗಗಳಲ್ಲಿ ಇಲ್ಲದ ಅಪಾಯವನ್ನು ಮೈಮೇಲೆದುಕೊಳ್ಳುವ ನಡವಳಿಕೆ ಬೇಕು. ಸ್ವಲ್ಪ ಅಪಾಯದ ಸುಳಿವು ಸಿಕ್ಕರೂ ಮಂಗಗಳು ಮರವೇರಿ  ಸುರಕ್ಷತೆಯತ್ತ ಓಡಿಹೋಗುತ್ತವೆ. ನಮ್ಮ ಪೂರ್ವಜರು ಈ ಅಳುಕಿನ ಪ್ರತಿಕ್ರಿಯೆಯನ್ನು ಅದುಮಿಟ್ಟು, ಬೇಟೆಯಾಡುವಾಗಿನ ಅಪಾಯಗಳನ್ನು ಎದುರಿಸುವ ಸಂಪೂರ್ಣ ಹೊಸತಾದ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕಾಯ್ತು. ಹಣ್ಣು ಹೆಕ್ಕುವುದಕ್ಕೆ ಹೋಲಿಸಿದರೆ ಬೇಟೆಯಾಡುವುದು ಬಲು ದೀರ್ಘವಾದ ಚಟುವಟಿಕೆಯಾದ್ದರಿಂದ ಏಕಾಗ್ರತೆಯೂ ಬೇಕಾಯಿತು. ಪ್ರೈಮೇಟುಗಳಲ್ಲಿ ಕಾಣಬರದ ಒಗ್ಗಟ್ಟು, ಏಕಾಗ್ರತೆ ಹಾಗೂ ಛಲದಿಂದ ಬೆನ್ನತ್ತುವ ಹೊಸ ನಡವಳಿಕೆಗಳು ನಮ್ಮ ಪೂರ್ವಜರು ಬೆಳೆಸಿಕೊಳ್ಳಬೇಕಾಯ್ತು.

ಈ ಬಗೆಯ ಅಪಾಯಕಾರಿ ಆಹಾರಾನ್ವೇಷಣೆಯಲ್ಲಿ ಸಫಲರಾಗಬೇಕೆಂದರೆ ನಾವು  ಇನ್ನಷ್ಟು ಚುರುಕಾಗಬೇಕಾಯ್ತು. ತೀವ್ರ ವ್ಯಾಯಾಮದ ಬಯಕೆ ಅವಶ್ಯಕವಾಯಿತು. ಬೇಟೆಯಾಟದಲ್ಲಿ ಗೆದ್ದಮೇಲೆ ನಮ್ಮ ಸಾಮಾಜಿಕ ಬದುಕಿನಲ್ಲಿ ಹೊಸದೊಂದು ಅಂಶವನ್ನು ಕೂಡಿಸಬೇಕಾಗಿ ಬಂತು. ನಾವು ಆಹಾರವನ್ನು ಹಂಚಿಕೊಳ್ಳಬೇಕಾಯಿತು. ಚರಿತ್ರಪೂರ್ವದ ಮಾನವರನ್ನು ಹಾಲಿವುಡ್ ಚಿತ್ರಗಳಲ್ಲಿ  ಸದಾ ತನ್ನ ಬಳಗದವರ ತಲೆಯನ್ನೇ ಬಡಿಗೆಯಿಂದ ಹೊಡೆಯುತ್ತಿರುವ ಕ್ರೂರ, ಕಾಳಗಜೀವಿಯಾಗಿ ಅದೇಕೆ ಬಿಂಬಿಸುತ್ತಾರೋ ಗೊತ್ತಿಲ್ಲ.  ನಿರ್ಮೊಪಕರೋ, ಅವರ ಮನೋವೈದ್ಯರೋ ಉತ್ತರ ಹೇಳಬೇಕು! ಇಂತಹ ಘಟನೆಗಳು ನಡೆಯುವುದಿಲ್ಲವೆಂದಲ್ಲ. ಈಗಲೂ ಇವು ನಡೆಯಬಹುದು. ಆದರೆ ಇಂತಹ ಘಟನೆಗಳೇ ನಿತ್ಯ ಸಹಜವೆನ್ನಿಸಿಬಿಟ್ಟಿದ್ದರೆ ವಿಕಾಸದ ಪ್ರಾಥಮಿಕ ಹಂತಗಳಲ್ಲಿ ನಾವು ಬದುಕಿ ಉಳಿಯುವುದು ಸಾಧ್ಯವೇ ಇರಲಿಲ್ಲ. ಬಳಗದೊಳಗೆ ಹಿಂಸೆ ಎನ್ನುವುದು ಅಪರೂಪವಿದ್ದಿರಬೇಕು. ಇಲ್ಲದಿದ್ದರೆ ಬರೇ ಗೊಂದಲವಿರುತ್ತಿತ್ತು. ಬಹುಶಃ ಆಗ ಒಬ್ಬರಿನ್ನೊಬ್ಬರ ಜೊತೆಗೆ ಸಹಕರಿಸುವ, ಸಹಾಯ ನೀಡುವ  ಹಾಗೂ ಹಂಚಿಕೊಳ್ಳುವ ಭಾವನೆಗಳೇ ಪ್ರಬಲವಾಗಿದ್ದಿರಬೇಕು. ಇವಿಲ್ಲದೆ ನಾವು ಸುಧಾರಿಸುತ್ತಲೇ ಇರಲಿಲ್ಲ.

_____________________________________________________

ಟಿಪ್ಪಣಿ: ಕನ್ನಡ ಪಾಠದೊಟ್ಟಿಗೆ ಇಂಗ್ಲೀಷ್‍ ಮೂಲವನ್ನೂ ನೀಡಿದ್ದೇನೆ. ಅನುವಾದದ ಬಗ್ಗೆ ಅನುಮಾನಗಳಿದ್ದಲ್ಲಿ ನಿಮ್ಮ ಕಮೆಂಟ್‍ ಹಾಕಿ. ತಿದ್ದಿಕೊಳ್ಳೋಣ. ಚರ್ಚಿಸೋಣ.

____________________________________________________

The true nature of happiness is frequently misunderstood. It is often confused with contentment, satisfaction or peace of mind. The best way to explain the difference is to describe contentment as the mood when life is good, while happiness is the sensation we experience when life suddenly gets better. At the very moment when something wonderful happens to us, there is a surge of emotion, a sensation of intense pleasure, an explosion of sheer delight – and this is the moment when we are truly happy. Sadly, it does not last very long. Intense happiness is a transient, fleeting sensation. We may continue to feel good for quite a while, but the joyful elation is quickly lost. As one cynic put it: life is prolonged misery interrupted by brief moments of happiness.

So what causes these brief interludes? To find the answer we have to look back at the way our species evolved over a million years. Our remote ancestors were tree-dwellers feeding mostly on fruits, nuts and insects. Like other monkeys, they did not experience many peak moments in their day-to-day lives. But then they took a new evolutionary route, away from that of their dose relatives. They abandoned the more gentle, repetitive, fruit-picking

way of life in the trees and took to the more strenuous, demanding lifestyle of pack-hunters on the plains. This switch demanded a new mental attitude. There had to be an increase in cooperation, communication, intelligence, courage, and the ability to concentrate for long periods of time on a specific goal.

The cooperation was needed to defeat powerful prey animals. Communication was needed to plan hunting strategies and organize the tactics of the chase and kill. Courage was required; for a puny primate to attempt to become a lethal predator required serious risk-taking of a kind alien to our monkey forebears. At the first sign of danger, the typical reaction of a monkey is to flee up into the safety of the trees. Our ancestors had to repress

those panic responses and face up to the hazards of hunting in an entirely new way. Concentration was needed because, compared with picking a fruit, killing prey is a long-term activity. Our ancestors had to develop concerted, focused persistence of a

kind also new to primates.

In order to carry out this dangerous new feeding pattern successfully, we also had to become much more athletic: hungry for vigorous physical activity. Once triumphant, another new element had to be introduced into our social life – we had to develop

food-sharing. For some reason best known to their personal therapists, Hollywood film producers always seem to want to portray prehistoric man as a viciously competitive, savagely violent being, forever dubbing his companions over the head in eternal tribal squabbles. Of course, such incidents occasionally took place, and still do, but if they

had been the order of the day we could never have survived as a species in the earliest phase of our evolution. Violence within the group had to be the exception to the rule, or there would have been chaos. The dominant mood must have been one of mutual aid, cooperation and sharing. Without it, we could never have prospered.

Published in: on ಡಿಸೆಂಬರ್ 24, 2015 at 9:38 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ