ಸಂತೋಷದ ಸ್ವರೂಪ – ಸಂತೋಷದ ಬಗೆ 5

ವಂಶಿಕ ಸಂತೋಷ

ನೆಂಟ

ಸಹಕಾರಿ ಪಂಗಡಗಳ ಪ್ರಪಂಚದಲ್ಲಿ ಉತ್ಕಟ ಸಂತಸವನ್ನುಕ್ಕಿಸುವ ವಿಶೇಷ ಮೂಲವೊಂದಿದೆ. ಅದುವೇ ಕುಟುಂಬ, ಸಂತಾನ ನೀಡುವ ಸಂತಸ. ತನ್ನದೇ ಸಂತತಿಗೆ ಜನನ ನೀಡುವ ಹಂಬಲವೆನ್ನುವುದು ಎಂತಹ ಪ್ರಬಲ ಜೈವಿಕ ಅವಶ್ಯಕತೆಯಾಗಿದೆ ಎಂದರೆ ಈ ಪ್ರಯತ್ನದಲ್ಲಿ ಯಶಸ್ಸು ದೊರೆತ ಕ್ಷಣ ಮಹತ್ತಾದ “ವಂಶಿಕ ಖುಷಿ” ಯನ್ನುಂಟು ಮಾಡುತ್ತದೆ. ಪ್ರೇಮಿಸುವುದು, ದಂಪತಿಗಳಾಗುವುದು, ಮಕ್ಕಳಿಗೆ ಜನ್ಮ ನೀಡುವುದು ಹಾಗೂ ಸಂತಾನವನ್ನು ಬೆಳೆಸುವುದೇ ಮೊದಲಾದ ಈ ಪ್ರಕ್ರಿಯೆಯ ಪ್ರತಿಯೊಂದು ಹಂತವೂ ಆದಿಮ ಖುಷಿಯ ಅಲೆಗಳನ್ನೆಬ್ಬಿಸಬಲ್ಲುದು. ಎಲ್ಲವೂ ಸರಿಯಾಗಿದ್ದಲ್ಲಿ ಈ ಪ್ರತಿಯೊಂದು ಮೈಲುಗಲ್ಲನ್ನು ದಾಟುವಾಗಲೂ ಎಂತಹ ಉತ್ಕಟ ಭಾವುಕ ಕ್ಷಣಗಳುಂಟಾಗುತ್ತವೆಂದರೆ ಇದರ ನೆನಪು ಜೀವನ ಪರ್ಯಂತ ಉಳಿಯುವಂತದ್ದು. ಇಂತಹ ಭಾವುಕ ಕ್ಷಣಗಳ ಉತ್ಕಟತೆ ಎಷ್ಟೆಂದರೆ ಎಡವಟ್ಟಾದಾಗ ಉಳಿಯುವ ಮಾನಸಿಕ ಗಾಯಗಳೂ ಜೀವನ ಪರ್ಯಂತ ಮಾಸಲಾರವು.

ಸಂಗಾತಿಯ ಮೇಲೆ ಅಥವಾ ಮಗುವಿನ ಮೇಲಿನ ಪ್ರೀತಿ ಪೂರ್ವಜರಲ್ಲಿ ನಾವು ಸಾಮಾನ್ಯವಾಗಿ ಕಾಣುವ  ಗೆಳೆತನದ ಪ್ರೀತಿಗಿಂತ ಮಿಗಿಲಾದದ್ದು. ಏಕೆಂದರೆ ಇದಕ್ಕೆ ಅನುವಂಶಿಕ ಕಾರಣಗಳು ಇವೆ. ಮುಂದಿನ ಪೀಳಿಗೆಗೆ ಅನುವಂಶೀಯ ವಸ್ತುವನ್ನು ದಾಟಿಸುವುದು ಸಂತಾನೋತ್ಪತ್ತಿಯ ಮೂಲ ಉದ್ದೇಶ. ಪುನರ್ಜನ್ಮವೆನ್ನುವುದನ್ನು ನಂಬದ ಧರ್ಮದವರಿಗೂ ಕೂಡ ಸಂತಾನೋತ್ಪತ್ತಿಯಿಂದ ಕನಿಷ್ಠಪಕ್ಷ ವಂಶವನ್ನಾದರೂ ಉಳಿಸಬಹುದೆನ್ನುವ ಸಮಾಧಾನವಿದೆ. “ಪ್ರೀತಿ” ಎನ್ನುವುದು ಮಂಗ ಮತ್ತು ವಾನರಗಳಿಂದ ನಮ್ಮನ್ನು ಪ್ರತ್ಯೇಕಿಸುವ ಒಂದು ಉತ್ಕಟ ಭಾವನಾತ್ಮಕ ಅನುಭವ.ನಮ್ಮ ಪೂರ್ವಜರು ಬೇಟೆಗಾರರ ಹಾಗೂ ಆಹಾರ ಹೆಕ್ಕುವ ಬದುಕನ್ನು ಆಯ್ದುಕೊಂಡಾಗ ಬೇಟೆಯಾಡಲೆಂದು ಗಂಡು ಹಾಗೂ ಆಹಾರವನ್ನು ಹೆಕ್ಕಲೆಂದು ಹೋದ ಹೆಣ್ಣು ಒಬ್ಬರಿನ್ನೊಬ್ಬರಿಂದ ದೂರವಾಗಬೇಕಿತ್ತು ಎಂದು ಆಗಲೇ ಹೇಳಿದೆ. ಅಂದಿನ ಪ್ರೈಮೇಟು ಸಮಾಜದಲ್ಲಿ ಅದುವರೆವಿಗೂ ಕಾಣಬರದ ಹೊಸ ಸಮಸ್ಯೆಗಳನ್ನು ಇದು ತಂದೊಡ್ಡಿತು. ಬೇಟೆಯಾಡಿದ ಮೇಲೆ ಗಂಡುಗಳು ತಮ್ಮ ಸಂಪಾದನೆಯೊಂದಿಗೆ ಆವಾಸದ ನೆಲೆಗೆ ಹಿಂತಿರುಗಲೊಂದು ಕಾರಣ ಬೇಕಿತ್ತು. ಗಂಡುಗಳು ಹೀಗೆ ಮರಳಿದಾಗ ಅಲ್ಲೇ ಇರುವಂತೆ ಮಾಡುವ ಕಾರಣಗಳು ಹೆಣ್ಣಿಗೆ ಬೇಕಿತ್ತು. ಒಬ್ಬ ಗಂಡು ಮತ್ತು ಒಂದು ಹೆಣ್ಣಿನ ನಡುವೆ ಹೀಗೊಂದು ಪ್ರಬಲವಾದ ಬಾಂಧವ್ಯ ವಿಕಾಸವಾದದ್ದರಿಂದ ಮಾನವ ಸಮಾಜದಲ್ಲಿ ಹೊಸದಾಗಿ ಹುಟ್ಟಿಕೊಂಡಿದ್ದ ಹಾಗೂ ಅತಿ ವಿಶಿಷ್ಟವಾದ ಕೆಲಸಗಳ ಹಂಚಿಕೆ ಸಮರ್ಪಕವಾಗಿರುವುದು ಸಾಧ್ಯವಾಯಿತು.

“ಪ್ರೀತಿ”ಗೆ ಇದೊಂದೇ ಕಾರಣವಲ್ಲ. ದಾಂಪತ್ಯದ ಬಂಧಗಳು ಸಂತತಿಗಳ ಪಾಲನೆಯ ಪರಿಣಾಮ ಇಮ್ಮಡಿಯಾಗುವಂತೆ ಮಾಡಿತು. ಮಂಗಗಳಲ್ಲಿ ಹೆಣ್ಣುಗಳಷ್ಟೆ ಮರಿಗಳನ್ನು ಪಾಲಿಸುತ್ತವೆ. ಆದರೆ ಮನುಷ್ಯರಲ್ಲಿ ಅತಿ ದೀರ್ಘವಾದ ಬಾಲ್ಯವಿರುವುದರಿಂದ ಆ ಬಾಲ್ಯದುದ್ದಕ್ಕೂ ಮಗುವನ್ನು ತಂದೆ, ತಾಯಿಗಳಿಬ್ಬರೂ ಪೋಷಿಸುತ್ತಾರೆ. ತಾಯಿಯ ಪ್ರೀತಿಯ ಜೊತೆಗೆ ತಂದೆಯ ಪ್ರೇಮವನ್ನೂ ನೀಡುವ ಮೂಲಕ ಮಾನವ ಜೀವಿಯು ತನ್ನ ಸಂತತಿಗೆ ಹೆಚ್ಚಿನ ರಕ್ಷಣೆಯನ್ನು ಕೊಟ್ಟು ತನ್ನ ಉಳಿವಿನ ಸಾಧ್ಯತೆಗಳನ್ನೂ ಹೆಚ್ಚಿಸಿಕೊಂಡಿತು.  ಮಗು ಸಂತಾನೋತ್ಪತ್ತಿ ಮಾಡುವಷ್ಟು ಪ್ರೌಢನಾಗುವದಕ್ಕೂ ಮೊದಲೇ ದೊಡ್ಡದಾದ ಮಾನವನ ಮಿದುಳನ್ನು ಅನುಭವಗಳಿಂದ ಅಣಿಗೊಳಿಸುವ ಕಾಲಾವಕಾಶ ಸಾಕಷ್ಟು ದೊರೆಯಿತು.  ಮಾನವನ ವಿಕಾಸ ಸಫಲವಾಗಲು ಅವಶ್ಯಕವಾದ  ಈ ಅಂಶ ಮಂಗ ಮತ್ತು ವಾನರಗಳಲ್ಲಿ ಕಾಣದ ಮತ್ತೊಂದು ಪ್ರಮುಖ ಖುಷಿಯ ಸೆಲೆಯನ್ನು ಮಾನವನಿಗೆ ನೀಡಿದೆ. ಅದುವೇ ದಾಂಪತ್ಯಕ್ಕೆಳಸುವ ಯುವ ಪ್ರೇಮಿಗಳಲ್ಲಿ ಕಾಣುವ ಹುಚ್ಚು ಖುಷಿ. ಪ್ರೇಮ ಮತ್ತು ಕಾಮವೆರಡಕ್ಕೂ ನಿಕಟ ಸಂಬಂಧವಿದೆಯಾದರೂ, ಪ್ರೀತಿಸುವ ಖುಷಿಗೂ, ಸೆಕ್ಸ್ ಅಥವಾ ಸಂಭೋಗದ ಖುಷಿಗಳೆರಡೂ ವಿಭಿನ್ನವಾದ ಭಾವನೆಗಳು. ಸೆಕ್ಸ್ ಇಲ್ಲದೆ ಪ್ರೇಮಿಸಲು ಸಾಧ್ಯ. ಹಾಗೆಯೇ ಪ್ರೇಮವಿಲ್ಲದೆ ಸೆಕ್ಸ್ ಇರುವುದೂ ಸಾಧ್ಯ. ಪ್ರೇಮರಹಿತ ಸೆಕ್ಸ್ ನೀಡುವ ಉನ್ಮಾದ ಪ್ರಬಲವಾದದ್ದು. ಹಾಗೆಯೇ ಅಪ್ಪಟ ಪ್ರೇಮ ನೀಡುವ ಸುಖದ ಬಗ್ಗೆಯೂ ಸಾಕಷ್ಟು ತಿಳಿದಿದೆ. ಆದರೆ ಇವೆರಡೂ ಭಾವಗಳೂ ಕೂಡಿದಾಗ ಉಂಟಾಗುವ ಭಾವನೆಯ ತೀವ್ರತೆ ಮನುಷ್ಯರಿಗೆ ಗೊತ್ತಿರುವಂತಹ ಹರ್ಷದ ಕ್ಷಣಗಳಲ್ಲಿ ಅತಿ ವಿಸ್ಫೋಟಕವೆನ್ನಿಸುವಂತವು.

ಈ ಬಗೆಯಲ್ಲಿ ಅತ್ಯುತ್ಕಟ ಭಾವನೆಯ ದೆಸೆಯಿಂದಾಗಿ ಕಾಮದ ಖುಷಿಯ ಬೆನ್ನಲ್ಲೇ ಬರುವ ಪಾಲಕರ ಪ್ರೀತಿ ಇನ್ನಷ್ಟು ಬಲವಾಗಿದೆ. ದಂಪತಿಗಳಿಗೆ ಮೊದಲ ಮಗುವಾದಾಗ  ಪ್ರೀತಿಯ ಭಾವನೆಗಳು ಉಕ್ಕೆದ್ದು ಹರಿಯುತ್ತವಷ್ಟೆ. ಹೊಸ ಸಂತಾನ ಬಂದಾಗ ಅದನ್ನು ರಕ್ಷಿಸಿ, ಪಾಲಿಸುವಂತೆ ಈ ರೀತಿ ಅನುವಂಶೀಯವಾಗಿಯೇ ತಂದೆ ತಾಯಿಗಳಿಗೆ ನಿರ್ದೇಶವಿದೆಯನ್ನಬಹುದು. ಇದು ಮತ್ತೊಂದು ಪ್ರಮುಖ ವಂಶಿಕ ಸಂತಸ. ಬೇರೆ ಯಾವುದೇ ಪ್ರೈಮೇಟುಗಳಿಗಿಂತಲೂ ಸುದೀರ್ಘವಾದ ನಮ್ಮ ಆಯಸ್ಸಿಗೆ ಅಜ್ಜ-ಅಜ್ಜಿಯರು ಮಕ್ಕಳ ಪಾಲನೆಗೆ ನೀಡುವ ಬೆಂಬಲವೂ ಸ್ವಲ್ಪ ಮಟ್ಟಿಗೆ ಕಾರಣ. ಇದು ಹೇಗೆ ಎಂದು ಅರ್ಥ ಮಾಡಿಕೊಳ್ಳಬೇಕಾದರೆ ಮಾನವ ಹೆಣ್ಣು ಒಂದಾದ ಅನಂತರ ಮತ್ತೊಂದು ಮಗುವಿಗೆ ಜನ್ಮ ನೀಡುತ್ತಾಳೆ, ಒಮ್ಮೆಲೇ ಹತ್ತಾರು ಮಕ್ಕಳಿಗೆ ಜನ್ಮ ನೀಡುವುದಿಲ್ಲವೆನ್ನುವುದು ನೆನಪಿರಲಿ. ಇತರೇ ಪ್ರೈಮೇಟುಗಳು ಒಂದು ಮರಿಗೆ ಜನ್ಮವಿತ್ತು, ಅದು ಸ್ವಾವಲಂಬಿಯಾದ ಅನಂತರ ಮತ್ತೊಮ್ಮ ತಾಯಿಯಾಗಲು ತೊಡಗುತ್ತವೆ. ಮರಿಗಳ ಅತಿ ಕ್ಷಿಪ್ರವಾದ ಬಾಲ್ಯ ಇದನ್ನು ಆಗಗೊಡುತ್ತದೆ.

ಆದರೆ ಮನುಷ್ಯನ ಜೀವನಚಕ್ರದಲ್ಲಿ ಬಾಲ್ಯಕ್ಕೆ ದಶಕಗಳನ್ನು ಕೂಡಿಸಲಾಗಿದ್ದು, ಇದು ಅದರ ತಲೆಯಲ್ಲಿರುವ ಬೃಹತ್ ಕಂಪ್ಯೂಟರನ್ನು ನಿಧಾನವಾಗಿ ಪ್ರೋಗ್ರಾಮ್ ಮಾಡಲು ಸಾಧ್ಯ ಮಾಡಿದೆ. ಇದರಿಂದಾಗಿ ನಮಗಿನ್ನೊಂದು ಹೊಸ ಸಮಸ್ಯೆ ಎದುರಾಯಿತು. ಮಕ್ಕಳು ಸ್ವಾವಲಂಬಿಗಳಾಗುವವರೆಗೂ ಹೆಣ್ಣುಗಳು ಕಾದಿದ್ದರೆ, ಸಂತಾನೋತ್ಪತ್ತಿಯ ಚಕ್ರ ಬಲು ನಿಧಾನವಾಗಿಬಿಡುತ್ತದೆ. ವಿಕಾಸದ ಹಾದಿಯಲ್ಲಿ ಇದಕ್ಕೆ ದೊರೆತ ಪರಿಹಾರ: ಒಂದರ ಜೊತೆಗೆ ಇನ್ನೊಂದು ಮಗುವಿನ ಪಾಲನೆ. ಫಲಿತಾಂಶ: ಮಾನವ ಹೆಣ್ಣು ಸ್ವಾವಲಂಬಿಗಳಲ್ಲದ ವಿವಿಧ ವಯಸ್ಸಿನ ಮಕ್ಕಳಿರುವ ಕುಟುಂಬವನ್ನು ಪಾಲಿಸುವ ಹೊಣೆ ಹೊರುತ್ತಾಳೆ. ಇದೆಂತಹ ಭಾರೀ ಹೊರೆ ಎಂದರೆ ಇದರ ನಿರ್ವಹಣೆಗೆ ಎಷ್ಟು ನೆರವಿದ್ದರೂ ಸಾಲದು. ಈ ಸಮಸ್ಯೆಗೆ “ವಿಸ್ತೃತ ಕುಟುಂಬ” ವೊಂದು ಪರಿಹಾರೋಪಾಯ. ರಕ್ಷಣೆಯನ್ನು ನೀಡುವ ತಂದೆಯ ಜೊತೆಗೇ ಪ್ರೀತಿಯಿಂದ ಕಾಯುವ ಅಜ್ಜ-ಅಜ್ಜಿಯರೂ ಕುಟುಂಬದಲ್ಲಿ ಸೇರುತ್ತಾರೆ. ಇಂದಿನ ನಗರ ಜೀವನದಲ್ಲಿ ಕಾಣೆಯಾಗುತ್ತಿರುವ ಆದರೆ ಮಾನವರ ಬದುಕಿನಲ್ಲಿ ಪ್ರಮುಖವಾದ ಅಜ್ಜ-ಅಜ್ಜಿಯರ ಈ ಪಾತ್ರ ಮೊಮ್ಮಕ್ಕಳ ಪಾಲನೆಯ ಖುಷಿ ಎನ್ನುವ ಮತ್ತೊಂದು ವಂಶಿಕ ಸಂತಸದ ಸೆಲೆ.

_________________________________________________________

Genetic Happiness,  ಇದಕ್ಕೆ ವಂಶಿಕ ಖುಷಿ ಎಂದು ಬರೆದಿದ್ದೇನಾದರೂ, ಖುಷಿ ಕೊಡುತ್ತಿಲ್ಲ. ಕುಟುಂಬ ಸಂತೋಷ ಅನ್ನಬಹುದಿತ್ತು. ಆದರೆ ಮಾರಿಸ್‍ ನ ದೃಷ್ಟಿಯಲ್ಲಿ ಇಂತಹ ಖುಷಿ ನಮ್ಮ ತಳಿಗುಣಗಳಲ್ಲಿಯೇ ಒಳಗೊಂಡಿರುವಂಥವು. ಆದ್ದರಿಂದು ಇದು ತಳೀಯ ಖುಷಿಯೂ ಆಗಬಹುದು. ಒಂದು ಒಳ್ಳೆಯ ಪದವನ್ನು ನಮ್ಮ ಕನ್ನಡ ಸಾಹಿತ್ಯದಲ್ಲಿಯೇ ಬೇರೆಲ್ಲಾದರೂ ಹುಡುಕಬೇಕು.

___________________________________________________________

 

Within the realm of tribal cooperation there is a special source of high-intensity happiness: the joys of the reproductive ‘family unit’. The urge to reproduce one’s own kind is such a powerful biological imperative that success in this endeavour brings moments of great ‘genetic happiness’. Each phase of the process – falling in love, pair-bonding, giving birth and successfully rearing the offspring – has the potential to create great waves of primeval happiness. If all goes well, these landmark moments create such a powerful emotional response that they result in vivid memory traces that last a lifetime. So potent are they that, sadly, when they go wrong, the mental scars can also last for a lifetime.

 

The love for a partner or a child exceeds anything seen in ordinary tribal friendships because of the genetic factor involved. The essence of reproduction is the passing on of genetic material to future generations, and even for those who do not believe in the religious version of the afterlife, there is the reassuring thought that their offspring will at least provide them with a genetic immortality. ‘Falling in love’ is a powerful emotional experience in our species and one that sets us apart from other monkeys and apes. I have already mentioned that, when our ancient ancestors adopted the lifestyle of hunter-gatherers, the physical separation of the hunting males and the food-gathering females created new problems that were unknown to other primate societies. The males had to want to return to the human settlement with the spoils of the hunt, and their females had to want to be there when they did so. The evolution of a powerful bond of attachment between individual males and females therefore helped to ensure that the new, uniquely human division of labour worked efficiently.

 

But there was more to ‘falling in love’ than this. The setting up of pair-bonds also had the effect of doubling the parental care of the offspring. A typical monkey baby is reared solely by its mother. A human baby, with its greatly extended childhood, is reared by it mother and its father. By offering its growing infants paternal love in addition to maternal love, the human species was able to give itself a major survival boost and provide the young with much greater protection. This gave the greatly enlarged human brain time to become fully ‘programmed’ with experiences before sexual maturity and adulthood arrived on the scene. All this was a vital part of the human evolutionary success story and results in a major new source of human happiness that is lacking in other monkeys and apes: the delirious happiness of the young lovers during the intense process of pair-formation. Although love and sex are intimately related, it is dear that the joy of love and the joy of sex are two distinct sensations. It is possible to fall in love without having sex and to have sex without falling in  love. The sensual happiness of loveless sex can be powerful enough. and the more ethereal pleasures of platonic love have been well-documented. But when the two are combined. the result. in terms of emotional intensity. can be explosive and can provide what are probably the most acute moments of happiness known to human beings.

 

Equipping our species with this extreme form of passionate experience has gone a long way to help in ensuring the strength of the parental emotions that follow naturally upon the heels of sexual love. When the pair-bonded couple produce their first baby. there is. again. a welling-up of powerful loving emotion. Both the father and the mother are geneticallyprogrammed to respond strongly to the arrival of a new offspring and to protect and nurture it. This is yet another major source of genetic happiness. The unusual longevity of our species – greater than that of any other kind of primate – appears to have evolved. in part. as a grandparental support system. To understand the need for this. it has to be remembered that, uniquely, the human female produces a ‘serial litter’. Other primate females produce a baby, rear it to independence, and then start over again with the parental cycle. The short childhood of their offspring makes this feasible.

 

But with human offspring, a whole decade of childhood has been added to the life cycle, allowing for the programming of the giant’ computer in the skull’, and this creates a special breeding problem for our species. If human females waited for their first offspring to become independent before starting to produce a second one, this would drastically slow down the reproductive cycle. The solution, during the course of evolution, was to overlap the dependent offspring. As a result, the human female must face the task of rearing a whole family of young, of varying ages but all in a state of prolonged dependency. This creates a maternal burden so heavy that she needs all the help she can get. The solution is the ‘extended family’ and the addition, not only of a protective father, but also of caring grandparents. This important grandparental role (so often weakened by modern urban conditions) creates yet another potential source of great genetic happiness: the joy of caring for one’s grandchildren .

 

Published in: on ಜನವರಿ 17, 2016 at 7:44 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ