ಬೆಂಕಿ ಮೊದಲೋ, ರುಬ್ಬುವ ಕಲ್ಲು ಮೊದಲೋ?

14032016

ಆಕರ:

  1. Katherine D. Zink1 & Daniel E. Lieberman1,Impact of meat and Lower Palaeolithic food  processing techniques on chewing in humans ; doi:10.1038/nature16990, Nature published online 9.3.2016
  2. Anon., Food Processing, Nature, Vol. 531, Pp 139, 10.3.2016
  3. Sujatha Gupta, Clever Eating, Nature, Vol. 532, Pp S12-S13, 3.3.2016

ಟಿಪ್ಪಣಿ:

ಪ್ರಕಟಿತ ಲೇಖನದಲ್ಲಿ ಸ್ಥಳಾವಕಾಶವಿಲ್ಲ ಎಂದು ಸಂಪಾದಕರು ಒಂದು ಪ್ಯಾರಾವನ್ನು ತೆಗೆದು ಹಾಕಿದ್ದಾರೆ.  ಇದು “80 ಕಿಲೋ ಭಾರ ಹೇರಿದಷ್ಟು ಬಲ..” ಎಂದು ಕೊನೆಗೊಳ್ಳುವ ಪ್ಯಾರಾದ ಮುಂದುವರಿಕೆ.

ನಮ್ಮ ದವಡೆಗಳಿಗೆ ಅಷ್ಟು ಬಲವನ್ನುಒದಗಿಸುವ ಸಾಮರ್ಥ್ಯವಿಲ್ಲ.  ಇರೆಕ್ಟಸ್ ನದ್ದಕ್ಕೆ ಕೂಡ. ಹಾಗಿದ್ದರೆ ಆಗಿನ ಕಾಲದಲ್ಲಿ ಆಹಾರವನ್ನು ಜೀರ್ಣವಾಗಿಸುವುದಕ್ಕೆ ಯಾವ  ಉಪಾಯಗಳಿದ್ದುವು? ಈ ಪ್ರಶ್ನೆಯನ್ನು ಉತ್ತರಿಸಲು ಕ್ಯಾಥರೀನ್ ಮತ್ತು ಡೇನಿಯಲ್ ಮೂರು ಪ್ರಯೋಗಗಳನ್ನು ಮಾಡಿದ್ದಾರೆ. ಮಾಂಸ, ಸಿಹಿಗೆಣಸು, ಕ್ಯಾರಟ್, ಬೀಟ್ ರೂಟ್ ಗಳಂತಹ  ಅರೆಯಲೇ ಬೇಕಾದ ಆಹಾರಗಳನ್ನು ಸಣ್ಣಗೆ ಹೋಳುಗಳನ್ನಾಗಿ ಮಾಡಿಯೋ, ಸುಟ್ಟೋ, ಅರೆದೋ, ಜಜ್ಜಿಯೋ ತಿನ್ನಲು ಕೊಟ್ಟಿದ್ದಾರೆ.ಸುಡಲು ಬೆಂಕಿ ಹಾಗೂ ಕತ್ತರಿಸಲು ಮತ್ತು ಜಜ್ಜಲು ಇರೆಕ್ಟಸ್ ನ ಕಾಲದಿಂದ ದೊರೆತ ಕಲ್ಲುಗಳನ್ನೇ ಬಳಸಿದ್ದಾರೆ.ಇವನ್ನು ತಿನ್ನವುದಕ್ಕೆ ಕೊಟ್ಟು, ತಿನ್ನುವವರ ದವಡೆಗೆ ಬಲಪತ್ತೆ ಸಾಧನಗಳನ್ನು ಅಳವಡಿಸಿ ಎಷ್ಟೆಷ್ಟು ಬಲ ಪ್ರಯೋಗಿಸಲಾಯಿತು, ಎಷ್ಟೆಷ್ಟು ಬಾರಿ ಅಗಿಯಲಾಯಿತು ಎಂದು ವಿವರವಾಗಿ ಗಮನಿಸಿದ್ದಾರೆ. ಅನಂತರ ಅಗಿದ  ಆಹಾರವನ್ನು ಉಗುಳಲು ಹೇಳಿ, ಅದೆಷ್ಟು ಶಿಥಿಲವಾಗಿದೆ, ಅರಗಿದೆ ಎಂದು ಪರೀಕ್ಷಿಸಿದ್ದಾರೆ. ಇವುಗಳಿಂದ ದೊರೆತ ಮಾಹಿತಿಯನ್ನು ಕಂಪ್ಯೂಟರ್ ನಲ್ಲಿ ಗಣಿಸಿ ಅರೆದರೆ ಚೆನ್ನವೋ, ಸುಟ್ಟರೆ ಚೆನ್ನವೋ, ಜಜ್ಜಿದರೆ ಚೆನ್ನವೋ ಎಂದು ಲೆಕ್ಕಿಸಿದ್ದಾರೆ.

ಈ ಪ್ಯಾರಾವನ್ನು ಕೂಡಿಸಿಕೊಂಡು ಓದಿದರೆ ಏನಾದರೂ ಬದಲಾವಣೆ ಕಂಡಿತೇ? ಈ ಪ್ಯಾರಾ ಅನವಶ್ಯಕವೇ? ಇದಿಲ್ಲದಿದ್ದಾಗ ಕಂಡ ಅರ್ಥಕ್ಕೂ, ಇದನ್ನು ಕೂಡಿಸಿದಾಗ  ಹೊಳೆದ ಅರ್ಥಕ್ಕೂ ವ್ಯತ್ಯಾಸವಿದೆಯೇ? ಕಮೆಂಟಿಸಿ.

Published in: on ಮಾರ್ಚ್ 14, 2016 at 6:18 ಫೂರ್ವಾಹ್ನ  Comments (2)  

The URI to TrackBack this entry is: https://kollegala.wordpress.com/2016/03/14/%e0%b2%ac%e0%b3%86%e0%b2%82%e0%b2%95%e0%b2%bf-%e0%b2%ae%e0%b3%8a%e0%b2%a6%e0%b2%b2%e0%b3%8b-%e0%b2%b0%e0%b3%81%e0%b2%ac%e0%b3%8d%e0%b2%ac%e0%b3%81%e0%b2%b5-%e0%b2%95%e0%b2%b2%e0%b3%8d%e0%b2%b2/trackback/

RSS feed for comments on this post.

2 ಟಿಪ್ಪಣಿಗಳುನಿಮ್ಮ ಟಿಪ್ಪಣಿ ಬರೆಯಿರಿ

  1. “80N ಬಲ ಒದಗಿಸುವ ಸಾಮರ್ಥ್ಯ ಇಲ್ಲ ” ಎನ್ನುವುದಕ್ಕೆ ಅಗತ್ಯವಾದ ಪುರಾವೆ ತೆಗೆದು ಹಾಕಿದ para ದಲ್ಲಿರುವುದರಿಂದ ಆ para ಪ್ರಕಟವಾಗಿದ್ದರೆ ಚೆನ್ನಾಗಿರುತ್ತಿತ್ತು….

    ಲೇಖಕರ ಅನುಮತಿಯಿಲ್ಲದೆ ಲೇಖನ ಮಾರ್ಪಾಡು ಮಾಡುವ ಸ್ವಾತಂತ್ರ್ಯ ಸಂಪಾದಕರಿಗೆ ಇದೆಯೇ?ವೈಜ್ಞಾನಿಕ ಲೆಖನಗಳಿಗೆ ಸಂಪಾದಕರು ಹಸ್ತಕ್ಷೇಪ ಮಾಡಬಾರದು ಎನ್ನುವುದು ನನ್ನ ಅಭಿಪ್ರಾಯ

  2. ನಿಜ. ಲೇಖಕರ ಅನುಮತಿ ಇಲ್ಲದೆ ಲೇಖನ ಮಾರ್ಪಾಡು ಮಾಡಬಾರದು ಎನ್ನುವುದು ಆದರ್ಶ ಸ್ಥಿತಿ. ವಾಸ್ತವದಲ್ಲಿ ಸಂಪಾದಕರಿಗೆ ಈ ಅನಿವಾರ್ಯತೆ ಇದೆ. ಇದು ಅವರ ಹಕ್ಕೂ ಹೌದು. ಆದರೆ ವಿಜ್ಞಾನ ಬರೆಹಗಳನ್ನು ತಿದ್ದುವಾಗ, ಮಾಹಿತಿ ಪರಿಪೂರ್ಣವಾಗುವಂತೆ, ಅನಗತ್ಯವಾದುದನ್ನಷ್ಟೆ ತೆಗೆದು ಹಾಕಬೇಕಾಗುತ್ತದೆ. ಇಲ್ಲಿ ಕತ್ತರಿಸಿರುವ ಪ್ಯಾರಾ ಇಲ್ಲದಿದ್ದರೂ ಒಟ್ಟಾರೆ ಲೇಖನ ಮನದಟ್ಟಾಗುತ್ತದೆ. ಸೂಕ್ಷ್ಮ ವಿವರಗಳು ಇಲ್ಲ ಅಷ್ಟೆ. ಲೇಖನಗಳಲ್ಲಿ ಸಂಪಾದಕರು ಹಸ್ತಕ್ಷೇಪ ಮಾಡಬಾರದು ಎಂದರೆ ಅವರ ಅಗತ್ಯವೇ ಇಲ್ಲ ಎನಿಸುವುದಿಲ್ಲವೇ?


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: