ಸಂತೋಷದ ಸ್ವರೂಪ – ಸಂತೋಷದ ಬಗೆ -2

ಸ್ಪರ್ಧೆಯ ಸಂತೋಷ

ವಿಜೇತ

ಇಲ್ಲಿಯೂ ಗೆಲುವಿನ ಗುರಿಯನ್ನು ಮುಟ್ಟಬೇಕಾಗಿರುವುದರಿಂದ ಇದುವೂ ಮೊದಲಿನ ವರ್ಗಕ್ಕೇ ಸಂಬಂಧಿಸಿದೆ. ಆದರೆ ಒಂದು ಪ್ರಮುಖ ವ್ಯತ್ಯಾಸವಿದೆ. ಈಡಿನ ಖುಷಿ ವೈಯಕ್ತಿಕ ಗುರಿಯನ್ನು ಮುಟ್ಟುವುದನ್ನು ಅವಲಂಬಿಸಿದ್ದು, ಪ್ರತಿಸ್ಪರ್ಧಿಯ ಬಲಿಯನ್ನಲ್ಲ. ಸ್ಪರ್ಧೆಯ ಸಂತೋಷ ಸದಾ ಪ್ರತಿಸ್ಪರ್ಧಿಯನ್ನು ಸೋಲಿಸುವುದರಲ್ಲೇ ಇದೆ. ಸಾಮಾನ್ಯವಾಗಿ ಪ್ರಬಲ ಯತ್ನವೂ ಬೇಕು. ಹದಿನೈದು ಸುತ್ತುಗಳ ಕಷ್ಟದ ಬಾಕ್ಸಿಂಗ್ ಸ್ಪರ್ಧೆಯ ಅನಂತರ ಕೊಡುವ ಸಂದರ್ಶನದಲ್ಲಿ ಗೆದ್ದವರು ಖುಷಿಯಿಂದ ಇರುವುದನ್ನು ನೋಡಿದಾಗಲೆಲ್ಲ ಅಚ್ಚರಿಯಾಗುತ್ತದೆ. ಅಷ್ಟೊಂದು ಕ್ರೂರವಾಗಿ ಪೆಟ್ಟಿನ ಮೇಲೆ ಪೆಟ್ಟು ತಿಂದು ಮುಖವೆಲ್ಲ ಅಪ್ಪಚ್ಚಿಯಾಗಿದ್ದರೂ, ಟೆಲಿವಿಷನ್ನಿನ ಕ್ಲೋಸ್ ಅಪ್ ನಲ್ಲಿ ಆ ಮುಖ ಖುಷಿಯಿಂದ ಬೆಳಗುತ್ತ, ಅದುವರೆಗೆ ನಡೆದದ್ದೆಲ್ಲ ಕನಸೇನೋ, ಸುತ್ತಿಗೆಯಂತಹ ಮುಷ್ಟಿ ಮಿಂಚಿನಂತೆ ಮತ್ತೆ ಮತ್ತೆ ಬಡಿದದ್ದು ಸುಳ್ಳೇ ಎನ್ನುವಂತೆ  ಹಸನ್ಮುಖಿಯಾಗಿಯೇ ಇರುತ್ತದೆ. ಎಲ್ಲ ಗೆದ್ದವರ ಮುಖದ ಮೇಲೆ ಕಾಣುವ  ವಿಶೇಷ ತೆರನ ನಗು ಅದು. ತಮ್ಮ ಎದುರಾಳಿಗಳನ್ನು ಅವರು ಹೇಗೆಯೇ ಸದೆಬಡಿದಿರಲಿ, ಈ ಗೆಲುವಿನ ನಗೆಯನ್ನಂತೂ ಅಣಕಿಸುವುದು ಅಸಾಧ್ಯವೇ ಸರಿ. “ಆ ಗೆಲುವಿನ ಕೂಗೇನೋ ಸರಿಯಾಗಿ ಬಂತು, ಆದರೆ ನಗೆಯನ್ನು ಚಿತ್ರಿಸಲು ಆಗುತ್ತಿಲ್ಲ.” ಎಂದು ಒಮ್ಮೆ ಕಲಾವಿದ ಫ್ರಾನ್ಸಿಸ್ ಬೇಕನ್ ಹೇಳಿದ್ದು ನೆನಪಾಗುತ್ತದೆ. ಉತ್ಕಟಾನಂದದ ಸಮಯದಲ್ಲಿ ತೋರುವ ನಗುವನ್ನು ಚಿತ್ರಿಸುವುದು ಕಲಾವಿದರಿಗೂ, ನಟರಿಗೂ ಬಹಳ ಕಷ್ಟ. ಆದರೆ ಇದನ್ನು ನೋಡುವುದು ನಮಗೆ ತಪ್ಪದು.

“ಸಂತೋಷ ಎಂದರೆ ಮತ್ತೊಬ್ಬರ ಸಂಕಟವನ್ನು ಊಹಿಸಿಕೊಂಡಾಗ ಆಗುವ ಭಾವನೆ”. ಈ ಸಂತೋಷದ  ವಿವರಣೆ ನಾನು ಇದುವರೆಗೆ ಕಂಡಿರುವುದರಲ್ಲಿ ಅತ್ಯಂತ ಕ್ರೂರವಾದದ್ದು. ಇದನ್ನು ನೆನೆದಾಗಲೆಲ್ಲ ನನಗೆ ನಡುಕ ಬರುತ್ತದೆ.   ಯಾವುದೇ ಜೋಕ್ ಕೇಳಿ ನಗುತ್ತೇವಲ್ಲ ಆಗ  ಅದು ಈ ರೀತಿಯ ಸಂತೋಷದ ಸೌಮ್ಯರೂಪ ಎನ್ನುವುದನ್ನು ಮರೆಯಬಾರದು. ಏಕೆಂದರೆ ಪ್ರತಿ ಜೋಕಿನ ಕಾರಣವಾಗಿ ಬಾಳೆಯ ಸಿಪ್ಪೆಯ ಮೇಲೆ ಕಾಲಿಟ್ಟು ಜಾರಿದ್ದಕ್ಕೋ, ಇನ್ಯಾವುದಕ್ಕೋ ಜುಗರಕ್ಕೊಳಗಾದವರೊಬ್ಬರು ಇರುತ್ತಾರೆ. ಅವರ ಮುಜುಗರ ನಮಗೆ ನಗು ತರಿಸುತ್ತದಷ್ಟೆ. “ಖುಷಿ ಎನ್ನುವುದು ಇತರರ ಜೊತೆಗೆ ಹಂಚಿಕೊಳ್ಳುವುದಕ್ಕಲ್ಲ,”  ಎನ್ನುವ ಇನ್ನೊಂದು ವ್ಯಾಖ್ಯಾನವೂ ಇದೆ. ಈ ಎರಡರಲ್ಲೂ ನಾವು ಸ್ಪರ್ಧೆಯ ಸಂತೋಷವನ್ನು ಕುರಿತೇ ಹೇಳುತ್ತಿದ್ದೇವೆ. ನಾಚಿಕೆಯಿಲ್ಲದೆಯೋ ಅಥವಾ ಅಳುಕಿನಿಂದಲೋ, ಒಟ್ಟಾರೆ ಇನ್ನೊಬ್ಬರ ಸೋಲೇ ನಮ್ಮ ಖುಷಿ ಎಂದು ಒಪ್ಪಿಕೊಳ್ಳುತ್ತಿದ್ದೇವೆ.

ಈ ಬಗೆಯ ಸಂತೋಷದ ಪರಮಾವಧಿ ಅತಿ ನಿಷ್ಕರುಣೆಯ ರೂಪವಾಗುತ್ತದೆ. ಹಿಂಸಕ ಅಥವಾ ಸ್ಯಾಡಿಸ್ಟ್ ನ ಸಂತೋಷ ಇದು. ಅಸಹಾಯಕರಿಗೆ ನೋವನ್ನು ನೀಡುವುದು ಇಂತಹವರಿಗೆ ಪರಮ ಸಂತೋಷವನ್ನು ಕೊಡುತ್ತದೆ. ತಮ್ಮ ಈಡು ಅಸಹಾಯಕವೆಂಬುದೇ ಅವರ ಇಂತಹ ಕೆಲಸಗಳಿಗೆ ಪ್ರೇರಣೆ.  ಆ ಬೇಟೆ ಹಿಂತಿರುಗಿ ಏಟು ಕೊಟ್ಟರೆ ಅವರ ಸಂತೋಷ ಹಾಳಾಗುತ್ತದೆ. ಸಂಪೂರ್ಣ ಸ್ವಾಧೀನತೆ ಅವರ ಗುರಿ. ಇದು ಸ್ಯಾಡಿಸ್ಟ್ ಅಥವಾ ಹಿಂಸಕನನ್ನು ಆ ಸಂಬಂಧದಲ್ಲಿ ಪ್ರಮುಖವನ್ನಾಗಿಸಿಬಿಡುತ್ತದೆ. ಅಧಿಕಾರವಿರುವ ವಿಜೇತನಾಗುತ್ತಾನೆ. ಇದನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುವ ಆತ ಅನಂತರವೂ ಬಲಿಗೆ ನೋವನ್ನುಂಟು ಮಾಡುವುದನ್ನು ಮುಂದುವರೆಸುತ್ತಾನೆ. ಪ್ರತಿ ಬಾತಿ ಹೀಗೆ ಮಾಡಿದಾಗಲೂ, ಎದ್ದು ತೋರುವ ಬಲಿಯ ನೋವು ಮತ್ತೊಬ್ಬನ ಮೇಲೆ ತನಗಿರುವ ಅಧಿಕಾರದ ಅನುಭವ ಹಿಂಸಕನಿಗೆ ಆಗುತ್ತದೆ. ಇದು ಹೇಡಿಯ ಗೆಲುವು.

ಹಿಂಸೆಯಿಂದ ದೊರೆಯುವ ಸಂತೋಷಕ್ಕೆ ನಾಲ್ಕು ಮೂಲಗಳಿವೆ: ಮಾನಸಿಕ ಹಿಂಸೆ, ದೈಹಿಕ ಹಿಂಸೆ, ಬಲಾತ್ಕಾರ (ರೇಪ್) ಹಾಗೂ ಕೊಲೆ. ಸಾಮಾಜಿಕವಾಗಿ ಉನ್ನತ ಸ್ಥಾನದಲ್ಲಿರುವ ನಿರಂಕುಶ ಪ್ರಭುವಿಗೆ ಬಹಳಷ್ಟು ವೇಳೆ ಮಾನಸಿಕ ಹಿಂಸೆಯನ್ನು ನೀಡುವುದರಲ್ಲೇ ಖುಷಿ ಸಿಗುತ್ತದೆ. ಅಹಂಕಾರಿ ಉದ್ಯಮಿ, ನಿರ್ದಯಿ ಬಾಸ್, ಉನ್ನತ ಮಿಲಿಟರಿ ಅಧಿಕಾರಿ ಇವರೆಲ್ಲರೂ ಮುಯ್ಯಿ ತೀರಿಸಿಕೊಳ್ಳಲಾಗದ ಅಸಹಾಯಕ ಸ್ಥಿತಿಯಲ್ಲಿರುವ ಅಧೀನ ಸಿಬ್ಬಂದಿಯ ಮೇಲೆ ಹಿಂಸೆಯನ್ನು ಹೇರುತ್ತಾರೆ. ಹೀಗೆ ಅವಮಾನವನ್ನು ಅನುಭವಿಸಿದ ಅಧೀನ ಸಿಬ್ಬಂದಿಯಾದರೋ ತಮ್ಮ ಆತ್ಮ ಗೌರವವನ್ನು ಕಾಪಾಡಿಕೊಳ್ಳುವುದಕ್ಕಾಗಿ ಇನ್ನಿತರ ನಿಶ್ಶಕ್ತ ಸಹೋದ್ಯೋಗಿಗಳ ಮೇಲೆ ಏರಿ ಹೋಗುತ್ತಾರೆ. ಹೀಗೆ ಸಮಾಜದ ಉನ್ನತ ಸ್ತರದಲ್ಲಿ ತೊಡಗಿದ ಹಿಂಸೆ ತಳಹಂತವನ್ನು ತಲುಪುವುದನ್ನೇ ನಾವು “ಸೇವಕ ನಾಯಿಯನ್ನು ಒದ್ದ ಕಥೆ” ಎನ್ನುತ್ತೇವೆ. ಇಂತಹ ಹಿಂಸೆಯ ಅಂತಿಮ ಬಲಿ, ಮರಳಿ ಹೋರಾಡಲಾಗದಷ್ಟ ಅಸಹಾಯಕರಾದ ಮಕ್ಕಳು ಮತ್ತು ಮಡದಿಯರು. ಖಚಿತವಾದ ದಾಖಲೆಗಳು ದೊರೆಯುವ ಅಮೆರಿಕದಲ್ಲಿ ಪ್ರತಿ ವರ್ಷವೂ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಮಡದಿಯರು ತಮ್ಮ ಮೇಲೆ ಹಿಂಸೆಯಾಗುತ್ತಿರುವುದಾಗಿ ಪೋಲೀಸರಿಗೆ ದೂರು ಸಲ್ಲಿಸುತ್ತಾರೆ. ಅತಿ ಕ್ರೂರವಾದ ಹಿಂಸೆಯನ್ನು ಅನುಭವಿಸಿದ ಹೆಂಡತಿಯರಿಗೆ ಆಶ್ರಯ ನೀಡುವ 1500 ಕ್ಕೂ ಹೆಚ್ಚು ಆಶ್ರಯತಾಣಗಳು ಅಲ್ಲಿವೆ. ಅಮೆರಿಕೆಯಲ್ಲಿ ನಿರಾಶ್ರಿತರಾಗಿರುವ ಮಹಿಳೆಯರಲ್ಲಿ ಶೇಕಡ 50ರಷ್ಟು ಇಂತಹ ವೈವಾಹಿಕ ದೌರ್ಜನ್ಯದಿಂದ ಬಳಲಿದವರು.  ಸುಖ ಸಂಸಾರದಲ್ಲಿ ಬದುಕಿರುವವರು ಇಂತಹ ಹಿಂಸೆಯನ್ನು ಅಪರೂಪವೆನ್ನಬಹುದು. ದುರದೃಷ್ಟವೆಂದರೆ ಇದು ಅಪರೂಪವಲ್ಲ!

____________________________________________

ಟಿಪ್ಪಣಿ: ಈ ಭಾಗವನ್ನು ಅನುವಾದಿಸೋದಿಕ್ಕೆ ಕಷ್ಟವಾಯಿತು. ಸ್ಯಾಡಿಸ್ಟ್ ಅನ್ನೋದಿಕ್ಕೆ ಸರಿಯಾದ ಪದ ಸಿಗಲಿಲ್ಲ. ರಾಕ್ಷಸ, ಕ್ರೂರಿ ಇವೆಲ್ಲ ಸರಿ ಹೋಗುವುದಿಲ್ಲ. ಕೊನೆಗೆ ಸ್ಯಾಡಿಸ್ಟ್ ಅಂತಲೇ ಬರೆದೆ.

ಜೈವಿಕ ವಿಕಾಸದ ಅಂಶಗಳನ್ನೇ ಪ್ರತಿಪಾದಿಸುತ್ತ ನಮ್ಮ ಇಂದಿನ ನಡವಳಿಕೆಗಳು ಹೇಗೆ ಪಶು ಪ್ರವೃತ್ತಿಯ ಮಾರ್ಮಿಕ ರೂಪಗಳೆಂದು ಡೆಸ್ಮಂಡ್ ಮಾರಿಸ್‍ ವಾದ. ಈ ಪ್ಯಾರಾ ಓದುವಾಗ ನಿಮ್ಮ, ನಿಮ್ಮ ಬಾಸ್ ನೆನಪಾದರೆ ಅಚ್ಚರಿಯೇನಿಲ್ಲ. ಹಾಗೆಯೇ ನೀವು ಬೇರೆಯವರಿಗೆ ಬಾಸ್‍ ಆಗಿರಬಹುದು. ಮನೆಯಲ್ಲಿ ಮಡದಿಗೇನಾದರೂ ಹಿಂಸೆ ನೀಡುತ್ತಿರಬಹುದಾ? ಮಕ್ಕಳ ಮೇಲೆ / ಸಹೋದ್ಯೋಗಿಗಳು / ಮಡದಿ ಯ ಮೇಲೆ ರೇಗುವುದರಿಂದ ಖುಷಿ ಸಿಗುತ್ತಿದೆಯೇ?

ಇಂಗ್ಲೀಷ್‍ ಮೂಲ ಕೆಳಗಿದೆ. ಯಾವುದು ಓದಲು ಖುಷಿ ನೀಡುತ್ತದೆ? ಕಮೆಂಟಿಸಿ

_____________________________________________________

COMPETITIVE HAPPINESS

The Winner

Because this has to do with reaching a triumphant conclusion, it is related to the last category, but there is a key difference. Target Happiness depends on reaching a personal goal, but not necessarily at the expense of a rival. With competitive happiness, winning is always at the expense of a rival, usually through the expenditure of huge effort. I am always amazed by the elated condition of a heavyweight boxer when he is interviewed immediately after winning a gruelling fifteen-round contest. The face that has been pummelled so brutally, with blow after jarring blow, is there on your television screen, in close-up, positively glowing with happiness and grinning inanely as though it had just seen a vision instead of a large gloved fist approaching repeatedly with the speed of light and the force of a sledgehammer. It is a special kind of smile that we see on the faces of all winners, regardless of how they have just conquered their opponents, and it is almost impossible to imitate. I recall the painter Francis Bacon saying to me one day, ‘I’ve got the scream alright, but I can’t get the smile’. Qualities of smiling in moments of intense happiness are the hardest for artists and actors to capture, but they are quite unmistakable when we observe them.

 

The most vicious definition of happiness I have come across is the one that says, ‘Happiness is an agreeable sensation arising from contemplating the misery of another: If this makes us shudder, we should recall that every time we laugh at a joke we are guilty of a mild version of this, because in almost all jokes there is a victim whose discomfort amuses us, courtesy of one kind of banana-skin or another. A less worrying form of this definition is: ‘Happiness is a pleasure not

shared with others: In both these cases we are dealing with competitive happiness, where we shamelessly or shamefully take our happiness from being one up. The extreme form of this type of happiness is the most unpleasant kind of all. It is the happiness of the sadist and the torturer. For them, the infliction of pain on a helpless victim provides the ultimate surge of pleasure. It is the helplessness of the victim that is the key to their particular ty pe of activity. If the victim can and does fight back, their pleasure is ruined. What they seek is complete subjugation. This instantly transforms the sadist or the torturer into the dominant figure in the relationship. This makes him the power-laden ‘winner’, and he continues to exploit this situation by inflicting pain on the victim. Each time he does this, the visible suffering of the victim re-enforces the torturer’s feeling of power over another being. This is the coward’s way of being a winner.

 

There are four main sources of happiness through cruelty: mental torture, physical torture, rape and murder. Mental torture all too often gives pleasure to a tyrannical individual who is in a position of social superiority. The arrogant tycoon, the callous boss, the higher military rank: all these can impose their cruelty on subordinates who are in no position to retaliate. These subordinates, in turn, attack their weaker companions in an attempt to regain their own self-respect after suffering humiliation. This has become known as ‘the office-boy kicked the cat’ syndrome, where cruelty starts at the top of a social hierarchy and ends at the bottom. The most common victims are wives and children, who are too weak to fight back. In the United States, for example, where accurate records have been kept, it has emerged that there are over two million cases of battered women reported to the police annually. There are now fifteen hundred battered-women shelters in that country to provide sanctuaries for the worst cases. Fifty percent of the homeless women in America are refugees from domestic abuse. People living in happy families tend to think of this kind of violence as an extreme rarity. Sadly, it is not.

The URI to TrackBack this entry is: https://kollegala.wordpress.com/2016/01/10/%e0%b2%b8%e0%b2%82%e0%b2%a4%e0%b3%8b%e0%b2%b7%e0%b2%a6-%e0%b2%b8%e0%b3%8d%e0%b2%b5%e0%b2%b0%e0%b3%82%e0%b2%aa-%e0%b2%b8%e0%b2%82%e0%b2%a4%e0%b3%8b%e0%b2%b7%e0%b2%a6-%e0%b2%ac%e0%b2%97%e0%b3%86-3/trackback/

RSS feed for comments on this post.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: