ಸಂತೋಷದ ಸ್ವರೂಪ – ಸಂತೋಷದ ಬಗೆ -4

ಮನುಷ್ಯನ ಸಾಂಕೇತಿಕ ಚಿಂತನೆಗಳ ಶಕ್ತಿ ಎಷ್ಟೆಂದರೆ ಈ ರೀತಿಯಲ್ಲಿ ನಾವು ನಮ್ಮ ಸಂತೋಷದ ಸೆಲೆಗಳನ್ನು ಅನಪೇಕ್ಷಿತವಾಗಿ ಹಿಗ್ಗಿಸಿಕೊಳ್ಳಬಲ್ಲೆವು. ವಿಚಿತ್ರವೆಂದರೆ, ಇಂತಹ ಚಟುವಟಿಕೆಗಳಲ್ಲಿ ತೊಡಗಿಕೊಂಡ ವ್ಯಕ್ತಿಗಳನ್ನು ಸಂದರ್ಶಿಸಿದಾಗ ನನಗೆ ಅವರ ದೃಷ್ಟಿಕೋನದಲ್ಲಿ ತುಸು ದೋಷಗಳು ಕಂಡವು. ತಾರ್ಕಿಕವಾಗಿ ಅವರು ಬಲು ಪ್ರಸನ್ನ ಜೀವಿಗಳು. ಈ ಸಹಕಾರಿ ಸಂತಸವನ್ನು ಅವರು ಎಷ್ಟು ಹೆಚ್ಚಿಸಿಕೊಂಡಿದ್ದರೆಂದರೆ, ಬದುಕು ಬಲು ಸಾರ್ಥಕವೆನ್ನಿಸಬೇಕು ಅಲ್ಲವೇ? ವಾಸ್ತವದಲ್ಲಿ, ಇಷ್ಟು ದೊಡ್ಡ ಪ್ರಮಾಣದಲ್ಲಿ ಕರುಣಾಮಯಿಗಳಾಗಿರುವ ಅವರಲ್ಲಿ ಹಿಗ್ಗು ಉಕ್ಕಿರಬೇಕಿತ್ತಾದರೂ ಅವರು ಖಿನ್ನರೂ, ಆತಂಕಿತರಾಗಿರುತ್ತಾರೆ.

ಇದಕ್ಕೊಂದು ನಿಚ್ಚಳ ಉದಾಹರಣೆ ಬೀದಿಬೆಕ್ಕುಗಳ ರಕ್ಷಣೆಗೆ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದ ಮಹಿಳೆಯೊಬ್ಬಳನ್ನು ಸಂದರ್ಶಿಸಿದಾಗ ದೊರಕಿತು. ಆಕೆ ಹಲವಾರು ವರ್ಷಗಳಿಂದ ಸಾವಿರಾರು ಬೆಕ್ಕುಗಳನ್ನು ಹಸಿವು, ರೋಗಗಳು ಹಾಗೂ ಸಾವಿನಿಂದ ರಕ್ಷಿಸಿದ್ದಳು. ಅವುಗಳಿಗಾಗಿ ಕಟ್ಟಿದ ಆಶ್ರಯತಾಣವೊಂದರಲ್ಲಿ ಬೆಕ್ಕುಗಳನ್ನಿಟ್ಟು, ಚಿಕಿತ್ಸೆ,  ಆಹಾರ ನೀಡಿ, ಹೊಸ ಆಶ್ರಯಗಳನ್ನು ಹುಡುಕುತ್ತಿದ್ದಳು. ಹೀಗೆ ಪ್ರತಿಯೊಂದು ಬೆಕ್ಕನ್ನು ರಕ್ಷಿಸಿ, ಹೊಸ ಮನೆ ಹುಡುಕಿಕೊಟ್ಟಾಗಲೂ ಆಕೆಯಲ್ಲಿ ಸಂತಸವನ್ನು ಚಿಮ್ಮಬೇಕಿತ್ತು. ಆದರೆ ಆಕೆಗೆ ಮಾತ್ರ ತಾನು ಬದುಕಿಸಲಾಗದ ಬೆಕ್ಕುಗಳ ಬಗ್ಗೆಯೇ ಚಿಂತೆ. ತನ್ನ ಸಾಧನೆಯಿಂದ ಖುಷಿಪಟ್ಟು  ಪ್ರಸನ್ನಳಾಗಿರುವುದಿರಲಿ, ಅವಳನ್ನು ಈ ಸೋಲು ಸದಾ ಕಾಡುತ್ತಿತ್ತು.

ಇಂತಹ ಚಟುವಟಿಕೆಗಳಲ್ಲಿ ಇದೊಂದು ಅಪಾಯವಿದ್ದೇ ಇದೆ. ನಾವು ಕೈಗೊಳ್ಳುವ ಯೋಜನೆಗಳ ಗುರಿ ಎಷ್ಟು ಎತ್ತರವಾಗಿರುತ್ತದೆಂದರೆ ಅವನ್ನು ತಲುಪಲಾಗುವುದೇ ಇಲ್ಲ. ಉತ್ತರ ಆಫ್ರಿಕಾದಲ್ಲಿ ಪ್ರವಾಸ ಮಾಡುತ್ತಿದ್ದ ಮಹಿಳೆಯೊಬ್ಬಳು ಅಲ್ಲಿ ಕತ್ತೆಯೊಂದು ಅನುಭವಿಸಿದ ಕ್ರೂರತೆಯನ್ನು ನೋಡಿ ದಿಗ್ಭ್ರಮೆಗೊಂಡು ಈ ಮುದ್ದು ಪ್ರಾಣಿಗಳನ್ನು ರಕ್ಷಿಸುವ ಯೋಜನೆಯೊಂದನ್ನು ಹಮ್ಮಿಕೊಂಡಳು. ಇದರ ಪರಿಣಾಮ ಸುಮಾರು 3000 ಪ್ರಾಣಿಗಳು ದೊಡ್ಡ ತೋಟವೊಂದರಲ್ಲಿ ಒಟ್ಟಾದುವು. ಇವೆಲ್ಲಕ್ಕೂ ಚಿಕಿತ್ಸೆ, ಆಹಾರ ನೀಡಿ ಪಾಲಿಸಬೇಕಾಯ್ತು. ಪ್ರಾಣಿಗಳ ಸಂಕಟವನ್ನು ನಿವಾರಿಸಿದ ಸಾಧನೆಯ ಕುರುಹಾಗಿ ಇಷ್ಟೆಲ್ಲ ಆರೋಗ್ಯವಂತ ಕತ್ತೆಗಳೇ ತನ್ನನ್ನು ಸುತ್ತುವರೆದಿದ್ದರೂ, ಆಕೆಗೆ ತಾನಿನ್ನೂ ರಕ್ಷಿಸಬೇಕಾಗಿದ್ದ ಕತ್ತೆಗಳದ್ದೇ ಚಿಂತೆ.  ಅವೆಲ್ಲವನ್ನೂ ಕೊಂಡು ತನ್ನ ತೋಟಕ್ಕೆ ಕೂಡಿಸಿಕೊಂಡರೂ ಆಕೆ ಸಂಪೂರ್ಣ ಗೆಲುವು ಸಾಧಿಸಲಾಗಲಿಲ್ಲ. ಏಕೆಂದರೆ ಹಿಂಸೆ ಅನುಭವಿಸಿದ ಕತ್ತೆಯನ್ನು ಹಣ ಕೊಟ್ಟು ಕೊಂಡುಕೊಂಡ ಕೂಡಲೇ, ಆ ಕತ್ತೆಯ ಯಜಮಾನ ಅದೇ ಹಣದಿಂದ ಮತ್ತೊಂದು ಮರಿಕತ್ತೆಯನ್ನು ಕೊಳ್ಳುತ್ತಿದ್ದ. ಚಕ್ರ ಮರುಕಳಿಸುತ್ತಿತ್ತು. ಮತ್ತೆ ಅಸಾಧ್ಯವಾದುದರ ಬೆನ್ನು ಹತ್ತಬೇಕಿತ್ತು. ಸಮಾಜ ಕಲ್ಯಾಣದ ಎಲ್ಲ ಯೋಜನೆಗಳ ಸ್ವರೂಪವೂ ಇದೇ ಆಗಿರುತ್ತದೆ. ಇನ್ನೂ ಸಾಧಿಸಬಹುದಿತ್ತು ಎನ್ನುವ ದುಃಖ ಸಾಧನೆಯ ಖುಷಿಯನ್ನು ಉಕ್ಕುವುದಕ್ಕೆ ಮುನ್ನವೇ ಹತ್ತಿಕ್ಕಿಬಿಡುತ್ತದೆ.

ಸಹಕಾರ ಸಂತೋಷವನ್ನು ಪಡೆಯುವ ಗುಟ್ಟು ಕೈಗೆಟುಕುವ ಗುರಿಗಳನ್ನು ಇಟ್ಟುಕೊಳ್ಳುವುದರಲ್ಲಿ ಇದೆ. ಇದನ್ನು ಮಾಡುವುದು ಕಷ್ಟ. ಕಷ್ಟಕ್ಕೆ ಕಾರಣವೇನೆಂದರೆ ನೆರವು ನೀಡುತ್ತಿರುವ ಜನ ಅಥವಾ ಪ್ರಾಣಿಗಳು ಅಲ್ಪ ಸಂಖ್ಯೆಯ ತಂಡದ ನಿಜ ಸದಸ್ಯರಲ್ಲ. ಸಾಂಕೇತಿಕವಾಗಿಯಷ್ಟೆ ಅಂತಹ ಪಂಗಡದ ಸಮಾನರು. ಸಾಂಕೇತಿಕವಾಗಿ ಅವರ ಸಂಖ್ಯೆ ಸಹಜವಾದ ಮಾನವ ಪಂಗಡದ ಜನಸಂಖ್ಯೆಯಷ್ಟಿರುವುದಿಲ್ಲ. ಪುರಾತನ ಕಾಲದಲ್ಲಿ, ವಿಕಾಸವಿನ್ನೂ ನಮ್ಮ ಗುಣಗಳನ್ನು ರೂಪಿಸುತ್ತಿದ್ದ ಸಮಯದಲ್ಲಿ, ಮಾನವ ಪಂಗಡಗಳ ಗಾತ್ರ ಸಣ್ಣದಿತ್ತು. ಒಂದು ಅಂದಾಜಿನ ಪ್ರಕಾರ ಪ್ರತಿ ಪಂಗಡದ ಸಂಖ್ಯೆ ಎಂಭತ್ತರಿಂದ ನೂರಿಪ್ಪತ್ತು ಸದಸ್ಯರದಾಗಿತ್ತು. ಅತಿ ಹೆಚ್ಚೆಂದರೆ ಕೆಲವು ನೂರು ಸದಸ್ಯರಿದ್ದಿರಬಹುದಷ್ಟೆ. ಆ ಪ್ರಮಾಣದಲ್ಲಿ ಸಹಕಾರ, ಸಹಾಯವೆನ್ನುವುದು ಪ್ರಾಯೋಗಿಕವಾಗಿ ಸಾಧ್ಯವಾಗಿತ್ತು. ಆದರೆ ಇಡೀ ಮಾನವತೆಗೆ ಅಥವಾ ಇಡೀ ಪ್ರಾಣಿಗಳ ಜಗತ್ತಿಗೆ ನೆರವು ನೀಡುವುದೆನ್ನುವುದು ಹಾಗಲ್ಲ. ಸಹಕಾರ ಸಂತೋಷವನ್ನು ಫಲಪ್ರದವಾಗಿ ಅನುಭವಿಸಬೇಕೆಂದರೆ ನಾವು ಆಯ್ದುಕೊಳ್ಳುವ ಸಹಕಾರದ ಪ್ರಮಾಣವೂ ಸರಿಯಿರಬೇಕು. ನಗರೀಕರಣದ ತೊಂದರೆಗಳನ್ನು ಬಿಂಬಿಸುವ ದಿ ಹ್ಯೂಮನ್ ಜೂ ಎನ್ನುವ ಚಲನಚಿತ್ರವನ್ನು ಚಿತ್ರಿಸುವ ಸಂದರ್ಭದಲ್ಲಿ ಇದು ನನಗೆ ಅರಿವಾಯಿತು.

ನಗರದ ಮಹಾಪಂಗಡದ ಬೃಹತ್ ಪ್ರಮಾಣ ಸ್ಪರ್ಧೆ ಹೆಚ್ಚುತ್ತಿದ್ದು, ಸಹಕಾರ ಕಡಿಮೆಯಾಗಿ ಮಾನವನ  ಈ ಎರಡು ಮೂಲಭೂತ ಹಂಬಲಗಳ ಸಂಬಂಧವನ್ನು ಹದಗೆಟ್ಟಿದೆಯೆನ್ನವುದು ನನ್ನ ವಾದವಾಗಿತ್ತು. ಇದನ್ನು ಪರೀಕ್ಷಿಸುವುದಕ್ಕೆ ಒಂದು ಸರಳ ಪ್ರಯೋಗವನ್ನು ದೊಡ್ಡ ನಗರಗಳಲ್ಲೂ, ಸಣ್ಣ ಹಳ್ಳಿಗಳಲ್ಲೂ ಕೈಗೊಂಡೆವು.  ನಗರದ ಫುಟ್ ಪಾತ್ ಮೇಲೆ ನಿಶ್ಚಲನಾಗಿ ಬಿದ್ದುಕೊಳ್ಳಲು ಚಿತ್ರದ ನಿರ್ಮಾಪಕ ಮುಂದಾದ. ಇನ್ನೊಂದು ದಿನ ಹಳ್ಳಿಯಲ್ಲೂ ಇದೇ ರೀತಿ ಮಾಡಿದ. ನಗರದ ಮಧ್ಯದಲ್ಲಿ ಆತ ಕುಸಿದು ನಿಶ್ಚೇತನಾದಂತೆ ಮಲಗಿದಾಗ  ನಗರದ ಜಂಜಾಟದ ಬದುಕಿನ ಫಲವೋ ಏನೋ, ನಗರವಾಸಿಗಳು ತಂತಮ್ಮ ಕೆಲಸದಲ್ಲಿ ನಿರತರಾಗಿ ಅವನ ಸುತ್ತಲೂ ನಡೆದರೇ ಹೊರತು ಆತನನ್ನು ಗಮನಿಸಲೇ ಇಲ್ಲ.

ಕೆಲವರು ಅವನನ್ನು ಕಂಡರೂ ನೋಡದವರ ಮುಖ ತಿರುಗಿಸಿಕೊಂಡು ಹೋದರು. ಕೆಲವರು ಅವನ ದೇಹದ ಸುತ್ತಲೂ ಪ್ರದಕ್ಷಿಣೆ ಹಾಕಿ, ಸತ್ತಂತೆ ಬಿದ್ದಿದ್ದ  ಅವನಿಗೆ ನೆರವು ನೀಡದೆ ಹೋದರು. ಐದಾರು ನಿಮಿಷಗಳ ಕಾಲ ಹೀಗೇ ಹತ್ತಾರು ಜನ ಓಡಾಡಿರಬೇಕು. ಅನಂತರ ಯಾರೋ ಬಾಗಿ ಅವನಿಗೆ ನೆರವು ನೀಡಲು ಮುಂದಾದರು. ಹಳ್ಳಿಯಲ್ಲಿ ಜನರ ನಡತೆ ಇದಕ್ಕೆ ವ್ಯತಿರಿಕ್ತವಾಗಿತ್ತು. ಅಲ್ಲಿ ಹೀಗೆ ಬಿದ್ದವನನ್ನು ಕಂಡ ಕೂಡಲೇ ನೆರವಿನ ಹಸ್ತಗಳು ಸಹಾಯ ಮಾಡಲು ಮುಂದಾಗಿದ್ದುವು. ಇದು ಸಹಜ ಪ್ರತಿಕ್ರಿಯೆ ಎನ್ನುವುದನ್ನು ಸ್ಪಷ್ಟ ಪಡಿಸಿಕೊಳ್ಳಲು ಈ ಪ್ರಯೋಗವನ್ನು ಹಳ್ಳಿಯಲ್ಲ ಹಲವು ಕಡೆ ಮರುಕಳಿಸಿದೆವು. ಪ್ರತಿ ಬಾರಿಯೂ ತಪ್ಪದೆ ಅದೇ ಪ್ರತಿಕ್ರಿಯೆ. ಕೊನೆಯಲ್ಲಿ ಒಬ್ಬ ವೃದ್ಧೆ ನೆರವು ನೀಡಲು ತನ್ನ ಗುಡಿಸಲಿನಿಂದಾಚೆ ಧಾವಿಸಿ ಬಂದಳು. ಮುಖದ ತುಂಬಾ ನಗು ಹರಡಿಕೊಂಡು, ನೆಲದ ಮೇಲೆ ಬಿದ್ದಿದ್ದವನತ್ತ ಬಾಗಿದ ಅವಳು ಹೇಳಿದ್ದು: “ಓಹೋ. ನೀನೇಯೋ ರಸ್ತೆಯಲ್ಲಿ ಅಲ್ಲಲ್ಲಿ ಬೀಳುವವ. ಒಳಗೆ ಬಂದು ಚಹಾ ಕುಡಿ. ” ಈ ಮಾತಿನ ಅರ್ಥ ಇಷ್ಟೆ. ಹಳ್ಳಿಗರು ವೈಯಕ್ತಿಕವಾಗಿ ನೆರವಾಗುತ್ತಿದ್ದರಷ್ಟೆ ಅಲ್ಲ, ಹಳ್ಳಿಗೆ ಬಂದಿದ್ದವನೊಬ್ಬನಿಗೆ ತೊಂದರೆ ಇದೆ, ನೆರವು ಬೇಕೆನ್ನುವ ವಿಷಯ ಇಡೀ ಸಮುದಾಯದಲ್ಲಿ ಹರಡಿತ್ತು. ಮಾನವನಿಗೆ ಸಹಜವಾದ ಸಹಕಾರಿ ನಡವಳಿಕೆ ಇದು. ನಾವು ನಮ್ಮ ಪೂರ್ವಜರಂತೆ ಸಣ್ಣ ಗುಂಪುಗಳಲ್ಲಿ ವಾಸಿಸುತ್ತಿದ್ದರೆ ಇದು ಇಂದಿಗೂ ಸಕ್ಷಮವಾಗಿ, ಸಕ್ರಿಯವಾಗಿರಬಲ್ಲುದು.

_______________________________________________________________

ಟಿಪ್ಪಣಿ: ಓಹ್‍. ಇದು ಗಂಭೀರ ಅಧ್ಯಯನ. ಟಿವಿಯಲ್ಲಿ ತೋರಿಸುವ ಪ್ರಾಂಕ್‍ ಅಲ್ಲ. ನಮ್ಮ ನಡವಳಿಕೆಗಳನ್ನೇ ನೋಡಿ ಎಷ್ಟೊಂದು ನಗೆ ಬರುತ್ತದೆ. ಆದರೆ ಇಂತಹ ನಡವಳಿಕೆಗಳು ನಮ್ಮ ನೈಜ ರೂಪ. ಮಾನವನ ಸಹಜ ನಡವಳಿಕೆ. ಅವನ ಜೈವಿಕ ಸ್ವರೂಪ ಅಲ್ಲವೇ?

________________________________________________________________

Such is the power of human symbolic thought that we are able to widen our sources of happiness dramatically in this way. Strangely, however, when I interviewed people who are deeply involved in these activities, I soon discovered a weakness in their outlook. In theory they should be extremely cheerful individuals. They have increased their sources of cooperative happiness so greatly that they should find their lives immensely rewarding. In reality, however, they are often stressed and depressed instead of bubbling with the fun of ‘being kind’ on a grand scale.

 

I found a dear example of this when interviewing a woman who had devoted her whole life to saving stray cats. Over the years she had rescued literally thousands of felines from starvation, disease and lingering deaths. She had set up a huge sanctuary in which they were housed, given medical care and found new homes. Every cat saved and successfully re-housed should have given her a surge of happiness, but instead all she could think about were the cats she had failed to save. She was far from cheerful and was instead haunted by her failures, rather than made happy by her successes.

This is the risk inherent in all such activities. The aims of the projects undertaken are so high that they can never be met. Another woman, horrified by the cruel treatment of a donkey that she observed when on holiday in North Africa, starting a project to save these delightful animals. She ended up with over three thousand of them on a huge farm complex, all of which had to be given medical attention and then had to be fed and cared for. She was surrounded by healthy donkeys, a living testimony to her achievements in alleviating animal suffering, but all she could think about were the ones still waiting to be saved. Even if she bought them all and added hundreds of thousands of them to her farm, she could not succeed, because as soon as she paid for an abused donkey, its owner used the money to buy a young one and start again. Again, she had set herself an impossible task. This is characteristic of all welfare activities. The surges of happiness are nearly always overpowered by pangs of sadness from the knowledge of what has not been achieved.

The secret with cooperative happiness is to set oneself realistic goals, but this is hard to do. The reason for this difficulty is that the people or animals being helped are not real members of a small tribe of limited nwnbers, but symbolic equivalents of those tribal members. As symbols, their numbers are not limited by the natural tribe-size of the hwnan species. In primeval times, when evolution was laying down our inborn qualities, hwnan tribes were very small. One estimate sees them as consisting of only eighty to a hundred and twenty individuals. At the very most they will only have consisted of a few hundred.  At that scale, helpfUlness is a practical possibility. Helping the whole of hwnanity, or the whole of the animal world, is another matter. To be successfully enjoyed, cooperative happiness must find an appropriate scale.  This was brought home to me when I was involved in the making of a film about the problems of urbanization called The Human Zoo.

I had argued that the enormous size of the city super-tribe had had the effect of increasing competitiveness and decreasing cooperation, dramatically unbalancing the relationship between these two basic human urges. In order to test this idea, we carried out a simple experiment on the streets of both big cities and small villages. The producer of the film volunteered to fall down and lie inert on a city pavement and then, on another day, to do the same in a small village. When he appeared to collapse and then lay motionless on the pavement in a city centre, he was repeatedly ignored by the stressed urbanites as they hurried about their business.

Some looked away and pretended not to see him. Some glanced at his body and then walked around him, offering no help to his seemingly stricken form. Dozens of citizens passed him in this way before, after about five minutes, someone paused, bent down and offered help. In the village, in stark contrast, there were immediate offers of help, as soon as the fallen figure was spotted. In order to be sure that these were typical reactions, the falling down routine was repeated all over the village. Every time there was the same, unhesitating response. On the last  occasion, an old lady emerged from her cottage to offer help. With a beaming smile, she bent over the prostrate figure and said: ‘Oh, you are the man who keeps collapsing. Do come in a have a cup of tea: This comment revealed that the villagers were not merely individually helpful, but that word had got round the community that a visitor was in trouble and needed assistance. This is the type of cooperative behaviour that is a fundamental feature of human nature and which operates efficiently, even today, providing we are still living in small groups like our ancient ancestors.

ಸಂತೋಷದ ಸ್ವರೂಪ – ಸಂತೋಷದ ಬಗೆ 3

ಸಹಕಾರದ ಸಂತಸ

ಸಹಾಯಕ

ಇದು ನಾಣ್ಯದ ಮತ್ತೊಂದು ಬದಿ. ಪೈಪೋಟಿ ಹಾಗೂ ಸಹಕಾರಗಳ ನಡುವೆ ನಾವು ಹೊಂದಾಣಿಸಬೇಕಿತ್ತು. ಏಕೆಂದರೆ ಕಾಡು ಪಂಗಡದವರಾಗಿ ಬಿಡಿ ವ್ಯಕ್ತಿಗಳು ಸಫಲರಾಗುವುದು ಅಪರೂಪ. ಗೆಲ್ಲಲೇ ಬೇಕೆನ್ನುವ ಅಂತರಾಳದ ಬಯಕೆಯ ಜೊತೆಗೆ,  ಅಷ್ಟೇ ಮೂಲಭೂತವಾದಂತಹ ಪರಸ್ಪರರಿಗೆ ನೆರವಾಗುವ ಬಯಕೆಯನ್ನೂ ನಾವು ಪಡೆದಿದ್ದೇವೆ. ನೀತಿವಾದಿಗಳು ಇದಕ್ಕೆ ತಾವೇ ಕಾರಣ ಎನ್ನಬಹುದು, ಸತ್ಯವೇನೆಂದರೆ ನೆರವಾಗುವುದು ನಮ್ಮ ಸಹಜ ಗುಣ.  ಇದುವೂ ನಮಗೆ ಖುಷಿ ತರುತ್ತದೆ. ಆದರೆ ನಾವು ಹೇಗಿರಬೇಕೆನ್ನುವ ಬಗ್ಗೆ ಸದ್ಗುರುಗಳು ಹೇಳಿದ ನೀತಿಪಾಠದಿಂದಲ್ಲ.  ಮತ್ತೊಬ್ಬರಿಗೆ ಸಹಾಯ ಮಾಡುವ ಮೂಲಕ ನಮಗೆ ನಾವೇ ನೆರವಾಗುವುದು ನಮಗೆ ಜೈವಿಕವಾಗಿಯೇ ಬಂದಿರುತ್ತದೆ. ಸಹಕಾರ ಎನ್ನುವುದು ನಿಸ್ವಾರ್ಥಿ ನಡತೆ ಎಂದು ತೋರಬಹುದು. ವಾಸ್ತವದಲ್ಲಿ ಇದು ಸ್ಪರ್ಧಾತ್ಮಕ ನಡತೆಯಷ್ಟೆ ಸ್ವಾರ್ಥ ನಡವಳಿಕೆ.

ಗೆಳೆಯರಿಗೆ ನೆರವಾಗುವುದರಿಂದ ನಮ್ಮಲ್ಲಿ ಸಂತೋಷ ಉಕ್ಕುತ್ತದೆಂದರೆ ಅದಕ್ಕೆ ಕಾರಣ ಸೋಲಿನಿಂದ ತಂಡವನ್ನು ರಕ್ಷಿಸುವುದಕ್ಕಾಗಿ ನಮ್ಮ ಬುಡಕಟ್ಟು ಪಂಗಡದ ಸದಸ್ಯರು ಪರಸ್ಪರ ಸಹಾಯಕ್ಕಿರುವಂತೆ ನಿಸರ್ಗ ನಮ್ಮನ್ನು ವಿಕಾಸ ಮಾಡಿದೆ. ದೊಡ್ಡ ಬೇಟೆಯನ್ನು ಪಂಗಡದ ಸದಸ್ಯನೊಬ್ಬನೇ ಕೊಲ್ಲಲಾರ. ಹಾಗೆಯೇ ಪಂಗಡದ ಸದಸ್ಯನೊಬ್ಬನಿಗೇ ಗುಡಿಸಲು ಕಟ್ಟುವುದು, ಭೋಜನ ಕೂಟವನ್ನೇರ್ಪಡಿಸುವುದು ಅಥವಾ ತಮ್ಮ ವಸತಿಯನ್ನು ರಕ್ಷಿಸಿಕೊಳ್ಳುವುದೂ ಸಾಧ್ಯವಿಲ್ಲ. ಆದಿ ಮಾನವ ಪಂಗಡದ ಪ್ರತಿಯೊಬ್ಬ ಸದಸ್ಯರೂ ಇಡೀ ಪಂಗಡ ಗೆದ್ದರಷ್ಟೆ ಬದುಕಿ ಉಳಿಯಬಹುದಿತ್ತು. ಇದಕ್ಕೆ ಸಕ್ರಿಯ ಸಹಕಾರ ಅವಶ್ಯಕ. ಹೆದರಿಕೆ, ಬೆದರಿಕೆಯಿಂದ ಪಡೆದ ಸಹಕಾರ ಇದಕ್ಕೆ ಸಾಲದಾಗಿತ್ತು. ನಾವು ಇನ್ನೂ ಒಂದು ಹೆಜ್ಜೆ ಮುಂದುವರೆದೆವು. ತಂಡವು ಒಗ್ಗಟ್ಟಿನಿಂದ ಸಮರ್ಥವಾಗಿರಬೇಕೆಂದರೆ ಪಂಗಡದ ಬಲಶಾಲಿಗಳೂ, ಪೈಪೋಟಿಯಲ್ಲಿ ಸ್ಪರ್ಧೆಗಳನ್ನು ಗೆದ್ದವರೂ ಕೂಡ ತಮ್ಮ ಅಧೀನದಲ್ಲಿದ್ದವರಿಗೆ ಬಹುಮಾನಗಳನ್ನು ನೀಡಬೇಕಾಯಿತು. ಇಂದು ನಮ್ಮ ಉದ್ಯೋಗಗಳ ಹಲವು ಸಂದರ್ಭಗಳಲ್ಲಿ ಈ ಬಗೆಯ ಸಹಕಾರದ ತುಡಿತವನ್ನು ಕಾಣುತ್ತೇವೆ. ತಮ್ಮ ಸಿಬ್ಬಂದಿಗೆ ವೇತನ ಬಡ್ತಿಯನ್ನೋ, ಬೋನಸ್ಸನ್ನೋ ನೀಡುವುದು ಬಹುತೇಕ ಬಾಸ್ ಗಳಿಗೆ ಖುಷಿಯ ಸಂಗತಿ. ಅದೇ ಉದ್ಯೋಗದಿಂದ ವಜಾ ಮಾಡಿದಾಗ ಅಥವಾ ವೇತನ ಕಡಿತ ಮಾಡಿದಾಗ ಹೀಗಾಗದು. ಸದಾ ಬಡಿಗೆಯಿಂದ ಬೆದರಿಸುವ ಬಾಸ್ ಸಾಮಾನ್ಯವಾಗಿ ಯಾವ ಕಾರಣದಿಮದಲೋ ಸಹಕಾರದ ಸಂತಸವನ್ನು ಹಂಚಿಕೊಳ್ಳಲಾಗದ ದುಃಖಿಯಾಗಿರುತ್ತಾನೆ.  ಜುಜುಬಿ ಎನ್ನಿಸುವ ನೆರವಿನ ಇಂಗಿತವೂ ಕೆಲವೊಮ್ಮೆ ಕ್ಷಣಿಕವಾದ, ಸುಖಕರ ಸಂತೋಷವನ್ನುಂಟು ಮಾಡಬಹುದು. ಉದಾಹರಣೆಗೆ, ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಕೊಂಡವನೊಬ್ಬ ಪಕ್ಕದ ರಸ್ತೆಯಿಂದ ಬರುತ್ತಿರುವ ವಾಹನಕ್ಕೆ ಹಾದಿ ಮಾಡಿಕೊಟ್ಟಾಗ ಆ ಚಾಲಕ ತೋರಿಸುವ ಮೆಚ್ಚುಗೆಯ ಸಂಕೇತವೂ ಹತಾಶೆಯಲ್ಲಿ ಸಿಕ್ಕಿಕೊಂಡವನಿಗೆ ಅಮೂಲ್ಯವೆನ್ನಿಸುತ್ತದೆ.

“ಒಳ್ಳೆಯ ಕೆಲಸ” ಮಾಡುವುದು ಇದರದ್ದೇ ವೈಭವೀಕರಿಸಿದ, ವಿಸ್ತೃತ ನಡವಳಿಕೆ. ಕೆಲವರು ಇಡೀ ಮಾನವತೆಯನ್ನು ಮಾರ್ಮಿಕವಾಗಿಯಾದರೂ ತಮ್ಮದೇ ಕುಲಬಂಧುಗಳೆಂದು ಕಾಣುವರು. ಈ ‘ಕುಲ’ಕ್ಕೆ ನೆರವಾಗಲು ಅವರು ಬೃಹತ್ ಪ್ರಮಾಣದಲ್ಲಿ ತೊಡಗಬಹುದು. ಎಲ್ಲ ಮಾನವೀಯ ನೆರವಿನ ಸಂಸ್ಥೆಗಳೂ ಈ ಆಧಾರದ ಮೇಲೆಯೇ ನಡೆಯುತ್ತವೆ. ಪ್ರಪಂಚದ ಇನ್ನೆಲ್ಲೋ ಇರುವ ಹಸಿದ ಸಮುದಾಯಕ್ಕೆ ಆಹಾರವನ್ನು ನೀಡಿದೆವೆನ್ನುವ ಅವರ ಸಂತೋಷಕ್ಕೆ ಕಾರಣ ಆ ಸಮುದಾಯವನ್ನು ತಮ್ಮದೇ ಪಂಗಡದ ವಿಸ್ತೃತ ಅಂಗವೆಂದು ಪರಿಗಣಿಸುವುದೇ ಆಗಿರುತ್ತದೆ. ಅಧಿಕೃತವಾಗಿ ತಾವು ಯಾವುದೋ ಧಾರ್ಮಿಕ ಅಥವಾ ನೈತಿಕ ಕಾರಣಗಳಿಂದಾಗಿ ಹೀಗೆ ಮಾಡುತ್ತಿದ್ದೇವೆ ಎಂದು ನುಡಿದರೂ ವಾಸ್ತವದಲ್ಲಿ ಒಂದು ಆದಿಮ, ಪ್ರಾಚೀನವಾದ “ಅನಿವಾರ್ಯವಾದ ಸಹಕಾರ” ನಿಯಮವನ್ನು ಪಾಲಿಸುತ್ತಿರುವರಷ್ಟೆ. ನೆರವು ನೀಡಬೇಕು ಎಂಬ ಬೋಧನೆಯಿಂದಾಗಿ ಅವರು ನೆರವಾಗುತ್ತಿಲ್ಲ. ನೆರವು ನೀಡವಂತಹ ಜೀವಿಯಾಗಿದ್ದರಿಂದ ನೆರವಾಗುವರು. ಈ ಸಹಕಾರಿ ಸಂತೋಷದ ಪರಮಾವಧಿಯ ಬಗೆಯೂ ಇದೆ. ಕೆಲವು ಮಂದಿ ಮಾನವತೆಯ ಬಗೆಗಿನ ತಮ್ಮ ಅನುಭೂತಿಯನ್ನು ಇತರೆ ಪ್ರಾಣಿಗಳಿಗೂ ವಿಸ್ತರಿಸುವರು. ಪ್ರಾಣಿಸಂರಕ್ಷಕರು ಕೆಲವು ಜೀವಿಗಳು ಅಳಿಯದಂತೆ ಕಾಪಾಡುವ ಯತ್ನದಲ್ಲಿ ಇಡೀ ಜೀವನವನ್ನು ಕಳೆಯುತ್ತಾರಷ್ಟೆ. ಹಾಗೆಯೇ ಪ್ರಾಣಿದಯಾ ಸಂಘದವರು ತೊಂದರೆಯಲ್ಲಿರುವ ಸಾಕುಪ್ರಾಣಿಗಳ ರಕ್ಷಣೆಗೆ ಕೈಲಾದಷ್ಟು ನೆರವು ನೀಡುತ್ತಾರೆ.  ಇಂತಹವರಲ್ಲಿ ಇತರೆ ಜೀವಿಗಳಿಗೆ ನೆರವಾಗಬೇಕೆನ್ನುವ ಹಂಬಲ ಒಮ್ಮೊಮ್ಮೆ ಎಷ್ಟು ತೀವ್ರವಾಗುತ್ತದೆಮದರೆ, ಎಲ್ಲೋ ಬಂಧಿಯಾಗಿರುವ ಪ್ರಾಣಿಯನ್ನು ಕಾಡಿಗೆ ಮರಳಿಸಿದಾಗ, ಪ್ರಾಣಿಗೆ ಜೀವಿಸಲ ಒಳ್ಳೆಯ ಪರಿಸರವನ್ನು ನೀಡಿದಾಗ, ಅಥವಾ ಮನೆಬಿಟ್ಟು ಬೀದಿಗೆ ಬಂದ ಸಾಕು ಪ್ರಾಣಿಗೆ ಹೊಸದೊಂದು ಆಶ್ರಯ ನೀಡಿದಾಗ, ಒಂದು ಜೀವಿಯನ್ನು ಅಳಿವಿನಿಂದ ಉಳಿಸಿದ ಖುಷಿ ಉಕ್ಕುತ್ತದಲ್ಲ ಅದು ಉತ್ಕಟವಾದದ್ದು.

______________________________________________________________

ಟಿಪ್ಪಣಿ: ಈ ಖುಷಿಯೇ ಬಲು ಖುಷಿಯ ವಿಷಯ. ಮಾನವತೆಯ ಮೂಲ ಎನ್ನೋಣವೇ? ಡೆಸ್ಮಂಡ್‍ ಮಾರಿಸ್ ಕೊಡುವ ಉದಾಹರಣೆಗಳಿಗೆ ಸಮಾನವಾದ ಹಾಗೂ ಅದಕ್ಕಿಂತಲೂ ಪ್ರಬಲವಾದ ಉದಾಹರಣೆಗಳನ್ನು ನಾವು ನಮ್ಮಲ್ಲೂ ಕಾಣಬಹುದು. ಈ ಪ್ರಾಣಿರಕ್ಷಣೆಯ ಖುಷಿಗಾಗಿ ಮತ್ತೊಂದು ಜೀವಿಗೆ/ಜೀವಕ್ಕೆ ಹಿಂಸೆ ನೀಡುವುದಷ್ಟೆ ಒಪ್ಪಲು ತುಸು ಕಷ್ಟವಾಗುವ ಸಂಗತಿ. ಗೋರಕ್ಷಣೆ ಇರಲಿ, ಪ್ರಾಣಿದಯೆ ಇರಲಿ, ಅದು ಖುಷಿ ತರುತ್ತದೆ, ನಿಜ. ಆದರೆ ಅದಕ್ಕಾಗಿ ಹಿಂಸೆ?

_____________________________________________________________

COOPERATIVE HAPPINESS

The Helper

This is the other side of the coin. We have always had to temper our competitiveness with cooperation because, as tribal animals, we could rarely succeed as isolated individuals. In addition to a deep-seated urge to win, we also inherited an equally basic, inborn urge to help one another. Moralists like to take credit for this, but the truth is that ‘being helpful’ is in our nature. It brings us happiness – not because do-gooders have taught us moral lessons in how to behave, but because biologically we are programmed to help ourselves by helping others. Cooperative behaviour may appear to be selfless, but in reality it is just as selfish as competitive behaviour.

If we gain a surge of happiness from, say, helping our friends, this is because evolution has ensured that tribal members support one another as a defence against group failure. A single individual could not kill a large prey; nor could a single individual build a hut, make a feast, or protect a settlement. Individual members of the primeval group could only thrive if the whole tribe was successful, and this demanded active cooperation. Passive cooperation, obtained by threats and bullying, was not enough; we had to go one step further. Even the most dominant members of the tribe – those who had won the competitive struggles – had to offer rewards to their subordinates in order to keep the group working efficiently together. In modern times, we see this cooperative urge at work in many different contexts. For most bosses, giving their staff a pay-rise or a bonus is a happy experience, whereas giving an employee the sack or a pay-cut is not. The ruthless boss, who, in wielding the carrot and stick, always favours the stick, will usually turn out to be a miserable individual, unable, for some personal reason, to enjoy the pleasures of cooperative happiness. In trivial ways, small cooperative gestures can bring a strangely pleasing, fleeting moment of happiness – as when a driver in a traffic jam allows a car stuck in a side-street into the main flow of traffic. The wave of appreciation is worth a lot in that gridlocked sea of frustration.

 

On a grander scale, there is the widespread phenomenon of doing ‘good works’. Some people, by symbolic means, are able to see the whole of humanity as members of their personal tribe. They can then set about helping their ‘tribe’ on a massive scale. All humanitarian organizations operate on this basis. The happiness they feel when providing food for a starving community on the other side of the world is based on their ability to see them as an extension of their own community. Officially they may claim to be operating according to some moral or religious code, but in reality they are obeying a modified form of an ancient, primeval ‘ cooperative imperative’. They are not being helpful because they have been taught to be helpful; they are being helpful because they belong to a helpful species. There is an even more extreme version of this type of cooperative happiness. Many people are able to extend their compassion beyond humanity to other species. Conservationists spend their lives trying to protect certain kinds of animals from extinction, and animal welfare workers do their best to care for suffering domestic animals. Among such individuals, the passion for helping other species frequently becomes intense, and the great surge of happiness that occurs when a captive animal is returned to the wild, a rare animal is saved from extinction, a farm animal is given better living conditions, or an abandoned pet is found a new home, is immense. For these people, the symbolic equation is stretched to the limit, with the protected animals standing in for ‘tribal members’.

 

 

Published in: on ಜನವರಿ 12, 2016 at 6:50 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ