ಮಂಜಿನ ಮಾನವನ ಹೊಟ್ಟೆಯ ಹುಣ್ಣು

11012016

ಆಕರ:

Frank Maixner et al., The 5300-yea- old Helicobacter pylori genome of the Iceman, Science, Vol 359, (6269), Pp 162-165, 2016 (published 8 January 2016)

ಇಂತಹ ಕಥೆಗಳಿಂದ ಪ್ರಯೋಜನವೇನು? ಇದು ಕೆಲವು ಲೇಖಕರು ನನ್ನನ್ನು ಕೇಳುವ ಪ್ರಶ್ನೆ. ಕವಿ ಜಿಎಸ್‍ ಎಸ್ ಹೇಳಿದ ಹಾಗೆ ಎಲ್ಲರೂ ಓದಲೆಂದೇ ನಾನು ಬರೆಯುವುದಲ್ಲ. ಓದಬೇಕೆನ್ನುವವರಿಗೆ ಹೂರಣವಿರಲಿ ಎನ್ನುವುದಷ್ಟೆ ನನ್ನ ಕಾಳಜಿ.

ಮಂಜಿನ ಮಾನವನ ಕಥೆ ಬರೆ ವಿಜ್ಞಾನವಲ್ಲ. ಕಾನೂನಿನ ತೊಡಕುಗಳು, ಮಾನವನ ದುರಾಸೆ ಹಾಗೂ ಹೊಸ ಮೌಢ್ಯಗಳ ಸೃಷ್ಟಿಯೂ ಈ ಕಥೆಯಲ್ಲಿ ಕೂಡಿಕೊಂಡಿದೆ.’ ಓಜಿ’ ಎಂದು ಜನಪ್ರಿಯವಾದ ಈ ಐದುಸಾವಿರ ವರ್ಷ ಹಳೆಯ ಶವ ಹಲವು ಸಿನಿಮಾಗಳಿಗೂ ಪ್ರೇರಣೆಯಾಗಿದೆ. ಇದನ್ನು ಮೊದಲು ಕಂಡ ಸೈಮನ್‍ ಎಂಬಾತ, ಅದರ ಮಹತ್ವ ತಿಳಿದ ಮೇಲೆ ಈ ಶೋಧವನ್ನು ಮಾಡಿದ್ದಕ್ಕಾಗಿ ತನಗೆ ಸರಕಾರ ಹಣ ಕೊಡಬೇಕೆಂದು ಕೋರ್ಟು ಮೆಟ್ಟಲು ಹತ್ತಿದ್ದ. ಅವನಷ್ಟೆ ಅಲ್ಲ. ನಾವೂ ಇದ್ದೆವು ಎಂದು ಇನ್ನೂ ಇಬ್ಬರು ತಗಾದೆ ತೆಗೆದಿದ್ದರು.

ಈ ಶವ ಸಿಕ್ಕಿದ ಹಿಮನದಿ ಆಸ್ಟ್ರಿಯಾ ಹಾಗೂ ಇಟಲಿಯ ಸೀಮೆಗಳಲ್ಲಿ ಇರುವಂಥದ್ದು. ಹಾಗಾಗಿ ಇದು ಯಾವ ದೇಶದ ಶೋಧ ಎನ್ನುವ ಪ್ರಶ್ನೆಯೂ ಎದ್ದಿತ್ತಂತೆ. ಕೊನೆಗೆ  ಸರ್ವೆ ಮಾಡಿ, ಸೀಮೆಯನ್ನು ನಿರ್ಧರಿಸಲಾಯಿತು. (ಓಬಳಾಪುರಂ ಗಣಿಗಳ ವಿಷಯ ನೆನಪಿಗೆ ಬಂದರೆ ನನ್ನ ತಪ್ಪಲ್ಲ!) ಸದ್ಯಕ್ಕೆ ಇದು ಇಟಲಿಯಲ್ಲಿದೆ. ಹಸ್ತಾಂತರಿಸಲಾಯಿತು.

ಇಟಲಿಯಲ್ಲಿ ಈ ಶವವನ್ನು ಕೂಡಿಟ್ಟು ವಸ್ತು ಸಂಗ್ರಹಾಲಯವೊಂದನ್ನು ರೂಪಿಸಲಾಗಿದೆ. 1991ರಿಂದ ಇಂದಿನ ವರೆಗೆ ನೂರಾರು ವೈಜ್ಞಾನಿಕ ತಂಡಗಳು ಈ ಶವದ ಪರೀಕ್ಷೆ, ವಿವಿಧ ಅಂಶಗಳ ಬಗ್ಗೆ ಸಂಶೋಧನೆ ನಡೆಸಿವೆ. ನಡೆಸುತ್ತಲೇ ಇವೆ.

ಈ ಶವ ಪತ್ತೆಯಾದ ಮೇಲೆ ಇದರ ಜೊತೆಗೆ ಸಂಬಂಧಿಸಿದವರು ಅಸ್ವಾಭಾವಿಕ ಮರಣವಡೆಯುತ್ತಾರೆ ಎಂಬ ಭೀತಿ ಹಬ್ಬಿತ್ತು. ಈಗಲೂ ಈ ಮೌಢ್ಯ ಇದೆ. ಶವವನ್ನು ಮೊದಲು ಕಂಡ ಸೈಮನ್‍ ಹಾಗೂ ಇನ್ನೂ ಒಂಭತ್ತು ಮಂದಿ ಅಪಘಾತಗಳಿಂದ ಸತ್ತರು. ಶವದ ಅಧ್ಯಯನದಲ್ಲಿ ತೊಡಗಿದ್ದವರು, ಪೋಲಿಸರು, ವಸ್ತು ಸಂಗ್ರಹಾಲಯದ ಸಿಬ್ಬಂದಿ ಹೀಗೆ ಎಲ್ಲರನ್ನೂ ಒಟ್ಟಾಗಿ ಪರಿಗಣಿಸಿದರೆ ಸಾವಿರಾರು ಮಂದಿ ಇದರ ಜೊತೆ ಸಂಪರ್ಕಕ್ಕೆ ಬಂದಿದ್ದಾರೆ. ಅವರಲ್ಲಿ ಈ ಬಗೆಯ ಸಾವು ಅಸಹಜವೇನಲ್ಲ ಎಂದು ಈ ಮೌಢ್ಯವನ್ನು ವಿಜ್ಞಾನಿಗಳು ಅಲ್ಲಗಳೆದಿದ್ದಾರೆ. ಆದರೂ “ಮಿನುಗುತಾರೆ” ಭೂತವಾಗಿ ಬರಬಹುದು ಎಂದು ನಂಬುವ ಮನಸ್ಸಿರುವವರಿಗೆ ಇಂತಹ ಯಾವ ಸಾಕ್ಷ್ಯಗಳೂ ಸಾಲವು.

Published in: on ಜನವರಿ 11, 2016 at 5:23 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

The URI to TrackBack this entry is: https://kollegala.wordpress.com/2016/01/11/%e0%b2%ae%e0%b2%82%e0%b2%9c%e0%b2%bf%e0%b2%a8-%e0%b2%ae%e0%b2%be%e0%b2%a8%e0%b2%b5%e0%b2%a8-%e0%b2%b9%e0%b3%8a%e0%b2%9f%e0%b3%8d%e0%b2%9f%e0%b3%86%e0%b2%af-%e0%b2%b9%e0%b3%81%e0%b2%a3%e0%b3%8d/trackback/

RSS feed for comments on this post.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: