ಲಯ ಆನಂದ
ನರ್ತಕ
ತೀವ್ರ ಲಯಬದ್ಧ ಚಟುವಟಿಕೆಗಳಲ್ಲಿ ವಿಶೇಷವಾದೊಂದು ಖುಷಿ ಇದೆ. ಸಂಗೀತ, ನೃತ್ಯ,ಹಾಡುಗಾರಿಕೆ, ಏರೋಬಿಕ್ಸ್, ಜಿಮ್ನಾಸ್ಟಿಕ್ಸ್, ಆಟೋಟಗಳಂತಹವುಗಳಲ್ಲದೆ ಕೆಲವು ಧಾರ್ಮಿಕ ಸಂಭ್ರಮಗಳಲ್ಲಿ, ಒಗ್ಗಟ್ಟಿನ ಈಜುಗಾರಿಕೆ, ಮಾಟ-ಮಂತ್ರದ ಆಚರಣೆ, ಮಿಲಿಟರಿ ಪೆರೇಡುಗಳಲ್ಲಂತಹ ವಿಚಿತ್ರ ಚಟುವಟಿಕೆಗಳಲ್ಲಿಯೂ ತಾಳಬದ್ಧವಾದ ಖುಷಿಯನ್ನು ಕಾಣುತ್ತೇವೆ. ತಾಳಕ್ಕೆ ತಕ್ಕಂತಿರುವ ಮಾನವ ಚಟುವಟಿಕೆಗಳಲ್ಲಿ ಉತ್ಕಟಾನಂದದ ಅಲೆಗಳನ್ನೆಬ್ಬಿಸಿ ನಮ್ಮನ್ನೆಲ್ಲೋ ಕೊಂಡೊಯ್ಯುವಂತಹುದ್ದೇನೋ ಇದೆ. ನಮ್ಮೆಲ್ಲ ಪ್ರಜ್ಞಾಪೂರ್ವಕ ನಿಯಂತ್ರಣಗಳೆಲ್ಲವನ್ನೂ ಮರೆತು ತಾಳಕ್ಕೆ ತಕ್ಕಂತೆ ಆಡುವ ದಾಸರಾಗಿಬಿಡುತ್ತೇವೆ. ತಾಳ ನಮ್ಮನ್ನು ತಾಕುತ್ತಿದ್ದಂತೆಯೇ ಖುಷಿ ಉಕ್ಕಿ ಬಂದು ಉಳಿದುದೆಲ್ಲವೂ ಮರೆತೇ ಹೋಗುತ್ತದೆ. ಜೊತೆಯಾಗಿ ಹಂಚಿಕೊಂಡರಂತೂ ಈ ಆನಂದದ ಅನುಭವ ಇನ್ನೂ ಹೆಚ್ಚಾಗುತ್ತದೆ.
ಜನಪ್ರಿಯ ಗೋಷ್ಟಿಗಳಲ್ಲಿ ಕೈ ಮೇಲೆತ್ತಿ ಒಂದಾಗಿ ಓಲಾಡುವ ಸಂಗೀತ ಪ್ರಿಯರು; ತಮ್ಮ ಪ್ರೀತಿಯ ತಂಡವನ್ನು ಹುರಿದುಂಬಿಸಿ ಒಟ್ಟಾಗಿ ಚಪ್ಪಾಳೆ ತಟ್ಟುವ ಫುಟ್ಬಾಲ್ ಪ್ರೇಮಿಗಳು; ಸಮಾರಂಭಗಳಲ್ಲಿ ಲಯಬದ್ಧವಾಗಿ ಹೆಜ್ಜೆ ಹಾಕುವ ಸೈನಿಕರು; ಓಲಾಡುತ್ತ ಒಟ್ಟಾಗಿ ಭಜನೆ ಮಾಡುವ ಭಕ್ತರು; ಜಿಮ್ಮುಗಳಲ್ಲಿ ಒಟ್ಟಾಗಿ ವ್ಯಾಯಾಮ ಮಾಡುವ ಆರೋಗ್ಯ ವ್ಯಸನಿಗಳು; ಇವರೆಲ್ಲರೂ ವಿವರಣೆಗೆ ನಿಲುಕದ, ವಿಶೇಷವಾದ ಲಯಸುಖವನ್ನು ಅನುಭವಿಸುತ್ತಾರೆ.
ಮಿದುಳು ತನ್ನಲ್ಲಿನ ಕೆಲವು ಉನ್ನತ ಚಿಂತನೆಯ ಕೇಂದ್ರಗಳನ್ನು ಸ್ವಿಚ್ ಆಫ್ ಮಾಡಿ ದೇಹವನ್ನು ಸಂಪೂರ್ಣವಾಗಿ ಈ ಬಗೆಯ ಆದಿಮ ಖುಷಿಗೆ ಒಡ್ಡಿಕೊಳ್ಳುವುದೆಂದರೆ ನಮ್ಮ ದೇಹದ ಸ್ನಾಯುಗಳನ್ನು ಲಯಬದ್ಧವಾಗಿ ಮರುಕಳಿಸುವ ಚಟುವಟಿಕೆಗಳಲ್ಲಿ ತೊಡಗಿಸುವುದಷ್ಟೆ.. ಸ್ವಿಚ್ ಆಫ್ ಮಾಡುವುದರಿಂದ ಸ್ವಲ್ಪ ಕಾಲ ನಮ್ಮನ್ನು ಕಾಡುವ ನಿತ್ಯದ ಸಂಕಟಗಳು ಹಾಗೂ ಚಿಂತೆಗಳನ್ನು ದೂರವಿಡುತ್ತೇವೆ. ನಮ್ಮ ಬದುಕೆಲ್ಲವೂ ಲಯಬದ್ಧವಾಗ ಉಸಿರಾಟ, ಹೃದಯಬಡಿತದಂತಹ ಚಟುವಟಿಕೆಗಳಿಂದಲೇ ನಿಯಂತ್ರಿತ. ಮಗುವಾಗಿದ್ದಾಗ ತೊಟ್ಟಿಲಲ್ಲೋ, ತಾಯಿಯ ಮಡಿಲಲ್ಲೋ ತೂಗಾಡುತ್ತಾ ಸುಖವನ್ನನುಭವಿಸಿರುತ್ತೇವೆ. ದೊಡ್ಡವರಾದ ಮೇಲೂ ಇದೇ ರೀತಿಯಲ್ಲಿ ನಮ್ಮ ದೇಹವನ್ನು ದೂಲಿಯಾಡಿಸಿ ಖುಷಿ ಪಡುತ್ತೇವೆಂದರೆ ಅದು ನಿಜಕ್ಕೂ ಯಾವುದೋ ಆದಿಮ ಖುಷಿಯೇ ಇರಬೇಕು.
ಈ ಬಗೆಯ ಖುಷಿಗೆ ತಮ್ಮನ್ನು ಒಡ್ಡಿಕೊಳ್ಳದೆಯೇ ಇಡೀ ಜೀವಮಾನವನ್ನು ಕಳೆಯುವವರೂ ಇದ್ದಾರೆ. ಪ್ರಜ್ಞೆಯ ನಿಯಂತ್ರಣವನ್ನು ಮೀರಿ ಖುಷಿಯಲ್ಲಿ ತೇಲುವುದನ್ನು ಕೆಲವರು ಸಹಿಸಲಾರರು. ಲಯಸುಖವೆನ್ನುವುದು ಇಂತಹವರ ಯೋಚನೆಗೂ ನಿಲುಕದಂತಹದ್ದು. ಸಂಗೀತ ಸಭೆಗೆ ಹೋದರೂ ತಮ್ಮ ಮಿದುಳಿನ ಉನ್ನತ ಪ್ರಜ್ಞೆಯನ್ನು ಪ್ರಚೋದಿಸುವಂತಹ ಸಂಗೀತವನ್ನಷ್ಟೆ ಇವರು ಕೇಳುವರು. ಸಂಕೀರ್ಣ ಶ್ರುತಿ, ರಾಗಗಳಿರುವ ಶಾಸ್ತ್ರೀಯ ಸಂಗೀತವನ್ನು ಕೇಳುವರೇ ಹೊರತು ಹೆಜ್ಜೆಕುಣಿಸುವಂತಹದ್ದನ್ನಲ್ಲ. ವ್ಯತಿರಿಕ್ತವಾಗಿ ಬುಡಕಟ್ಟಿನ ಜನಪದ ಸಂಗೀತ, ಜನಪ್ರಿಯ ಸಂಗೀತ ಹಾಗೂ ನೃತ್ಯಸಂಗೀತಗಳಲ್ಲಿ ಕಲಾವಿದರು ಹಾಗೂ ಪ್ರೇಕ್ಷಕರನ್ನು ಕುಣಿಸುವಷ್ಟು ಲಯವಿರುತ್ತದೆ. ರೇವ್ ಸಂಗೀತಗಳಲ್ಲಿ ಕಾಣುವುದು ಇದರ ಪರಾಕಾಷ್ಠ ರೂಪ. ಕಿವಿಗಡಚಿಕ್ಕುವ ಬಡಿತವನ್ನು ಬಿಟ್ಟರೆ ಇದರಲ್ಲಿ ವೈವಿಧ್ಯದ ಸುಳಿವೂ ಇರುವುದಿಲ್ಲ. ಇಂತಹ ಬಡಿತದ ಪ್ರಭಾವಕ್ಕೊಳಗಾದ ಕೇಳುಗರು ಓಲಾಡಿ, ಗಿರಕಿ ಹೊಡೆಯುತ್ತಾ ತಲುಪುವ ಸ್ಥಿತಿ ಇದೆಯಲ್ಲ ಅದು ಬೌದ್ಧಿಕ ಚರ್ಚೆಗಳಿಂದ ಬಲು ದೂರವಿರುವಂತದ್ದು. ಲಯಸುಖದ ಅಪ್ಪಟ ರೂಪ.
ಈ ಬಗೆಯ ಖುಷಿಯ ಭೌತಿಕ ಮೂಲ ದೇಹದಲ್ಲಿ ಎಂಡಾರ್ಫಿನ್ ಗಳ ಪ್ರಮಾಣವನ್ನು ಹೆಚ್ಚಿಸುವ ಚಯಾಪಚಯ ಕ್ರಿಯೆಯಲ್ಲಿ ಅಡಗಿದೆ. ಎಂಡಾರ್ಫಿನ್ ಗಳು ದೇಹದ ನೈಸರ್ಗಿಕ ನೋವು ಶಮನಕಗಳು. ರಾಸಾಯನಿಕವಾಗಿ ಮಾರ್ಫಿನ್ ಗೆ ಸಂಬಂಧಿಸಿದವು (ಎಂಡಾರ್ಫಿನ್ ಎನ್ನುವ ಹೆಸರು ಎಂಡೋಜೆನಸ್ – ಆಂತರಿಕ – ಮಾರ್ಫಿನ್ ಎನ್ನುವದರ ಹೃಸ್ವರೂಪ). ಇವು ಸುಖೋನ್ಮಾದದ ಭಾವವನ್ನು ಹುಟ್ಟು ಹಾಕುತ್ತವೆ. ದೇಹವು ಲಯಖುಷಿಯ ಉಚ್ಛ್ರಾಯ ಸ್ಥಿತಿಯನ್ನು ತಲುಪಿದಾಗ ಇವುಗಳ ಪ್ರಚೋದನೆಯೂ ತಟಕ್ಕನೆ ಹೆಚ್ಚುತ್ತದೆ. ಇದಕ್ಕೇ “ಓಟಗಾರನಿಗೆ ಬರುವ ಮತ್ತಿನಂತಹ ಮದ” (ರನ್ನರ್ಸ್ ಹೈ – ಓಟದ ಮದ) ಹಾಗೂ ಕೆಲವು ಆರೋಗ್ಯ ವ್ಯಸನಿಗಳು ವ್ಯಾಯಾಮಕ್ಕೆ ದಾಸರಾಗುವುದಕ್ಕೂ ಕಾರಣ ಎನ್ನುವ ವಿವರಣೆ ಇದೆ. ಅಮೆರಿಕೆಯ ಜಾರ್ಜಿಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ಸಂಶೋಧನೆಗಳು ವ್ಯಾಯಾಮದಂತಹ ಚುರುಕು ಚಟುವಟಿಕೆಗಳಿಂದಾಗಿ ಸುರಿದ ಮತ್ತೊಂದು ರಾಸಾಯನಿಕ ಈ ಓಟದ ಮದವನ್ನುಂಟು ಮಾಡುವುದರಲ್ಲಿ ಪ್ರಮುಖ. ಇದು ಇತ್ತೀಚೆಗೆ ಶೋಧವಾದ ನೋವು ನಿಯಂತ್ರಿಸುವ ಆನಂದಾಮೈಡ್ (ಈ ಪದ ಸಂಸ್ಕೃತದ ಆನಂದ ಪದದಿಂದ ಹೊಮ್ಮಿದ್ದು). ಈ ವಸ್ತುವಿಗೂ ಮತ್ತುಂಟು ಮಾಡುವ ಗಾಂಜಾದ ಘಟಕಕ್ಕೂ ನಿಕಟ ಸಂಬಂಧವಿದೆಯೆಂಬುದನ್ನೂ ಈ ಸಂಶೋಧನೆಗಳು ತೋರಿಸಿವೆ.
ವ್ಯಾಯಾಮ ವ್ಯಸನಿಯ ಆನಂದವೂ, ಗಾಂಜಾ ಸೇವಿಸುವವನ ಮತ್ತೂ ಒಂದೇ ರೀತಿಯವು ಎಂಬುದು ಸಂಶೋಧಕರ ಅನಿಸಿಕೆ. ಹಾಗಂತ ಗಾಂಜಾ ಸೇವನೆಯ ಬಗ್ಗೆ ನೀಡುವ ಎಚ್ಚರಿಕೆಯನ್ನು ವ್ಯಾಯಾಮದ ಬಗ್ಗೆಯೂ ನೀಡಬಾರದೇಕೆ ಎನ್ನುವ ಪ್ರಶ್ನೆ ನೀವು ಕೇಳಿದರೆ ಅದು ನಿರೀಕ್ಷಿಸಿದ್ದೇ. ಈ ಬಗ್ಗೆ ವಿಜ್ಞಾನಿಗಳು ನೀಡುವ ವಿವರಣೆ ಇದು. ವ್ಯಾಯಾಮದ ಸಂದರ್ಭದಲ್ಲಿ ಆನಂದಾಮೈಡ್ ಸೃಷ್ಟಿಯಾಗಲು ಕಾರಣವಿದೆ. ಆ ಸಂದರ್ಭದಲ್ಲಿ ದೇಹ ಒತ್ತಡಗಳನ್ನು ಎದುರಿಸುವುದರಿಂದ ಈ (ಆನಂದಾಮೈಡ್) ವ್ಯವಸ್ಥೆ ಉಪಯುಕ್ತ. ಗಾಂಜಾ ಸೇವನೆಯ ಕಥೆಯೇ ಬೇರೆ. ಇದು ದೈಹಿಕ ವ್ಯವಸ್ಥೆಯ ಅಸಹಜವಾದ ದುರ್ಬಳಕೆ. ಇಂತಹ ಬಳಕೆಗೆಂದು ಇದು ವಿಕಾಸವಾದದ್ದಲ್ಲ.
__________________________________________________
There is a special kind of happiness associated with intensely rhythmic activities. We see this in music, dancing, singing, aerobics, gymnastics, athletics and even in such odd activities as revivalist religious celebrations, synchronized swimming, dervish whirling, voodoo possession rituals, and military marching. Wherever a human activity involves a ‘beat’, there is the potential for finding oneself carried off into a strangely vertiginous sense of euphoria. All intellectual control is abandoned and given over to the tyranny of the beat. There is a sudden surge of pleasure as the rhythm takes hold and all else is momentarily forgotten. Sharing this with others helps to intensify the experience.
The fans at the pop concert, with their arms in the air, swaying together from side to side; the football fans chanting and clapping in synchrony in support of their team; the goose-stepping soldiers on ceremonial duty; the bible-belt faithfUl swinging back and forth as they pray together; the health fanatics prancing together aerobically in the gymnasium in search of the ‘burn’: all experience a unique kind of rhythmic happiness that has a special quality they find hard to define.
Essentially it has to do with giving oneself up to a primitive physical sensation in which the brain switches off the higher centres for a while (and with that switchingoff, temporarily removes all the usual cares and worries of the day) and allows the muscles of the body to enjoy a long series of evenly repeated actions. Of course, our very lives are rhythmically controlled: by our heartbeat and breathing rate. As babies we were comforted by being rocked back and forth in our cradles or in our parents’ arms. It follows that if, as adults, we start to move our whole bodies in the same way, we are tapping into something truly primeval.
Some people manage to go through their whole lives without ever giving themselves over to this particular kind of happiness. They are the ones who cannot face the thought of even briefly abandoning their intellectual controls and ‘letting go’. For them, the very concept of rhythmic happiness will be alien to their thinking. Even if they attend a musical concert it will be to listen to music that excites the higher centres of their brains: orchestral music without a steady beat and with complex variations in speed and pattern. By contrast, the simpler folk-music of every tribal gathering, dance hall, or pop concert will, despite its thematic variations, rely heavily on imposing a set rhythm on both its performers and its listeners. In the most extreme form, found at ‘rave’ concerts, there is little thematic variation left. the music having been simplified to little more than a deafening, thumping beat. Under its insistent bombardment, the ravers sway and gyrate in a state that is as far removed from intellectual debate as it is possible to get. This is rhythmic happiness at its most pure.
Underlying this type of happiness is a physiological reaction of the body involving an increase in the release of endorphins. These are the body’s natural painkillers, chemically related to morphine, (the word ‘endorphin’ is a contraction of ‘endogenous morphine’, meaning ‘the body’s natural morphine’), and their impact is to create a mood of euphoric well-being. Their activation improves dramatically as the body reaches its highest state of intense rhythmic expression, and this fact has been used to explain the existence of what is called ‘the runner’s high’ – and also why some exercise-fanatics become so addicted to their energetic work-out regimes. Research at the Georgia Institute of Technology in America has, however, suggested that a different chemical, also released by energetic rhythmic activities, is the key factor involved in creating ‘the rurmer’s high’. It is a recently discovered pain regulator called ‘anandamide’ (a term derived from the Sanskrit word meaning ‘internal bliss’), and it has been pointed out that this substance is closely related to the active ingredient in cannabis.
The researchers therefore suggest that the happiness ‘high’ of the exercise fanatic and the happiness ‘high’ of the cannabis smoker are very similar. Anticipating, perhaps with some alarm, that this discovery might mean that warnings against cannabis-use might now also have to be applied to energetic exercise regimes, they have been quick to issue a denial of this, stating: In exercise, there is a reason why the [anandamide] system is activated. One has to deal with a physical stressor and the [ anandamide] system fulfills its purpose. Smoking marijuana is a different story. This is an unnatural abuse of the system, not intended to be used this way by evolution.
ನಿಮ್ಮದೊಂದು ಉತ್ತರ