ನಮ್ಮ ಜೀವನ ಲೆಕ್ಕಾಚಾರದಲ್ಲಿ ಗಣಿತ ಕಡಿಮೆ ಆಗಿರುವುದೇಕೆ?

04012016.jpg

ಬಹುಶಃ ನನ್ನ ಬೇರೆ ಯಾವುದೇ ಲೇಖನಗಳಿಗೂ ದೊರಕದ ಪ್ರತಿಕ್ರಿಯೆ ಇದಕ್ಕೆ ಸಿಕ್ಕಿದೆ. ಬೆಳಗ್ಗೆ ಈ ಲೇಖನವನ್ನು ನನ್ನ ಶಿಕ್ಷಕ ಮಿತ್ರರೊಂದಿಗೆ ವಾಟ್ಸಪ್‍ ನಲ್ಲಿ ಹಂಚಿಕೊಂಡಿದ್ದೆ. ಅವರಲ್ಲಿ ಕೆಲವರಿಂದ ಬಂದ ಪ್ರತಿಕ್ರಿಯೆಗಳು ಇಲ್ಲಿವೆ.

  1. You have mentioned in the article about women illiterates in both instances – mall & Ramnagar..😒.. One of the reasons could be that they were not given the right to education… Also, though they can’t read, they do identify the currency very well…. My maid who may be in her early 40s sail in the same boat… She wants me make a call from my mobile taking number from her mobile… Never recharges her mobile currency.. says .. ಅಕ್ಕೋ , ಕಾಸು ಹಾಕ್ಸಲ್ಲ … ಅವರೇ ಮಾಡ್ಲಿ .. ನಂಗೆ ಕಾಸು ಕಟ್ ಆಗಲ್ಲಕ್ಕಾ …. She knows money calculations well!!!! … ಶ್ರೀಮತಿ ರೇಖಾ ಹೆಗಡೆ
  2. That is practicality and prudence.  Life’s currency, but not maths! … ನನ್ನ ಉತ್ತರ
  3. Ondu katora satyada bagge saralavagi barediddira.nija shalege hogadavara kathe matravalla.shalege baruva makkalu,akshara kagunita,sariyagi kaliyade munde munde hoguttare. Nalli salu swantavagi bareyalu baradavarigu kannadadalli 125 KKE 124 marks baratte.ellinda riperi shuru madbeku? Intaha shock navu dinavu taragatiyalle anubhavisuttirutteve.parihara?….
  4. Samasye namagashte kantirodarinda, parihara naave hudukbeku. Samaye kaanadavarige hege aagutte (Sarakara seri) … ನನ್ನ ಉತ್ತರ

vijay1.jpgಇದಕ್ಕೆ ನನ್ನ ಉತ್ತರ: ನಿಮ್ಮ ಚಿಂತನೆಯೂ ಸರಿಯೆ. ಬಹುಶಃ ನಾನು ಶಿಕ್ಷಕರನ್ನು ದೂರುತ್ತಿದ್ದೇನೆ ಎಂಬ ಭಾವನೆ ಬಂದಿದ್ದರೆ ಕ್ಷಮಿಸಿ. ಯಾವುದೆ ವಿಚಾರವನ್ನೂ ವಿಶ್ಲೇಷಿಸುವ ಸಾಮರ್ಥ್ಯ ಬಹುತೇಕ ಜನರಲ್ಲಿ ಕಾಣುವುದಿಲ್ಲ. ಇದು ನನ್ನ ಅನುಭವವಷ್ಟೆ ಅಲ್ಲ. ಅಧ್ಯಯನಗಳ ತೀರ್ಮಾನ. ಗಣಿತದ ಪಾತ್ರವಿಲ್ಲ ಅಂತ ನಾನು ಹೇಳಿಲ್ಲ. ಅದರ ಬಗ್ಗೆ ಕಾಳಜಿ ಕಡಿಮೆ ಎಂದಷ್ಟೆ ಹೇಳಿದ್ದೇನೆ. ಅಂಕಿ-ಅಂಶಗಳು, ಸರ್ವೆಗಳು, ವೈಯಕ್ತಿಕ ಅನುಭವ ಇವೆಲ್ಲವೂ ಎಲ್ಲೋ ನಾವು ಗಣಿತ, ಲೆಕ್ಕಗಳ ಬಗ್ಗೆ ಉಳಿದವುಗಳಿಗೆ ನೀಡುವ ಪ್ರಾಧಾನ್ಯ ನೀಡುತ್ತಿಲ್ಲ ಎನ್ನುತ್ತಿವೆ. ಕೆಲವೊಮ್ಮೆ ಋಣಾತ್ಮಕ ಮಾತುಗಳೂ ಬೇಕು. ಇಲ್ಲದಿದ್ದರೆ ನಿಮ್ಮಿಂದ ಖಂಡಿತ ಈ ಪತ್ರ ಬರುತ್ತಿರಲಿಲ್ಲ. ಅಷ್ಟಕ್ಕೇ ನನ್ನ ಲೇಖನದ ಉದ್ದೇಶ ಪೂರ್ಣವಾಯಿತು ಅಂದುಕೊಳ್ಳುತ್ತೇನೆ.

vijay3.jpg

vijay2.jpg

ಯಾರನ್ನು ದೂರೋಣ ಎಂದಿದ್ದೇನೆ. ಯಾರನ್ನೂ ದೂರಿಲ್ಲ.. ವಿಚಾರಗಳನ್ನು ಮುಂದಿಡುವುದು ಲೇಖಕನ ಜವಾಬುದಾರಿ. ಆ ಕೆಲಸ ಮಾಡಿದ್ದೇನೆ. ಪ್ರಸಿದ್ಧ, ಜನಪ್ರಿಯ ಎಲ್ಲಾ ತೌಲನಿಕ ಪದಗಳಷ್ಟೆ. ಪ್ರತಿಯೊಂದು ಲೇಖನವೂ ಹೊಸ ಪ್ರಸವದಷ್ಟೆ ತಾಳ್ಮೆ, ಚಿಂತನೆಯನ್ನು ಬೇಡುತ್ತವೆ. ಸಮಸ್ಯೆ ಇದೆ ಎಂಬುದನ್ನು ಲೇಖನ ತಿಳಿಸಿದೆ ಎನ್ನುವುದು ನಿಮ್ಮ ಪ್ರತಿಕ್ರಿಯೆಯಿಂದಲೂ ಸ್ಪಷ್ಟವಾಗುತ್ತಿದೆ. ಸಮಸ್ಯೆಯ ಅರಿವಿನಿಂದ ಪರಿಹಾರ ಹುಡುಕುವ ಪ್ರಯತ್ನ ಆರಂಭವಾಗಬೇಕು. ಅನಂತರ ವಿಶ್ಲೇಷಣೆ, ಪ್ರಯೋಗ, ಫಲಿತಾಂಶ, ಪರಾಮರ್ಶೆ ಇವೆಲ್ಲ. ಮೊದಲ ಕೆಲಸ ಮಾಡಿದ್ದೇನೆ. ಮುಂದಿನದಕ್ಕೆ ಕೈಜೋಡಿಸಲು ಸದಾ ಸಿದ್ಧ.

Advertisements
Published in: on ಜನವರಿ 4, 2016 at 5:49 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

The URI to TrackBack this entry is: https://kollegala.wordpress.com/2016/01/04/%e0%b2%a8%e0%b2%ae%e0%b3%8d%e0%b2%ae-%e0%b2%9c%e0%b3%80%e0%b2%b5%e0%b2%a8-%e0%b2%b2%e0%b3%86%e0%b2%95%e0%b3%8d%e0%b2%95%e0%b2%be%e0%b2%9a%e0%b2%be%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf/trackback/

RSS feed for comments on this post.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: