ನೋವಿನ ಸುಖ
ಆತ್ಮ ಪೀಡಕ
ಸಮಚಿತ್ತ ಹಾಗೂ ಪ್ರಸನ್ನ ಚಿತ್ತವಿರುವ ಯಾವನಿಗೂ ಇದೊಂದು ಸಂತೋಷದ ಬಗೆಯೆನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಬಹುದು. ನೋವೇ ಸುಖವೆಂದು ತಿಳಿಯುವ ಮನಸ್ಸು ಉಂಟಾಗುವುದು ಸಾಧ್ಯವೇ? ದೈಹಿಕ ಅಥವಾ ಮಾನಸಿಕ ಅಪಾಯಗಳು ಎದುರಾದಾಗ ಮಿದುಳನ್ನು ಎಚ್ಚರಿಸಲು ನೋವಿನ ಸಂಕೇತಗಳನ್ನು ಕಳಿಸುವ ವ್ಯವಸ್ಥೆ ನಮ್ಮಲ್ಲಿ ವಿಕಾಸವಾಗಿದೆ. ಮಕ್ಕಳಾಗಿದ್ದಾಗ ಬಿಸಿಯಾಗಿರುವುದರಿಂದ ಅಥವಾ ಮಾನಸಿಕವಾಗಿ ನೋವುಂಟು ಮಾಡುವ ಸಂದರ್ಭಗಳಿಂದ ದೂರವಿರುವುದನ್ನು ಅತಿ ಶೀಘ್ರವಾಗಿ ಕಲಿಯುತ್ತೇವೆ. ಇದು ಗಾಯ ಅಥವಾ ಅಪಾಯದಿಂದ ತಪ್ಪಿಸಿಕೊಳ್ಳಲು ಇರುವ ಪ್ರಮುಖ ಆತ್ಮರಕ್ಷಣೆ. ನಮ್ಮ ಉಳಿವಿಗೆ ಬೇಕಾದ ಅತ್ಯಂತ ಮೂಲವಾದ ರಕ್ಷಣಾ ವಿಧಾನ ಇದು. ಕೆಳಸ್ತರದ ಜೀವಿಗಳಲ್ಲೂ ಇದು ಇರುವುದನ್ನು ಕಾಣಬಹುದು. ಹಾಗಿದ್ದರೂ, ಕೆಲವು ವಿಲಕ್ಷಣ ವ್ಯಕ್ತಿಗಳು ಈ ವ್ಯವಸ್ಥೆಯನ್ನು ತಲೆಕೆಳಗಾಗಿಸಿ ನೋವಿನಿಂದಲೇ ಉತ್ಕಟ ಸಂತಸದ ಸ್ಥಿತಿಗೇರುವ ಹಾದಿಯನ್ನು ಹುಡುಕಿಕೊಳ್ಳುತ್ತಾರೆ. ತಮ್ಮನ್ನು ಕಟ್ಟಿ ಹಾಕಿಕೊಂಡು, ಥಳಿಸಿಕೊಳ್ಳುವುದು ಹಾಗೂ ಬೇರೆ ರೀತಿಯ ವಿಚಿತ್ರ ಆತ್ಮಪೀಡನೆಯ ಆಚರಣೆಗಳ ಮೂಲಕ ದೈಹಿಕವಾಗಿ ಹಿಂಸೆ ಕೊಟ್ಟಿಕೊಳ್ಳುತ್ತಾರೆ. ಇದು ಅತಿ ಅಪರೂಪವಾದ ಸಂತಸದ ಬಗೆ. ಆದರೆ ಅದನ್ನು ಅನುಭವಿಸುವವರಿಗೆ ಅದು ಅವಗಣಿಸಲಾರದಂತಹ ಪ್ರಮುಖ ಬಗೆ.
ಸ್ವಲ್ಪ ಕಡಿಮೆ ತೀವ್ರತೆಯದ್ದು ಅತಿಸಭ್ಯತೆ ಹಾಗೂ ಅತಿ ಸಂಪ್ರದಾಯತನ ತೋರುವ ಮಾನಸಿಕ ಆತ್ಮಪೀಡನೆ . ಇಂತಹವರುಗಳಿಗೆ ಆತ್ಮಖಂಡನೆಯಲ್ಲಿ ಖುಷಿ ಕಾಣುತ್ತದೆ. ಯಾವುದೇ ಲೋಲುಪತೆಯನ್ನೂ ಅಸಹ್ಯವೆಂದೂ, ಕೆಟ್ಟದ್ದೆಂದೂ ಪರಿಗಣಿಸುವ ಮನೋಭಾವ ಇವರಲ್ಲಿರುತ್ತದೆ. ಚಾಕೊಲೇಟ್ ಅಥವಾ ಐಸ್ಕ್ರೀಮ್ ಸೇವನೆ ತುಸು ಖುಷಿ ಕೊಡುವ ವಸ್ತುಗಳಾದರೆ ಎಷ್ಟೇ ಕಷ್ಟವೆನ್ನಿಸಿದರೂ ಅವನ್ನು ನಿರಾಕರಿಸಲೇ ಬೇಕು ಎನ್ನುವವರು. ಇನ್ನು ಕಾಮ, ಭೋಗ ಹಾಗೂ ಭೋಜನದಂತಹ ಮಹಾಸುಖಗಳಂತೂ ಸಂಪೂರ್ಣ ನಿಷಿದ್ಧ. ಮದ್ಯಪಾನವೂ ಜನರಿಗೆ ಖುಷಿ ತರುವುದರಿಂದ ಅದನ್ನೂ ನಿಷೇಧಿಸಬೇಕು. ಭೋಗವಿರೋಧಿಗಳ ಆತ್ಮಪೀಡಕ ಖುಷಿಯ ಪರಿ ಇದು. ಬದುಕನ್ನು ಎಷ್ಟು ಕಟ್ಟುನಿಟ್ಟಿನ, ಎಷ್ಟೂ ಕಟ್ಟುನಿಟ್ಟಿನ, ನಿರಾಡಂಬರ, ಪ್ರತಿಷೇಧದ್ದನ್ನಾಗಿಸುತ್ತೇವೋ ಇವರ ಖುಷಿ ಅಷ್ಟೇ ಹೆಚ್ಚುತ್ತದೆ. ಇವರ ಖುಷಿಯ ಮೂಲ ಸಾಮಾನ್ಯವಾಗಿ ತಾವು ಅನುಭವಿಸದೇ ಇರುವುದನ್ನು ಬೇರೆಯವರು ಅನುಭವಿಸುತ್ತಿದ್ದಾರಲ್ಲ ಎನ್ನುವುದರಲ್ಲಿದೆ. ತಮಗೆ ಅನುಭವಿಸಲಾಗದೆನ್ನಿಸಿದರೆ ಅಂತಹುದು ಆಕರ್ಷಣೀಯಾಗುವುದು ಹೇಗೆ? ಆದ್ದರಿಂದ ಇಂತಹವುಗಳನ್ನು ನಿರಾಕರಿಸುವುದರಿಂದ ತಾವು ಹೆಚ್ಚು ಪವಿತ್ರವೆನ್ನಿಸುತ್ತೇವೆಂದು ಭಾವಿಸುತ್ತಾ ಖುಷಿ ಪಡುತ್ತಾರೆ. ಸುಖದ ಪ್ರತಿಯೊಂದು ಅಂಶವನ್ನೂ ನಿರಾಕರಿಸಿದಾಗಲೂ ಅವರಲ್ಲಿ ಅಪ್ಪಟ ಆತ್ಮರತಿಯ ಬುಗ್ಗೆಯೇಳುತ್ತದೆ. ಒಮ್ಮೆ ಆರಂಭವಾಯಿತೆಂದರೆ ಸಾಕು ಇದು ಚಾಟಿಯಿಂದ ಹೊಡೆದುಕೊಳ್ಳುವ ಮಟ್ಟದ ಆತ್ಮಪೀಡನೆಗೋ ಅಥವಾ ಈ ಮಾನಸಿಕ ಆತ್ಮಪೀಡಕನನ್ನು ಮಾನವನ ಇರವಿಗೇ ಅಪಮಾನವೆನ್ನಿಸುವ ನಿಸ್ತೇಜ ಬದುಕಿನ ಮಟ್ಟಕ್ಕೋ ಬಲು ಬೇಗನೆ ಇಳಿದುಬಿಡಬಹುದು.
ಅತಿ ನೇಮಿಷ್ಠರು ಹೀಗೆ ಮಾಡಿಕೊಳ್ಳುವುದು ಅವರ ಇಚ್ಛೆ, ಅವರ ದುರಾದೃಷ್ಟ ಎಂದುಕೊಳ್ಳಬಹುದು. ಆದರೆ ಇದು ಇಲ್ಲಿಗೇ ನಿಲ್ಲುವುದಿಲ್ಲ. ಈ ಬಗೆಯ ಭೋಗವಿರೋಧ ಆತನ ಅಥವಾ ಆಕೆಯ ಮಟ್ಟಿಗಷ್ಟೆ ಸೀಮಿತವಾಗಿದ್ದರೆ ಸರಿ. ಆದರೆ ಬಹುತೇಕ ಸಂದರ್ಭಗಳಲ್ಲಿ ಇವನ್ನು ಇತರರ ಮೇಲೆ ಹೇರುವದೂ ನಡೆಯುತ್ತದೆ. ಈ ಘಟ್ಟದಲ್ಲಿ ಅದು ಸಾಮಾಜಿಕವಾಗಿ ಹಾನಿಕಾರಕವಾದಂತ ಬಲವಂತ ಹೇರಿಕೆಯಾಗುತ್ತದೆ. ಇದನ್ನು ಅಮೆರಿಕೆಯ ಪತ್ರಕರ್ತ ಎಚ್. ಎಲ್ ಮೆಂಕೆನ್ ಸೊಗಸಾಗಿ ವಿವರಿಸಿದ್ದಾನೆ. “ಮಡಿವಂತ-ಸಂಪ್ರದಾಯಸ್ತರ ನಡವಳಿಕೆಗೆ ಇರುವ ಒಂದೇ ಒಂದು ಪ್ರಾಮಾಣಿಕ ಕಾರಣವೆಂದರೆ ಅದು ಖುಷಿಯ ಸಾಮರ್ಥ್ಯ ಹೆಚ್ಚಿರುವ ಮಾನವನನ್ನು ಶಿಕ್ಷಿಸುವುದಷ್ಟೆ. ಮಡಿವಂತಿಕೆ ಯಾವಾಗ ದೇಶವನ್ನು ಆಳಲು ಆರಂಭಿಸಿತೆಂದರೆ ಹೆಚ್ಚೆಚ್ಚು ನಿಷೇಧಗಳ ದಬ್ಬಾಳಿಕೆ ಬಂತೆಂದೇ ಅರ್ಥ. ಮಾನವನ ಸುಖಗಳನ್ನು ಹಾದರ, ಲಂಪಟ ಹಾಗೂ ಲೋಭಿತನವೆಂದು ಚಿತ್ರಿಸಲಾಗುತ್ತದೆ. ಕಾಮುಕ ಹಾಗೂ ಹಾದಿತಪ್ಪಿದವರೆಂಬ ಆರೋಪವನ್ನು ಹೊರಬೇಕಾಗಬಹುದೆನ್ನುವ ಭೀತಿಯಿಂದ ಸಮಾಜದ ನೇತಾರರೂ, ಜನಪ್ರಿಯ ವ್ಯಕ್ತಿಗಳೂ (ವೈಯಕ್ತಿಕವಾಗಿ ಅದರ ಬಗ್ಗೆ ವಿರೋಧವಿದ್ದರೂ) ತಮ್ಮ ಸುತ್ತಲೂ ಆವರಿಸಿರುವ ಸಾಂಪ್ರದಾಯಿಕತೆಯನ್ನು ಬೆಂಬಲಿಸುವುದು ಅವಶ್ಯವೆಂದು ತಿಳಿಯುತ್ತಾರೆ. ಶೀಘ್ರವೇ ಇಡೀ ಸಮುದಾಯವೇ ಈ ಸೋಂಕಿನಿಂದ ನಲುಗಿ, ಭೋಗವಿರೋಧಿಗಳು ಗೆಲುವನ್ನು ಸಾಧಿಸುವರು. ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ನ ಬೆಳವಣಿಗೆ. ಅಲ್ಲಿ ಸಂಗೀತವನ್ನು ಆಲಿಸುವುದು, ಟೆಲಿವಿಷನ್ ನೋಡುವುದು, ನೃತ್ಯ ಹಾಗೂ ಸಿನಿಮಾ ನೋಡುವುದೇ ಮೊದಲಾದ ನಿತ್ಯ ಸಂತೋಷದ ವಿಷಯಗಳನ್ನು ನಿಷೇಧಿಸಲಾಗಿದೆ.
ಈ ಬಗೆಯಲ್ಲಿ ಇತರರ ಮೇಲೆ ಕಷ್ಟವನ್ನು ಹೇರುವುದರಿಂದ ಖುಷಿ ಪಡುವುದು ಮೇಲ್ನೋಟಕ್ಕೆ ಕ್ರೂರ ಪರಪೀಡನೆ ಎನ್ನಿಸಬಹುದು. ಆದರೆ ಅದು ಹಾಗಲ್ಲ. ಇದನ್ನೆಲ್ಲ ನಿಷೇಧಿಸುವವರ ಮೂಲ ಉದ್ದೇಶ ಇತರರನ್ನು ಹಿಂಸೆಗೀಡು ಮಾಡಿ ಖುಷಿ ಪಡುವುದಲ್ಲ. ಬದಲಿಗೆ ತಾವು ಅನುಭವಿಸುತ್ತಿರುವ ಆತ್ಮಪೀಡನೆಯ ಖುಷಿಯನ್ನೇ ಇತರರ ಮೇಲೂ ಹೇರಬೇಕೆನ್ನುವುದಷ್ಟೆ. ಇತರರೂ ತಮ್ಮ ಆತ್ಮಪೀಡನೆಯ ಸಂತೋಷವನ್ನು ಹಂಚಿಕೊಳ್ಳಲಿ ಎಂದು ಅವರು ಭಾವಿಸುತ್ತಾರಷ್ಟೆ. ಈ ರೀತಿಯ ಮಾನಸಿಕ ಆತ್ಮಪೀಡಕರಲ್ಲೂ ಹಲವು ಬಗೆಗಳಿವೆ. ಆರೋಗ್ಯ ವ್ಯಸನಿಗಳು, ಪಥ್ಯಾಹಾರಿಗಳು, ಮದ್ಯದ್ವೇಷಿಗಳು ಹಾಗೂ ‘ವೇಗನ್’ ಗಳು (ವೇಗನ್ = ಪಾಶ್ಚಿಮಾತ್ಯ ಮಾಂಸಾಹಾರಿ ಸಮಾಜದಲ್ಲಿ ಸಸ್ಯಹಾರವೇ ಉತ್ತಮ ಎಂದು ಅದನ್ನು ಪ್ರತಿಪಾದಿಸುವವರನ್ನು ವೇಗನ್ ಗಳೆನ್ನುತ್ತಾರೆ.), ಧೂಮಪಾನ ದ್ವೇಷಿಗಳು ಹಾಗೂ ಬ್ರಹ್ಮಚಾರಿಗಳು ಇವರೊಬ್ಬೊಬ್ಬರಿಗೂ ಬೇರೆಯದೇ ಗುರಿ. ಇದಲ್ಲದೆ ಬದುಕಿನ ಎಲ್ಲ ಅಂಶಗಳಲ್ಲೂ ಸರಳತೆಯನ್ನೇ ಕಾಯ್ದುಕೊಳ್ಳಬೇಕೆನ್ನುವವರೂ ಇದ್ದಾರೆ.
ಭೋಗ ಸುಖದಲ್ಲಿ ಮುಳುಗಿರುವವರು ಅದಕ್ಕಾಗಿ ತುಸು ಬೆಲೆ ತೆರಬೇಕಾಗುತ್ತದೆ ಎನ್ನುವುದು ನಿಜ. ಕಷ್ಟ-ಪ್ರಿಯರಿಗೆ ಈ ಬೆಲೆ ಅತಿ ದುಬಾರಿಯೆನ್ನಿಸಿ, ಅದರ ಬಗ್ಗೆಯೇ ದೂರುತ್ತಿರುತ್ತಾರೆ. ಆದರೆ ಮುಕ್ತವಾಗಿ ಭೋಗಿಗಳಾಗಿರುವವರಿಗಿಂತ ತಾವು ಹೆಚ್ಚು ಆರೋಗ್ಯವಂತರೆನ್ನುವ ಅವರ ಹೇಳಿಕೆಗೆ ಪುರಾವೆ ನೀಡುವ ಅಂಶಗಳಿಲ್ಲವೆನ್ನುವುದನ್ನು ಅವರು ಗಮನಿಸುವುದೇ ಇಲ್ಲ. ಶತಾಯುಷಿಗಳಾಗಿ ಬಾಳಿದವರ ಬದುಕಿನ ಅಧ್ಯಯನಗಳು ಈ ಬಗೆಯ ನಿರಾಕರಣೆಯಿಂದ ದೀರ್ಘಾಯುಸ್ಸು ದೊರೆಯುವುದಿಲ್ಲವೆನ್ನುವುದನ್ನು ತೋರಿಸಿವೆ. ಬದುಕಿನ ಸುಖಗಳನ್ನು ನಿರಾಕರಿಸಲು ಅವಶ್ಯಕವಾದ ಆತ್ಮಪೀಡಕ ಮನೋಭಾವ ಆಯುಸ್ಸನ್ನು ಹೆಚ್ಚಿಸುವುದಕ್ಕಿಂತಲೂ ಕುಗ್ಗಿಸುವುದೇ ಹೆಚ್ಚೆನ್ನಿಸುತ್ತದೆ.
ನೂರು ವರ್ಷಕ್ಕೂ ಹೆಚ್ಚು ಬಾಳಿದವರು ಆಹಾರ, ಪಾನೀಯ ಹಾಗೂ ಇತರೆ ಸುಖಗಳ ವಿಷಯದಲ್ಲಿ ಮುಕ್ತ ಮನಸ್ಸಿನವರಾಗಿರುತ್ತಾರೆ. ಅತಿ ದೀರ್ಘಾಯುಷಿ ಎನ್ನುವ ಖ್ಯಾತಿಯ ಜೀನ್ ಕ್ಲೆಮೆಂಟ್ ಎನ್ನುವ ಫ್ರೆಂಚ್ ಮಹಿಳೆ ಕುಡಿತ, ಧೂಮಪಾನ ಮಾಡುತ್ತಿದ್ದುದಲ್ಲದೆ ಅತಿ ಕೊಬ್ಬಿನ ತಿನಿಸುಗಳಾದ ಫೋಯಿ ಗ್ರಾಸ್ (ಕೊಬ್ಬು ತುಂಬಿದ ಬಾತಿನ ಈಲಿ) ಮತ್ತು ಪ್ರೂವನ್ ಸ್ಟ್ಯೂ (ದನದ ಮಾಂಸದ ತಿನಿಸು) ಗಳನ್ನು ಜೀವನಪರ್ಯಂತ ಸೇವಿಸಿದ್ದಳು. ಅವಳಿಗೆ 117 ವರ್ಷವಾಗಿದ್ದಾಗ ಆಕೆ ಕುಡಿತ ಹಾಗೂ ಧೂಮಪಾನ ಮಾಡದಂತೆ ತಡೆಯಲು ವೈದ್ಯರು ಪ್ರಯತ್ನಿಸಿದರಾದರೂ ಸಾಧ್ಯವಿದ್ದಾಗಲೆಲ್ಲ ಅವರಿಗೆ ಚಳ್ಳೆಹಣ್ಣು ತಿನ್ನಿಸಿ, 122ನೇ ವಯಸ್ಸಿನಲ್ಲಿ ತಾನು ಸಾಯುವವರೆಗೂ ಇವನ್ನು ಸೇವಿಸುತ್ತಿದ್ದಳು.
ನ್ಯಾಯವಾಗಿ ಮೇಡಂ ಕಾಲ್ಮೆಂಟ್ ಈ ಸುಖಗಳನ್ನು ಅನುಭವಿಸುವುದರಲ್ಲಿ ಅತಿ ಭೋಗಿಯಾಗಿರಲಿಲ್ಲ. ಅತಿಯಾಗಿ ತಿಂದು, ಉಂಡು, ಕುಡಿದರೆ ಆರೋಗ್ಯ ಕೆಡುವುದು ಖಂಡಿತ. ಹಾಗೆಯೇ, ವೈರಾಗ್ಯದಿಂದ ಅತಿ ಶಿಸ್ತಿನವರಾದರೂ ಆರೋಗ್ಯದಲ್ಲಿ ತೊಂದರೆಗಳನ್ನು ಎದುರಿಸುವಿರಿ. ಅತಿಯೂ ಅಲ್ಲದೆ ವೈರಾಗ್ಯವೂ ಇಲ್ಲದೆ ಮಿತಿಯಲ್ಲಿರುವುದು ಉತ್ತಮ.
ವೇಗನ್ನರು ಏನೇ ಹೇಳಿದರೂ ಅವರ ಆಹಾರ ವೈವಿಧ್ಯಮಯ ಆಹಾರವನ್ನು ಸೇವಿಸುವವರದ್ದಕ್ಕಿಂತಲೂ ತುಸು ಕೀಳೇ. ಮಾನವರು ಸಸ್ಯಾಹಾರಿಗಳಾಗಿ ವಿಕಾಸವಾಗಲಿಲ್ಲ. ಮಾಂಸದ ಜೊತೆಗೆ ಸಸ್ಯಾಹಾರವನ್ನೂ ಬೆರೆಸಿ ಆರೋಗ್ಯಕರವಾದ ಹಾಗೂ ಮಿಶ್ರಾಹಾರವನ್ನು ಅವರು ಮಾಡಿಕೊಂಡದ್ದರಿಂದ ಅವರು ಸಫಲರಾಗಿದ್ದಾರೆ. ಉದ್ದೇಶಗಳು ಒಳ್ಳೆಯವಾಗಿದ್ದರೂ, ಮಾಂಸವನ್ನು ತ್ಯಜಿಸುವುದೆಂದರೆ ಮಾನವನ ಜೀವಶಾಸ್ತ್ರವನ್ನು ತಿರಸ್ಕರಿಸಿದಂತೆ. ಅತಿಯಾದ ಧೂಮಪಾನ ಮಾರಕವಾದರೂ ಊಟದ ಅನಂತರವೋ ಆಗೊಮ್ಮೆ, ಈಗೊಮ್ಮೆಯೇ ಧೂಮಪಾನ ಮಾಡಿದರೆ ತೊಂದರೆಯೇನೂ ಆಗಲಿಕ್ಕಿಲ್ಲ. ಹೀಗೆಯೇ ಅತಿ ಮದ್ಯಪಾನವೂ ಮಾರಕವೇ. ಆದರೆ ನಿತ್ಯವೂ ಮಿತಿಯಲ್ಲಿ ಒಂದಿಷ್ಟು ಸೇವನೆ ಅನುಕೂಲಕರ. ಒಟ್ಟಾರೆ, ಮಾನಸಿಕ ಆತ್ಮಪೀಡನೆಯ ಖುಷಿಯೇ ಆಧಾರವಾಗಿರುವ ಅತಿ ವೈರಾಗ್ಯ ನೀಡುವ ಲಾಭ ಅದನ್ನು ಪಾಲಿಸುವವರು ನಂಬಿಕೊಂಡದ್ದಕ್ಕಿಂತ ಕಡಿಮೆಯೇ. ಜಿಪುಣ ಹಾಗೂ ಅತಿನಿಷ್ಠತೆಯ ಅವರ ಜೀವನಶೈಲಿ ದೀರ್ಘಾವಧಿಯಲ್ಲಿ ಉಪಕಾರ ಮಾಡುವುದಕ್ಕಿಂತ ಅಪಾಯವನ್ನುಂಟು ಮಾಡುವುದೇ ಹೆಚ್ಚು.
ಆತ್ಮಾಹುತಿ ಮಾಡಿಕೊಳ್ಳುವ ಭಯೋತ್ಪಾದಕರದ್ದು ನಾವು ಇಂದು ನಿರ್ಲಕ್ಷಿಸಲಾಗದ ಆತ್ಮಪೀಡಕ ಖುಷಿಗಳಲ್ಲೊಂದು. ಆತ್ಮಪೀಡನೆಯ ಪರಾಕಾಷ್ಟೆ ಇದು. ತಾನು ವೈರಿ ಎಂದು ಪರಿಗಣಿಸಿದ ಸಮಾಜದ ಸದಸ್ಯರುಗಳನ್ನು ಕೊಲ್ಲಲು ತನ್ನನ್ನೇ ಬಲಿಗೊಡುವ ಧರ್ಮಾಂಧರು ಇವರು. ಈ ಕೃತ್ಯವನ್ನು ಅವರು ಪರಮಾನಂದದ ಸ್ಥಿತಿಯಲ್ಲಿ ಕೈಗೊಳ್ಳುತ್ತಾರೆ. ಈ ಬಗೆಯಲ್ಲಿ ಸಾಯುವುದೆಂದರೆ ತ್ಯಾಗ ಮಾಡಿದಂತೆ. ಇದು ಸ್ವರ್ಗಕ್ಕೆ ಹಾಗೂ ಪುನರ್ಜನ್ಮದಲ್ಲಿ ಸ್ವರ್ಗಸುಖವನ್ನನುಭವಿಸಬಹುದು ಎಂದೆಲ್ಲ ಸಂಪೂರ್ಣವಾಗಿ ಮನಪರಿವರ್ತನೆಯಾದ ಬಾಂಬರು, ಗುಂಡಿಯೊತ್ತಿ ತನ್ನನ್ನು ಸಿಡಿಸಿಕೊಳ್ಳುವ ಕ್ಷಣವಿದೆಯಲ್ಲ ಅದು ಅತ್ಯಂತ ಪರಮಾನಂದದ ಕ್ಷಣ. ಪುನರ್ಜನ್ಮವಿದೆ ಎನ್ನುವುದನ್ನು ಕಲ್ಪಿಸಿದ ಧರ್ಮಗಳೇ ಇದಕ್ಕೆ ಹೊಣೆ.
PAINFUL HAPPINESS
The Masochist
For any well-balanced, cheerful individual, this is the most difficult form of happiness to comprehend. How can anyone develop a state of mind that equates pain with pleasure? Evolution has endowed us with an emergency alarm system that sends pain signals to the brain as a warning that we are physically or mentally at risk. As children, we quickly learn to avoid touching something that is very hot, or exposing ourselves to situations that cause mental agony. This is a vital self-protection system that helps us to escape injury or distress. It is the most basic of all survival systems and one can see it operating even among the lowest forms of animal life. And yet, despite this, some strange human adults turn this system on its head and seek out pain as a means to achieving a state of ecstatic pleasure. In bizarre sado-masochistic rituals, they have themselves tied up and beaten, or physically tormented in other ways. This is a rare form of happiness, but for those involved it means a great deal, and cannot be ignored.
At a lower level of intensity, there is the mental masochism of the puritan and the prude. For these individuals, happiness comes in the form of selfdenial. They develop a mental outlook that sees any form of indulgence as disgusting and wicked. If eating chocolate or ice-cream provides a minor form of pleasure, then they must be avoided at all costs. Major pleasures, such as erotic sex and feasting are strictly forbidden. Alcohol makes people far too happy, so it must be banned. This is the masochistic happiness of the antihedonist. The more frugal, austere and prohibitive life can be made, the greater their happiness. In origin, their attitude is usually born of the early discovery that other people are having fun and they are not. It they cannot have fun, then being funless must somehow be converted into an attractive proposition. They start to deny themselves pleasures and to enjoy the act of denial as a form of spiritual superiority. Each new renouncement of a personal pleasure becomes accompanied by a pang of smugly chaste happiness. This process, once begun, can easily escalate to reach levels of self-flagellation and self-restraint that reduce the life of the mental masochist to a stunted, bleak experience that is a travesty of human existence.
What these puritanical fanatics do to their own lives is their own choice and their own misfortune, but it does not usually stop there. All too often, the extreme abstinence of the anti-hedonist is not confined to his or her own behaviour. Attempts are eventually made to impose it on everyone else as well, and at this point it becomes a pernicious intrusion into the life of society at large. The American journalist, H. L. Mencken, summed this up well when he said, There is only one honest impulse at the bottom of Puritanism, and that is the impulse to punish the man with a superior capacity for happiness: When Puritanism starts to take hold of a whole country, in no time at all there is a growing tyranny of prohibited activities. Human pleasures become painted as debauched, dissolute, extravagant excesses. Public figures and social leaders, fearful of being accused of harbouring wayward or salacious preferences, feel the need to give ( secretly reluctant) support to the waves of puritanical rebellion that they see spreading around them. Before long, the entire culture has become infected and the antihedonists have won. Their special form of masochistic happiness has taken hold. A classic example of this in recent years was the rise of the Taliban in Afghanistan, where even the commonplace sources of daily happiness such as listening to music, watching television, dancing, or visiting the cinema were banned.
Finding fulfilment in imposing misery on others in this way sounds, superficially, rather like sadism, but this is not the case. The primary motive of the prohibitors is not to take pleasure in hurting others, but rather to infect them with the same brand of masochistic happiness that they themselves have come to enjoy. They want to share their self-denial pleasures with everyone else. Mental masochists come in several forms. There are the health fanatics, the diet-slaves, the teetotallers, the vegans, the anti-smokers and the celibates, each with his or her own special focus of interest. And there are others with a more general interest in pursuing the frugal way of life in all its aspects.
Of course, there is often a small price to pay for indulging in the hedonistic pleasures, but for the misery-makers this price becomes exaggerated a thousand times and they dwell on it endlessly. Something they prefer to ignore is that their claim to be generally healthier than unrepentant hedonists is not supported by the facts. A study of people who have managed to live for more than a century has revealed that a greater longevity is not guaranteed by any of the self-denial regimens. Indeed, the masochistic temperament that is needed for selfdenial seems to shorten life rather than extend it.
To be fair, Madame Calment was never excessive in her pursuit of pleasure. Obviously, if you eat, drink or smoke too much, your health will suffer. But equally, if you become obsessively disciplined in your self-denial, you will also run health risks. The ideal solution is moderation, rather than excess or denial.
Typically, the l00-plus individuals seem to be rather free-and-easy in their attitudes towards food. drink and other basic pleasures. Madame Jean Calment, the Frenchwonun who was the oldest person ever to have lived, was drinking cheap. booze, smoking cigarettes and dining on foie gras and Proven stew throughout her long life. When she reached the age of 1 17, an attempt was made to stop her drinking port and smoking, but she did her best to foil her doctors and was still indulging herself whenever she got the chance, right up to her death at the age of 122.
Whatever vegans may claim, their diet is in reality inferior to that of people who enjoy a more varied diet. Human beings did not evolve as vegetarians -they succeeded because they mixed meat and vegetable elements to create a healthy, omnivorous diet. Although the intentions may be good, to avoid meat is to deny human biology. Although heavy smoking is dearly a killer, the occasional cigarette or after-dinner cigar does not appear to do any harm. Again, heavy drinking is also a killer, but a small amount of alcohol each day may be beneficial. So, in the end, the exaggerated self-restraint that provides happiness based on mental masochism appears to be far less rewarding that its practitioners would have you believe. Theirs is a mean-spirited, priggish form of happiness based on a lifestyle that, in the long run, does more harm than good.
Finally, one extreme form of Painful Happiness that sadly cannot be ignored today is the suicidal happiness of the terrorist. This is the ultimate form of self-inflicted pain, where the religious fanatic blows himself (or herself) to bits in order to kill and maim members of the enemy society. This act is carried out in a state of bliss, and the moment of pressing the button is accompanied by a surge of unimaginable happiness, because the brainwashed bomber has been indoctrinated with the idea that to die in this way is the path to holy martyrdom that will ensure a swift passage to a heavenly state of eternal happiness in the afterlife. The religious concept of the afterlife has a lot to answer for.