ಸಂತೋಷದ ಸ್ವರೂಪ-ಸಂತೋಷದ ಸೆಲೆ 2

ಇಂದು ದಿನಪತ್ರಿಕೆಗಳನ್ನು ಓದುವಾಗ, ಟೆಲಿವಿಷನ್ ನೋಡುವಾಗ ಇದೆಂತಹ ಹಿಂಸೆಯ, ಕ್ರೂರವಾದ ಕಾಲ  ಎಂದು ನಮಗೆ ತೋರುತ್ತದೆ. ಆದರೆ ಇದು ತಿರುಚಿದ ಸತ್ಯ   ನಮ್ಮ ಪೂರ್ವಜರನ್ನು ‘ಹಾ.. ಹೂ…. ಢಿಶುಂ ಢಿಶುಂ’  ಎನ್ನುವವರು ಎಂದು ಹಾಲಿವುಡ್‍  ನಿರ್ಮಾಪಕರು  ಚಿತ್ರಿಸಿರುವ ಸುಳ್ಳಿನಷ್ಟೆ ದೊಡ್ಡದು. ಈಗ ನಾವು ತಲುಪಿರುವ ಜನಸಂಖ್ಯೆಯ ಮಟ್ಟವನ್ನೂ, ನಾವು ಸಹಿಸುವ ಅತಿ ಜನದಟ್ಟಣೆಯನ್ನೂ ಲೆಕ್ಕಿಸಿದರೆ, ನಿಜಕ್ಕೂ ನಾವು ಶಾಂತಿಪ್ರಿಯರು, ಸೌಮ್ಯವಾದ ಅದ್ಭುತ ಜೀವಿಗಳು. ಇದನ್ನು ನಂಬಲು ಅಸಾಧ್ಯ ಎನ್ನಿಸಿತಲ್ಲವೇ? ಹಾಗಿದ್ದರೆ ಈ ದಿನ ಉದಯವಾದಾಗಿನಿಂದ ಸಂಜೆಯವರೆಗೆ ಯಾರಿಂದಲೂ ಪೆಟ್ಟು ತಿನ್ನದೆ ದಿನಗಳೆದ ಕೋಟ್ಯಂತರ ಜನರಿದ್ದಾರೆ. ಲೆಕ್ಕ ಹಾಕಿ ನೋಡಿ. ಇದು ನಮ್ಮ ಪುಣ್ಯ. ಹೆಚ್ಚಿನ ಜನ ಹೀಗೇ ಸೌಮ್ಯ. ನಾವು ಏಳು ಬಿಲಿಯನ್ (ಏಳುನೂರು ಕೋಟಿ) ಜನರಲ್ಲಿ  ಗುದ್ದಾಡುವವರು ಹಾಗು ಆಗೊಮ್ಮೆ, ಈಗೊಮ್ಮೆ ಕಲ್ಲನ್ನೋ, ಬಾಂಬನ್ನೋ ಬಿಸಾಡುವವರು ಅಷ್ಟಿಷ್ಟು ಇದ್ದೇ ಇರುತ್ತಾರೆ. ಮಾಧ್ಯಮದವರ ಅದೃಷ್ಟ. ಇವರೇ ಅವರಿಗೆ ಸುದ್ದಿ!  ಆದರೆ  ಮರೆಯಬೇಡಿ. ನಮ್ಮಲ್ಲಿ ಬಹುತೇಕ ಜನ, ಬಹಳಷ್ಟು ವೇಳೆ, ಇಂತಹ ಯಾವುದೇ ಹಿಂಸೆಯ ಬದಲಿಗೆ ಸಂತೋಷದ ಹುಡುಕಾಟದಲ್ಲೇ ನಿರತರು.

ಬೇಟೆಗಾರನ ಬದುಕಿಗೆ ಹೊರಳಿದ್ದರ ಮತ್ತೊಂದು ಪರಿಣಾಮವೆಂದರೆ ನಮ್ಮ ಕುತೂಹಲ ಹೆಚ್ಚಿದ್ದು. ಹುಚ್ಚೇ ಏನೋ ಎನ್ನುವ ಮಟ್ಟಿಗೆ ನಾವು ನಮ್ಮ ಸುತ್ತಲಿನ ಪ್ರಪಂಚವನ್ನು ಪರೀಕ್ಷಿಸಿ ಅನ್ವೇಷಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡೆವು.  ಮರಿ ಮಂಗಗಳ ಆಟದಲ್ಲಿಯೂ ಇದನ್ನು ಕಾಣಬಹುದು.  ಆದರೆ ಪ್ರೌಢವಾಗುವುದರೊಳಗೆ ಅವುಗಳಲ್ಲಿ ಈ ಪ್ರವೃತ್ತಿ ಮರೆಯಾಗಿ ಬಿಡುತ್ತದೆ.  ನಾವು ಮಾತ್ರ ಈ ಮಕ್ಕಳಾಟಿಕೆಯ ಕುತೂಹಲವನ್ನು ದೊಡ್ಡವರಾದ ಮೇಲೂ ಉಳಿಸಿಕೊಂಡಿರುತ್ತೇವೆ. ವಯಸ್ಕರಲ್ಲಿ ಇದು ನಮ್ಮ ಪರಿಸರದ ಅಂಶಗಳನ್ನು ವಿಶ್ಲೇಷಿಸಿ, ವರ್ಗೀಕರಿಸುವ ಪ್ರೌಢಗುಣವಾಗಿ ಮುಂದುವರೆಯುತ್ತದೆ.  ಬುಡಕಟ್ಟು ಜನರಾಗಿ ನಾವು ಬೇಟೆಗೆ ಬೇಕಾದ ಆ ಜಾಗದ ಅರಿವನ್ನು, ಬೇಟೆಯ ಪ್ರಾಣಿಗಳ ನಡವಳಿಕೆಗಳನ್ನು ಇದರಿಂದಷ್ಟೆ ಅರ್ಥಮಾಡಿಕೊಳ್ಳಬಹುದಾಯ್ತು. ಮೊಸರಿನ ಮೇಲೆ ಕೊಸರಿನಂತೆ ಈ ತೀವ್ರ ಕುತೂಹಲ ಶೋಧ-ಪ್ರವೃತ್ತಿಗೆ ಹಾದಿ ಮಾಡಿ ಕೊಟ್ಟಿತು. ಶೋಧಗಳು ಹೊಸ ಸಾಧನಗಳತ್ತ ಕೊಂಡೊಯ್ದವು. ಸಾಧನಗಳು ತಾಂತ್ರಿಕ ಮುನ್ನಡೆಯತ್ತ ಕರೆದೊಯ್ದವು.

ಸುಮಾರು ಒಂದು ಮಿಲಿಯನ್ ವರ್ಷಗಳವರೆಗೆ ಬೇಟೆಯಾಡುವ ಕಾಡುಜನರಾಗಿದ್ದ ನಮ್ಮನ್ನು ಬೆರಗುಗೊಳಿಸುವ ಹೊಸ ಪ್ರಪಂಚದ ಹೊಸ್ತಿಲಿನಾಚೆಗೆ ಈ ತಾಂತ್ರಿಕ ಸುಧಾರಣೆಗಳು ಕೊಂಡೊಯ್ದವು. ಬೇಟೆಗಾರ ಆದಿಮಾನವ ಕೃಷಿಕನಾದ. ಬೇಟೆಯ ಪ್ರಾಣಿಗಳನ್ನು ಹಾಗೂ ನಮ್ಮ ಆಹಾರ ಬೆಳೆಗಳನ್ನು ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಿ ನಿಯಂತ್ರಿಸಿದ್ದರಿಂದಾಗಿ ಮೊತ್ತ ಮೊದಲ ಬಾರಿಗೆ ನಮ್ಮ ಬಳಿ ಅವಶ್ಯಕ್ಕಿಂತ ಹೆಚ್ಚು ಆಹಾರವಿತ್ತು. ಆಹಾರಾನ್ವೇಷಣೆ ಎಷ್ಟು ಸಮರ್ಥವಾಗಿಬಿಟ್ಟಿತ್ತೆಂದರೆ ಅದಕ್ಕಾಗಿ ಪಂಗಡದ ಎಲ್ಲ ಸದಸ್ಯರ ನೆರವೂ ಬೇಕಿರಲಿಲ್ಲ. ಇದರ ಅರ್ಥವಿಷ್ಟೆ. ವಿಶೇಷ ಕೌಶಲಗಳಿದ್ದವರು ಅದನ್ನು ತೀವ್ರಗತಿಯಿಂದ ಸುಧಾರಿಸಿಕೊಳ್ಳಬಹುದಾಯ್ತು. ನವ ಶಿಲಾಯುಗದ  ಈ ಕ್ರಾಂತಿಯಿಂದಾಗಿ ಹಳ್ಳಿಗಳು, ಪಟ್ಟಣಗಳಾಗಿ, ಪಟ್ಟಣಗಳು ನಗರಗಳಾಗಿ ಬೆಳೆಯುವುದನ್ನು ಕಂಡೆವು.  ಪುಟ್ಟ ಬುಡಕಟ್ಟು ಪಂಗಡಗಳು ಈಗ ಮಹಾಕುಲಗಳಾಗಿ ಹಿಗ್ಗಿದುವು. ಮಾನವನ ಶೋಧಪ್ರಕೃತಿಯ ಆಧಾರವಾದ ಕುತೂಹಲಕ್ಕೆ ಲಂಗುಲಗಾಮಿಲ್ಲವಾಯಿತು. ಖುಷಿ ಎನ್ನುವುದು ಹೊಸ ಆಟಿಕೆ, ಹೊಸ ಒಡವೆ-ಅಲಂಕಾರ, ಹೊಸ ವಸ್ತು,  ಹೊಸ ಸಾಧನ, ಹೊಸ ಬಗೆಯ ಸಂಚಾರ, ಹೊಸ ಶೈಲಿಯ ಕಟ್ಟಡವೆಂದಾಯಿತು.  ಹೊಸ ಆಯುಧ ಹಾಗೂ ಹೊಸ ಬಂದೀಖಾನೆಗಳಿಗೂ ಇದೇ ಅರ್ಥ ಬಂದಿದ್ದು  ದುಃಖದ ವಿಷಯ.

ಶಾಂತ ಬೇಟೆಗಾರನೀಗ ಅತಿ ಒತ್ತಡದಲ್ಲಿ ಸಿಕ್ಕಿಕೊಂಡ. ಈ ಹೊಸ, ನಗರವಾಸಿ, ಮಹಾಕುಲ ಜೀವನದಿಂದಾಗಿ ಅವನ ಹಲವು ನಡವಳಿಕೆಗಳು ಅಸೀಮ ಒತ್ತಡಕ್ಕೊಳಗಾದವು. ಮಾನವನೆಂಬ ಈ ನಗರ-ವಾನರ ಈಗ ಶ್ರೀಮಂತನಾದ, ಹಲವು ಭಯಂಕರ ಪ್ರಮಾದಗಳನ್ನೂ ಮಾಡಿದ. ಅವನ ಸಫಲತೆಯ ಕಥೆ ಎಷ್ಟು ವೇಗವಿತ್ತು ಎಂದರೆ ಈ ಹೊಸ ಬಗೆಯ ಬದುಕಿಗೆ ಅವಶ್ಯಕವಾದ ಮಾನಸಿಕ ಸ್ಥಿತಿಯನ್ನು ಬೆಳೆಸಿಕೊಳ್ಳುವುದು ಕಷ್ಟವಾಯಿತು. ಮೊದಲಿಗೆ ಸ್ಪರ್ಧೆ ಹಾಗೂ ಸಹಕಾರಗಳ ನಡುವಣ ಸೂಕ್ಷ್ಮವಾದ ಸಮತೋಲ ಏರುಪೇರಾಯಿತು. ಇದು ಸ್ಪರ್ಧೆಯ ಕಡೆಗೇ ಹೆಚ್ಚು ವಾಲಿತು. ಪುರಾತನ ಪಟ್ಟಣಗಳು ಹಾಗೂ ನಗರಗಳಲ್ಲಿದ್ದ ಬೃಹತ್ ಜನತೆ ಹೆಚ್ಚೆಚ್ಚು ನಿರಾಪ್ತ (impersonal) ಎನ್ನಿಸಿದವು. ಗೆಳೆತನದ ಬಂಧಗಳು ಕಳಚಿಕೊಳ್ಳಲಾರಂಭಿಸಿದುವು. ಸ್ಥಳೀಯವಾಗಿ ಮುಖಂಡರಾದಂತಹವರು ಮೊದಲಿಗಿಂತ ಹೆಚ್ಚು ನಿರ್ದಯತೆಯಿಂದ ತಮ್ಮ ಅಧಿಕಾರವನ್ನು ಪ್ರಯೋಗಿಸಬಹುದಾಯಿತು. ಗುಲಾಮ ವರ್ಗಗಳು ಹುಟ್ಟಿಕೊಂಡವು. ಬಹುತೇಕರಿಗೆ ಆನಂದ ಎನ್ನುವುದು ಅಪರೂಪವಾಯಿತು.. ನಾವು ಎಷ್ಟೋ ಬಾರಿ ಹಾಡಿ ಹೊಗಳುವ ಗ್ರೀಕರ ಸಾಮ್ರಾಜ್ಯವನ್ನು ಕೂಡ ಗುಲಾಮಗಿರಿಯ ಮೇಲೇ ಕಟ್ಟಲಾಗಿತ್ತು.

___________________________________________________

ಟಿಪ್ಪಣಿ. Impersonal ಎನ್ನುವ ಪದಕ್ಕೆ ಸಮಾನಾರ್ಥಕ ಪದ ಸಿಗಲಿಲ್ಲವಾದ್ದರಿಂದ, ನಿರಾಪ್ತ ಎನ್ನುವ ಪದವನ್ನು ರೂಪಿಸಿದ್ದೇನೆ. ನಿರ್ಲುಪ್ತ ಎನ್ನುವುದು ತುಸು ಹತ್ತಿರದ ಪದವೆನ್ನಿಸಿತಾದರೂ ಇಲ್ಲಿ ಅದು ಅರ್ಥ ವ್ಯತ್ಯಾಸವನ್ನುಂಟು ಮಾಡಬಹುದು ಎನ್ನಿಸಿತು.

Supertribe – ಮಹಾಕುಲ; Urban Ape – ನಗರವಾನರ.  ಇವೆರಡೂ ಪದಗಳನ್ನೂ ಡೆಸ್ಮಂಡ್‍ ಮಾರಿಸ್‍ ನ ಪುಸ್ತಕಗಳಲ್ಲಿ ಕಾಣಬಹುದು. ಕನ್ನಡದಲ್ಲಿ ಟ್ರೈಬ್‍ ಗೆ ಪಂಗಡ, ಬುಡಕಟ್ಟು ಎನ್ನುವ ಪದಗಳಿವೆಯಾದರೂ ಕುಲವೆನ್ನುವುದು ಓದಲೂ, ಬರೆಯಲೂ ಹಾಗೂ ಮಹಾ- ಜೊತೆಗೆ ಜೋಡಿಸಲೂ ಸುಲಭವಾದದ್ದರಿಂದ ಅದನ್ನು ಬಳಸಿಕೊಂಡಿದ್ದೆನೆ.

ಇಂಗ್ಲೀಷ್‍ ಮೂಲ ಪಾಠ ಕೆಳಗಿದೆ.

____________________________________________

Reading our newspapers today and watching our television screens, we get the impression that we live in brutal, violent times. But this is a distortion of the truth almost as great as that of the Hollywood producers who gave us the ug-ug, thump-thump version of our primeval ancestors. If we take into account the population levels we have attained and the extreme level of over-crowding to which we are now exposed, we are really an astonishingly peaceful, amicable species. If you doubt this, try counting the thousands of millions of human beings who woke up this morning and made it through the day without punching someone in the face. Luckily for our species, most people are like that. Luckily for the newscasters, there is a tiny minority of the 6,000 million of us who do, on rare occasions, throw a brick or explode a bomb – enough, at any rate, to keep the newscast filled. But we must never lose sight of the fact that the vast majority of us, for most of the time, are much more concerned with the quest for happiness rather than indulging in some kind of cruelty.

Another consequence of our switch to a hunting way of life was a dramatic increase in our curiosity. We developed an almost obsessional urge to explore and investigate the world around us. One sees this in the playfulness of young monkeys, but by the time they are adults it starts to fade. We, on the other hand, extend this childhood  playfulness into adult life where it matures into an urge to analyze  and classify the elements of our environment. Only in this way could we have developed the necessary knowledge of our tribal hunting grounds and the behaviour of our prey species. As a bonus, our intense curiosity led to inventiveness, our inventions led to innovations, and our innovations led to technological advances.

These technological advances eventually – after a million years or so of moulding as tribal hunters – took us over a startling new threshold. The primeval hunter became a farmer. By controlling our prey and modifying it to suit our needs, and by modifying our plant foods and controlling those, too, we reached a state about ten thousand years ago when, for the first time, we had a food surplus. Food getting had become so efficient that it was no longer necessary for all members of the tribe to be involved in it. This meant that specialists could develop particular skills at a dramatic rate. This Neolithic revolution saw villages grow into towns and towns into cities. The small tribal units became swollen into super-tribes. The powerful curiosity factor – humanity’s great inventiveness – was now given full rein. Happiness meant a new toy, a new bauble, a new material, a new gadget, a new form of transport, a new style of building. Sadly, it also meant a new weapon and a new dungeon.

The peaceful, tribal hunter was now under considerable pressure. Many of his behaviour patterns were strained to the limit by his new super-tribal existence. The urban ape was a nouveau riche and he made some terrible gaffes. His success story was running ahead of him and he found it hard to develop the new mentality needed for this novel way of life. To start with, the delicate balance between competItIveness and cooperation was disturbed, swinging in favour of increased competition. The larger populations in the ancient towns and cities had become more impersonal. Bonds of friendship were being loosened. Those individuals who became local leaders were able to use their power with more ruthlessness than before. Slave classes emerged. For the majority, happiness went into a sharp decline. Even the glories of ancient Greece, whose praises we are so often singing, were based on a slave state.

 

Published in: on ಡಿಸೆಂಬರ್ 25, 2015 at 8:49 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

The URI to TrackBack this entry is: https://kollegala.wordpress.com/2015/12/25/%e0%b2%b8%e0%b2%82%e0%b2%a4%e0%b3%8b%e0%b2%b7%e0%b2%a6-%e0%b2%b8%e0%b3%8d%e0%b2%b5%e0%b2%b0%e0%b3%82%e0%b2%aa-%e0%b2%b8%e0%b2%82%e0%b2%a4%e0%b3%8b%e0%b2%b7%e0%b2%a6-%e0%b2%b8%e0%b3%86%e0%b2%b2-2/trackback/

RSS feed for comments on this post.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: