ನಾವೆಲ್ಲರೂ ಒಂದು ರೀತಿಯಲ್ಲಿ ಮಾರ್ಮಿಕ ಬೇಟೆಗಾರರು. ಬೇರೆ, ಬೇರೆ ವೇಷ ತೊಡುತ್ತೇವೆ ಅಷ್ಟೆ. ನಮ್ಮಲ್ಲಿ ಕೆಲವರು ಹಲವು ವೇ಼ಷಗಳನ್ನು ಧರಿಸಿ, ವಿಭಿನ್ನ ಚಟುವಟಿಕೆಗಳಲ್ಲಿ ಸಂತೋಷವನ್ನು ಹುಡುಕುತ್ತೇವೆ. ಉಳಿದವರು ವಿಶೇಷಜ್ಞರಾಗಿ ಜೀವಮಾನ ಪರ್ಯಂತ ಒಂದೇ ಬೇಟೆಯ ಬೆನ್ನು ಹತ್ತಿ ಹೋಗಲು ಇಚ್ಛಿಸುತ್ತಾರೆ. ಕೆಲವು ಮಾರ್ಮಿಕ ಬೇಟೆಯಾಟ ಬದುಕಿನ ಪೂರ್ತಿ ಇರಬಹುದು. ನಾನು ಈಗ ಸರ್ ಜೇಮ್ಸ್ ಮುರ್ರೇ ಆಕ್ಸ್ ಫರ್ಡ್ ನಿಘಂಟನ್ನು ಸಂಕಲಿಸಿದ ಮನೆಯಲ್ಲಿ ವಾಸವಿದ್ದೇನೆ. ಆತ ಸುಮಾರು ಮೂವತ್ತು ವರ್ಷಗಳ ಕಾಲ ಈ ನಿಘಂಟಿನ ಕಾರ್ಯದಲ್ಲಿ ನಿರತನಾಗಿದ್ದ. ಆತನ ಬೇಟೆ, ಅಂತಿಮ ಗುರಿ, ಜೆಡ್ ಅಕ್ಷರದ ಕೊನೆಯ ಪದ ಇದ್ದಿರಬೇಕು. ಅತ್ಯಂತ ವಿಷಾದದ ಸಂಗತಿ ಎಂದರೆ ಆತ ‘ಟಿ’ ಅಕ್ಷರವನ್ನು ತಲುಪುವ ಮುನ್ನವೇ, ಅಂದರೆ ಚಿರಸ್ಮರಣೀಯವಾದ ಖುಷಿಯನ್ನು ಅನುಭವಿಸುವ ಮುನ್ನವೇ, ಸತ್ತನೆಂದು ತಿಳಿಯುತ್ತದೆ. ಆತ ಸಾಯುವ ವೇಳೆ ಇನ್ನೂ “turndown” (ಟರ್ನ್ ಡೌನ್) ಎನ್ನುವ ಪದದಲ್ಲೇ ಇದ್ದ. “zymurgy” (ಜೈಮುರ್ಜಿ – ಇಂಗ್ಲೀಷ್ ನಿಘಂಟಿನ ಕೊನೆಯ ಪದ) ಯ ವಿವರಣೆಯನ್ನು ಪೂರ್ಣಗೊಳಿಸಿದ ಅಪ್ಪಟ ಸಂತೋಷವನ್ನು ಅನುಭವಿಸಲು ಆತ ಬದುಕಿ ಉಳಿಯಲಿಲ್ಲ. ಆ ಕ್ಷಣ ಎಂತಹ ಉತ್ಕಟ ಆನಂದದ ಕ್ಷಣವಾಗಿರುತ್ತಿತ್ತೋ?!
ಸಂತೋಷವೆನ್ವುನುದು ಒಬ್ಬೊಬ್ಬರಿಗೆ ಒಂದೊಂದು ತೆರವಷ್ಟೆ. ಆದರೂ ನಾನು ಒಂದೇ ಒಂದು ಬಗೆಯ ಬಗ್ಗೆ, ಬೇಟೆಯಾಡುವ ಆದಿಮ ತುಡಿತವನ್ನು ತೃಪ್ತಿಗೊಳಿಸಿದ್ದರಿಂದ ದೊರೆಯುವ ಖುಷಿಯ ಬಗ್ಗೆಯಷ್ಟೆ ಮಾತನಾಡಿದ್ದೇನೆ. ಈ ತುಡಿತವೇ ಇಂದು ಹಲವು ವಿಧವಾದ ಕ್ರಿಯಾಶೀಲ ಹಾಗೂ ಪರಿಪೂರ್ಣತೆಯ ಚಟುವಟಿಕೆಗಳ ಎತ್ತರವನ್ನು ತಲುಪಿದೆ. ನಾನು ಹೀಗೇಕೆ ಮಾಡಿದೆ ಎಂದರೆ, ನಮ್ಮಲ್ಲಿ ಬಹಳಷ್ಟು ಮಂದಿಯಲ್ಲಿ ಈ ಗುಣ ಕಾಣೆಯಾಗಿರುವುದೇ ಇಂದು ನಾವು ಕಾಣುತ್ತಿರುವ ದುಃಖ, ದುಮ್ಮಾನಗಳಿಗೆ ಕಾರಣ ಅನ್ನುವುದು ನನ್ನ ನಂಬಿಕೆ. ಬದುಕಿನಲ್ಲಿ ಕ್ರಿಯಾಶೀಲತೆ ಹಾಗೂ ಸವಾಲುಗಳನ್ನು ಎದುರಿಸುವವರು ಬಹಳ ಅದೃಷ್ಟವಂತರು. ನಮ್ಮೆದುರಿಗೆ ನಾವು ತಲುಪಬಹುದಾದ ಗುರಿ ಕಾಣುತ್ತಿರುತ್ತದೆ. ಇಂತಹವರು ಮನುಷ್ಯರು ವಿಕಾಸವಾದ ರೀತಿಗೆ ಒಪ್ಪುವಂತೆ, ಅಂದರೆ ಯೋಜನೆಗಳನ್ನು ಹಾಕುತ್ತಾ, ತಂತ್ರಗಳನ್ನು ರೂಪಿಸುತ್ತಾ, ಶ್ರಮಪಟ್ಟು, ಅಪಾಯಗಳನ್ನು (ಕಷ್ಟಗಳನ್ನು) ಎದುರಿಸಿ, ಸಾಧನೆ ಮಾಡುತ್ತ ಬದುಕಬಹುದು. ಆದರೆ ಕೃಷಿಕ್ರಾಂತಿ ಮಾನವ ಜನಾಂಗದ ಬಹುತೇಕ ಜನತೆಯಲ್ಲಿ ಕೆಟ್ಟ ದೋಷವೊಂದನ್ನು ಉಳಿಸಿಬಿಟ್ಟಿದೆ. ಬಹುತೇಕ ಜನರು ಅವಿರತವಾದ, ಉದಾಸ, ಮರುಕಳಿಸುವಂತಹ ಕೃಷಿ ಕೆಲಸಗಳಲ್ಲಿ ತೊಡಗಿಕೊಂಡರು. ಈಗಲೂ ಹಲವು ದೇಶಗಳಲ್ಲಿ ಇದು ನಡೆಯುತ್ತಲೇ ಇದೆ. ಹುಲ್ಲು ಮೇಯುವ ದನಗಳಿಗೆ ಈ ಬಗೆಯ ಜೀವನ ಒಪ್ಪುವುದಾದರೂ, ಗುರಿಹಿಡಿದು ನಡೆಯುವಷ್ಟು ಬುದ್ಧಿಮತ್ತೆಯಿರುವ ಹೆಣ್ಣು, ಗಂಡುಗಳಿಗಲ್ಲ.
ಕೈಗಾರಿಕಾ ಕ್ರಾಂತಿಯಿಂದಾಗಿ ಪರಿಸ್ಥಿತಿ ಇನ್ನೂ ಹದಗೆಟ್ಟಿತು. ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ತಲೆಯೆತ್ತಿ ನೋಡಿದರೆ ಆಕಾಶವೂ ಕಾಣದಂತಾಯ್ತು. ಅವರ ಕೆಲಸ ಇನ್ನಷ್ಟು ಯಾಂತ್ರಿಕದ್ದೆನಿಸಿತು. ಯಾವುದೇ ಗೊತ್ತು-ಗುರಿ ಅವರ ಕೈಯಳತೆಯಲ್ಲಿರಲಿಲ್ಲ. ಇಂತಹ ಕೆಲಸದಲ್ಲಿ ಯಾವುದೇ ಖುಷಿ ಇರಲಿಲ್ಲ. ಪುರಾತನ ಗ್ರೀಸಿನಲ್ಲಿದ್ದ ಗುಲಾಮಗಿರಿಯನ್ನು ನಾವು ತೊಡೆದುಹಾಕಿದ್ದೆವೇನೋ ಸರಿ. ಆದರೆ ಅದರ ಜಾಗದಲ್ಲಿ ನವೀನ ದಿನಗೂಲಿ ಗುಲಾಮರನ್ನು ಸ್ಥಾಪಿಸಿದೆವು. ಇವರಿಗೆಲ್ಲ ಖುಷಿಯ ಕ್ಷಣ ಎಂಬುದು ಅವರ ಕೆಲಸದಾಚೆಯ ಚಟುವಟಿಕೆಗಳಿಗೆ ಸೀಮಿತವಾಯಿತು.ಆದರೂ ಈ ಕೆಲಸವೇ ಅವರು ಮನೆಗೆ ಎರಡು “ತುತ್ತು” ತರುವಂತೆ ಮಾಡಿದ್ದು. ಅಂದರೆ ಇಷ್ಟೆ. ಈ ನೀರಸ, ಪುನರಾವರ್ತನೆಗೊಳ್ಳುವ ಕೆಲಸ ಆದಿಮ, ರೋಮಾಂಚನಕಾರಿ ಬೇಟೆಗೆ ಪರ್ಯಾಯವೆನಿಸಿತು. ಅವರ ತಲೆಯೊಳಗಿದ್ದ, ವಿಕಾಸದ ಚರಿತ್ರೆಯಲ್ಲೇ ಮಹಾನ್ ಎನ್ನಿಸಿದ ಮಿದುಳಿಗೆ ಅವಮಾನ ಎನ್ನುವಂತಹ ಕೆಲಸಗಳನ್ನ ಮಾಡುವುದರಲ್ಲೇ ಬಹುತೇಕ ಬದುಕು ಸವೆಸಬೇಕಾಯ್ತು.
_____________________________________________________
ಟಿಪ್ಪಣಿ: ಹೊಸ ವರ್ಷದ ಶುಭಾಷಯಗಳು
ಮೂಲದಲ್ಲಿ ‘mindless” ಎನ್ನುವ ಪದವಿದೆ. ಇದಕ್ಕೆ ಮನಸ್ಸಿಲ್ಲದ ಮನಸ್ಸಿನಿಂದ ಅನ್ನಬಹುದಿತ್ತೇನೋ? ಯಾಂತ್ತಿಕ ಎಂದು ಬರೆದಿದ್ದೇನೆ. ಇನ್ನೊಂದು ಕಡೆ, “brought home the bacon” ಎನ್ನುವ ವಾಕ್ಯವಿದೆ. ಇದು ಉಣಿಸನ್ನು ತಂದದ್ದನ್ನು ವಿವರಿಸುವ ಪದಪುಂಜ. ಮಾರಿಸ್ ಈ ಪದಪುಂಜದಲ್ಲಿ ಬೇಟೆಯ ಸಾಂಕೇತಿಕತೆಯನ್ನು ಕಂಡಿದ್ದಾನೆ. ಆದರೆ ಇದಕ್ಕೆ ಸಮಾನವಾದ, ಕನ್ನಡ ನುಡಿಗಟ್ಟು ಸಿಗಲಿಲ್ಲ. (ನನಗೆ ಗೊತ್ತಿರಲಿಲ್ಲ ಎನ್ನುವುದು ಒಪ್ಪುವ ಮಾತು). “ತುತ್ತು ಹೊತ್ತು ತರುವುದು” ಅಂತ ಬರೆದಿದ್ದೇನೆ. ನಿಮ್ಮ ಕಮೆಂಟ್ ಬರಲಿ.
___________________________________________________
We are all symbolic hunters, wearing funny hats. Some of us wear several hats and find happiness in a variety of pursuits (and there is another hunting word: pursuit). Others prefer to specialize and may spend a whole lifetime doggedly chasing after a single prey. Some types of symbolic hunt can take a whole lifetime. I am at present living in the house in which the Oxford English Dictionary was compiled by Sir James Murray. He spent over thirty years working on the huge dictionary and his goal, his ultimate prey, must have been to reach the end of the letter Z. It is with great sadness, a sense of a monumental happiness lost, that one discovers that he died at the letter T. He was working on the word ‘turndown’ at the time and never lived to experience the pure joy of completing the definition of ‘zymurgy’. W hat a climactic moment of happiness that would have been.
Happiness means many things to different people, and yet I seem to have been dwelling largely on one type. I have been stressing the happiness that comes from satisfying our basic urge to hunt down prey, which has been transformed and elevated into so many fulfilling and creative pursuits today. I have done this because I believe that a great deal of the unhappiness we see now has been caused by a loss of this quality in the lives of so many of us. Those of us who have
creative lives full of variety and challenge, with visible goals at which we can aim our efforts – we are the lucky ones. We can live in the way humans evolved to live: planning, striving, achieving, taking risks. But the agricultural revolution left a
terrible blight on a large slice of humanity. Large numbers of individuals were, and in some countries still are, condemned to endless, boring, repetitive toil in the fields. The work was fit for grass-chewing cattle but not for intelligent, goal oriented, inventive men and women.
With the industrial revolution, the situation grew worse. For the factory workers, there wasn’t even a sky above them as they toiled. Their jobs became even more mindless, and any sort of endproduct goal was beyond them. There was no joy to be had in such labour. We may have abolished the real slaves of ancient Greece, but all we did was to replace them with the wage-slaves of modern times. For them, moments of happiness had to be confined exclusively to activities outside their work. And yet it was their work that ‘brought home the bacon’. In other words, it was their boring, repetitive work that was supposed to be substituting for the thrills of the primeval hunt. The major part of their lives was spent in activities that were insulting to the great brains that nestled inside their skulls: the greatest brains in the whole history of evolution.