ಕಾಮ ಖುಷಿ
ಭೋಗಿ/ರಸಿಕ
ನಿಮಗೆ ಸಂತಸವನ್ನು ತರುವ ಕ್ಷಣಗಳಾವುವು ಅಂತ ಕೇಳಿದರೆ ಬಹಳಷ್ಟು ಜನ ರುಚಿಕಟ್ಟಾದ ಊಟ ಮಾಡಿದ್ದನ್ನೋ, ಲೈಂಗಿಕ ಅನುಭವವನ್ನೋ ಅಥವಾ ಬೇರಾವುದಾದರು ದೈಹಿಕ ಸುಖವನ್ನೋ ಕುರಿತು ಹೇಳುತ್ತಾರೆ. “ಒಳ್ಳೆಯ ಪಾನಗೃಹವೆಂದರೆ ಖುಷಿಯ ವಿಷಯ” ಎಂದಿದ್ದಾರೆ ಡಾ. ಜಾನ್ಸನ್. ಭೋಗಿಗಳ ಪ್ರಕಾರ ನಾವೆಲ್ಲ ಇಂತಹ ಮೂಲಭೂತ ಜೈವಿಕ ಸುಖಗಳಿಗೆ ಆದಷ್ಟು ಬಾರಿ, ಆದಷ್ಟೂ ತೀವ್ರತೆಯಿಂದ ಶರಣಾಗಬೇಕು. ಈ ಭೋಗದ ಸುಖಗಳಲ್ಲಿ ಕಾಮೋದ್ರೇಕದ ಪರಾಕಾಷ್ಟೆಯೇ ಅತೀವ ಉತ್ಕಟವಾದದ್ದು ಎನ್ನುವುದನ್ನು ಯಾರೂ ಪ್ರಶ್ನಿಸುವುದಿಲ್ಲ. ಸಂತಾನೋತ್ಪತ್ತಿಯ ಈ ಪ್ರಮುಖ ಕ್ಷಣದ ಮಹಾನ್ ಸುಖವನ್ನು ಅನುಭವಿಸದ ಜೀವಿಯಿಲ್ಲ. ಮಂಗ ಹಾಗೂ ವಾನರಗಳಂತಹ ನಮ್ಮ ಬಂಧುಗಳಲ್ಲಿ ಕಾಮೋದ್ರೇಕದ ಪರಾಕಾಷ್ಟೆ ಎನ್ನುವುದು ಕೇವಲ ಗಂಡಿಗಷ್ಟೆ ಸೀಮಿತ. ಆದರೆ ಮನುಷ್ಯರಲ್ಲಿ ಇದು ಹೆಣ್ಣಿನಲ್ಲೂ ಆಗುತ್ತದೆ. ಈ ವ್ಯತ್ಯಾಸಕ್ಕೆ ಕಾರಣವಿರಲೇಬೇಕು. ಮಂಗಗಳು ಹಾಗೂ ವಾನರಗಳ ಹೆಣ್ಣು ತನ್ನ ದೇಹದಲ್ಲಿ ಅಂಡಾಣು ಉತ್ಪತ್ತಿಯಾಗುವ ಸಮಯದಲ್ಲಿ ಬೆದೆಗೆ ಬರುತ್ತದೆ. ಈ ಸಂದರ್ಭದಲ್ಲಿ ಅದರ ಲಿಂಗಾಂಗದ ಸುತ್ತಲಿನ ಜಾಗ ಊದಿಕೊಳ್ಳುತ್ತದೆ. ಗಂಡಿನ ಕಣ್ಣಿಗೆ ತೋರುವಂತೆ ಇರುವುದರಿಂದ ಗಂಡು ಉದ್ರೇಕಗೊಂಡು ಹೆಣ್ಣನ್ನು ಕೂಡಲು ಪ್ರಯತ್ನಿಸುತ್ತದೆ. ವೀರ್ಯ ಸ್ಖಲನವಾದಾಗ (ಬಹುತೇಕ ಕೆಲವೇ ಕ್ಷಣಗಳಲ್ಲಿ ಇದು ಆಗುತ್ತದೆ) ಗಂಡು ಕ್ಷಣಿಕವಾಗಿ ಖುಷಿಯ ಪರಾಕಾಷ್ಟೆಯನ್ನು ತಲುಪುತ್ತಾನೆ. ಆದರೆ ಹೆಣ್ಣು ಇಂತಹ ಪರಾಕಾಷ್ಟೆಯನ್ನು ತಲುಪುವುದೇ ಇಲ್ಲ. ಬೆದೆಯ ಕಾಲ ಮುಗಿಯುವವರೆವಿಗೂ ಹೆಣ್ಣು ಲೈಂಗಿಕವಾಗಿ ಉದ್ರಿಕ್ತವಾಗಿಯೇ ಇರುತ್ತದೆ, ಅನಂತರ ಲಿಂಗಾಂಗದ ಸುತ್ತಲಿನ ಊತ ಕಡಿಮೆಯಾಗುತ್ತದೆ. ಹೆಣ್ಣಿನ ಲೈಂಗಿಕಾಸಕ್ತಿ ಈಗ ಕಡಿಮೆಯಾಗುತ್ತದೆ. ಅದು ಬಸಿರಾಗಿಲ್ಲದಿದ್ದರೆ ಇನ್ನೊಂದು ತಿಂಗಳವರೆಗೂ, ಮರಳಿ ಲಿಂಗಾಂಗಗಳಲ್ಲಿ ಊತ ಕಾಣಿಸುವವರೆಗೂ, ಹೀಗೇ ನಿರಾಕರ್ಷಕವಾಗಿರುತ್ತದೆ.
ಮನುಷ್ಯರಲ್ಲಿ ಬೇರೆಯದೆ ರೀತಿಯ ಸಂಭೋಗ ಕ್ರಿಯೆ ವಿಕಾಸವಾಗಿದೆ. ಹೆಣ್ಣುಗಳ ಲಿಂಗಾಂಗಗಳು ಊದಿಕೊಳ್ಳುವುದಿಲ್ಲ. ಅಂಡೋತ್ಪತ್ತಿಯಾಗುವುದರ ಸೂಚನೆಯೂ ಸಿಗುವುದಿಲ್ಲ. ವಿಚಿತ್ರವೆಂದರೆ ಅಂಡೋತ್ಪತ್ತಿಯ ಕ್ಷಣಗಳನ್ನು ಅವು ಗಂಡುಗಳಿಂದ ಮರೆಮಾಚುತ್ತವೆ. ಜೊತೆಗೆ ಸದಾ ಲೈಂಗಿಕವಾಗಿ ಆಕರ್ಷಕವಾಗಿದ್ದು ಅಂಡೋತ್ಪತ್ತಿಯಾಗದಿರುವಾಗಲೂ ತೀವ್ರ ಕಾಮಾಸಕ್ತಿಯನ್ನು ತೋರುತ್ತವೆ. ಋತುಮತಿಯಾಗಿದ್ದಾಗಲೂ, ಬಸಿರಾಗಿದ್ದಾಗಲೂ ಕೂಡ ಕಾಮೋದ್ರೇಕಗೊಳ್ಳಬಲ್ಲವು. ಇಂಥಹ ಕ್ಷಣಗಳಲ್ಲಿ ನಡೆಯುವ ಸಂಭೋಗ ಖಂಡಿತ ಸಂತಾನೋತ್ಪತ್ತಿಗಲ್ಲವಷ್ಟೆ. ಆದ್ದರಿಂದ ಇದಕ್ಕೆ ಬೇರೇನೋ ಉದ್ದೇಶವಿರಬೇಕು. ಮಾನವನ ವಿಕಾಸದ ಹಾದಿಯಲ್ಲಿ ದಾಂಪತ್ಯದ ಬಂಧವನ್ನು ಭದ್ರಗೊಳಿಸಲು ಹೆಣ್ಣಿನ ಈ ಲೈಂಗಿಕತೆ ನೆರವಾಗಿದೆಯೆನ್ನಿಸುತ್ತದೆ. ಇದುವೇ ನಿಜವಾದ ಕಾಮಕೇಳಿ.
ಆಗಲೇ ಹೇಳಿದ ಹಾಗೆ ಮಂಗಗಳು ಹಾಗೂ ವಾನರಗಳು ಸಾಮಾನ್ಯವಾಗಿ ಜೋಡಿಯಾಗುವುದಿಲ್ಲ. ಆದರೆ ಮನುಷ್ಯರು ಜೋಡಿಗಳಾಗಿ ಬದುಕುತ್ತಾರೆ. ಈ ಬಗೆಯ ದೀರ್ಘ ಲೈಂಗಿಕಾಸಕ್ತಿ ಜೋಡಿಯನ್ನು ಜೊತೆಯಾಗಿ ಹಿಡಿದಿಡುವ ಭಾವುಕ ಅಂಟು. ಹೆಣ್ಣು ಅಂಡೋತ್ಪತ್ತಿ ಮಾಡದಿರುವ ಸಮಯದಲ್ಲಿ ಗಂಡಿಗೆ ಸಂಭೋಗದ ಬಹುಮಾನ ದೊರೆಯುತ್ತದೆ. ಅದೇ ಹೆಣ್ಣಿಗೆ ಗಂಡಿಗಾಗುವಷ್ಟೆ ಉತ್ಕಟವಾದ ಉದ್ರೇಕದ ಬಹುಮಾನ. ಹೀಗೆ ಜೈವಿಕ ಸ್ತರದಲ್ಲಿ ಮಾನವನ ಸಂಭೋಗದ ಸಂತಸ ಹೆಚ್ಚಾಗಿದೆ. ಸಾಂಸ್ಕೃತಿಕ ಮೆರುಗು ಇದನ್ನು ಇನ್ನಷ್ಟು ಹೆಚ್ಚಾಗಿಸುತ್ತದೆ. ಸಾಧಾರಣ ಸಂಭೋಗವೆನ್ನುವುದು ಸುಧಾರಣೆಗೊಂಡು ಕಾಮಸೂತ್ರಗಳಾಗಿವೆ. ಮಾನವನ ಈ ಲೈಂಗಿಕ ಖುಷಿಯ ಕ್ಷಣಗಳನ್ನು ತೀವ್ರಗೊಳಿಸುವಂತಹ ಸಂಭೋಗದ ವಿವಿಧ ಭಂಗಿಗಳನ್ನು ಮಾರ್ಗದರ್ಶಿಗಳು ನೂರಾರು ವರ್ಷಗಳಿಂದ ಲಭ್ಯವಿವೆ. ಮೂರನೇ ಶತಮಾನದ ಭಾರತೀಯ ಕಾಮಸೂತ್ರದಿಂದ ಆರಂಭಿಸಿ ಪಾಶ್ಚಿಮಾತ್ಯ ದಿ ಜಾಯ್ ಆಫ್ ಸೆಕ್ಸ್, ಕಿನ್ಸಿ ವರದಿಗಳಲ್ಲದೆ, ವಿವಿಧ ವಯೋಮಾನದವರು ಬರೆದಿರುವ ಕಾಮಕಥೆಗಳಂತಹ ಸಮೃದ್ಧ ಸಂಪನ್ಮೂಲಗಳು ತಮ್ಮ ಕಾಮಸುಖವನ್ನು ಹೆಚ್ಚಾಗಿಸಿಕೊಳ್ಳಲು ಬಯಸುವವರಿಗೆ ಸದಾ ಲಭ್ಯ. ಇಂತಹ ಮಾಹಿತಿಯನ್ನು ಮುಚ್ಚಿಡುವ ಪ್ರಯತ್ನಗಳು ಅವನ್ನು ಸುಂದರ ಕಾಮಸೂತ್ರಗಳಿಂದ ಭೂಗತವಾದ ಒರಟು ಲಂಪಟ ಸಾಹಿತ್ಯವನ್ನಾಗಿಸಿವೆಯಷ್ಟೆ.
ಸಂಭೋಗವೆನ್ನುವುದು ನಿಷೇಧಕ್ಕೊಳಪಡಲಾಗದಷ್ಟು ಮೂಲಭೂತವಾದ ಉತ್ಕಟ ಖುಷಿಯ ಸೆಲೆ. ಆಹಾರ ಹಾಗೂ ಪಾನೀಯಗಳ ಕಥೆಯೂ ಇದೇ. ಹಸಿದ ಕ್ಷಣಗಳಲ್ಲಿ ಆಹಾರ ಹಾಗೂ ದಾಹವಾದಾಗ ನೀರು ಕೊಡುವ ಸಂತೋಷ ಕಲ್ಪಿಸಿಕೊಳ್ಳಲೂ ಅಸಾಧ್ಯ. ಅದೃಷ್ಟವಶಾತ್ ಈ ಪರಮಾವಧಿಯನ್ನು ನಾವು ಬಹಳಷ್ಟು ಜನರು ಕಾಣುವುದಿಲ್ಲ. ಆದರೂ ಭೋಜನದ ನಿತ್ಯ ಖುಷಿಯನ್ನು ನಾವೆಲ್ಲರೂ ಅನುಭವಿಸುತ್ತೇವೆ. ಹಸಿವಿಲ್ಲದಿದ್ದರೂ, ದಾಹವಿಲ್ಲದಿದ್ದರೂ ನಾವು ಉಂಡು, ಕುಡಿಯುತ್ತೇವೆ. ನಮ್ಮ ಸಂತಾನೋತ್ಪತ್ತಿಯ ಚಟುವಟಿಕೆಗಳನ್ನು ರಸಿಕತೆಯಾಗಿ ವಿಸ್ತರಿಸಿದಂತೆಯೇ, ಬಲು ಮೂಲಭೂತವಾದ ತಿನ್ನುವ ಮತ್ತು ಕುಡಿಯುವುದನ್ನೂ ಬಕಾಸುರತನ ಹಾಗೂ ಕುಡುಕತನವನ್ನಾಗಿಸಿದ್ದೇವೆ. ಸಾವಿರಾರು ವರ್ಷಗಳಿಂದ ನಮ್ಮ ತಿನಿಸು ಮತ್ತು ಪಾನೀಯಗಳ ಸ್ವಾದವನ್ನು ನೂರಾರು ಬಗೆಯಲ್ಲಿ ಕೃತಕವಾಗಿ ಹೆಚ್ಚಿಸಿದ್ದೇವೆ. ಲಕ್ಷಾಂತರ ವರ್ಷಗಳಿಂದ ನಮ್ಮ ಪೂರ್ವಜರಿಗೆ ರುಚಿ ನೋಡುತ್ತಿದ್ದ ಕಾಡು ಆಹಾರಗಳು ಈಗ ಅಪರೂಪವಾಗಿವೆ. ಬೇಟೆಗಾರರು ನೆಲಕಚ್ಚಿದ ತಮ್ಮ ಬೇಟೆಯಿಂದ ನೇರವಾಗಿ ರಕ್ತವನ್ನು ಬಸಿದು ಕುಡಿಯುವಾಗ ಆನಂದವನ್ನು ಆಫ್ರಿಕಾದ ಕೆಲವು ಬುಡಕಟ್ಟುಗಳಲ್ಲಿ ಈಗಲೂ ಕಾಣಬಹುದು. ಇದೇ ಖುಷಿಯನ್ನು ಚಿಪ್ಪನ್ನು ತೆರೆದು ಕಪ್ಪೆಚಿಪ್ಪಿನ ಜೀವಿಯನ್ನು ಸಜೀವವಾಗಿ ಮುಕ್ಕುವವರಲ್ಲೂ ಕಾಣಬಹುದು. ಆದರೆ ಈ ರೀತಿಯ ಭೋಜನ ಈಗ ಅಪರೂಪದ ಸಂಗತಿಗಳಷ್ಟೆ. ಬಹುತೇಕ ಮಾಂಸವೆಲ್ಲ ಸಾಕುಪ್ರಾಣಿಗಳಿಂದಲೂ, ಸಸ್ಯಾಹಾರಗಳು ಸುಧಾರಿತ ಸಸ್ಯದ ತಳಿಗಳಿಂದಲೂ ಪಡೆದಂಥವು. ಅಡುಗೆಯ ವಿಧಾನಗಳೂ ಅಷ್ಟೆ. ತಿನಿಸುಗಳನ್ನ ಹೇಗೆ ಹೇಗೋ ಮಾರ್ಪಡಿಸಿ, ತಿನ್ನುವುದರಲ್ಲಿರುವ ಆದಿಮ ಖುಷಿಯನ್ನು ಇನ್ನಷ್ಟು ಪ್ರಬಲವಾಗಿಸುವ ಜಾಗತಿಕ ಚಳುವಳಿಯಾಗಿಬಿಟ್ಟಿದೆ.
ಅಡುಗೆಯೆನ್ನುವುದು ಶಿಲಾಯುಗಕ್ಕು ಹಿಂದೆ ಆರಂಭವಾಯಿತು. ಆದರೆ ಆಗ ಅದು ಮಾಂಸವನ್ನು ಸುಡುವುದಕ್ಕಷ್ಟೆ ಸೀಮಿತವಾಗಿತ್ತು. ಸುಮಾರು ಹತ್ತು ಸಾವಿರ ವರ್ಷಗಳ ಹಿಂದೆ ನವಶಿಲಾಯುಗ ಆರಂಭವಾದಾಗ ಬೇಯಿಸುವುದೂ, ರುಬ್ಬುವುದೂ ನಮ್ಮ ಅಡುಗೆ ವಿಧಾನಗಳಿಗೆ ಕೂಡಿಕೊಂಡವು. ಸುಟ್ಟ ಮಾಂಸದ ಅನಂತರ ನಮ್ಮ ಮೊದಲ “ಸುಧಾರಿತ ತಿನಿಸು’ಗಳೆಂದರೆ ಗಂಜಿ, ಬಿಸ್ಕತ್ತು ಹಾಗೂ ಕೇಕು. (ಭಾರತದಲ್ಲಿ ರೊಟ್ಟಿ, ಗಂಜಿ). ಮೂರು ಸಾವಿರ ವರ್ಷಗಳ ಹಿಂದೆ ಕಬ್ಬಿಣದ ಯುಗ ಆರಂಭವಾಗುವ ವೇಳೆಗೆ ಈಜಿಪ್ಟಿನ ಜನತೆಗೆ ಮೂವತ್ತಕ್ಕೂ ಹೆಚ್ಚು ಬಗೆಯ ರೊಟ್ಟಿ, ಕೇಕುಗಳು ಹಾಗೂ ಹತ್ತಾರು ತರಕಾರಿಗಳ ಆಯ್ಕೆ ಲಭ್ಯವಾಗಿತ್ತು. ನಗರಗಳು ಬೆಳೆದಂತೆಲ್ಲ ಪುರಾತನ ಅಡುಗೆಯೂ ಇನ್ನಷ್ಟು ವಿಶದವಾಗಿದ್ದಲ್ಲದೆ ಭೋಜನಪ್ರಿಯರಿಗೆ ಖುಷಿ ಕೊಡುವ ವಿಜೃಂಭಣೆಯ ಸಮಾರಂಭಗಳಾದುವು. ಮದ್ಯಪಾನವೂ ಪುರಾತನವೇ. ಮಧ್ಯಪ್ರಾಚ್ಯ ಪ್ರದೇಶದಲ್ಲಿ ಕ್ರಿಸ್ತಪೂರ್ವ 6000ದ ಸುಮಾರಿಗೇ ದ್ರಾಕ್ಷಿ ಬೆಳೆಯಲಾಗುತ್ತಿತ್ತು. ಕ್ರಿಸ್ತಪೂರ್ವ ನಾಲ್ಕರ ಸುಮಾರಿಗೆ ಸುಮೇರಿಯನ್ನರು ಹತ್ತೊಂಬತ್ತು ಬಗೆಯ ಬಿಯರುಗಳನ್ನು ಸೇವಿಸುತ್ತಿದ್ದರು. ಪ್ರಬಲವಾದ ಮದ್ಯಗಳು ಅನಂತರ, ಸುಮಾರು ಒಂದು ಸಾವಿರ ವರ್ಷದ ಹಿಂದೆ. ಬ್ರಹ್ಮಚರ್ಯೆ, ಸನ್ಯಾಸತ್ವದ ಬೇಸರವನ್ನು ಕಳೆಯಲು ಕೆಲವು ಸನ್ಯಾಸಿಗಳು ಇದನ್ನು ಅನ್ವೇ಼ಷಿಸಿದರು. ಕ್ರಿಸ್ತಶಕೆ ಹದಿಮೂರನೇ ಶತಮಾನದ ವೇಳೆಗಾಗಲೇ ಹೀಗೆ ಮದಿರೆಯಲ್ಲಿ ಸುಖದ ಹುಡುಕಾಟ ‘ಗಂಭೀರ ಸಾಮಾಜಿಕ ಸಮಸ್ಯೆ’ ಎಂದು ದಾಖಲಾಗಿತ್ತು. ಶತಮಾನಗಳು ಕಳೆದ ಹಾಗೆಲ್ಲ, ವಿವಿಧ ರೀತಿಯ ಸ್ನಾನ-ಮಜ್ಜನ, ಮಸಾಜು ಹಾಗೂ ದಣಿದವನಿಗೆ ಹೆಚ್ಚಿನ ಆರಾಮವನ್ನು ನೀಡುವ ಸುಪ್ಪತ್ತಿಗೆಯಂತಹ ಒರಗಿಕೊಳ್ಳುವ ಸಾಧನಗಳೂ ಇತರೆ ಭೌತಿಕ ಸುಖಗಳಲ್ಲಿ ಕೂಡಿಕೊಂಡವು. ಕ್ರೀಟೆ ದ್ವೀಪದ ನೋಸೋಸ್ ನಲ್ಲಿರುವ ಮಿನೋವನ ಅರಮನೆಯಲ್ಲಿ ಕಾಣುವ 3600 ವರ್ಷ ಹಳೆಯ ಸ್ನಾನದ ತೊಟ್ಟಿಯೇ ಅತಿ ಹಳೆಯದು. ಇದನ್ನು ರಾಣಿಯರ ಅಂತಃಪುರದೊಳಗೆ ಸುಂದರವಾಗಿ ಅಲಂಕರಿಸಿದ ಸ್ನಾನದ ಮನೆಯಲ್ಲಿದೆ. ಅವಳ ಸ್ಥಾನಕ್ಕೆ ತಕ್ಕ ಲಕ್ಷುರಿ ಸುಖವನ್ನು ಅದು ಒದಗಿಸುತ್ತಿದ್ದುದು ಸ್ಪಷ್ಟ. ಪುರಾತನ ಗ್ರೀಸಿನಲ್ಲಿ, ದಣಿದ ಪಯಣಿಗರನ್ನ ಬಿಸಿ ಸ್ನಾನದ ಜೊತೆಗೆ ಸೇವಕಿಯರಿಂದ ಪರಿಮಳ ದ್ರವ್ಯಗಳ ಮಸಾಜೂ ಸ್ವಾಗತಿಸುತ್ತಿತ್ತು. ಪುರಾತನ ರೋಮಿನಲ್ಲ ಸಮುದಾಯಿಕ ಸ್ನಾನ ಜನಪ್ರಿಯವಾಗಿತ್ತು. ಇಂದಿಗೂ ಟರ್ಕಿಯ ಸ್ನಾನದ ಮನೆಗಳನ್ನು ಕಾಣುತ್ತೇವೆ. ಇಂದಿನ ದಿನಗಳಲ್ಲಿಯಂತೂ ಮಾನವನ ದೇಹಕ್ಕೆ ಸುಖವೊದಗಿಸುವುದೊಂದು ಬೃಹತ್ ಉದ್ಯಮವಾಗಿಬಿಟ್ಟಿದೆ. ಇದು ಎಂತಹ ಖುಷಿಯೆಂದರೆ ಕೆಲವರಿಗೆ ಇದುವೇ ನಿರ್ವಾಣ!
_____________________________________________________
SENSUAL HAPPINESS
The Hedonist
Many people, when asked what brings them a moment of happiness, mention the savouring of a delicious meal, a sexual experience, or some other pleasure of the flesh. Dr. Johnson said that happiness was a good tavern. The creed of the hedonist is that we should all give ourselves up to these primary biological pleasures as often and as strongly as possible. The most intense form of sensual happiness is, without question, the orgasm. No species can survive without a massive ibui1t reward for the key moment of reproduction. Among our relatives, the monkeys and apes, the orgasm is confined to the males, but in humans it occurs in the females as well, and this difference requires an explanation. In typical monkeys and apes, the female comes into heat at the time of ovulation and this involves the development of a sexual swelling around her genitals.
This is visually conspicuous and excites the males who try to mount her and copulate with her. When the male ejaculates (usually after only a few seconds of mating) he reaches his momentary peak of sexual happiness and wanders of£ The female reaches no such climax and remains sexually aroused until the period of heat passes and her sexual swelling goes down. Now she will lose her sexual appetite and will cease to be sexually attractive until her next swelling occurs, in a month’s time, assuming she has not become pregnant. With humans, a new mating system has evolved. The females do not develop any sexual swellings and give no indication that they are ovulating. Strangely, they hide this vital moment from their males. Furthermore, they remain sexually attractive and retain a strong sexual appetite at times when they are not ovulating. They are capable of sexual arousal even when they are menstruating or are pregnant. At such times, the mating acts are, of course, doomed to be non-procreative. They must therefore have some other fimction. It seems that, during the course of human evolution, female sexuality has been co-opted as part of a pair-bonding process; it has literally become lovemaking. As already mentioned, typical monkeys and apes do not form breeding pairs, but typical human beings do, and the extended sexual activity appears to have become part of the emotional cement that helps to hold the couple together. W hile the male is rewarded by being able to have sex when his female is not ovulating, the female is rewarded by being able to experience a climactic orgasm as intense as tha,t of the male. So, for the human species, the potential for sexual happiness has been greatly increased at a biological level. It has also been further heightened by cultural embellishments, as simple sexual activity becomes refined into advanced and prolonged forms of eroticism. For hundreds of years there are have been instruction manuals available that describe the many postures, movements and caresses that can be explored to prolong and intensify the moments of human sexual happiness. From the &ma Sutra of third-century India to the Kinsey reports and The Joy oj Sex of the modern western world, and countless works of sexual fiction from all ages, there has always been a rich source of information for anyone wishing to increase their sexual pleasures. Attempts to suppress such information have merely driven it underground, taking it from the elegantly erotic to the crudely pornographic.
As a source of intense human happiness, sexual activity is far too basic to be restricted for very long. It is the same with food and drink. Obtaining food when you are starving or water when you are dying of thirst must provide moments of happiness as intense as anything else imaginable. Fortunately, most of us never reach such extremes, but we can still enjoy the daily pleasures of the table. Even if we are not particularly hungry or thirsty,we continue to eat and drink – such is the intensity of this type of carnal activity. Just as we have enlarged our basic reproductive activities to develop an advanced world of human eroticism, so have we embellished basic feeding and drinking activities to develop the advanced world of the gourmet and the imbiber. For thousands of years, the flavours of our foods and our drinks have been artificially improved in a hundred different ways. Eating basic, unimproved, wild foods of the kind enjoyed by our ancient ancestors for a million years is now comparatively rare. With some African tribes, it is still possible today to watch the intense happiness of a group of hunters who, immediately following a kill, proceed to drink the prey’s hot blood direct from its fallen body. On a much wider scale, it is also possible to observe the joy of oyster-eaters as they devour their shellfish alive. But these primitive forms of eating are today the exception rather than the rule.
Most meat is taken from modified, domestic animals and most botanical food is obtained from improved, domestic forms of plants. Food preparation has also been developed to a point where most items on the menu have been transformed in some way as part of a global movement towards intensifying the happiness of the primeval activity of eating. The cooking of food started back in the Old Stone Age, but at that stage was confined to the roasting of meat. Then, in the New Stone Age, about ten thousand years ago, boiling and grinding were added to our culinary repertoire. Our first ‘improved foods’, after roasted meat, were such things as porridge, biscuits and cakes. By the Iron Age, about three thousand years ago, an early Egyptian would have had the choice of over thirty different kinds of bread and cakes, and more than a dozen different vegetables. As cities grew, ancient cuisine was increasingly elaborate and great feasts became a source of gourmet happiness on a grand scale. The preparation of alcoholic drinks is also ancient. The earliest records of cultivated grapevines date from around 6000 BC in the Middle East. And the Sumerians in the fourth millennium BC enjoyed as many as nineteen different kinds of beer. Strong spirits appeared later, coming of age about onethousand years ago, usually concocted by boredmonks to relieve the tedium of their celibate, monastic existence. By the thirteenth century AD, it was already being recorded that the search for happiness in the bottom of a glass was creating a ‘serious social problem’. Over the centuries, other pleasures of the flesh have included various forms of bathing, oiling and massaging, and improved resting equipment that offered greater comfort to the weary. The oldest known bathtub, found on the island of Crete in the Minoan palace at Knossos, is thirty-six hundred years old It was placed in a beautifully decorated, en-suite bathroom in the queens apartments, and clearly provided her with a sensual luxury appropriate for her rank. In ancient Greece, exhausted travellers were often greeted with the delights of a hot bath accompanied by a sensuous rubbing down in perfumed oils by handmaidens. Communal bathing was popular in ancient Rome, and Turkish baths are still with us to this day.
In modern times. the sensual pampering of the human body has grown into a major industry, and many people find it a source of happiness so relaxing that it borders on the tranquil