ಸಂತೋಷದ ಸ್ವರೂಪ – ಸಂತೋಷದ ಸೆಲೆ 3

ಇದರಿಂದ ಕೌಟುಂಬಿಕ ಸಂಬಂಧಗಳಿಗೂ ತೊಂದರೆಯಾಯಿತು. ಬೇಟೆಗಾರರಾಗಿದ್ದಷ್ಟು ಸುದೀರ್ಘ ಕಾಲವೂ ನಾವು ಜೋಡಿ ದಂಪತಿಗಳಾಗಿ ಬದುಕುವತ್ತ ಹೊರಳಿದ್ದೆವು. ಇದೊಂದು ಮಹತ್ತರ ತಿರುವಾಗಿತ್ತು. ಅಂದರೆ ನಮ್ಮ ಪೂರ್ವಜರು ಪ್ರೇಮಿಸಲು ತಯಾರಾಗಿದ್ದರು. ನೆನಪಿಡಿ, ಈ ಬದಲಾವಣೆ ನಿಧಾನವಾಗಿ ಬೆಳೆಯುವ ಸಂತಾನಗಳನ್ನು ಕಾಪಾಡುವುದರತ್ತ ಇಟ್ಟ ಪ್ರಮುಖ ಹೆಜ್ಜೆ. ಗಂಡಸರು ಬೇಟೆಗಾಗಿ ಹೆಚ್ಚೆಚ್ಚು ಹೊತ್ತು ದೂರವಿರುತ್ತಿದ್ದರು ಹಾಗೂ ಮನೆಗೆ ಮರಳಿ ಹೆಂಗಸರು ಹಾಗೂ ಮಕ್ಕಳಿಗೆ ಉಣಿಸು ನೀಡಿ ಪಾಲಿಸಬೇಕಿದ್ದರೆ ಹೆಣ್ಣಿನ ಜೊತೆಗಿನ  ಅವರ ಸಂಬಂಧ ಬಲು ಭದ್ರವಾಗಬೇಕಿತ್ತು.

ನಗರ ಜೀವನದ ಹೊಸ ವ್ಯವಸ್ಥೆಯಲ್ಲಿ, ವಿಶೇಷ ಕೌಶಲ್ಯಗಳ ಬೆಳವಣಿಗೆ ಹಾಗೂ ಕಾಯಕಗಳ ಹಂಚಿಕೆಗಳು ಕಾಣಿಸಿಕೊಂಡ ಫಲ ವ್ಯಾಪಾರ ಹಾಗೂ ಚೌಕಾಶಿತನ ಜೀವನದ ಒಂದು ಅಂಗವಾದುವು. ಇದರೊಟ್ಟಿಗೆ ಕೌಟುಂಬಿಕ ಬಂಧ ಎನ್ನುವುದು ಪ್ರೇಮ ಎನ್ನುವುದರಿಂದ ವ್ಯವಹಾರ ಬಂಧವಾಗಿ ಬದಲಾಯಿತು. ಮದುವೆ ಎನ್ನುವುದು ಹೊಸ ರೀತಿಯ ವ್ಯಾಪಾರವಾಯಿತು. ಇದಕ್ಕೆ ಒಗ್ಗಿಬರದ ಪ್ರೇಮ ಎನ್ನುವ ಬಂಧ ನಿಷ್ಠುರವಾಗಿ ಅದುಮಲ್ಪಟ್ಟಿತು. ಆಪ್ತ ಸಂಬಂಧಗಳಲ್ಲಿ ಅಸಂತೋಷವೆನ್ನುವುದು ಹರಡಿಕೊಂಡಿತು.

ಆದರೂ ಈ ಮನುಷ್ಯ ಎನ್ನುವ ಜೀವಿ ಬಲು ಗಟ್ಟಿ ಬಿಡಿ.  ಹೀಗೆ ನಮ್ಮ ಜೈವಿಕ ಅನುವಂಶೀಯತೆಯ ಪ್ರಧಾನ ಗುಣಗಳಿಗೆ ವಿರುದ್ಧವಾಗಿ ಸಮಾಜದ ಸ್ಥಿತಿಗತಿಗಳು ಎಳೆದಾಡಿದಾಗಲೆಲ್ಲ ನಮ್ಮಲ್ಲಿ ಅಂತರ್ಗತವಾದ ಯಾವುದೋ ಶಕ್ತಿ  ಸ್ವಸ್ಥಾನಕ್ಕೆ ಮರಳಲು ನೆರವಾಗುತ್ತದೆ. ಹತ್ತಾರು ಸಾವಿರ ವರ್ಷಗಳ ಮಾನವನ ಕಥೆಯ ಬೆರಗುಗೊಳಿಸುವ ಅಂಶವೆಂದರೆ ಇದು ನಾವು ಚರಿತ್ರಪೂರ್ವ ಕಾಲದಲ್ಲಿ ಇದ್ದಂತಹ ಸ್ಥಿತಿಗೇ ಮರಳಲು ಪ್ರಯತ್ನಿಸುತ್ತಿರುವ ಸುದೀರ್ಘ ಶ್ರಮ ಎನ್ನಬಹುದು. ಇದ್ದಂತಹ ಸ್ಥಿತಿಯೇ ಹೊರತು ಇದ್ದ ಸ್ಥಿತಿಯಲ್ಲ ಎನ್ನಿ. ಇದರ ಅರ್ಥ ವಿಷ್ಟೆ. ಪ್ರತಿಯೊಂದು ತಾಂತ್ರಿಕ ಬೆಳವಣಿಗೆಯೂ ನಾವು ಮಾನವರಾಟವನ್ನು ಆಡುವುದಕ್ಕೆ ಹೊಸ ಮಾರ್ಗಗಳನ್ನು ಹುಡುಕಬೇಕಾಯ್ತು.

ನಾಗರೀಕತೆ ಎನ್ನುವುದು ಈ ಬೆತ್ತಲೆ ವಾನರ ಹೊತ್ತು ನಡೆದ ಪ್ರಥಮ ಚಿಕಿತ್ಸೆಯ ಹೊರೆ ಎಂದು ಈ ಹಿಂದೆ ಒಮ್ಮೆ ನಾನು ಹೇಳಿದ್ದುಂಟು. ನಾಗರೀಕತೆ ಎನ್ನುವುದು ನಮ್ಮ ಪಾದಗಳಲ್ಲಿ ಬೊಕ್ಕೆಯೇಳಿಸುವಷ್ಟು ಭಾರಿ ಹೊರೆಯಾಗಿದ್ದರಿಂದ ಪ್ರಥಮ ಚಿಕಿತ್ಸೆಯ ಹೊರೆಯೂ ಬೇಕಾಯ್ತು. ಮಾನವನೆಂಬ  ಬೆತ್ತಲೆ ವಾನರ ತಾನು ಧರಿಸಿರುವ ಹೊಸ ಸಂಕೋಲೆಗಳನ್ನು ಕಳಚಿಕೊಳ್ಳದೆಯೇ ಹಳೆಯ ಜೈವಿಕ ಸಂಪ್ರದಾಯಗಳತ್ತ ಮರಳಲು ಸದಾ ಪ್ರಯತ್ನಿಸುವ ಪ್ರಾಣಿ. ಈ ಸೂಕ್ಷ್ಮವಾದ ನಡೆಯಲ್ಲಿ ನಮಗೆ ಭಾಷೆಯ ಬೆಳವಣಿಗೆಯಿಂದ ಲಭಿಸಿದ ಸಾಮರ್ಥ್ಯ ನಮ್ಮ ನೆರವಿಗೆ ಬರುತ್ತದೆ. ನಾವೀಗ ಮಹಾ ಸಂಕೇತಜ್ಞರಾಗಿ ಬಿಟ್ಟಿದ್ದೇವೆ. ನಾವು ಭಾಷೆಯೆಂಬ ಸಂಕೇತವನ್ನು ಬಳಸುವುದಷ್ಟೆ ಅಲ್ಲ, ನಮ್ಮ ಪ್ರತಿಯೊಂದು ಚಟುವಟಿಕೆಯಲ್ಲಿಯೂ ಸಾಂಕೇತಿಕ ಸೂತ್ರಗಳನ್ನು ರಚಿಸುತ್ತೇವೆ. ಹೀಗೆ ಸಂಕೇತಗಳನ್ನು ಸೃಷ್ಟಿಸುವದರಲ್ಲಿ ನಾವು ಎಷ್ಟು ಪರಿಣತರಾಗಿವಿಟ್ಟಿದ್ದೇವೆ ಎಂದರೆ ಒಂದು ಸಾಂಕೇತಿಕ ಸಾಧನೆಯೂ ನಮಗೆ ಖುಷಿ ತರಬಲ್ಲುದು. ಸಾಂಕೇತಿಕವಾಗಿಯೇ ಆದರೂ ಆದಿ ರೂಪದಲ್ಲಿ ಮಾಡುತ್ತಿದ್ದ ಕೆಲಸದ ಮಾದರಿಯನ್ನೋ, ನಕಲನ್ನೋ ಸಾಂಕೇತಿಕವಾಗಿ ನಡೆಸಿ ಅದು ನಿಜವೇ ಏನೋ ಎನ್ನುವಷ್ಟು ಖುಷಿ ಪಡುತ್ತೇವೆ. ಇದಕ್ಕೊಂದು ವೈಯಕ್ತಿಕ ಉದಾಹರಣೆ ಕೊಡುತ್ತೇನೆ. ಪುಸ್ತಕಗಳನ್ನು ಹುಡುಕುವುದು ನನಗೆ ಬಹಳ ಖುಷಿ ಕೊಡುವ ಕೆಲಸ. ಬಹಳ ದಿನಗಳ ಹುಡುಕಾಟದ ಅನಂತರ ನನಗೆ ಬೇಕಾಯಿತೆನ್ನಿಸಿದ ಅಪರೂಪದ ಪುಸ್ತಕವೊಂದು ಸಿಕ್ಕಿತೆನ್ನಿ, ಅದನ್ನು ತೆಗೆದುಕೊಂಡು ಮನೆಗೆ ಹೋಗುವುದು ಆದಿ ರೂಪದಲ್ಲಿ ಪ್ರಾಣಿಗಳನ್ನು ಬೇಟೆಯಾಡಿ ಮನೆಗೆ ಕೊಂಡೊಯ್ಯುತ್ತಿದ್ದುದರ ಸಂಕೇತ. ನನಗೆ ಈ ರೀತಿಯ ಬೇಟೆಯ ಅವಶ್ಯಕತೆ ಇನ್ನೂ ಇದೆ. ಆದರೆ ನನ್ನ ಪೂರ್ವೀಕರಂತೆ ನನ್ನ ಬೇಟೆಯ ಬಯಕೆಯನ್ನು ತಣಿಸಲು ಕಾಡುಪ್ರಾಣಿಗಳನ್ನು ಕೊಲ್ಲಬೇಕಿಲ್ಲ. ಏಕೆಂದರೆ ನಾನೀಗ ಮಾನವನಾಗಿದ್ದೇನೆ.

ಇಂದು ನಮ್ಮ ನಡವಳಿಕೆಗಳಲ್ಲಿ ಬಹುತೇಕ ಇಂತಹ ಆದಿ ನಡವಳಿಕೆಗಳ ಸಂಕೇತ ಸ್ವರೂಪಗಳು. ನಮ್ಮ ಉಳಿವಿಗೆ ಅವಶ್ಯಕವಾದ ಬೇಟೆಯನ್ನು ಬೇಸಾಯ ಕಿತ್ತೊಗೆದಂದಿನಿಂದಲೇ ಇದು ಆರಂಭವಾಯಿತು. ಉಳಿವಿಗಾಗಿ ಬೇಟೆ ಎನ್ನುವುದು ಮರೆಯಾದ ಕೂಡಲೇ, ಅದರ ಜಾಗದಲ್ಲಿ ಬೇಟೆಯೆಂಬ ಆಟ ಬಂತು. ಕಾಲಗಳೆಯಲು ಕಾಡುಪ್ರಾಣಿಗಳನ್ನು ಕೊಲೆಮಾಡಲಾರಂಭಿಸಿದೆವು. ಇಂತಹ ಕೊಲೆಗಡುಕ ಆಟಗಳು ಬೇಟೆಯ ಉನ್ಮಾದವನ್ನು ಉಳಿಸಿದುವು. ಅನಂತರ, ನಗರಗಳು ಹಾಗೂ ಪಟ್ಟಣಗಳು ಇನ್ನೂ ದೊಡ್ಡ, ದೊಡ್ಡದಾಗಿ ಬೆಳೆಯಲಾರಂಭಿಸಿದಾಗ ನಗರದ ಜನತೆ ಇಂತಹ ಓಟಾಟಗಳನ್ನು ಅನುಭವಿಸಲಾರದಾಯಿತಷ್ಟೆ. ಆಗ ಇಂತಹ ಬೇಟೆಯ ಅಪಬ್ರಂಶವೆನ್ನಿಸಿದ ಆಟ ಕಾಣಿಸಿಕೊಂಡಿತು: ಅದುವೇ ರಂಗಸ್ಪರ್ಧೆಗಳು. ಪುರಾತನ ರೋಮ್ ನಲ್ಲಿ ಕೊಲಿಸಿಯಮ್ ನಿರ್ಮಾಣವಾಯಿತು. ಅಲ್ಲಿ ತುಂಬಿಕೊಂಡ ಜನಜಂಗುಳಿಯ ಸಂತೋಷಕ್ಕಾಗಿ ಅಸಂಖ್ಯ ಪ್ರಾಣಿಗಳನ್ನು ತಂದು ಬೇಟೆಯಾಡಲಾಯಿತು. ಒಂಭೈನೂರು ವರ್ಷಗಳ ಹಿಂದೆ ಅದರ ಉದ್ಘಾಟನೆಯ ಸಂದರ್ಭದಲ್ಲಿ ಐದುಸಾವಿರಕ್ಕೂ ಹೆಚ್ಚು ಪ್ರಾಣಿಗಳು ಕೊಲೆಯಾದುವು. ಈ ಬಗೆಯ ಪ್ರಾಣಿಬೇಟೆ ವ್ಯಾಪಕವಾಗಿ ನಡೆಯುತ್ತಿತ್ತು. ಸ್ಪೇನಿನ ಗೂಳಿಕಾಳಗದಂತಹ ರೂಪದಲ್ಲಿ ಈಗಲೂ ಇದು ಉಳಿದುಕೊಂಡಿದೆ. ಬೇಟೆಯಾಡುವುದರ ಪ್ರಾತ್ಯಕ್ಷಿಕೆಯೋ ಎನ್ನುವಂತೆ ಪ್ರತಿವರ್ಷ ಪಾಂಪ್ಲೋನಾದಲ್ಲಿ ನಡೆಯುವ ಗೂಳಿ ಸ್ಪರ್ಧೆಗಳ ಬಗ್ಗೆ ನಿಮಗೆ ಗೊತ್ತೆ ಇರಬೇಕಲ್ಲ!

________________________________________________

ಟಿಪ್ಪಣಿ: ಮೊನ್ನೆಯಷ್ಟೆ ಕೇಂದ್ರ ಸರಕಾರ ತಮಿಳುನಾಡಿನಲ್ಲಿ ಪ್ರತಿವರ್ಷ ನಡೆಯುವ ಗೂಳಿ ಕಾಳಗ ಜಲ್ಲಿಕಟ್ಟಿನಂತಹ ಸ್ಪರ್ಧೆಗಳಿಗೆ ಅನುಮತಿ ನೀಡಿದೆ. ಜಲ್ಲಿಕಟ್ಟು, ಕರಾವಳಿಯ ಕಂಬಳ, ಉತ್ತರ ಕರ್ನಾಟಕದ ಕೆಲವೆಡೆ ನಡೆಯುವ ಎತ್ತಿನ ಜೊತೆಗಿನ ಕಾಳಗ ಇವನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.

ನಾಗರೀಕತೆ ಬೆಳೆದಿದ್ದರೂ,  ಎಲ್ಲೆಡೆಯೂ ಮಾನವನ ಆದಿರೂಪ ಹಾಗೇ  ಉಳಿದುಕೊಂಡಿದೆ ಎನ್ನುವುದಕ್ಕೆ ಇವು ಪುರಾವೆ. ಅಲ್ಲವೇ?

___________________________________________________

Family relationships also suffered. In our long hunting phase we had made an important biological shift towards pair-bonding. In other words, our ancestors became programmed to fall in love. This was a vital step in the protection of the slow-growing young – especially when you recall that the males were away for long periods of time

on the hunt and had to be tightly bonded to their females in order to return to the home base to feed and care for them and their offspring.

In the new urban structure, with specialization and division of labour having led to  trading and bargaining as a way of life, it was inevitable that family ties would also become a matter of business rather than love. Arranged marriages became a new trading device. Love bonds that did not suit them were ruthlessly suppressed. More unhappiness spread in this important realm of intimate personal relations.

But the human animal is amazingly resilient. Every time new social trends began to pull us away from the central themes of our biological inheritance, some inner strength in our human nature helped to tug us back again. And the surprising feature of the last ten thousand years of the human story is that it has been a long struggle to return to a social condition similar to that in which we had existed in prehistoric times. Similar, but not, of course, the same. Each new technical advance has meant that we have had to find a new way of playing the game of being human.

I once described civilization as a first-aid kit carried on the shoulders of the naked ape, which was so heavy that it caused blisters on his feet – that required first aid.. The naked ape, the human animal, is always trying to get back to its biological norm, but without giving up its new trappings. We are aided in this delicate operation by an ability that stems from our linguistic developments. For we have become great symbolizers. We not only use symbolic speech, but also make symbolic equations  in every sphere of our activities. And we are so good at symbolizing that we can experience an intense happiness from a symbolic success, a happiness just as real as if we were engaged in the original, primeval model of which the symbolic act is a copy. To give a personal example, one of my great joys is going on a book-hunt. Finding a rare book I desperately want after a long search, acquiring it and carrying it home with me, is a symbolic equivalent of a primeval hunt for prey. Yes, I still need to hunt because I am human, but no, I do not have to kill a wild animal to satisfy my ancient biological hunting urge.

A vast proportion of the activities we engage in today are symbolic substitutes for the primeval hunt. This began as soon as the agricultural revolution removed hunting as a survival device. As soon as survival-hunting vanished. it was replaced by sporthunting in which wild beasts were slaughtered as a pastime. The thrill of the chase was retained by the invention of blood sports. Later, when great towns and cities began to grow bigger and bigger, the urban population found itself unable to enjoy the chase, so the hunt was brought into the cities in a corrupted form: the arena display. The Coliseum was built in ancient Rome, and huge numbers of animals were brought there to be slain for the pleasure of the packed audience. On its opening day, nineteen hundred years ago, no fewer than five thousand animals perished. This form of slaughter became widespread and still lingers on in a modified form as the Spanish bullfight. And we all know about the annual bull-running in Pamplona, which dramatically recreates the dangers of the hunt.

Published in: on ಡಿಸೆಂಬರ್ 30, 2015 at 7:21 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

The URI to TrackBack this entry is: https://kollegala.wordpress.com/2015/12/30/%e0%b2%b8%e0%b2%82%e0%b2%a4%e0%b3%8b%e0%b2%b7%e0%b2%a6-%e0%b2%b8%e0%b3%8d%e0%b2%b5%e0%b2%b0%e0%b3%82%e0%b2%aa-%e0%b2%b8%e0%b2%82%e0%b2%a4%e0%b3%8b%e0%b2%b7%e0%b2%a6-%e0%b2%b8%e0%b3%86%e0%b2%b2-3/trackback/

RSS feed for comments on this post.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: