ಸಂತೋಷದ ಸ್ವರೂಪ – ಸಂತೋಷದ ಬಗೆಗಳು1

ಈಡಿನ ಖುಷಿ

ಸಾಧಕ

ಇದರಲ್ಲಿ ಮೂರು ಹಂತಗಳಿವೆ: ನಿರೀಕ್ಷೆ, ಹಸಿವೆ ಮತ್ತು ಉಣಿಸು. ಅತೀವ ಕುತೂಹಲ, ಅನ್ವೇಷಣೆಯ ಗುಣ ಹಾಗೂ ಶೋಧಕ ಪ್ರವೃತ್ತಿ ಇರುವ ಜೀವಿಯಾದ ನಾವು ಸದಾ ಹೊಸ ಯೋಜನೆಗಳು, ಹೊಸ ಅನುಭವಗಳು ಮತ್ತು ಹೊಸ ಸವಾಲುಗಳನ್ನು ನಿರೀಕ್ಷಿಸುತ್ತೇವೆ. ಇದರ ಚಿಂತೆಯೇ ನಮಗೆ ಖುಷಿ ನೀಡುತ್ತದೆ. ಅನಂತರ,  ಆ ನಿಟ್ಟಿನಲ್ಲಿ ಕಾರ್ಯಕ್ಕೆ ತೊಡಗಿಕೊಂಡಾಗ, ನಾವು ಮಾಡುತ್ತಿರುವುದು ಸವಾಲೆನ್ನಿಸಿ, ವೈವಿಧ್ಯವಿದ್ದರೆ, ಅದರಲ್ಲೇ ನಿರತರಾಗಿ, ಫಲ ಪಡೆಯುವುದೂ ಖುಷಿಯೆನಿಸುತ್ತದೆ. ಪ್ರತಿಯೊಂದು ಸವಾಲಿನ ಕೊನೆಯಲ್ಲೂ, ನಾವು ಸಫಲರಾಗಿದ್ದರೆ ಆ ಕ್ಷಣದಲ್ಲೇ ತೀವ್ರೋದ್ರೇಕದಷ್ಟು ಖುಷಿಯನ್ನು ಅನುಭವಿಸುತ್ತೇವೆ. ತುಸು ಬಿಡುವು ಕೊಟ್ಟು ಮತ್ತೆ ಅದರಲ್ಲೇ ತೊಡಗಿಕೊಳ್ಳುತ್ತೇವೆ.

ಇದು ಬೇಟೆಗಾರರಾಗಿ ಅಪಾಯವನ್ನೆದುರಿಸುತ್ತಿದ್ದ ನಮ್ಮ ಪೂರ್ವ ಚರಿತ್ರೆಯಿಂದ ಹೊಮ್ಮಿದ ಬೇಟೆಗಾರನ ಖುಷಿ. ಭವಿಷ್ಯದಲ್ಲಿ ಖುಷಿಯೆನ್ನುವುದನ್ನು ಹೆಚ್ಚಿಸಬೇಕಾದರೆ ಸೂಕ್ಷ್ಮಪ್ರಜ್ಞೆ ಹೆಚ್ಚುತ್ತಿರುವ ನಮ್ಮ ಜನಾಂಗವು ಮಗ್ನವಾಗುವಂತಹ ಪುರಾತನ ಕಾಲದ ಬೇಟೆಯಷ್ಟೆ ಸೊಬಗಿರುವ ಮತ್ತಷ್ಟು ಮಾರ್ಮಿಕ ಮಾರ್ಗಗಳನ್ನು ನಾವು ಹುಡುಕಬೇಕಾಗುತ್ತದೆ ಎನ್ನುವುದು ಸುಸ್ಪಷ್ಟ. ನಾವು ಇದನ್ನು ಮಾಡುವುದರಲ್ಲ ವಿಫಲರಾಗಿ, ಬೇಸರ ಹಾಗೂ ಹತಾಶೆಯನ್ನೇ ನೀಡಿದರೆ ಮತ್ತಷ್ಟು ರಕ್ತಸಿಕ್ತ ಹಾಗೂ ಒರಟಾದ ಬದಲಿ ಮಾರ್ಗಗಳು ರೂಪುಗೊಳ್ಳುವುದನ್ನು ಕಾಣುತ್ತೇವಷ್ಟೆ. ಆಯ್ಕೆ ನಮ್ಮದೇ ಆದರೂ ಸಂತೋಷ ಎನ್ನುವುದು ಕ್ಷಣಿಕ ಕಾಣಿಸಿಕೊಂಡು ಮರೆಯಾಗಿಬಿಡುವ ಭಾವ ಎನ್ನುವುದು ಸದಾ ನೆನಪಿನಲ್ಲಿರಬೇಕು. ನಾನು ಆಗಲೇ ಹೇಳಿದ ಹಾಗೆ, ಎಲ್ಲವೂ ಸರಿಯಾಗಿದ್ದಾಗ ಸಂತೋಷವಾಗುವುದಿಲ್ಲ. ಸುಧಾರಣೆಯಿದ್ದಲ್ಲಿ ಮಾತ್ರ ಸಂತೋಷವುಂಟಾಗುತ್ತದೆ. ಈಡಿನ ಖುಷಿಯ ಒಂದು ಪ್ರಮುಖ ಅಂಶವೆಂದರೆ ನೀವಿಟ್ಟುಕೊಂಡ ಗುರಿ ಕೈಗೆಟುಕುವಂತಿದೆಯೇ ಎನ್ನುವುದು. ಕೆಲವರು ಎಷ್ಟು ಎತ್ತರದ ಗುರಿಯಿಟ್ಟುಕೊಳ್ಳುತ್ತಾರೆಂದರೆ ಜೀವನ ಪರ್ಯಂತ ನಿರಾಶೆಯ ಸ್ಥಿತಿಯಲ್ಲಿಯೇ ಕಳೆದುಬಿಡುತ್ತಾರೆ. ಇವರು ದ್ರಾಕ್ಷಿ ಹುಳಿ ಇದೆ ರೋಗಿಗಳು. “ನಾನು ಮಹಾ ಸಂಗೀತಗಾರನಾಗಬಹುದಿತ್ತು. ಆದರೆ ಸಂಸಾರ ತಾಪತ್ರಯಗಳು ಬಿಡಲಿಲ್ಲ.” ಎನ್ನುವವರು.

ಕೆಲವರ ಗುರಿ ಅವರ ಸಾಮರ್ಥ್ಯಕ್ಕಿಂತಲೂ ಕಡಿಮೆ ಇರುತ್ತದೆ. “ಹಾಡುವುದೆಂದರೆ ನನಗೆ ಖುಷಿ. ಆದರೆ ಕೇಳುಗರೆದುರಿಗೆ ಹಾಡಲಾರೆ,” ಎನ್ನುವವರು ಇವರು. ತಮ್ಮ ಸಾಮರ್ಥ್ಯಕ್ಕೆ ತಕ್ಕ ಗುರಿಯನ್ನು ಇಟ್ಟುಕೊಳ್ಳುವವರು ಧನ್ಯರು. ವಾಸ್ತವವಾಗಿ ನಮ್ಮ ಇಂದಿನ ಗುರಿಗಳೆಲ್ಲವೂ ಮಾರ್ಮಿಕವಾಗಿರುವುದರಿಂದ ನಮ್ಮ ಗುರಿ  ದೊಡ್ಡದೋ, ಸಾಧಾರಣವೋ ಎನ್ನುವುದು ಮುಖ್ಯವಲ್ಲ. ಅದು ನಮಗೆಷ್ಟು ಮುಖ್ಯವೆನ್ನಿಸುತ್ತದೆ ಅನ್ನುವುದೇ ಪ್ರಮುಖ ವಿಷಯ. ಒಬ್ಬ ಸಾಧಾರಣ ಕಲೆಗಾರ ತಾನು ಬಲು ದೊಡ್ಡ ಕಲೆಗಾರನೆಂದು ಭಾವಿಸಿಕೊಂಡರೆ ತನ್ನ ಮಟ್ಟಿಗೇ ಆತ ಸದಾ ಸೋಲುತ್ತಿರುತ್ತಾನೆ. ಅದೇ ದೊಡ್ಡ ಕಲೆಗಾರನೊಬ್ಬ ತಾನು ಮಹಾನೇನಲ್ಲ ಎಂದು ಭಾವಿಸಿದರೆ, ಆತನೂ ಸೋಲಬಹುದು. ಏಕೆಂದರೆ ಆಗ ಆತ ತನ್ನ ಸಾಮರ್ಥ್ಯಕ್ಕೆ ಒದಗುವಷ್ಟು ಮಹಾನ್ ಅಥವಾ ಕಷ್ಟವಾದ ಗುರಿಗಳನ್ನು ಹಿಡಿಯಲು ಹೋಗುವುದಿಲ್ಲ. ಸಾಧಾರಣ ಕಲೆಗಾರ ತಾನೆಷ್ಟು ಸಣ್ಣವನೆಂಬ ಸತ್ಯವನ್ನು ತಿಳಿದಿದ್ದಾನೆನ್ನಿ. ಆಗ ತನ್ನ ಅಳವಿನ ಮಟ್ಟದಲ್ಲಿಯೇ, ಸ್ಥಳೀಯವಾಗಿಯೋ, ಸಾಧಾರಣ ಕಲಾಪ್ರದರ್ಶನಗಳಲ್ಲಿಯೋ ಖುಷಿ ಕಾಣುತ್ತಾನೆ. ಮಹಾನ್ ಕಲೆಗಾರನೂ ಅಷ್ಟೆ. ತಾನು ಮಹತ್ತರವಾದದ್ದನ್ನು ಸಾಧಿಸಬಹುದೆನ್ನುವುದನ್ನು ತಿಳಿದರೆ, ಇನ್ನೂ ಮಹತ್ತರವಾದ ಸವಾಲುಗಳನ್ನೆದುರಿಸಲು ಮುಂದಾಗುತ್ತಾನೆ. ಇಲ್ಲಿ ನೀವು ‘ಕಲೆಗಾರ’ ಎಂಬುದರ ಬದಲಿಗೆ ಇಂಜಿನೀಯರು, ವ್ಯಾಪಾರಿ ಅಥವಾ ಇನ್ಯಾವುದೋ ಉದ್ಯೋಗವನ್ನೂ ಇಟ್ಟುಕೊಳ್ಳಬಹುದು.

________________________________________________

ಟಿಪ್ಪಣಿ:

ಮೂಲಪಾಠಕ್ಕೆ ಅನುವಾದಕ ಏನನ್ನಾದರೂ ಕೂಡಿಸಬಹುದೇ? ಕಳೆಯಬಹುದೇ? ಇಲ್ಲಿ ಅಂತಹ ಹಲವು ಸಂದರ್ಭಗಳು ಒದಗಿದುವು. ಕೆಲವು ಪದಗಳು ಮೂಲದಲ್ಲಿ ಅಧಿಕವೆನ್ನಿಸಿದ್ದರಿಂದ ಅವನ್ನು ಬಿಟ್ಟು ಅನುವಾದ ಮಾಡಬೇಕಾಯಿತು. ಕೆಲವೆಡೆ ಸ್ಪಷ್ಟತೆಗಾಗಿ ಕೆಲವು ಪದಗಳನ್ನು ಕೂಡಿಸಬೇಕಾಯಿತು.

_________________________________________________

TARGET HAPPINESS

The Achiever

This has three stages: the anticipatory, the appetitive and the consummatory. Being the kind of animals we are – intensely curious, exploratory and inventive – we are constantly anticipating new projects, new experiences and new challenges, and their contemplation makes us happy. Then, when we start to work at them, if our work is challenging and varied, we enjoy the business of simply being busy and productive. Then, at the end of each venture, if we are successful, we can enjoy an almost orgasmic happiness with the sudden satisfaction we feel. A short pause and we are off again.

 

This is the hunter’s happiness that stems from our evolutionary past as risk-taking predators, and it is clear that increasing the happiness of mankind in the future depends largely on finding more and more elegant ways of creating symbolic equivalents of the ancient hunting pattern with which to preoccupy our increasingly sophisticated populations. If we fail to do this and instead create boredom and frustration, then we may see more of the cruder, bloodstained substitutes. The choice is ours, but we must always remember that happiness is a fleeting, flitting, dynamic thing. As I said at the outset, happiness is not when things are good; it is when they are getting better. One important aspect of target happiness concerns how high you set your sights. Some individuals aim too high and live out their lives in a more or less permanently soured, disappointed condition. This is the ‘I could have been a concert pianist/ pop-star/great actor if it hadn’t been for my sick mother/ children/demanding partner’ syndrome.

 

Others aim too low and waste their talents. This is the ‘I enjoy singing but I am not good enough to face an audience’ syndrome. Lucky are the individuals who aim just high enough to match their potential. The truth is that, since all our modern targets are symbolic, it really doesn’t matter how grand or how modest our aims are, so long as they are ones we ourselves consider to be important. If a minor artist thinks he is a major artist, he will always be a failure to himsel£ And if a major artist thinks he is a minor artist, he too may fail because he never undertakes difficult, major works and never stretches himself to the full. But if a minor artist knows he is a minor artist and accepts this truth, he may then be able to succeed in local art shows and achieve happiness at his modest level. If a major artist accepts that he has something great to offer, then he can drive himself on to undertake bigger and bigger challenges. And, for ‘artist’ you can read ‘engineer: or ‘shopkeeper’, or any other occupation.

Advertisements
Published in: on ಜನವರಿ 7, 2016 at 6:07 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

The URI to TrackBack this entry is: https://kollegala.wordpress.com/2016/01/07/%e0%b2%b8%e0%b2%82%e0%b2%a4%e0%b3%8b%e0%b2%b7%e0%b2%a6-%e0%b2%b8%e0%b3%8d%e0%b2%b5%e0%b2%b0%e0%b3%82%e0%b2%aa-%e0%b2%b8%e0%b2%82%e0%b2%a4%e0%b3%8b%e0%b2%b7%e0%b2%a6-%e0%b2%ac%e0%b2%97%e0%b3%86/trackback/

RSS feed for comments on this post.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: