ಸಂತೋಷದ ಸ್ವರೂಪ – ಸಂತೋಷದ ಬಗೆ 6

ಕಾಮ ಖುಷಿ

ಭೋಗಿ/ರಸಿಕ

ನಿಮಗೆ ಸಂತಸವನ್ನು ತರುವ ಕ್ಷಣಗಳಾವುವು ಅಂತ ಕೇಳಿದರೆ ಬಹಳಷ್ಟು ಜನ ರುಚಿಕಟ್ಟಾದ ಊಟ ಮಾಡಿದ್ದನ್ನೋ, ಲೈಂಗಿಕ ಅನುಭವವನ್ನೋ ಅಥವಾ ಬೇರಾವುದಾದರು ದೈಹಿಕ ಸುಖವನ್ನೋ ಕುರಿತು ಹೇಳುತ್ತಾರೆ. “ಒಳ್ಳೆಯ ಪಾನಗೃಹವೆಂದರೆ ಖುಷಿಯ ವಿಷಯ” ಎಂದಿದ್ದಾರೆ ಡಾ. ಜಾನ್ಸನ್. ಭೋಗಿಗಳ ಪ್ರಕಾರ ನಾವೆಲ್ಲ ಇಂತಹ ಮೂಲಭೂತ ಜೈವಿಕ ಸುಖಗಳಿಗೆ ಆದಷ್ಟು ಬಾರಿ, ಆದಷ್ಟೂ ತೀವ್ರತೆಯಿಂದ ಶರಣಾಗಬೇಕು. ಈ ಭೋಗದ ಸುಖಗಳಲ್ಲಿ ಕಾಮೋದ್ರೇಕದ ಪರಾಕಾಷ್ಟೆಯೇ ಅತೀವ ಉತ್ಕಟವಾದದ್ದು ಎನ್ನುವುದನ್ನು ಯಾರೂ ಪ್ರಶ್ನಿಸುವುದಿಲ್ಲ. ಸಂತಾನೋತ್ಪತ್ತಿಯ ಈ ಪ್ರಮುಖ ಕ್ಷಣದ  ಮಹಾನ್ ಸುಖವನ್ನು ಅನುಭವಿಸದ ಜೀವಿಯಿಲ್ಲ. ಮಂಗ ಹಾಗೂ ವಾನರಗಳಂತಹ ನಮ್ಮ ಬಂಧುಗಳಲ್ಲಿ ಕಾಮೋದ್ರೇಕದ ಪರಾಕಾಷ್ಟೆ ಎನ್ನುವುದು ಕೇವಲ ಗಂಡಿಗಷ್ಟೆ ಸೀಮಿತ. ಆದರೆ ಮನುಷ್ಯರಲ್ಲಿ ಇದು ಹೆಣ್ಣಿನಲ್ಲೂ ಆಗುತ್ತದೆ. ಈ ವ್ಯತ್ಯಾಸಕ್ಕೆ ಕಾರಣವಿರಲೇಬೇಕು. ಮಂಗಗಳು ಹಾಗೂ ವಾನರಗಳ ಹೆಣ್ಣು ತನ್ನ ದೇಹದಲ್ಲಿ ಅಂಡಾಣು ಉತ್ಪತ್ತಿಯಾಗುವ ಸಮಯದಲ್ಲಿ ಬೆದೆಗೆ ಬರುತ್ತದೆ. ಈ ಸಂದರ್ಭದಲ್ಲಿ ಅದರ ಲಿಂಗಾಂಗದ ಸುತ್ತಲಿನ ಜಾಗ ಊದಿಕೊಳ್ಳುತ್ತದೆ. ಗಂಡಿನ ಕಣ್ಣಿಗೆ ತೋರುವಂತೆ ಇರುವುದರಿಂದ ಗಂಡು ಉದ್ರೇಕಗೊಂಡು ಹೆಣ್ಣನ್ನು ಕೂಡಲು ಪ್ರಯತ್ನಿಸುತ್ತದೆ. ವೀರ್ಯ ಸ್ಖಲನವಾದಾಗ (ಬಹುತೇಕ ಕೆಲವೇ ಕ್ಷಣಗಳಲ್ಲಿ ಇದು ಆಗುತ್ತದೆ) ಗಂಡು ಕ್ಷಣಿಕವಾಗಿ ಖುಷಿಯ ಪರಾಕಾಷ್ಟೆಯನ್ನು ತಲುಪುತ್ತಾನೆ. ಆದರೆ ಹೆಣ್ಣು ಇಂತಹ ಪರಾಕಾಷ್ಟೆಯನ್ನು ತಲುಪುವುದೇ ಇಲ್ಲ. ಬೆದೆಯ ಕಾಲ ಮುಗಿಯುವವರೆವಿಗೂ ಹೆಣ್ಣು ಲೈಂಗಿಕವಾಗಿ ಉದ್ರಿಕ್ತವಾಗಿಯೇ ಇರುತ್ತದೆ, ಅನಂತರ ಲಿಂಗಾಂಗದ ಸುತ್ತಲಿನ ಊತ ಕಡಿಮೆಯಾಗುತ್ತದೆ. ಹೆಣ್ಣಿನ ಲೈಂಗಿಕಾಸಕ್ತಿ ಈಗ ಕಡಿಮೆಯಾಗುತ್ತದೆ. ಅದು ಬಸಿರಾಗಿಲ್ಲದಿದ್ದರೆ ಇನ್ನೊಂದು ತಿಂಗಳವರೆಗೂ, ಮರಳಿ ಲಿಂಗಾಂಗಗಳಲ್ಲಿ ಊತ ಕಾಣಿಸುವವರೆಗೂ, ಹೀಗೇ ನಿರಾಕರ್ಷಕವಾಗಿರುತ್ತದೆ.

ಮನುಷ್ಯರಲ್ಲಿ ಬೇರೆಯದೆ ರೀತಿಯ ಸಂಭೋಗ ಕ್ರಿಯೆ ವಿಕಾಸವಾಗಿದೆ. ಹೆಣ್ಣುಗಳ ಲಿಂಗಾಂಗಗಳು ಊದಿಕೊಳ್ಳುವುದಿಲ್ಲ. ಅಂಡೋತ್ಪತ್ತಿಯಾಗುವುದರ ಸೂಚನೆಯೂ ಸಿಗುವುದಿಲ್ಲ. ವಿಚಿತ್ರವೆಂದರೆ ಅಂಡೋತ್ಪತ್ತಿಯ ಕ್ಷಣಗಳನ್ನು ಅವು ಗಂಡುಗಳಿಂದ ಮರೆಮಾಚುತ್ತವೆ. ಜೊತೆಗೆ ಸದಾ ಲೈಂಗಿಕವಾಗಿ ಆಕರ್ಷಕವಾಗಿದ್ದು ಅಂಡೋತ್ಪತ್ತಿಯಾಗದಿರುವಾಗಲೂ ತೀವ್ರ ಕಾಮಾಸಕ್ತಿಯನ್ನು ತೋರುತ್ತವೆ. ಋತುಮತಿಯಾಗಿದ್ದಾಗಲೂ, ಬಸಿರಾಗಿದ್ದಾಗಲೂ ಕೂಡ ಕಾಮೋದ್ರೇಕಗೊಳ್ಳಬಲ್ಲವು. ಇಂಥಹ ಕ್ಷಣಗಳಲ್ಲಿ ನಡೆಯುವ ಸಂಭೋಗ ಖಂಡಿತ ಸಂತಾನೋತ್ಪತ್ತಿಗಲ್ಲವಷ್ಟೆ. ಆದ್ದರಿಂದ ಇದಕ್ಕೆ ಬೇರೇನೋ ಉದ್ದೇಶವಿರಬೇಕು. ಮಾನವನ ವಿಕಾಸದ ಹಾದಿಯಲ್ಲಿ ದಾಂಪತ್ಯದ ಬಂಧವನ್ನು ಭದ್ರಗೊಳಿಸಲು ಹೆಣ್ಣಿನ ಈ ಲೈಂಗಿಕತೆ ನೆರವಾಗಿದೆಯೆನ್ನಿಸುತ್ತದೆ. ಇದುವೇ ನಿಜವಾದ ಕಾಮಕೇಳಿ.

 

ಆಗಲೇ ಹೇಳಿದ ಹಾಗೆ ಮಂಗಗಳು ಹಾಗೂ ವಾನರಗಳು ಸಾಮಾನ್ಯವಾಗಿ ಜೋಡಿಯಾಗುವುದಿಲ್ಲ. ಆದರೆ ಮನುಷ್ಯರು ಜೋಡಿಗಳಾಗಿ ಬದುಕುತ್ತಾರೆ. ಈ ಬಗೆಯ ದೀರ್ಘ ಲೈಂಗಿಕಾಸಕ್ತಿ ಜೋಡಿಯನ್ನು ಜೊತೆಯಾಗಿ ಹಿಡಿದಿಡುವ ಭಾವುಕ ಅಂಟು. ಹೆಣ್ಣು ಅಂಡೋತ್ಪತ್ತಿ ಮಾಡದಿರುವ ಸಮಯದಲ್ಲಿ ಗಂಡಿಗೆ ಸಂಭೋಗದ ಬಹುಮಾನ ದೊರೆಯುತ್ತದೆ. ಅದೇ ಹೆಣ್ಣಿಗೆ ಗಂಡಿಗಾಗುವಷ್ಟೆ ಉತ್ಕಟವಾದ ಉದ್ರೇಕದ ಬಹುಮಾನ. ಹೀಗೆ ಜೈವಿಕ ಸ್ತರದಲ್ಲಿ ಮಾನವನ ಸಂಭೋಗದ ಸಂತಸ ಹೆಚ್ಚಾಗಿದೆ. ಸಾಂಸ್ಕೃತಿಕ ಮೆರುಗು ಇದನ್ನು ಇನ್ನಷ್ಟು ಹೆಚ್ಚಾಗಿಸುತ್ತದೆ. ಸಾಧಾರಣ ಸಂಭೋಗವೆನ್ನುವುದು ಸುಧಾರಣೆಗೊಂಡು ಕಾಮಸೂತ್ರಗಳಾಗಿವೆ. ಮಾನವನ  ಈ ಲೈಂಗಿಕ ಖುಷಿಯ ಕ್ಷಣಗಳನ್ನು ತೀವ್ರಗೊಳಿಸುವಂತಹ ಸಂಭೋಗದ ವಿವಿಧ ಭಂಗಿಗಳನ್ನು ಮಾರ್ಗದರ್ಶಿಗಳು ನೂರಾರು ವರ್ಷಗಳಿಂದ ಲಭ್ಯವಿವೆ. ಮೂರನೇ ಶತಮಾನದ ಭಾರತೀಯ ಕಾಮಸೂತ್ರದಿಂದ ಆರಂಭಿಸಿ ಪಾಶ್ಚಿಮಾತ್ಯ ದಿ ಜಾಯ್ ಆಫ್ ಸೆಕ್ಸ್, ಕಿನ್ಸಿ ವರದಿಗಳಲ್ಲದೆ, ವಿವಿಧ ವಯೋಮಾನದವರು ಬರೆದಿರುವ ಕಾಮಕಥೆಗಳಂತಹ ಸಮೃದ್ಧ ಸಂಪನ್ಮೂಲಗಳು ತಮ್ಮ ಕಾಮಸುಖವನ್ನು ಹೆಚ್ಚಾಗಿಸಿಕೊಳ್ಳಲು ಬಯಸುವವರಿಗೆ  ಸದಾ ಲಭ್ಯ. ಇಂತಹ ಮಾಹಿತಿಯನ್ನು ಮುಚ್ಚಿಡುವ ಪ್ರಯತ್ನಗಳು ಅವನ್ನು ಸುಂದರ ಕಾಮಸೂತ್ರಗಳಿಂದ ಭೂಗತವಾದ ಒರಟು ಲಂಪಟ ಸಾಹಿತ್ಯವನ್ನಾಗಿಸಿವೆಯಷ್ಟೆ.

ಸಂಭೋಗವೆನ್ನುವುದು ನಿಷೇಧಕ್ಕೊಳಪಡಲಾಗದಷ್ಟು ಮೂಲಭೂತವಾದ ಉತ್ಕಟ ಖುಷಿಯ ಸೆಲೆ. ಆಹಾರ ಹಾಗೂ ಪಾನೀಯಗಳ ಕಥೆಯೂ ಇದೇ. ಹಸಿದ ಕ್ಷಣಗಳಲ್ಲಿ ಆಹಾರ ಹಾಗೂ ದಾಹವಾದಾಗ ನೀರು ಕೊಡುವ ಸಂತೋಷ ಕಲ್ಪಿಸಿಕೊಳ್ಳಲೂ ಅಸಾಧ್ಯ. ಅದೃಷ್ಟವಶಾತ್ ಈ ಪರಮಾವಧಿಯನ್ನು ನಾವು ಬಹಳಷ್ಟು ಜನರು ಕಾಣುವುದಿಲ್ಲ. ಆದರೂ ಭೋಜನದ ನಿತ್ಯ ಖುಷಿಯನ್ನು ನಾವೆಲ್ಲರೂ ಅನುಭವಿಸುತ್ತೇವೆ. ಹಸಿವಿಲ್ಲದಿದ್ದರೂ, ದಾಹವಿಲ್ಲದಿದ್ದರೂ ನಾವು ಉಂಡು, ಕುಡಿಯುತ್ತೇವೆ. ನಮ್ಮ ಸಂತಾನೋತ್ಪತ್ತಿಯ ಚಟುವಟಿಕೆಗಳನ್ನು ರಸಿಕತೆಯಾಗಿ ವಿಸ್ತರಿಸಿದಂತೆಯೇ, ಬಲು ಮೂಲಭೂತವಾದ ತಿನ್ನುವ ಮತ್ತು ಕುಡಿಯುವುದನ್ನೂ ಬಕಾಸುರತನ ಹಾಗೂ ಕುಡುಕತನವನ್ನಾಗಿಸಿದ್ದೇವೆ. ಸಾವಿರಾರು ವರ್ಷಗಳಿಂದ ನಮ್ಮ ತಿನಿಸು ಮತ್ತು ಪಾನೀಯಗಳ ಸ್ವಾದವನ್ನು ನೂರಾರು ಬಗೆಯಲ್ಲಿ ಕೃತಕವಾಗಿ ಹೆಚ್ಚಿಸಿದ್ದೇವೆ. ಲಕ್ಷಾಂತರ ವರ್ಷಗಳಿಂದ ನಮ್ಮ ಪೂರ್ವಜರಿಗೆ ರುಚಿ ನೋಡುತ್ತಿದ್ದ ಕಾಡು ಆಹಾರಗಳು ಈಗ ಅಪರೂಪವಾಗಿವೆ. ಬೇಟೆಗಾರರು ನೆಲಕಚ್ಚಿದ ತಮ್ಮ ಬೇಟೆಯಿಂದ ನೇರವಾಗಿ ರಕ್ತವನ್ನು ಬಸಿದು ಕುಡಿಯುವಾಗ ಆನಂದವನ್ನು ಆಫ್ರಿಕಾದ ಕೆಲವು ಬುಡಕಟ್ಟುಗಳಲ್ಲಿ ಈಗಲೂ ಕಾಣಬಹುದು. ಇದೇ ಖುಷಿಯನ್ನು ಚಿಪ್ಪನ್ನು ತೆರೆದು ಕಪ್ಪೆಚಿಪ್ಪಿನ ಜೀವಿಯನ್ನು ಸಜೀವವಾಗಿ ಮುಕ್ಕುವವರಲ್ಲೂ ಕಾಣಬಹುದು. ಆದರೆ ಈ ರೀತಿಯ ಭೋಜನ ಈಗ ಅಪರೂಪದ ಸಂಗತಿಗಳಷ್ಟೆ. ಬಹುತೇಕ ಮಾಂಸವೆಲ್ಲ ಸಾಕುಪ್ರಾಣಿಗಳಿಂದಲೂ, ಸಸ್ಯಾಹಾರಗಳು ಸುಧಾರಿತ ಸಸ್ಯದ ತಳಿಗಳಿಂದಲೂ ಪಡೆದಂಥವು. ಅಡುಗೆಯ ವಿಧಾನಗಳೂ ಅಷ್ಟೆ. ತಿನಿಸುಗಳನ್ನ ಹೇಗೆ ಹೇಗೋ ಮಾರ್ಪಡಿಸಿ, ತಿನ್ನುವುದರಲ್ಲಿರುವ ಆದಿಮ ಖುಷಿಯನ್ನು ಇನ್ನಷ್ಟು ಪ್ರಬಲವಾಗಿಸುವ ಜಾಗತಿಕ ಚಳುವಳಿಯಾಗಿಬಿಟ್ಟಿದೆ.

ಅಡುಗೆಯೆನ್ನುವುದು ಶಿಲಾಯುಗಕ್ಕು ಹಿಂದೆ ಆರಂಭವಾಯಿತು. ಆದರೆ ಆಗ ಅದು ಮಾಂಸವನ್ನು ಸುಡುವುದಕ್ಕಷ್ಟೆ ಸೀಮಿತವಾಗಿತ್ತು. ಸುಮಾರು ಹತ್ತು ಸಾವಿರ ವರ್ಷಗಳ ಹಿಂದೆ ನವಶಿಲಾಯುಗ ಆರಂಭವಾದಾಗ ಬೇಯಿಸುವುದೂ, ರುಬ್ಬುವುದೂ ನಮ್ಮ ಅಡುಗೆ ವಿಧಾನಗಳಿಗೆ ಕೂಡಿಕೊಂಡವು. ಸುಟ್ಟ ಮಾಂಸದ ಅನಂತರ ನಮ್ಮ ಮೊದಲ “ಸುಧಾರಿತ ತಿನಿಸು’ಗಳೆಂದರೆ ಗಂಜಿ, ಬಿಸ್ಕತ್ತು ಹಾಗೂ ಕೇಕು. (ಭಾರತದಲ್ಲಿ ರೊಟ್ಟಿ, ಗಂಜಿ). ಮೂರು ಸಾವಿರ ವರ್ಷಗಳ ಹಿಂದೆ ಕಬ್ಬಿಣದ ಯುಗ ಆರಂಭವಾಗುವ ವೇಳೆಗೆ ಈಜಿಪ್ಟಿನ ಜನತೆಗೆ ಮೂವತ್ತಕ್ಕೂ ಹೆಚ್ಚು ಬಗೆಯ ರೊಟ್ಟಿ, ಕೇಕುಗಳು ಹಾಗೂ ಹತ್ತಾರು ತರಕಾರಿಗಳ ಆಯ್ಕೆ ಲಭ್ಯವಾಗಿತ್ತು. ನಗರಗಳು ಬೆಳೆದಂತೆಲ್ಲ ಪುರಾತನ ಅಡುಗೆಯೂ ಇನ್ನಷ್ಟು ವಿಶದವಾಗಿದ್ದಲ್ಲದೆ ಭೋಜನಪ್ರಿಯರಿಗೆ ಖುಷಿ ಕೊಡುವ ವಿಜೃಂಭಣೆಯ ಸಮಾರಂಭಗಳಾದುವು. ಮದ್ಯಪಾನವೂ ಪುರಾತನವೇ. ಮಧ್ಯಪ್ರಾಚ್ಯ ಪ್ರದೇಶದಲ್ಲಿ ಕ್ರಿಸ್ತಪೂರ್ವ 6000ದ ಸುಮಾರಿಗೇ ದ್ರಾಕ್ಷಿ ಬೆಳೆಯಲಾಗುತ್ತಿತ್ತು. ಕ್ರಿಸ್ತಪೂರ್ವ ನಾಲ್ಕರ ಸುಮಾರಿಗೆ ಸುಮೇರಿಯನ್ನರು ಹತ್ತೊಂಬತ್ತು ಬಗೆಯ ಬಿಯರುಗಳನ್ನು ಸೇವಿಸುತ್ತಿದ್ದರು. ಪ್ರಬಲವಾದ ಮದ್ಯಗಳು ಅನಂತರ, ಸುಮಾರು ಒಂದು ಸಾವಿರ ವರ್ಷದ ಹಿಂದೆ. ಬ್ರಹ್ಮಚರ್ಯೆ, ಸನ್ಯಾಸತ್ವದ ಬೇಸರವನ್ನು ಕಳೆಯಲು ಕೆಲವು ಸನ್ಯಾಸಿಗಳು ಇದನ್ನು ಅನ್ವೇ಼ಷಿಸಿದರು. ಕ್ರಿಸ್ತಶಕೆ ಹದಿಮೂರನೇ ಶತಮಾನದ ವೇಳೆಗಾಗಲೇ ಹೀಗೆ ಮದಿರೆಯಲ್ಲಿ ಸುಖದ ಹುಡುಕಾಟ ‘ಗಂಭೀರ ಸಾಮಾಜಿಕ ಸಮಸ್ಯೆ’ ಎಂದು ದಾಖಲಾಗಿತ್ತು. ಶತಮಾನಗಳು ಕಳೆದ ಹಾಗೆಲ್ಲ, ವಿವಿಧ ರೀತಿಯ ಸ್ನಾನ-ಮಜ್ಜನ, ಮಸಾಜು ಹಾಗೂ ದಣಿದವನಿಗೆ ಹೆಚ್ಚಿನ ಆರಾಮವನ್ನು ನೀಡುವ ಸುಪ್ಪತ್ತಿಗೆಯಂತಹ ಒರಗಿಕೊಳ್ಳುವ ಸಾಧನಗಳೂ ಇತರೆ ಭೌತಿಕ ಸುಖಗಳಲ್ಲಿ ಕೂಡಿಕೊಂಡವು. ಕ್ರೀಟೆ ದ್ವೀಪದ ನೋಸೋಸ್ ನಲ್ಲಿರುವ ಮಿನೋವನ ಅರಮನೆಯಲ್ಲಿ ಕಾಣುವ 3600 ವರ್ಷ ಹಳೆಯ ಸ್ನಾನದ ತೊಟ್ಟಿಯೇ ಅತಿ ಹಳೆಯದು. ಇದನ್ನು ರಾಣಿಯರ ಅಂತಃಪುರದೊಳಗೆ ಸುಂದರವಾಗಿ ಅಲಂಕರಿಸಿದ ಸ್ನಾನದ ಮನೆಯಲ್ಲಿದೆ. ಅವಳ ಸ್ಥಾನಕ್ಕೆ ತಕ್ಕ ಲಕ್ಷುರಿ ಸುಖವನ್ನು ಅದು ಒದಗಿಸುತ್ತಿದ್ದುದು ಸ್ಪಷ್ಟ. ಪುರಾತನ ಗ್ರೀಸಿನಲ್ಲಿ, ದಣಿದ ಪಯಣಿಗರನ್ನ ಬಿಸಿ ಸ್ನಾನದ ಜೊತೆಗೆ ಸೇವಕಿಯರಿಂದ ಪರಿಮಳ ದ್ರವ್ಯಗಳ ಮಸಾಜೂ ಸ್ವಾಗತಿಸುತ್ತಿತ್ತು. ಪುರಾತನ ರೋಮಿನಲ್ಲ ಸಮುದಾಯಿಕ ಸ್ನಾನ ಜನಪ್ರಿಯವಾಗಿತ್ತು. ಇಂದಿಗೂ ಟರ್ಕಿಯ ಸ್ನಾನದ ಮನೆಗಳನ್ನು ಕಾಣುತ್ತೇವೆ. ಇಂದಿನ ದಿನಗಳಲ್ಲಿಯಂತೂ ಮಾನವನ ದೇಹಕ್ಕೆ ಸುಖವೊದಗಿಸುವುದೊಂದು ಬೃಹತ್ ಉದ್ಯಮವಾಗಿಬಿಟ್ಟಿದೆ. ಇದು ಎಂತಹ ಖುಷಿಯೆಂದರೆ ಕೆಲವರಿಗೆ ಇದುವೇ ನಿರ್ವಾಣ!

_____________________________________________________

SENSUAL HAPPINESS

The Hedonist

Many people, when asked what brings them a moment of happiness, mention the savouring of a delicious meal, a sexual experience, or some other pleasure of the flesh. Dr. Johnson said that happiness was a good tavern. The creed of the hedonist is that we should all give ourselves up to these primary biological pleasures as often and as strongly as possible. The most intense form of sensual happiness is, without question, the orgasm. No species can survive without a massive i􀆅bui1t reward for the key moment of reproduction. Among our relatives, the monkeys and apes, the orgasm is confined to the males, but in humans it occurs in the females as well, and this difference requires an explanation. In typical monkeys and apes, the female comes into heat at the time of ovulation and this involves the development of a sexual swelling around her genitals.

 

This is visually conspicuous and excites the males who try to mount her and copulate with her. When the male ejaculates (usually after only a few seconds of mating) he reaches his momentary peak of sexual happiness and wanders of£ The female reaches no such climax and remains sexually aroused until the period of heat passes and her sexual swelling goes down. Now she will lose her sexual appetite and will cease to be sexually attractive until her next swelling occurs, in a month’s time, assuming she has not become pregnant. With humans, a new mating system has evolved. The females do not develop any sexual swellings and give no indication that they are ovulating. Strangely, they hide this vital moment from their males. Furthermore, they remain sexually attractive and retain a strong sexual appetite at times when they are not ovulating. They are capable of sexual arousal even when they are menstruating or are pregnant. At such times, the mating acts are, of course, doomed to be non-procreative. They must therefore have some other fimction. It seems that, during the course of human evolution, female sexuality has been co-opted as part of a pair-bonding process; it has literally become lovemaking. As already mentioned, typical monkeys and apes do not form breeding pairs, but typical human beings do, and the extended sexual activity appears to have become part of the emotional cement that helps to hold the couple together. W hile the male is rewarded by being able to have sex when his female is not ovulating, the female is rewarded by being able to experience a climactic orgasm as intense as tha,t of the male. So, for the human species, the potential for sexual happiness has been greatly increased at a biological level. It has also been further heightened by cultural embellishments, as simple sexual activity becomes refined into advanced and prolonged forms of eroticism. For hundreds of years there are have been instruction manuals available that describe the many postures, movements and caresses that can be explored to prolong and intensify the moments of human sexual happiness. From the &ma Sutra of third-century India to the Kinsey reports and The Joy oj Sex of the modern western world, and countless works of sexual fiction from all ages, there has always been a rich source of information for anyone wishing to increase their sexual pleasures. Attempts to suppress such information have merely driven it underground, taking it from the elegantly erotic to the crudely pornographic.

 

As a source of intense human happiness, sexual activity is far too basic to be restricted for very long. It is the same with food and drink. Obtaining food when you are starving or water when you are dying of thirst must provide moments of happiness as intense as anything else imaginable. Fortunately, most of us never reach such extremes, but we can  still enjoy the daily pleasures of the table. Even if we are not particularly hungry or thirsty,we continue to eat and drink – such is the intensity of this type of carnal activity. Just as we have enlarged our basic reproductive activities to develop an advanced world of human eroticism, so have we embellished basic feeding and drinking activities to develop the advanced world of the gourmet and the imbiber. For thousands of years, the flavours of our foods and our drinks have been artificially improved in a hundred different ways. Eating basic, unimproved, wild foods of the kind enjoyed by our ancient ancestors for a million years is now comparatively rare. With some African tribes, it is still possible today to watch the intense happiness of a group of hunters who, immediately following a kill, proceed to drink the prey’s hot blood direct from its fallen body. On a much wider scale, it is also possible to observe the joy of oyster-eaters as they devour their shellfish alive. But these primitive forms of eating are today the exception rather than the rule.

 

Most meat is taken from modified, domestic animals and most botanical food is obtained from improved, domestic forms of plants. Food preparation has also been developed to a point where most items on the menu have been transformed in some way as part of a global movement towards intensifying the happiness of the primeval activity of eating. The cooking of food started back in the Old Stone Age, but at that stage was confined to the roasting of meat. Then, in the New Stone Age, about ten thousand years ago, boiling and grinding were added to our culinary repertoire. Our first ‘improved foods’, after roasted meat, were such things as porridge, biscuits and cakes. By the Iron Age, about three thousand years ago, an early Egyptian would have had the choice of over thirty different kinds of bread and cakes, and more than a dozen different vegetables. As cities grew, ancient cuisine was increasingly elaborate and great feasts became a source of gourmet happiness on a grand scale. The preparation of alcoholic drinks is also ancient. The earliest records of cultivated grapevines date from around 6000 BC in the Middle East. And the Sumerians in the fourth millennium BC enjoyed as many as nineteen different kinds of beer. Strong spirits appeared later, coming of age about onethousand years ago, usually concocted by boredmonks to relieve the tedium of their celibate, monastic existence. By the thirteenth century AD, it was already being recorded that the search for happiness in the bottom of a glass was creating a ‘serious social problem’. Over the centuries, other pleasures of the flesh have included various forms of bathing, oiling and massaging, and improved resting equipment that offered greater comfort to the weary.  The  oldest known bathtub, found on the island of Crete in the Minoan palace at Knossos, is thirty-six hundred years old It was placed in a beautifully decorated, en-suite bathroom in the queens apartments, and clearly provided her with a sensual luxury appropriate for her rank. In ancient Greece, exhausted travellers were often greeted with the delights of a hot bath accompanied by a sensuous rubbing down in perfumed oils by handmaidens. Communal bathing was popular in ancient Rome, and Turkish baths are still with us to this day.

 

In modern times. the sensual pampering of the human body has grown into a major industry, and many people find it a source of happiness so relaxing that it borders on the tranquil

 

Published in: on ಜನವರಿ 23, 2016 at 12:19 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಸಂತೋಷದ ಸ್ವರೂಪ – ಸಂತೋಷದ ಬಗೆ 5

ವಂಶಿಕ ಸಂತೋಷ

ನೆಂಟ

ಸಹಕಾರಿ ಪಂಗಡಗಳ ಪ್ರಪಂಚದಲ್ಲಿ ಉತ್ಕಟ ಸಂತಸವನ್ನುಕ್ಕಿಸುವ ವಿಶೇಷ ಮೂಲವೊಂದಿದೆ. ಅದುವೇ ಕುಟುಂಬ, ಸಂತಾನ ನೀಡುವ ಸಂತಸ. ತನ್ನದೇ ಸಂತತಿಗೆ ಜನನ ನೀಡುವ ಹಂಬಲವೆನ್ನುವುದು ಎಂತಹ ಪ್ರಬಲ ಜೈವಿಕ ಅವಶ್ಯಕತೆಯಾಗಿದೆ ಎಂದರೆ ಈ ಪ್ರಯತ್ನದಲ್ಲಿ ಯಶಸ್ಸು ದೊರೆತ ಕ್ಷಣ ಮಹತ್ತಾದ “ವಂಶಿಕ ಖುಷಿ” ಯನ್ನುಂಟು ಮಾಡುತ್ತದೆ. ಪ್ರೇಮಿಸುವುದು, ದಂಪತಿಗಳಾಗುವುದು, ಮಕ್ಕಳಿಗೆ ಜನ್ಮ ನೀಡುವುದು ಹಾಗೂ ಸಂತಾನವನ್ನು ಬೆಳೆಸುವುದೇ ಮೊದಲಾದ ಈ ಪ್ರಕ್ರಿಯೆಯ ಪ್ರತಿಯೊಂದು ಹಂತವೂ ಆದಿಮ ಖುಷಿಯ ಅಲೆಗಳನ್ನೆಬ್ಬಿಸಬಲ್ಲುದು. ಎಲ್ಲವೂ ಸರಿಯಾಗಿದ್ದಲ್ಲಿ ಈ ಪ್ರತಿಯೊಂದು ಮೈಲುಗಲ್ಲನ್ನು ದಾಟುವಾಗಲೂ ಎಂತಹ ಉತ್ಕಟ ಭಾವುಕ ಕ್ಷಣಗಳುಂಟಾಗುತ್ತವೆಂದರೆ ಇದರ ನೆನಪು ಜೀವನ ಪರ್ಯಂತ ಉಳಿಯುವಂತದ್ದು. ಇಂತಹ ಭಾವುಕ ಕ್ಷಣಗಳ ಉತ್ಕಟತೆ ಎಷ್ಟೆಂದರೆ ಎಡವಟ್ಟಾದಾಗ ಉಳಿಯುವ ಮಾನಸಿಕ ಗಾಯಗಳೂ ಜೀವನ ಪರ್ಯಂತ ಮಾಸಲಾರವು.

ಸಂಗಾತಿಯ ಮೇಲೆ ಅಥವಾ ಮಗುವಿನ ಮೇಲಿನ ಪ್ರೀತಿ ಪೂರ್ವಜರಲ್ಲಿ ನಾವು ಸಾಮಾನ್ಯವಾಗಿ ಕಾಣುವ  ಗೆಳೆತನದ ಪ್ರೀತಿಗಿಂತ ಮಿಗಿಲಾದದ್ದು. ಏಕೆಂದರೆ ಇದಕ್ಕೆ ಅನುವಂಶಿಕ ಕಾರಣಗಳು ಇವೆ. ಮುಂದಿನ ಪೀಳಿಗೆಗೆ ಅನುವಂಶೀಯ ವಸ್ತುವನ್ನು ದಾಟಿಸುವುದು ಸಂತಾನೋತ್ಪತ್ತಿಯ ಮೂಲ ಉದ್ದೇಶ. ಪುನರ್ಜನ್ಮವೆನ್ನುವುದನ್ನು ನಂಬದ ಧರ್ಮದವರಿಗೂ ಕೂಡ ಸಂತಾನೋತ್ಪತ್ತಿಯಿಂದ ಕನಿಷ್ಠಪಕ್ಷ ವಂಶವನ್ನಾದರೂ ಉಳಿಸಬಹುದೆನ್ನುವ ಸಮಾಧಾನವಿದೆ. “ಪ್ರೀತಿ” ಎನ್ನುವುದು ಮಂಗ ಮತ್ತು ವಾನರಗಳಿಂದ ನಮ್ಮನ್ನು ಪ್ರತ್ಯೇಕಿಸುವ ಒಂದು ಉತ್ಕಟ ಭಾವನಾತ್ಮಕ ಅನುಭವ.ನಮ್ಮ ಪೂರ್ವಜರು ಬೇಟೆಗಾರರ ಹಾಗೂ ಆಹಾರ ಹೆಕ್ಕುವ ಬದುಕನ್ನು ಆಯ್ದುಕೊಂಡಾಗ ಬೇಟೆಯಾಡಲೆಂದು ಗಂಡು ಹಾಗೂ ಆಹಾರವನ್ನು ಹೆಕ್ಕಲೆಂದು ಹೋದ ಹೆಣ್ಣು ಒಬ್ಬರಿನ್ನೊಬ್ಬರಿಂದ ದೂರವಾಗಬೇಕಿತ್ತು ಎಂದು ಆಗಲೇ ಹೇಳಿದೆ. ಅಂದಿನ ಪ್ರೈಮೇಟು ಸಮಾಜದಲ್ಲಿ ಅದುವರೆವಿಗೂ ಕಾಣಬರದ ಹೊಸ ಸಮಸ್ಯೆಗಳನ್ನು ಇದು ತಂದೊಡ್ಡಿತು. ಬೇಟೆಯಾಡಿದ ಮೇಲೆ ಗಂಡುಗಳು ತಮ್ಮ ಸಂಪಾದನೆಯೊಂದಿಗೆ ಆವಾಸದ ನೆಲೆಗೆ ಹಿಂತಿರುಗಲೊಂದು ಕಾರಣ ಬೇಕಿತ್ತು. ಗಂಡುಗಳು ಹೀಗೆ ಮರಳಿದಾಗ ಅಲ್ಲೇ ಇರುವಂತೆ ಮಾಡುವ ಕಾರಣಗಳು ಹೆಣ್ಣಿಗೆ ಬೇಕಿತ್ತು. ಒಬ್ಬ ಗಂಡು ಮತ್ತು ಒಂದು ಹೆಣ್ಣಿನ ನಡುವೆ ಹೀಗೊಂದು ಪ್ರಬಲವಾದ ಬಾಂಧವ್ಯ ವಿಕಾಸವಾದದ್ದರಿಂದ ಮಾನವ ಸಮಾಜದಲ್ಲಿ ಹೊಸದಾಗಿ ಹುಟ್ಟಿಕೊಂಡಿದ್ದ ಹಾಗೂ ಅತಿ ವಿಶಿಷ್ಟವಾದ ಕೆಲಸಗಳ ಹಂಚಿಕೆ ಸಮರ್ಪಕವಾಗಿರುವುದು ಸಾಧ್ಯವಾಯಿತು.

“ಪ್ರೀತಿ”ಗೆ ಇದೊಂದೇ ಕಾರಣವಲ್ಲ. ದಾಂಪತ್ಯದ ಬಂಧಗಳು ಸಂತತಿಗಳ ಪಾಲನೆಯ ಪರಿಣಾಮ ಇಮ್ಮಡಿಯಾಗುವಂತೆ ಮಾಡಿತು. ಮಂಗಗಳಲ್ಲಿ ಹೆಣ್ಣುಗಳಷ್ಟೆ ಮರಿಗಳನ್ನು ಪಾಲಿಸುತ್ತವೆ. ಆದರೆ ಮನುಷ್ಯರಲ್ಲಿ ಅತಿ ದೀರ್ಘವಾದ ಬಾಲ್ಯವಿರುವುದರಿಂದ ಆ ಬಾಲ್ಯದುದ್ದಕ್ಕೂ ಮಗುವನ್ನು ತಂದೆ, ತಾಯಿಗಳಿಬ್ಬರೂ ಪೋಷಿಸುತ್ತಾರೆ. ತಾಯಿಯ ಪ್ರೀತಿಯ ಜೊತೆಗೆ ತಂದೆಯ ಪ್ರೇಮವನ್ನೂ ನೀಡುವ ಮೂಲಕ ಮಾನವ ಜೀವಿಯು ತನ್ನ ಸಂತತಿಗೆ ಹೆಚ್ಚಿನ ರಕ್ಷಣೆಯನ್ನು ಕೊಟ್ಟು ತನ್ನ ಉಳಿವಿನ ಸಾಧ್ಯತೆಗಳನ್ನೂ ಹೆಚ್ಚಿಸಿಕೊಂಡಿತು.  ಮಗು ಸಂತಾನೋತ್ಪತ್ತಿ ಮಾಡುವಷ್ಟು ಪ್ರೌಢನಾಗುವದಕ್ಕೂ ಮೊದಲೇ ದೊಡ್ಡದಾದ ಮಾನವನ ಮಿದುಳನ್ನು ಅನುಭವಗಳಿಂದ ಅಣಿಗೊಳಿಸುವ ಕಾಲಾವಕಾಶ ಸಾಕಷ್ಟು ದೊರೆಯಿತು.  ಮಾನವನ ವಿಕಾಸ ಸಫಲವಾಗಲು ಅವಶ್ಯಕವಾದ  ಈ ಅಂಶ ಮಂಗ ಮತ್ತು ವಾನರಗಳಲ್ಲಿ ಕಾಣದ ಮತ್ತೊಂದು ಪ್ರಮುಖ ಖುಷಿಯ ಸೆಲೆಯನ್ನು ಮಾನವನಿಗೆ ನೀಡಿದೆ. ಅದುವೇ ದಾಂಪತ್ಯಕ್ಕೆಳಸುವ ಯುವ ಪ್ರೇಮಿಗಳಲ್ಲಿ ಕಾಣುವ ಹುಚ್ಚು ಖುಷಿ. ಪ್ರೇಮ ಮತ್ತು ಕಾಮವೆರಡಕ್ಕೂ ನಿಕಟ ಸಂಬಂಧವಿದೆಯಾದರೂ, ಪ್ರೀತಿಸುವ ಖುಷಿಗೂ, ಸೆಕ್ಸ್ ಅಥವಾ ಸಂಭೋಗದ ಖುಷಿಗಳೆರಡೂ ವಿಭಿನ್ನವಾದ ಭಾವನೆಗಳು. ಸೆಕ್ಸ್ ಇಲ್ಲದೆ ಪ್ರೇಮಿಸಲು ಸಾಧ್ಯ. ಹಾಗೆಯೇ ಪ್ರೇಮವಿಲ್ಲದೆ ಸೆಕ್ಸ್ ಇರುವುದೂ ಸಾಧ್ಯ. ಪ್ರೇಮರಹಿತ ಸೆಕ್ಸ್ ನೀಡುವ ಉನ್ಮಾದ ಪ್ರಬಲವಾದದ್ದು. ಹಾಗೆಯೇ ಅಪ್ಪಟ ಪ್ರೇಮ ನೀಡುವ ಸುಖದ ಬಗ್ಗೆಯೂ ಸಾಕಷ್ಟು ತಿಳಿದಿದೆ. ಆದರೆ ಇವೆರಡೂ ಭಾವಗಳೂ ಕೂಡಿದಾಗ ಉಂಟಾಗುವ ಭಾವನೆಯ ತೀವ್ರತೆ ಮನುಷ್ಯರಿಗೆ ಗೊತ್ತಿರುವಂತಹ ಹರ್ಷದ ಕ್ಷಣಗಳಲ್ಲಿ ಅತಿ ವಿಸ್ಫೋಟಕವೆನ್ನಿಸುವಂತವು.

ಈ ಬಗೆಯಲ್ಲಿ ಅತ್ಯುತ್ಕಟ ಭಾವನೆಯ ದೆಸೆಯಿಂದಾಗಿ ಕಾಮದ ಖುಷಿಯ ಬೆನ್ನಲ್ಲೇ ಬರುವ ಪಾಲಕರ ಪ್ರೀತಿ ಇನ್ನಷ್ಟು ಬಲವಾಗಿದೆ. ದಂಪತಿಗಳಿಗೆ ಮೊದಲ ಮಗುವಾದಾಗ  ಪ್ರೀತಿಯ ಭಾವನೆಗಳು ಉಕ್ಕೆದ್ದು ಹರಿಯುತ್ತವಷ್ಟೆ. ಹೊಸ ಸಂತಾನ ಬಂದಾಗ ಅದನ್ನು ರಕ್ಷಿಸಿ, ಪಾಲಿಸುವಂತೆ ಈ ರೀತಿ ಅನುವಂಶೀಯವಾಗಿಯೇ ತಂದೆ ತಾಯಿಗಳಿಗೆ ನಿರ್ದೇಶವಿದೆಯನ್ನಬಹುದು. ಇದು ಮತ್ತೊಂದು ಪ್ರಮುಖ ವಂಶಿಕ ಸಂತಸ. ಬೇರೆ ಯಾವುದೇ ಪ್ರೈಮೇಟುಗಳಿಗಿಂತಲೂ ಸುದೀರ್ಘವಾದ ನಮ್ಮ ಆಯಸ್ಸಿಗೆ ಅಜ್ಜ-ಅಜ್ಜಿಯರು ಮಕ್ಕಳ ಪಾಲನೆಗೆ ನೀಡುವ ಬೆಂಬಲವೂ ಸ್ವಲ್ಪ ಮಟ್ಟಿಗೆ ಕಾರಣ. ಇದು ಹೇಗೆ ಎಂದು ಅರ್ಥ ಮಾಡಿಕೊಳ್ಳಬೇಕಾದರೆ ಮಾನವ ಹೆಣ್ಣು ಒಂದಾದ ಅನಂತರ ಮತ್ತೊಂದು ಮಗುವಿಗೆ ಜನ್ಮ ನೀಡುತ್ತಾಳೆ, ಒಮ್ಮೆಲೇ ಹತ್ತಾರು ಮಕ್ಕಳಿಗೆ ಜನ್ಮ ನೀಡುವುದಿಲ್ಲವೆನ್ನುವುದು ನೆನಪಿರಲಿ. ಇತರೇ ಪ್ರೈಮೇಟುಗಳು ಒಂದು ಮರಿಗೆ ಜನ್ಮವಿತ್ತು, ಅದು ಸ್ವಾವಲಂಬಿಯಾದ ಅನಂತರ ಮತ್ತೊಮ್ಮ ತಾಯಿಯಾಗಲು ತೊಡಗುತ್ತವೆ. ಮರಿಗಳ ಅತಿ ಕ್ಷಿಪ್ರವಾದ ಬಾಲ್ಯ ಇದನ್ನು ಆಗಗೊಡುತ್ತದೆ.

ಆದರೆ ಮನುಷ್ಯನ ಜೀವನಚಕ್ರದಲ್ಲಿ ಬಾಲ್ಯಕ್ಕೆ ದಶಕಗಳನ್ನು ಕೂಡಿಸಲಾಗಿದ್ದು, ಇದು ಅದರ ತಲೆಯಲ್ಲಿರುವ ಬೃಹತ್ ಕಂಪ್ಯೂಟರನ್ನು ನಿಧಾನವಾಗಿ ಪ್ರೋಗ್ರಾಮ್ ಮಾಡಲು ಸಾಧ್ಯ ಮಾಡಿದೆ. ಇದರಿಂದಾಗಿ ನಮಗಿನ್ನೊಂದು ಹೊಸ ಸಮಸ್ಯೆ ಎದುರಾಯಿತು. ಮಕ್ಕಳು ಸ್ವಾವಲಂಬಿಗಳಾಗುವವರೆಗೂ ಹೆಣ್ಣುಗಳು ಕಾದಿದ್ದರೆ, ಸಂತಾನೋತ್ಪತ್ತಿಯ ಚಕ್ರ ಬಲು ನಿಧಾನವಾಗಿಬಿಡುತ್ತದೆ. ವಿಕಾಸದ ಹಾದಿಯಲ್ಲಿ ಇದಕ್ಕೆ ದೊರೆತ ಪರಿಹಾರ: ಒಂದರ ಜೊತೆಗೆ ಇನ್ನೊಂದು ಮಗುವಿನ ಪಾಲನೆ. ಫಲಿತಾಂಶ: ಮಾನವ ಹೆಣ್ಣು ಸ್ವಾವಲಂಬಿಗಳಲ್ಲದ ವಿವಿಧ ವಯಸ್ಸಿನ ಮಕ್ಕಳಿರುವ ಕುಟುಂಬವನ್ನು ಪಾಲಿಸುವ ಹೊಣೆ ಹೊರುತ್ತಾಳೆ. ಇದೆಂತಹ ಭಾರೀ ಹೊರೆ ಎಂದರೆ ಇದರ ನಿರ್ವಹಣೆಗೆ ಎಷ್ಟು ನೆರವಿದ್ದರೂ ಸಾಲದು. ಈ ಸಮಸ್ಯೆಗೆ “ವಿಸ್ತೃತ ಕುಟುಂಬ” ವೊಂದು ಪರಿಹಾರೋಪಾಯ. ರಕ್ಷಣೆಯನ್ನು ನೀಡುವ ತಂದೆಯ ಜೊತೆಗೇ ಪ್ರೀತಿಯಿಂದ ಕಾಯುವ ಅಜ್ಜ-ಅಜ್ಜಿಯರೂ ಕುಟುಂಬದಲ್ಲಿ ಸೇರುತ್ತಾರೆ. ಇಂದಿನ ನಗರ ಜೀವನದಲ್ಲಿ ಕಾಣೆಯಾಗುತ್ತಿರುವ ಆದರೆ ಮಾನವರ ಬದುಕಿನಲ್ಲಿ ಪ್ರಮುಖವಾದ ಅಜ್ಜ-ಅಜ್ಜಿಯರ ಈ ಪಾತ್ರ ಮೊಮ್ಮಕ್ಕಳ ಪಾಲನೆಯ ಖುಷಿ ಎನ್ನುವ ಮತ್ತೊಂದು ವಂಶಿಕ ಸಂತಸದ ಸೆಲೆ.

_________________________________________________________

Genetic Happiness,  ಇದಕ್ಕೆ ವಂಶಿಕ ಖುಷಿ ಎಂದು ಬರೆದಿದ್ದೇನಾದರೂ, ಖುಷಿ ಕೊಡುತ್ತಿಲ್ಲ. ಕುಟುಂಬ ಸಂತೋಷ ಅನ್ನಬಹುದಿತ್ತು. ಆದರೆ ಮಾರಿಸ್‍ ನ ದೃಷ್ಟಿಯಲ್ಲಿ ಇಂತಹ ಖುಷಿ ನಮ್ಮ ತಳಿಗುಣಗಳಲ್ಲಿಯೇ ಒಳಗೊಂಡಿರುವಂಥವು. ಆದ್ದರಿಂದು ಇದು ತಳೀಯ ಖುಷಿಯೂ ಆಗಬಹುದು. ಒಂದು ಒಳ್ಳೆಯ ಪದವನ್ನು ನಮ್ಮ ಕನ್ನಡ ಸಾಹಿತ್ಯದಲ್ಲಿಯೇ ಬೇರೆಲ್ಲಾದರೂ ಹುಡುಕಬೇಕು.

___________________________________________________________

 

Within the realm of tribal cooperation there is a special source of high-intensity happiness: the joys of the reproductive ‘family unit’. The urge to reproduce one’s own kind is such a powerful biological imperative that success in this endeavour brings moments of great ‘genetic happiness’. Each phase of the process – falling in love, pair-bonding, giving birth and successfully rearing the offspring – has the potential to create great waves of primeval happiness. If all goes well, these landmark moments create such a powerful emotional response that they result in vivid memory traces that last a lifetime. So potent are they that, sadly, when they go wrong, the mental scars can also last for a lifetime.

 

The love for a partner or a child exceeds anything seen in ordinary tribal friendships because of the genetic factor involved. The essence of reproduction is the passing on of genetic material to future generations, and even for those who do not believe in the religious version of the afterlife, there is the reassuring thought that their offspring will at least provide them with a genetic immortality. ‘Falling in love’ is a powerful emotional experience in our species and one that sets us apart from other monkeys and apes. I have already mentioned that, when our ancient ancestors adopted the lifestyle of hunter-gatherers, the physical separation of the hunting males and the food-gathering females created new problems that were unknown to other primate societies. The males had to want to return to the human settlement with the spoils of the hunt, and their females had to want to be there when they did so. The evolution of a powerful bond of attachment between individual males and females therefore helped to ensure that the new, uniquely human division of labour worked efficiently.

 

But there was more to ‘falling in love’ than this. The setting up of pair-bonds also had the effect of doubling the parental care of the offspring. A typical monkey baby is reared solely by its mother. A human baby, with its greatly extended childhood, is reared by it mother and its father. By offering its growing infants paternal love in addition to maternal love, the human species was able to give itself a major survival boost and provide the young with much greater protection. This gave the greatly enlarged human brain time to become fully ‘programmed’ with experiences before sexual maturity and adulthood arrived on the scene. All this was a vital part of the human evolutionary success story and results in a major new source of human happiness that is lacking in other monkeys and apes: the delirious happiness of the young lovers during the intense process of pair-formation. Although love and sex are intimately related, it is dear that the joy of love and the joy of sex are two distinct sensations. It is possible to fall in love without having sex and to have sex without falling in  love. The sensual happiness of loveless sex can be powerful enough. and the more ethereal pleasures of platonic love have been well-documented. But when the two are combined. the result. in terms of emotional intensity. can be explosive and can provide what are probably the most acute moments of happiness known to human beings.

 

Equipping our species with this extreme form of passionate experience has gone a long way to help in ensuring the strength of the parental emotions that follow naturally upon the heels of sexual love. When the pair-bonded couple produce their first baby. there is. again. a welling-up of powerful loving emotion. Both the father and the mother are geneticallyprogrammed to respond strongly to the arrival of a new offspring and to protect and nurture it. This is yet another major source of genetic happiness. The unusual longevity of our species – greater than that of any other kind of primate – appears to have evolved. in part. as a grandparental support system. To understand the need for this. it has to be remembered that, uniquely, the human female produces a ‘serial litter’. Other primate females produce a baby, rear it to independence, and then start over again with the parental cycle. The short childhood of their offspring makes this feasible.

 

But with human offspring, a whole decade of childhood has been added to the life cycle, allowing for the programming of the giant’ computer in the skull’, and this creates a special breeding problem for our species. If human females waited for their first offspring to become independent before starting to produce a second one, this would drastically slow down the reproductive cycle. The solution, during the course of evolution, was to overlap the dependent offspring. As a result, the human female must face the task of rearing a whole family of young, of varying ages but all in a state of prolonged dependency. This creates a maternal burden so heavy that she needs all the help she can get. The solution is the ‘extended family’ and the addition, not only of a protective father, but also of caring grandparents. This important grandparental role (so often weakened by modern urban conditions) creates yet another potential source of great genetic happiness: the joy of caring for one’s grandchildren .

 

Published in: on ಜನವರಿ 17, 2016 at 7:44 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಸಂತೋಷದ ಸ್ವರೂಪ – ಸಂತೋಷದ ಬಗೆ -4

ಮನುಷ್ಯನ ಸಾಂಕೇತಿಕ ಚಿಂತನೆಗಳ ಶಕ್ತಿ ಎಷ್ಟೆಂದರೆ ಈ ರೀತಿಯಲ್ಲಿ ನಾವು ನಮ್ಮ ಸಂತೋಷದ ಸೆಲೆಗಳನ್ನು ಅನಪೇಕ್ಷಿತವಾಗಿ ಹಿಗ್ಗಿಸಿಕೊಳ್ಳಬಲ್ಲೆವು. ವಿಚಿತ್ರವೆಂದರೆ, ಇಂತಹ ಚಟುವಟಿಕೆಗಳಲ್ಲಿ ತೊಡಗಿಕೊಂಡ ವ್ಯಕ್ತಿಗಳನ್ನು ಸಂದರ್ಶಿಸಿದಾಗ ನನಗೆ ಅವರ ದೃಷ್ಟಿಕೋನದಲ್ಲಿ ತುಸು ದೋಷಗಳು ಕಂಡವು. ತಾರ್ಕಿಕವಾಗಿ ಅವರು ಬಲು ಪ್ರಸನ್ನ ಜೀವಿಗಳು. ಈ ಸಹಕಾರಿ ಸಂತಸವನ್ನು ಅವರು ಎಷ್ಟು ಹೆಚ್ಚಿಸಿಕೊಂಡಿದ್ದರೆಂದರೆ, ಬದುಕು ಬಲು ಸಾರ್ಥಕವೆನ್ನಿಸಬೇಕು ಅಲ್ಲವೇ? ವಾಸ್ತವದಲ್ಲಿ, ಇಷ್ಟು ದೊಡ್ಡ ಪ್ರಮಾಣದಲ್ಲಿ ಕರುಣಾಮಯಿಗಳಾಗಿರುವ ಅವರಲ್ಲಿ ಹಿಗ್ಗು ಉಕ್ಕಿರಬೇಕಿತ್ತಾದರೂ ಅವರು ಖಿನ್ನರೂ, ಆತಂಕಿತರಾಗಿರುತ್ತಾರೆ.

ಇದಕ್ಕೊಂದು ನಿಚ್ಚಳ ಉದಾಹರಣೆ ಬೀದಿಬೆಕ್ಕುಗಳ ರಕ್ಷಣೆಗೆ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದ ಮಹಿಳೆಯೊಬ್ಬಳನ್ನು ಸಂದರ್ಶಿಸಿದಾಗ ದೊರಕಿತು. ಆಕೆ ಹಲವಾರು ವರ್ಷಗಳಿಂದ ಸಾವಿರಾರು ಬೆಕ್ಕುಗಳನ್ನು ಹಸಿವು, ರೋಗಗಳು ಹಾಗೂ ಸಾವಿನಿಂದ ರಕ್ಷಿಸಿದ್ದಳು. ಅವುಗಳಿಗಾಗಿ ಕಟ್ಟಿದ ಆಶ್ರಯತಾಣವೊಂದರಲ್ಲಿ ಬೆಕ್ಕುಗಳನ್ನಿಟ್ಟು, ಚಿಕಿತ್ಸೆ,  ಆಹಾರ ನೀಡಿ, ಹೊಸ ಆಶ್ರಯಗಳನ್ನು ಹುಡುಕುತ್ತಿದ್ದಳು. ಹೀಗೆ ಪ್ರತಿಯೊಂದು ಬೆಕ್ಕನ್ನು ರಕ್ಷಿಸಿ, ಹೊಸ ಮನೆ ಹುಡುಕಿಕೊಟ್ಟಾಗಲೂ ಆಕೆಯಲ್ಲಿ ಸಂತಸವನ್ನು ಚಿಮ್ಮಬೇಕಿತ್ತು. ಆದರೆ ಆಕೆಗೆ ಮಾತ್ರ ತಾನು ಬದುಕಿಸಲಾಗದ ಬೆಕ್ಕುಗಳ ಬಗ್ಗೆಯೇ ಚಿಂತೆ. ತನ್ನ ಸಾಧನೆಯಿಂದ ಖುಷಿಪಟ್ಟು  ಪ್ರಸನ್ನಳಾಗಿರುವುದಿರಲಿ, ಅವಳನ್ನು ಈ ಸೋಲು ಸದಾ ಕಾಡುತ್ತಿತ್ತು.

ಇಂತಹ ಚಟುವಟಿಕೆಗಳಲ್ಲಿ ಇದೊಂದು ಅಪಾಯವಿದ್ದೇ ಇದೆ. ನಾವು ಕೈಗೊಳ್ಳುವ ಯೋಜನೆಗಳ ಗುರಿ ಎಷ್ಟು ಎತ್ತರವಾಗಿರುತ್ತದೆಂದರೆ ಅವನ್ನು ತಲುಪಲಾಗುವುದೇ ಇಲ್ಲ. ಉತ್ತರ ಆಫ್ರಿಕಾದಲ್ಲಿ ಪ್ರವಾಸ ಮಾಡುತ್ತಿದ್ದ ಮಹಿಳೆಯೊಬ್ಬಳು ಅಲ್ಲಿ ಕತ್ತೆಯೊಂದು ಅನುಭವಿಸಿದ ಕ್ರೂರತೆಯನ್ನು ನೋಡಿ ದಿಗ್ಭ್ರಮೆಗೊಂಡು ಈ ಮುದ್ದು ಪ್ರಾಣಿಗಳನ್ನು ರಕ್ಷಿಸುವ ಯೋಜನೆಯೊಂದನ್ನು ಹಮ್ಮಿಕೊಂಡಳು. ಇದರ ಪರಿಣಾಮ ಸುಮಾರು 3000 ಪ್ರಾಣಿಗಳು ದೊಡ್ಡ ತೋಟವೊಂದರಲ್ಲಿ ಒಟ್ಟಾದುವು. ಇವೆಲ್ಲಕ್ಕೂ ಚಿಕಿತ್ಸೆ, ಆಹಾರ ನೀಡಿ ಪಾಲಿಸಬೇಕಾಯ್ತು. ಪ್ರಾಣಿಗಳ ಸಂಕಟವನ್ನು ನಿವಾರಿಸಿದ ಸಾಧನೆಯ ಕುರುಹಾಗಿ ಇಷ್ಟೆಲ್ಲ ಆರೋಗ್ಯವಂತ ಕತ್ತೆಗಳೇ ತನ್ನನ್ನು ಸುತ್ತುವರೆದಿದ್ದರೂ, ಆಕೆಗೆ ತಾನಿನ್ನೂ ರಕ್ಷಿಸಬೇಕಾಗಿದ್ದ ಕತ್ತೆಗಳದ್ದೇ ಚಿಂತೆ.  ಅವೆಲ್ಲವನ್ನೂ ಕೊಂಡು ತನ್ನ ತೋಟಕ್ಕೆ ಕೂಡಿಸಿಕೊಂಡರೂ ಆಕೆ ಸಂಪೂರ್ಣ ಗೆಲುವು ಸಾಧಿಸಲಾಗಲಿಲ್ಲ. ಏಕೆಂದರೆ ಹಿಂಸೆ ಅನುಭವಿಸಿದ ಕತ್ತೆಯನ್ನು ಹಣ ಕೊಟ್ಟು ಕೊಂಡುಕೊಂಡ ಕೂಡಲೇ, ಆ ಕತ್ತೆಯ ಯಜಮಾನ ಅದೇ ಹಣದಿಂದ ಮತ್ತೊಂದು ಮರಿಕತ್ತೆಯನ್ನು ಕೊಳ್ಳುತ್ತಿದ್ದ. ಚಕ್ರ ಮರುಕಳಿಸುತ್ತಿತ್ತು. ಮತ್ತೆ ಅಸಾಧ್ಯವಾದುದರ ಬೆನ್ನು ಹತ್ತಬೇಕಿತ್ತು. ಸಮಾಜ ಕಲ್ಯಾಣದ ಎಲ್ಲ ಯೋಜನೆಗಳ ಸ್ವರೂಪವೂ ಇದೇ ಆಗಿರುತ್ತದೆ. ಇನ್ನೂ ಸಾಧಿಸಬಹುದಿತ್ತು ಎನ್ನುವ ದುಃಖ ಸಾಧನೆಯ ಖುಷಿಯನ್ನು ಉಕ್ಕುವುದಕ್ಕೆ ಮುನ್ನವೇ ಹತ್ತಿಕ್ಕಿಬಿಡುತ್ತದೆ.

ಸಹಕಾರ ಸಂತೋಷವನ್ನು ಪಡೆಯುವ ಗುಟ್ಟು ಕೈಗೆಟುಕುವ ಗುರಿಗಳನ್ನು ಇಟ್ಟುಕೊಳ್ಳುವುದರಲ್ಲಿ ಇದೆ. ಇದನ್ನು ಮಾಡುವುದು ಕಷ್ಟ. ಕಷ್ಟಕ್ಕೆ ಕಾರಣವೇನೆಂದರೆ ನೆರವು ನೀಡುತ್ತಿರುವ ಜನ ಅಥವಾ ಪ್ರಾಣಿಗಳು ಅಲ್ಪ ಸಂಖ್ಯೆಯ ತಂಡದ ನಿಜ ಸದಸ್ಯರಲ್ಲ. ಸಾಂಕೇತಿಕವಾಗಿಯಷ್ಟೆ ಅಂತಹ ಪಂಗಡದ ಸಮಾನರು. ಸಾಂಕೇತಿಕವಾಗಿ ಅವರ ಸಂಖ್ಯೆ ಸಹಜವಾದ ಮಾನವ ಪಂಗಡದ ಜನಸಂಖ್ಯೆಯಷ್ಟಿರುವುದಿಲ್ಲ. ಪುರಾತನ ಕಾಲದಲ್ಲಿ, ವಿಕಾಸವಿನ್ನೂ ನಮ್ಮ ಗುಣಗಳನ್ನು ರೂಪಿಸುತ್ತಿದ್ದ ಸಮಯದಲ್ಲಿ, ಮಾನವ ಪಂಗಡಗಳ ಗಾತ್ರ ಸಣ್ಣದಿತ್ತು. ಒಂದು ಅಂದಾಜಿನ ಪ್ರಕಾರ ಪ್ರತಿ ಪಂಗಡದ ಸಂಖ್ಯೆ ಎಂಭತ್ತರಿಂದ ನೂರಿಪ್ಪತ್ತು ಸದಸ್ಯರದಾಗಿತ್ತು. ಅತಿ ಹೆಚ್ಚೆಂದರೆ ಕೆಲವು ನೂರು ಸದಸ್ಯರಿದ್ದಿರಬಹುದಷ್ಟೆ. ಆ ಪ್ರಮಾಣದಲ್ಲಿ ಸಹಕಾರ, ಸಹಾಯವೆನ್ನುವುದು ಪ್ರಾಯೋಗಿಕವಾಗಿ ಸಾಧ್ಯವಾಗಿತ್ತು. ಆದರೆ ಇಡೀ ಮಾನವತೆಗೆ ಅಥವಾ ಇಡೀ ಪ್ರಾಣಿಗಳ ಜಗತ್ತಿಗೆ ನೆರವು ನೀಡುವುದೆನ್ನುವುದು ಹಾಗಲ್ಲ. ಸಹಕಾರ ಸಂತೋಷವನ್ನು ಫಲಪ್ರದವಾಗಿ ಅನುಭವಿಸಬೇಕೆಂದರೆ ನಾವು ಆಯ್ದುಕೊಳ್ಳುವ ಸಹಕಾರದ ಪ್ರಮಾಣವೂ ಸರಿಯಿರಬೇಕು. ನಗರೀಕರಣದ ತೊಂದರೆಗಳನ್ನು ಬಿಂಬಿಸುವ ದಿ ಹ್ಯೂಮನ್ ಜೂ ಎನ್ನುವ ಚಲನಚಿತ್ರವನ್ನು ಚಿತ್ರಿಸುವ ಸಂದರ್ಭದಲ್ಲಿ ಇದು ನನಗೆ ಅರಿವಾಯಿತು.

ನಗರದ ಮಹಾಪಂಗಡದ ಬೃಹತ್ ಪ್ರಮಾಣ ಸ್ಪರ್ಧೆ ಹೆಚ್ಚುತ್ತಿದ್ದು, ಸಹಕಾರ ಕಡಿಮೆಯಾಗಿ ಮಾನವನ  ಈ ಎರಡು ಮೂಲಭೂತ ಹಂಬಲಗಳ ಸಂಬಂಧವನ್ನು ಹದಗೆಟ್ಟಿದೆಯೆನ್ನವುದು ನನ್ನ ವಾದವಾಗಿತ್ತು. ಇದನ್ನು ಪರೀಕ್ಷಿಸುವುದಕ್ಕೆ ಒಂದು ಸರಳ ಪ್ರಯೋಗವನ್ನು ದೊಡ್ಡ ನಗರಗಳಲ್ಲೂ, ಸಣ್ಣ ಹಳ್ಳಿಗಳಲ್ಲೂ ಕೈಗೊಂಡೆವು.  ನಗರದ ಫುಟ್ ಪಾತ್ ಮೇಲೆ ನಿಶ್ಚಲನಾಗಿ ಬಿದ್ದುಕೊಳ್ಳಲು ಚಿತ್ರದ ನಿರ್ಮಾಪಕ ಮುಂದಾದ. ಇನ್ನೊಂದು ದಿನ ಹಳ್ಳಿಯಲ್ಲೂ ಇದೇ ರೀತಿ ಮಾಡಿದ. ನಗರದ ಮಧ್ಯದಲ್ಲಿ ಆತ ಕುಸಿದು ನಿಶ್ಚೇತನಾದಂತೆ ಮಲಗಿದಾಗ  ನಗರದ ಜಂಜಾಟದ ಬದುಕಿನ ಫಲವೋ ಏನೋ, ನಗರವಾಸಿಗಳು ತಂತಮ್ಮ ಕೆಲಸದಲ್ಲಿ ನಿರತರಾಗಿ ಅವನ ಸುತ್ತಲೂ ನಡೆದರೇ ಹೊರತು ಆತನನ್ನು ಗಮನಿಸಲೇ ಇಲ್ಲ.

ಕೆಲವರು ಅವನನ್ನು ಕಂಡರೂ ನೋಡದವರ ಮುಖ ತಿರುಗಿಸಿಕೊಂಡು ಹೋದರು. ಕೆಲವರು ಅವನ ದೇಹದ ಸುತ್ತಲೂ ಪ್ರದಕ್ಷಿಣೆ ಹಾಕಿ, ಸತ್ತಂತೆ ಬಿದ್ದಿದ್ದ  ಅವನಿಗೆ ನೆರವು ನೀಡದೆ ಹೋದರು. ಐದಾರು ನಿಮಿಷಗಳ ಕಾಲ ಹೀಗೇ ಹತ್ತಾರು ಜನ ಓಡಾಡಿರಬೇಕು. ಅನಂತರ ಯಾರೋ ಬಾಗಿ ಅವನಿಗೆ ನೆರವು ನೀಡಲು ಮುಂದಾದರು. ಹಳ್ಳಿಯಲ್ಲಿ ಜನರ ನಡತೆ ಇದಕ್ಕೆ ವ್ಯತಿರಿಕ್ತವಾಗಿತ್ತು. ಅಲ್ಲಿ ಹೀಗೆ ಬಿದ್ದವನನ್ನು ಕಂಡ ಕೂಡಲೇ ನೆರವಿನ ಹಸ್ತಗಳು ಸಹಾಯ ಮಾಡಲು ಮುಂದಾಗಿದ್ದುವು. ಇದು ಸಹಜ ಪ್ರತಿಕ್ರಿಯೆ ಎನ್ನುವುದನ್ನು ಸ್ಪಷ್ಟ ಪಡಿಸಿಕೊಳ್ಳಲು ಈ ಪ್ರಯೋಗವನ್ನು ಹಳ್ಳಿಯಲ್ಲ ಹಲವು ಕಡೆ ಮರುಕಳಿಸಿದೆವು. ಪ್ರತಿ ಬಾರಿಯೂ ತಪ್ಪದೆ ಅದೇ ಪ್ರತಿಕ್ರಿಯೆ. ಕೊನೆಯಲ್ಲಿ ಒಬ್ಬ ವೃದ್ಧೆ ನೆರವು ನೀಡಲು ತನ್ನ ಗುಡಿಸಲಿನಿಂದಾಚೆ ಧಾವಿಸಿ ಬಂದಳು. ಮುಖದ ತುಂಬಾ ನಗು ಹರಡಿಕೊಂಡು, ನೆಲದ ಮೇಲೆ ಬಿದ್ದಿದ್ದವನತ್ತ ಬಾಗಿದ ಅವಳು ಹೇಳಿದ್ದು: “ಓಹೋ. ನೀನೇಯೋ ರಸ್ತೆಯಲ್ಲಿ ಅಲ್ಲಲ್ಲಿ ಬೀಳುವವ. ಒಳಗೆ ಬಂದು ಚಹಾ ಕುಡಿ. ” ಈ ಮಾತಿನ ಅರ್ಥ ಇಷ್ಟೆ. ಹಳ್ಳಿಗರು ವೈಯಕ್ತಿಕವಾಗಿ ನೆರವಾಗುತ್ತಿದ್ದರಷ್ಟೆ ಅಲ್ಲ, ಹಳ್ಳಿಗೆ ಬಂದಿದ್ದವನೊಬ್ಬನಿಗೆ ತೊಂದರೆ ಇದೆ, ನೆರವು ಬೇಕೆನ್ನುವ ವಿಷಯ ಇಡೀ ಸಮುದಾಯದಲ್ಲಿ ಹರಡಿತ್ತು. ಮಾನವನಿಗೆ ಸಹಜವಾದ ಸಹಕಾರಿ ನಡವಳಿಕೆ ಇದು. ನಾವು ನಮ್ಮ ಪೂರ್ವಜರಂತೆ ಸಣ್ಣ ಗುಂಪುಗಳಲ್ಲಿ ವಾಸಿಸುತ್ತಿದ್ದರೆ ಇದು ಇಂದಿಗೂ ಸಕ್ಷಮವಾಗಿ, ಸಕ್ರಿಯವಾಗಿರಬಲ್ಲುದು.

_______________________________________________________________

ಟಿಪ್ಪಣಿ: ಓಹ್‍. ಇದು ಗಂಭೀರ ಅಧ್ಯಯನ. ಟಿವಿಯಲ್ಲಿ ತೋರಿಸುವ ಪ್ರಾಂಕ್‍ ಅಲ್ಲ. ನಮ್ಮ ನಡವಳಿಕೆಗಳನ್ನೇ ನೋಡಿ ಎಷ್ಟೊಂದು ನಗೆ ಬರುತ್ತದೆ. ಆದರೆ ಇಂತಹ ನಡವಳಿಕೆಗಳು ನಮ್ಮ ನೈಜ ರೂಪ. ಮಾನವನ ಸಹಜ ನಡವಳಿಕೆ. ಅವನ ಜೈವಿಕ ಸ್ವರೂಪ ಅಲ್ಲವೇ?

________________________________________________________________

Such is the power of human symbolic thought that we are able to widen our sources of happiness dramatically in this way. Strangely, however, when I interviewed people who are deeply involved in these activities, I soon discovered a weakness in their outlook. In theory they should be extremely cheerful individuals. They have increased their sources of cooperative happiness so greatly that they should find their lives immensely rewarding. In reality, however, they are often stressed and depressed instead of bubbling with the fun of ‘being kind’ on a grand scale.

 

I found a dear example of this when interviewing a woman who had devoted her whole life to saving stray cats. Over the years she had rescued literally thousands of felines from starvation, disease and lingering deaths. She had set up a huge sanctuary in which they were housed, given medical care and found new homes. Every cat saved and successfully re-housed should have given her a surge of happiness, but instead all she could think about were the cats she had failed to save. She was far from cheerful and was instead haunted by her failures, rather than made happy by her successes.

This is the risk inherent in all such activities. The aims of the projects undertaken are so high that they can never be met. Another woman, horrified by the cruel treatment of a donkey that she observed when on holiday in North Africa, starting a project to save these delightful animals. She ended up with over three thousand of them on a huge farm complex, all of which had to be given medical attention and then had to be fed and cared for. She was surrounded by healthy donkeys, a living testimony to her achievements in alleviating animal suffering, but all she could think about were the ones still waiting to be saved. Even if she bought them all and added hundreds of thousands of them to her farm, she could not succeed, because as soon as she paid for an abused donkey, its owner used the money to buy a young one and start again. Again, she had set herself an impossible task. This is characteristic of all welfare activities. The surges of happiness are nearly always overpowered by pangs of sadness from the knowledge of what has not been achieved.

The secret with cooperative happiness is to set oneself realistic goals, but this is hard to do. The reason for this difficulty is that the people or animals being helped are not real members of a small tribe of limited nwnbers, but symbolic equivalents of those tribal members. As symbols, their numbers are not limited by the natural tribe-size of the hwnan species. In primeval times, when evolution was laying down our inborn qualities, hwnan tribes were very small. One estimate sees them as consisting of only eighty to a hundred and twenty individuals. At the very most they will only have consisted of a few hundred.  At that scale, helpfUlness is a practical possibility. Helping the whole of hwnanity, or the whole of the animal world, is another matter. To be successfully enjoyed, cooperative happiness must find an appropriate scale.  This was brought home to me when I was involved in the making of a film about the problems of urbanization called The Human Zoo.

I had argued that the enormous size of the city super-tribe had had the effect of increasing competitiveness and decreasing cooperation, dramatically unbalancing the relationship between these two basic human urges. In order to test this idea, we carried out a simple experiment on the streets of both big cities and small villages. The producer of the film volunteered to fall down and lie inert on a city pavement and then, on another day, to do the same in a small village. When he appeared to collapse and then lay motionless on the pavement in a city centre, he was repeatedly ignored by the stressed urbanites as they hurried about their business.

Some looked away and pretended not to see him. Some glanced at his body and then walked around him, offering no help to his seemingly stricken form. Dozens of citizens passed him in this way before, after about five minutes, someone paused, bent down and offered help. In the village, in stark contrast, there were immediate offers of help, as soon as the fallen figure was spotted. In order to be sure that these were typical reactions, the falling down routine was repeated all over the village. Every time there was the same, unhesitating response. On the last  occasion, an old lady emerged from her cottage to offer help. With a beaming smile, she bent over the prostrate figure and said: ‘Oh, you are the man who keeps collapsing. Do come in a have a cup of tea: This comment revealed that the villagers were not merely individually helpful, but that word had got round the community that a visitor was in trouble and needed assistance. This is the type of cooperative behaviour that is a fundamental feature of human nature and which operates efficiently, even today, providing we are still living in small groups like our ancient ancestors.

ಸಂತೋಷದ ಸ್ವರೂಪ – ಸಂತೋಷದ ಬಗೆ 3

ಸಹಕಾರದ ಸಂತಸ

ಸಹಾಯಕ

ಇದು ನಾಣ್ಯದ ಮತ್ತೊಂದು ಬದಿ. ಪೈಪೋಟಿ ಹಾಗೂ ಸಹಕಾರಗಳ ನಡುವೆ ನಾವು ಹೊಂದಾಣಿಸಬೇಕಿತ್ತು. ಏಕೆಂದರೆ ಕಾಡು ಪಂಗಡದವರಾಗಿ ಬಿಡಿ ವ್ಯಕ್ತಿಗಳು ಸಫಲರಾಗುವುದು ಅಪರೂಪ. ಗೆಲ್ಲಲೇ ಬೇಕೆನ್ನುವ ಅಂತರಾಳದ ಬಯಕೆಯ ಜೊತೆಗೆ,  ಅಷ್ಟೇ ಮೂಲಭೂತವಾದಂತಹ ಪರಸ್ಪರರಿಗೆ ನೆರವಾಗುವ ಬಯಕೆಯನ್ನೂ ನಾವು ಪಡೆದಿದ್ದೇವೆ. ನೀತಿವಾದಿಗಳು ಇದಕ್ಕೆ ತಾವೇ ಕಾರಣ ಎನ್ನಬಹುದು, ಸತ್ಯವೇನೆಂದರೆ ನೆರವಾಗುವುದು ನಮ್ಮ ಸಹಜ ಗುಣ.  ಇದುವೂ ನಮಗೆ ಖುಷಿ ತರುತ್ತದೆ. ಆದರೆ ನಾವು ಹೇಗಿರಬೇಕೆನ್ನುವ ಬಗ್ಗೆ ಸದ್ಗುರುಗಳು ಹೇಳಿದ ನೀತಿಪಾಠದಿಂದಲ್ಲ.  ಮತ್ತೊಬ್ಬರಿಗೆ ಸಹಾಯ ಮಾಡುವ ಮೂಲಕ ನಮಗೆ ನಾವೇ ನೆರವಾಗುವುದು ನಮಗೆ ಜೈವಿಕವಾಗಿಯೇ ಬಂದಿರುತ್ತದೆ. ಸಹಕಾರ ಎನ್ನುವುದು ನಿಸ್ವಾರ್ಥಿ ನಡತೆ ಎಂದು ತೋರಬಹುದು. ವಾಸ್ತವದಲ್ಲಿ ಇದು ಸ್ಪರ್ಧಾತ್ಮಕ ನಡತೆಯಷ್ಟೆ ಸ್ವಾರ್ಥ ನಡವಳಿಕೆ.

ಗೆಳೆಯರಿಗೆ ನೆರವಾಗುವುದರಿಂದ ನಮ್ಮಲ್ಲಿ ಸಂತೋಷ ಉಕ್ಕುತ್ತದೆಂದರೆ ಅದಕ್ಕೆ ಕಾರಣ ಸೋಲಿನಿಂದ ತಂಡವನ್ನು ರಕ್ಷಿಸುವುದಕ್ಕಾಗಿ ನಮ್ಮ ಬುಡಕಟ್ಟು ಪಂಗಡದ ಸದಸ್ಯರು ಪರಸ್ಪರ ಸಹಾಯಕ್ಕಿರುವಂತೆ ನಿಸರ್ಗ ನಮ್ಮನ್ನು ವಿಕಾಸ ಮಾಡಿದೆ. ದೊಡ್ಡ ಬೇಟೆಯನ್ನು ಪಂಗಡದ ಸದಸ್ಯನೊಬ್ಬನೇ ಕೊಲ್ಲಲಾರ. ಹಾಗೆಯೇ ಪಂಗಡದ ಸದಸ್ಯನೊಬ್ಬನಿಗೇ ಗುಡಿಸಲು ಕಟ್ಟುವುದು, ಭೋಜನ ಕೂಟವನ್ನೇರ್ಪಡಿಸುವುದು ಅಥವಾ ತಮ್ಮ ವಸತಿಯನ್ನು ರಕ್ಷಿಸಿಕೊಳ್ಳುವುದೂ ಸಾಧ್ಯವಿಲ್ಲ. ಆದಿ ಮಾನವ ಪಂಗಡದ ಪ್ರತಿಯೊಬ್ಬ ಸದಸ್ಯರೂ ಇಡೀ ಪಂಗಡ ಗೆದ್ದರಷ್ಟೆ ಬದುಕಿ ಉಳಿಯಬಹುದಿತ್ತು. ಇದಕ್ಕೆ ಸಕ್ರಿಯ ಸಹಕಾರ ಅವಶ್ಯಕ. ಹೆದರಿಕೆ, ಬೆದರಿಕೆಯಿಂದ ಪಡೆದ ಸಹಕಾರ ಇದಕ್ಕೆ ಸಾಲದಾಗಿತ್ತು. ನಾವು ಇನ್ನೂ ಒಂದು ಹೆಜ್ಜೆ ಮುಂದುವರೆದೆವು. ತಂಡವು ಒಗ್ಗಟ್ಟಿನಿಂದ ಸಮರ್ಥವಾಗಿರಬೇಕೆಂದರೆ ಪಂಗಡದ ಬಲಶಾಲಿಗಳೂ, ಪೈಪೋಟಿಯಲ್ಲಿ ಸ್ಪರ್ಧೆಗಳನ್ನು ಗೆದ್ದವರೂ ಕೂಡ ತಮ್ಮ ಅಧೀನದಲ್ಲಿದ್ದವರಿಗೆ ಬಹುಮಾನಗಳನ್ನು ನೀಡಬೇಕಾಯಿತು. ಇಂದು ನಮ್ಮ ಉದ್ಯೋಗಗಳ ಹಲವು ಸಂದರ್ಭಗಳಲ್ಲಿ ಈ ಬಗೆಯ ಸಹಕಾರದ ತುಡಿತವನ್ನು ಕಾಣುತ್ತೇವೆ. ತಮ್ಮ ಸಿಬ್ಬಂದಿಗೆ ವೇತನ ಬಡ್ತಿಯನ್ನೋ, ಬೋನಸ್ಸನ್ನೋ ನೀಡುವುದು ಬಹುತೇಕ ಬಾಸ್ ಗಳಿಗೆ ಖುಷಿಯ ಸಂಗತಿ. ಅದೇ ಉದ್ಯೋಗದಿಂದ ವಜಾ ಮಾಡಿದಾಗ ಅಥವಾ ವೇತನ ಕಡಿತ ಮಾಡಿದಾಗ ಹೀಗಾಗದು. ಸದಾ ಬಡಿಗೆಯಿಂದ ಬೆದರಿಸುವ ಬಾಸ್ ಸಾಮಾನ್ಯವಾಗಿ ಯಾವ ಕಾರಣದಿಮದಲೋ ಸಹಕಾರದ ಸಂತಸವನ್ನು ಹಂಚಿಕೊಳ್ಳಲಾಗದ ದುಃಖಿಯಾಗಿರುತ್ತಾನೆ.  ಜುಜುಬಿ ಎನ್ನಿಸುವ ನೆರವಿನ ಇಂಗಿತವೂ ಕೆಲವೊಮ್ಮೆ ಕ್ಷಣಿಕವಾದ, ಸುಖಕರ ಸಂತೋಷವನ್ನುಂಟು ಮಾಡಬಹುದು. ಉದಾಹರಣೆಗೆ, ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಕೊಂಡವನೊಬ್ಬ ಪಕ್ಕದ ರಸ್ತೆಯಿಂದ ಬರುತ್ತಿರುವ ವಾಹನಕ್ಕೆ ಹಾದಿ ಮಾಡಿಕೊಟ್ಟಾಗ ಆ ಚಾಲಕ ತೋರಿಸುವ ಮೆಚ್ಚುಗೆಯ ಸಂಕೇತವೂ ಹತಾಶೆಯಲ್ಲಿ ಸಿಕ್ಕಿಕೊಂಡವನಿಗೆ ಅಮೂಲ್ಯವೆನ್ನಿಸುತ್ತದೆ.

“ಒಳ್ಳೆಯ ಕೆಲಸ” ಮಾಡುವುದು ಇದರದ್ದೇ ವೈಭವೀಕರಿಸಿದ, ವಿಸ್ತೃತ ನಡವಳಿಕೆ. ಕೆಲವರು ಇಡೀ ಮಾನವತೆಯನ್ನು ಮಾರ್ಮಿಕವಾಗಿಯಾದರೂ ತಮ್ಮದೇ ಕುಲಬಂಧುಗಳೆಂದು ಕಾಣುವರು. ಈ ‘ಕುಲ’ಕ್ಕೆ ನೆರವಾಗಲು ಅವರು ಬೃಹತ್ ಪ್ರಮಾಣದಲ್ಲಿ ತೊಡಗಬಹುದು. ಎಲ್ಲ ಮಾನವೀಯ ನೆರವಿನ ಸಂಸ್ಥೆಗಳೂ ಈ ಆಧಾರದ ಮೇಲೆಯೇ ನಡೆಯುತ್ತವೆ. ಪ್ರಪಂಚದ ಇನ್ನೆಲ್ಲೋ ಇರುವ ಹಸಿದ ಸಮುದಾಯಕ್ಕೆ ಆಹಾರವನ್ನು ನೀಡಿದೆವೆನ್ನುವ ಅವರ ಸಂತೋಷಕ್ಕೆ ಕಾರಣ ಆ ಸಮುದಾಯವನ್ನು ತಮ್ಮದೇ ಪಂಗಡದ ವಿಸ್ತೃತ ಅಂಗವೆಂದು ಪರಿಗಣಿಸುವುದೇ ಆಗಿರುತ್ತದೆ. ಅಧಿಕೃತವಾಗಿ ತಾವು ಯಾವುದೋ ಧಾರ್ಮಿಕ ಅಥವಾ ನೈತಿಕ ಕಾರಣಗಳಿಂದಾಗಿ ಹೀಗೆ ಮಾಡುತ್ತಿದ್ದೇವೆ ಎಂದು ನುಡಿದರೂ ವಾಸ್ತವದಲ್ಲಿ ಒಂದು ಆದಿಮ, ಪ್ರಾಚೀನವಾದ “ಅನಿವಾರ್ಯವಾದ ಸಹಕಾರ” ನಿಯಮವನ್ನು ಪಾಲಿಸುತ್ತಿರುವರಷ್ಟೆ. ನೆರವು ನೀಡಬೇಕು ಎಂಬ ಬೋಧನೆಯಿಂದಾಗಿ ಅವರು ನೆರವಾಗುತ್ತಿಲ್ಲ. ನೆರವು ನೀಡವಂತಹ ಜೀವಿಯಾಗಿದ್ದರಿಂದ ನೆರವಾಗುವರು. ಈ ಸಹಕಾರಿ ಸಂತೋಷದ ಪರಮಾವಧಿಯ ಬಗೆಯೂ ಇದೆ. ಕೆಲವು ಮಂದಿ ಮಾನವತೆಯ ಬಗೆಗಿನ ತಮ್ಮ ಅನುಭೂತಿಯನ್ನು ಇತರೆ ಪ್ರಾಣಿಗಳಿಗೂ ವಿಸ್ತರಿಸುವರು. ಪ್ರಾಣಿಸಂರಕ್ಷಕರು ಕೆಲವು ಜೀವಿಗಳು ಅಳಿಯದಂತೆ ಕಾಪಾಡುವ ಯತ್ನದಲ್ಲಿ ಇಡೀ ಜೀವನವನ್ನು ಕಳೆಯುತ್ತಾರಷ್ಟೆ. ಹಾಗೆಯೇ ಪ್ರಾಣಿದಯಾ ಸಂಘದವರು ತೊಂದರೆಯಲ್ಲಿರುವ ಸಾಕುಪ್ರಾಣಿಗಳ ರಕ್ಷಣೆಗೆ ಕೈಲಾದಷ್ಟು ನೆರವು ನೀಡುತ್ತಾರೆ.  ಇಂತಹವರಲ್ಲಿ ಇತರೆ ಜೀವಿಗಳಿಗೆ ನೆರವಾಗಬೇಕೆನ್ನುವ ಹಂಬಲ ಒಮ್ಮೊಮ್ಮೆ ಎಷ್ಟು ತೀವ್ರವಾಗುತ್ತದೆಮದರೆ, ಎಲ್ಲೋ ಬಂಧಿಯಾಗಿರುವ ಪ್ರಾಣಿಯನ್ನು ಕಾಡಿಗೆ ಮರಳಿಸಿದಾಗ, ಪ್ರಾಣಿಗೆ ಜೀವಿಸಲ ಒಳ್ಳೆಯ ಪರಿಸರವನ್ನು ನೀಡಿದಾಗ, ಅಥವಾ ಮನೆಬಿಟ್ಟು ಬೀದಿಗೆ ಬಂದ ಸಾಕು ಪ್ರಾಣಿಗೆ ಹೊಸದೊಂದು ಆಶ್ರಯ ನೀಡಿದಾಗ, ಒಂದು ಜೀವಿಯನ್ನು ಅಳಿವಿನಿಂದ ಉಳಿಸಿದ ಖುಷಿ ಉಕ್ಕುತ್ತದಲ್ಲ ಅದು ಉತ್ಕಟವಾದದ್ದು.

______________________________________________________________

ಟಿಪ್ಪಣಿ: ಈ ಖುಷಿಯೇ ಬಲು ಖುಷಿಯ ವಿಷಯ. ಮಾನವತೆಯ ಮೂಲ ಎನ್ನೋಣವೇ? ಡೆಸ್ಮಂಡ್‍ ಮಾರಿಸ್ ಕೊಡುವ ಉದಾಹರಣೆಗಳಿಗೆ ಸಮಾನವಾದ ಹಾಗೂ ಅದಕ್ಕಿಂತಲೂ ಪ್ರಬಲವಾದ ಉದಾಹರಣೆಗಳನ್ನು ನಾವು ನಮ್ಮಲ್ಲೂ ಕಾಣಬಹುದು. ಈ ಪ್ರಾಣಿರಕ್ಷಣೆಯ ಖುಷಿಗಾಗಿ ಮತ್ತೊಂದು ಜೀವಿಗೆ/ಜೀವಕ್ಕೆ ಹಿಂಸೆ ನೀಡುವುದಷ್ಟೆ ಒಪ್ಪಲು ತುಸು ಕಷ್ಟವಾಗುವ ಸಂಗತಿ. ಗೋರಕ್ಷಣೆ ಇರಲಿ, ಪ್ರಾಣಿದಯೆ ಇರಲಿ, ಅದು ಖುಷಿ ತರುತ್ತದೆ, ನಿಜ. ಆದರೆ ಅದಕ್ಕಾಗಿ ಹಿಂಸೆ?

_____________________________________________________________

COOPERATIVE HAPPINESS

The Helper

This is the other side of the coin. We have always had to temper our competitiveness with cooperation because, as tribal animals, we could rarely succeed as isolated individuals. In addition to a deep-seated urge to win, we also inherited an equally basic, inborn urge to help one another. Moralists like to take credit for this, but the truth is that ‘being helpful’ is in our nature. It brings us happiness – not because do-gooders have taught us moral lessons in how to behave, but because biologically we are programmed to help ourselves by helping others. Cooperative behaviour may appear to be selfless, but in reality it is just as selfish as competitive behaviour.

If we gain a surge of happiness from, say, helping our friends, this is because evolution has ensured that tribal members support one another as a defence against group failure. A single individual could not kill a large prey; nor could a single individual build a hut, make a feast, or protect a settlement. Individual members of the primeval group could only thrive if the whole tribe was successful, and this demanded active cooperation. Passive cooperation, obtained by threats and bullying, was not enough; we had to go one step further. Even the most dominant members of the tribe – those who had won the competitive struggles – had to offer rewards to their subordinates in order to keep the group working efficiently together. In modern times, we see this cooperative urge at work in many different contexts. For most bosses, giving their staff a pay-rise or a bonus is a happy experience, whereas giving an employee the sack or a pay-cut is not. The ruthless boss, who, in wielding the carrot and stick, always favours the stick, will usually turn out to be a miserable individual, unable, for some personal reason, to enjoy the pleasures of cooperative happiness. In trivial ways, small cooperative gestures can bring a strangely pleasing, fleeting moment of happiness – as when a driver in a traffic jam allows a car stuck in a side-street into the main flow of traffic. The wave of appreciation is worth a lot in that gridlocked sea of frustration.

 

On a grander scale, there is the widespread phenomenon of doing ‘good works’. Some people, by symbolic means, are able to see the whole of humanity as members of their personal tribe. They can then set about helping their ‘tribe’ on a massive scale. All humanitarian organizations operate on this basis. The happiness they feel when providing food for a starving community on the other side of the world is based on their ability to see them as an extension of their own community. Officially they may claim to be operating according to some moral or religious code, but in reality they are obeying a modified form of an ancient, primeval ‘ cooperative imperative’. They are not being helpful because they have been taught to be helpful; they are being helpful because they belong to a helpful species. There is an even more extreme version of this type of cooperative happiness. Many people are able to extend their compassion beyond humanity to other species. Conservationists spend their lives trying to protect certain kinds of animals from extinction, and animal welfare workers do their best to care for suffering domestic animals. Among such individuals, the passion for helping other species frequently becomes intense, and the great surge of happiness that occurs when a captive animal is returned to the wild, a rare animal is saved from extinction, a farm animal is given better living conditions, or an abandoned pet is found a new home, is immense. For these people, the symbolic equation is stretched to the limit, with the protected animals standing in for ‘tribal members’.

 

 

Published in: on ಜನವರಿ 12, 2016 at 6:50 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಸಂತೋಷದ ಸ್ವರೂಪ – ಸಂತೋಷದ ಬಗೆ -2

ಸ್ಪರ್ಧೆಯ ಸಂತೋಷ

ವಿಜೇತ

ಇಲ್ಲಿಯೂ ಗೆಲುವಿನ ಗುರಿಯನ್ನು ಮುಟ್ಟಬೇಕಾಗಿರುವುದರಿಂದ ಇದುವೂ ಮೊದಲಿನ ವರ್ಗಕ್ಕೇ ಸಂಬಂಧಿಸಿದೆ. ಆದರೆ ಒಂದು ಪ್ರಮುಖ ವ್ಯತ್ಯಾಸವಿದೆ. ಈಡಿನ ಖುಷಿ ವೈಯಕ್ತಿಕ ಗುರಿಯನ್ನು ಮುಟ್ಟುವುದನ್ನು ಅವಲಂಬಿಸಿದ್ದು, ಪ್ರತಿಸ್ಪರ್ಧಿಯ ಬಲಿಯನ್ನಲ್ಲ. ಸ್ಪರ್ಧೆಯ ಸಂತೋಷ ಸದಾ ಪ್ರತಿಸ್ಪರ್ಧಿಯನ್ನು ಸೋಲಿಸುವುದರಲ್ಲೇ ಇದೆ. ಸಾಮಾನ್ಯವಾಗಿ ಪ್ರಬಲ ಯತ್ನವೂ ಬೇಕು. ಹದಿನೈದು ಸುತ್ತುಗಳ ಕಷ್ಟದ ಬಾಕ್ಸಿಂಗ್ ಸ್ಪರ್ಧೆಯ ಅನಂತರ ಕೊಡುವ ಸಂದರ್ಶನದಲ್ಲಿ ಗೆದ್ದವರು ಖುಷಿಯಿಂದ ಇರುವುದನ್ನು ನೋಡಿದಾಗಲೆಲ್ಲ ಅಚ್ಚರಿಯಾಗುತ್ತದೆ. ಅಷ್ಟೊಂದು ಕ್ರೂರವಾಗಿ ಪೆಟ್ಟಿನ ಮೇಲೆ ಪೆಟ್ಟು ತಿಂದು ಮುಖವೆಲ್ಲ ಅಪ್ಪಚ್ಚಿಯಾಗಿದ್ದರೂ, ಟೆಲಿವಿಷನ್ನಿನ ಕ್ಲೋಸ್ ಅಪ್ ನಲ್ಲಿ ಆ ಮುಖ ಖುಷಿಯಿಂದ ಬೆಳಗುತ್ತ, ಅದುವರೆಗೆ ನಡೆದದ್ದೆಲ್ಲ ಕನಸೇನೋ, ಸುತ್ತಿಗೆಯಂತಹ ಮುಷ್ಟಿ ಮಿಂಚಿನಂತೆ ಮತ್ತೆ ಮತ್ತೆ ಬಡಿದದ್ದು ಸುಳ್ಳೇ ಎನ್ನುವಂತೆ  ಹಸನ್ಮುಖಿಯಾಗಿಯೇ ಇರುತ್ತದೆ. ಎಲ್ಲ ಗೆದ್ದವರ ಮುಖದ ಮೇಲೆ ಕಾಣುವ  ವಿಶೇಷ ತೆರನ ನಗು ಅದು. ತಮ್ಮ ಎದುರಾಳಿಗಳನ್ನು ಅವರು ಹೇಗೆಯೇ ಸದೆಬಡಿದಿರಲಿ, ಈ ಗೆಲುವಿನ ನಗೆಯನ್ನಂತೂ ಅಣಕಿಸುವುದು ಅಸಾಧ್ಯವೇ ಸರಿ. “ಆ ಗೆಲುವಿನ ಕೂಗೇನೋ ಸರಿಯಾಗಿ ಬಂತು, ಆದರೆ ನಗೆಯನ್ನು ಚಿತ್ರಿಸಲು ಆಗುತ್ತಿಲ್ಲ.” ಎಂದು ಒಮ್ಮೆ ಕಲಾವಿದ ಫ್ರಾನ್ಸಿಸ್ ಬೇಕನ್ ಹೇಳಿದ್ದು ನೆನಪಾಗುತ್ತದೆ. ಉತ್ಕಟಾನಂದದ ಸಮಯದಲ್ಲಿ ತೋರುವ ನಗುವನ್ನು ಚಿತ್ರಿಸುವುದು ಕಲಾವಿದರಿಗೂ, ನಟರಿಗೂ ಬಹಳ ಕಷ್ಟ. ಆದರೆ ಇದನ್ನು ನೋಡುವುದು ನಮಗೆ ತಪ್ಪದು.

“ಸಂತೋಷ ಎಂದರೆ ಮತ್ತೊಬ್ಬರ ಸಂಕಟವನ್ನು ಊಹಿಸಿಕೊಂಡಾಗ ಆಗುವ ಭಾವನೆ”. ಈ ಸಂತೋಷದ  ವಿವರಣೆ ನಾನು ಇದುವರೆಗೆ ಕಂಡಿರುವುದರಲ್ಲಿ ಅತ್ಯಂತ ಕ್ರೂರವಾದದ್ದು. ಇದನ್ನು ನೆನೆದಾಗಲೆಲ್ಲ ನನಗೆ ನಡುಕ ಬರುತ್ತದೆ.   ಯಾವುದೇ ಜೋಕ್ ಕೇಳಿ ನಗುತ್ತೇವಲ್ಲ ಆಗ  ಅದು ಈ ರೀತಿಯ ಸಂತೋಷದ ಸೌಮ್ಯರೂಪ ಎನ್ನುವುದನ್ನು ಮರೆಯಬಾರದು. ಏಕೆಂದರೆ ಪ್ರತಿ ಜೋಕಿನ ಕಾರಣವಾಗಿ ಬಾಳೆಯ ಸಿಪ್ಪೆಯ ಮೇಲೆ ಕಾಲಿಟ್ಟು ಜಾರಿದ್ದಕ್ಕೋ, ಇನ್ಯಾವುದಕ್ಕೋ ಜುಗರಕ್ಕೊಳಗಾದವರೊಬ್ಬರು ಇರುತ್ತಾರೆ. ಅವರ ಮುಜುಗರ ನಮಗೆ ನಗು ತರಿಸುತ್ತದಷ್ಟೆ. “ಖುಷಿ ಎನ್ನುವುದು ಇತರರ ಜೊತೆಗೆ ಹಂಚಿಕೊಳ್ಳುವುದಕ್ಕಲ್ಲ,”  ಎನ್ನುವ ಇನ್ನೊಂದು ವ್ಯಾಖ್ಯಾನವೂ ಇದೆ. ಈ ಎರಡರಲ್ಲೂ ನಾವು ಸ್ಪರ್ಧೆಯ ಸಂತೋಷವನ್ನು ಕುರಿತೇ ಹೇಳುತ್ತಿದ್ದೇವೆ. ನಾಚಿಕೆಯಿಲ್ಲದೆಯೋ ಅಥವಾ ಅಳುಕಿನಿಂದಲೋ, ಒಟ್ಟಾರೆ ಇನ್ನೊಬ್ಬರ ಸೋಲೇ ನಮ್ಮ ಖುಷಿ ಎಂದು ಒಪ್ಪಿಕೊಳ್ಳುತ್ತಿದ್ದೇವೆ.

ಈ ಬಗೆಯ ಸಂತೋಷದ ಪರಮಾವಧಿ ಅತಿ ನಿಷ್ಕರುಣೆಯ ರೂಪವಾಗುತ್ತದೆ. ಹಿಂಸಕ ಅಥವಾ ಸ್ಯಾಡಿಸ್ಟ್ ನ ಸಂತೋಷ ಇದು. ಅಸಹಾಯಕರಿಗೆ ನೋವನ್ನು ನೀಡುವುದು ಇಂತಹವರಿಗೆ ಪರಮ ಸಂತೋಷವನ್ನು ಕೊಡುತ್ತದೆ. ತಮ್ಮ ಈಡು ಅಸಹಾಯಕವೆಂಬುದೇ ಅವರ ಇಂತಹ ಕೆಲಸಗಳಿಗೆ ಪ್ರೇರಣೆ.  ಆ ಬೇಟೆ ಹಿಂತಿರುಗಿ ಏಟು ಕೊಟ್ಟರೆ ಅವರ ಸಂತೋಷ ಹಾಳಾಗುತ್ತದೆ. ಸಂಪೂರ್ಣ ಸ್ವಾಧೀನತೆ ಅವರ ಗುರಿ. ಇದು ಸ್ಯಾಡಿಸ್ಟ್ ಅಥವಾ ಹಿಂಸಕನನ್ನು ಆ ಸಂಬಂಧದಲ್ಲಿ ಪ್ರಮುಖವನ್ನಾಗಿಸಿಬಿಡುತ್ತದೆ. ಅಧಿಕಾರವಿರುವ ವಿಜೇತನಾಗುತ್ತಾನೆ. ಇದನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುವ ಆತ ಅನಂತರವೂ ಬಲಿಗೆ ನೋವನ್ನುಂಟು ಮಾಡುವುದನ್ನು ಮುಂದುವರೆಸುತ್ತಾನೆ. ಪ್ರತಿ ಬಾತಿ ಹೀಗೆ ಮಾಡಿದಾಗಲೂ, ಎದ್ದು ತೋರುವ ಬಲಿಯ ನೋವು ಮತ್ತೊಬ್ಬನ ಮೇಲೆ ತನಗಿರುವ ಅಧಿಕಾರದ ಅನುಭವ ಹಿಂಸಕನಿಗೆ ಆಗುತ್ತದೆ. ಇದು ಹೇಡಿಯ ಗೆಲುವು.

ಹಿಂಸೆಯಿಂದ ದೊರೆಯುವ ಸಂತೋಷಕ್ಕೆ ನಾಲ್ಕು ಮೂಲಗಳಿವೆ: ಮಾನಸಿಕ ಹಿಂಸೆ, ದೈಹಿಕ ಹಿಂಸೆ, ಬಲಾತ್ಕಾರ (ರೇಪ್) ಹಾಗೂ ಕೊಲೆ. ಸಾಮಾಜಿಕವಾಗಿ ಉನ್ನತ ಸ್ಥಾನದಲ್ಲಿರುವ ನಿರಂಕುಶ ಪ್ರಭುವಿಗೆ ಬಹಳಷ್ಟು ವೇಳೆ ಮಾನಸಿಕ ಹಿಂಸೆಯನ್ನು ನೀಡುವುದರಲ್ಲೇ ಖುಷಿ ಸಿಗುತ್ತದೆ. ಅಹಂಕಾರಿ ಉದ್ಯಮಿ, ನಿರ್ದಯಿ ಬಾಸ್, ಉನ್ನತ ಮಿಲಿಟರಿ ಅಧಿಕಾರಿ ಇವರೆಲ್ಲರೂ ಮುಯ್ಯಿ ತೀರಿಸಿಕೊಳ್ಳಲಾಗದ ಅಸಹಾಯಕ ಸ್ಥಿತಿಯಲ್ಲಿರುವ ಅಧೀನ ಸಿಬ್ಬಂದಿಯ ಮೇಲೆ ಹಿಂಸೆಯನ್ನು ಹೇರುತ್ತಾರೆ. ಹೀಗೆ ಅವಮಾನವನ್ನು ಅನುಭವಿಸಿದ ಅಧೀನ ಸಿಬ್ಬಂದಿಯಾದರೋ ತಮ್ಮ ಆತ್ಮ ಗೌರವವನ್ನು ಕಾಪಾಡಿಕೊಳ್ಳುವುದಕ್ಕಾಗಿ ಇನ್ನಿತರ ನಿಶ್ಶಕ್ತ ಸಹೋದ್ಯೋಗಿಗಳ ಮೇಲೆ ಏರಿ ಹೋಗುತ್ತಾರೆ. ಹೀಗೆ ಸಮಾಜದ ಉನ್ನತ ಸ್ತರದಲ್ಲಿ ತೊಡಗಿದ ಹಿಂಸೆ ತಳಹಂತವನ್ನು ತಲುಪುವುದನ್ನೇ ನಾವು “ಸೇವಕ ನಾಯಿಯನ್ನು ಒದ್ದ ಕಥೆ” ಎನ್ನುತ್ತೇವೆ. ಇಂತಹ ಹಿಂಸೆಯ ಅಂತಿಮ ಬಲಿ, ಮರಳಿ ಹೋರಾಡಲಾಗದಷ್ಟ ಅಸಹಾಯಕರಾದ ಮಕ್ಕಳು ಮತ್ತು ಮಡದಿಯರು. ಖಚಿತವಾದ ದಾಖಲೆಗಳು ದೊರೆಯುವ ಅಮೆರಿಕದಲ್ಲಿ ಪ್ರತಿ ವರ್ಷವೂ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಮಡದಿಯರು ತಮ್ಮ ಮೇಲೆ ಹಿಂಸೆಯಾಗುತ್ತಿರುವುದಾಗಿ ಪೋಲೀಸರಿಗೆ ದೂರು ಸಲ್ಲಿಸುತ್ತಾರೆ. ಅತಿ ಕ್ರೂರವಾದ ಹಿಂಸೆಯನ್ನು ಅನುಭವಿಸಿದ ಹೆಂಡತಿಯರಿಗೆ ಆಶ್ರಯ ನೀಡುವ 1500 ಕ್ಕೂ ಹೆಚ್ಚು ಆಶ್ರಯತಾಣಗಳು ಅಲ್ಲಿವೆ. ಅಮೆರಿಕೆಯಲ್ಲಿ ನಿರಾಶ್ರಿತರಾಗಿರುವ ಮಹಿಳೆಯರಲ್ಲಿ ಶೇಕಡ 50ರಷ್ಟು ಇಂತಹ ವೈವಾಹಿಕ ದೌರ್ಜನ್ಯದಿಂದ ಬಳಲಿದವರು.  ಸುಖ ಸಂಸಾರದಲ್ಲಿ ಬದುಕಿರುವವರು ಇಂತಹ ಹಿಂಸೆಯನ್ನು ಅಪರೂಪವೆನ್ನಬಹುದು. ದುರದೃಷ್ಟವೆಂದರೆ ಇದು ಅಪರೂಪವಲ್ಲ!

____________________________________________

ಟಿಪ್ಪಣಿ: ಈ ಭಾಗವನ್ನು ಅನುವಾದಿಸೋದಿಕ್ಕೆ ಕಷ್ಟವಾಯಿತು. ಸ್ಯಾಡಿಸ್ಟ್ ಅನ್ನೋದಿಕ್ಕೆ ಸರಿಯಾದ ಪದ ಸಿಗಲಿಲ್ಲ. ರಾಕ್ಷಸ, ಕ್ರೂರಿ ಇವೆಲ್ಲ ಸರಿ ಹೋಗುವುದಿಲ್ಲ. ಕೊನೆಗೆ ಸ್ಯಾಡಿಸ್ಟ್ ಅಂತಲೇ ಬರೆದೆ.

ಜೈವಿಕ ವಿಕಾಸದ ಅಂಶಗಳನ್ನೇ ಪ್ರತಿಪಾದಿಸುತ್ತ ನಮ್ಮ ಇಂದಿನ ನಡವಳಿಕೆಗಳು ಹೇಗೆ ಪಶು ಪ್ರವೃತ್ತಿಯ ಮಾರ್ಮಿಕ ರೂಪಗಳೆಂದು ಡೆಸ್ಮಂಡ್ ಮಾರಿಸ್‍ ವಾದ. ಈ ಪ್ಯಾರಾ ಓದುವಾಗ ನಿಮ್ಮ, ನಿಮ್ಮ ಬಾಸ್ ನೆನಪಾದರೆ ಅಚ್ಚರಿಯೇನಿಲ್ಲ. ಹಾಗೆಯೇ ನೀವು ಬೇರೆಯವರಿಗೆ ಬಾಸ್‍ ಆಗಿರಬಹುದು. ಮನೆಯಲ್ಲಿ ಮಡದಿಗೇನಾದರೂ ಹಿಂಸೆ ನೀಡುತ್ತಿರಬಹುದಾ? ಮಕ್ಕಳ ಮೇಲೆ / ಸಹೋದ್ಯೋಗಿಗಳು / ಮಡದಿ ಯ ಮೇಲೆ ರೇಗುವುದರಿಂದ ಖುಷಿ ಸಿಗುತ್ತಿದೆಯೇ?

ಇಂಗ್ಲೀಷ್‍ ಮೂಲ ಕೆಳಗಿದೆ. ಯಾವುದು ಓದಲು ಖುಷಿ ನೀಡುತ್ತದೆ? ಕಮೆಂಟಿಸಿ

_____________________________________________________

COMPETITIVE HAPPINESS

The Winner

Because this has to do with reaching a triumphant conclusion, it is related to the last category, but there is a key difference. Target Happiness depends on reaching a personal goal, but not necessarily at the expense of a rival. With competitive happiness, winning is always at the expense of a rival, usually through the expenditure of huge effort. I am always amazed by the elated condition of a heavyweight boxer when he is interviewed immediately after winning a gruelling fifteen-round contest. The face that has been pummelled so brutally, with blow after jarring blow, is there on your television screen, in close-up, positively glowing with happiness and grinning inanely as though it had just seen a vision instead of a large gloved fist approaching repeatedly with the speed of light and the force of a sledgehammer. It is a special kind of smile that we see on the faces of all winners, regardless of how they have just conquered their opponents, and it is almost impossible to imitate. I recall the painter Francis Bacon saying to me one day, ‘I’ve got the scream alright, but I can’t get the smile’. Qualities of smiling in moments of intense happiness are the hardest for artists and actors to capture, but they are quite unmistakable when we observe them.

 

The most vicious definition of happiness I have come across is the one that says, ‘Happiness is an agreeable sensation arising from contemplating the misery of another: If this makes us shudder, we should recall that every time we laugh at a joke we are guilty of a mild version of this, because in almost all jokes there is a victim whose discomfort amuses us, courtesy of one kind of banana-skin or another. A less worrying form of this definition is: ‘Happiness is a pleasure not

shared with others: In both these cases we are dealing with competitive happiness, where we shamelessly or shamefully take our happiness from being one up. The extreme form of this type of happiness is the most unpleasant kind of all. It is the happiness of the sadist and the torturer. For them, the infliction of pain on a helpless victim provides the ultimate surge of pleasure. It is the helplessness of the victim that is the key to their particular ty pe of activity. If the victim can and does fight back, their pleasure is ruined. What they seek is complete subjugation. This instantly transforms the sadist or the torturer into the dominant figure in the relationship. This makes him the power-laden ‘winner’, and he continues to exploit this situation by inflicting pain on the victim. Each time he does this, the visible suffering of the victim re-enforces the torturer’s feeling of power over another being. This is the coward’s way of being a winner.

 

There are four main sources of happiness through cruelty: mental torture, physical torture, rape and murder. Mental torture all too often gives pleasure to a tyrannical individual who is in a position of social superiority. The arrogant tycoon, the callous boss, the higher military rank: all these can impose their cruelty on subordinates who are in no position to retaliate. These subordinates, in turn, attack their weaker companions in an attempt to regain their own self-respect after suffering humiliation. This has become known as ‘the office-boy kicked the cat’ syndrome, where cruelty starts at the top of a social hierarchy and ends at the bottom. The most common victims are wives and children, who are too weak to fight back. In the United States, for example, where accurate records have been kept, it has emerged that there are over two million cases of battered women reported to the police annually. There are now fifteen hundred battered-women shelters in that country to provide sanctuaries for the worst cases. Fifty percent of the homeless women in America are refugees from domestic abuse. People living in happy families tend to think of this kind of violence as an extreme rarity. Sadly, it is not.

ಸಂತೋಷದ ಸ್ವರೂಪ – ಅಧ್ಯಾಯ 1

ಅಧ್ಯಾಯ 1

ಸಂತೋಷದ ಸೆಲೆ

ಸಂತೋಷದ ಸ್ವರೂಪ ಕುರಿತಂತೆ ಅಪಾರ್ಥವೇ ಹೆಚ್ಚು. ಸಂತೋಷವೆಂದರೆ ಮಾನಸಿಕ ಶಾಂತಿ, ತೃಪ್ತಿ ಅಥವಾ ಸುಖ ಎಂದು ಗೊಂದಲಿಸಿಕೊಳ್ಳುವುದು ಸಾಮಾನ್ಯ.  ಬದುಕು ಚೆನ್ನಾಗಿದ್ದಾಗ ಇರುವ ಭಾವವೇ ಸುಖ, ಇದ್ದಕ್ಕಿದ್ದ ಹಾಗೆ ಬದುಕು ಸುಧಾರಿಸಿದಾಗ ಉಂಟಾಗುವ ಭಾವವೇ ಸಂತೋಷ. ಇದು ಇವೆರಡರ ನಡುವಿನ ವ್ಯತ್ಯಾಸವನ್ನು ತಿಳಿಸುವ ಉತ್ತಮ ವಿವರಣೆ. ಅದ್ಭುತವಾದದ್ದೇನೋ ಆದ ತತ್ ಕ್ಷಣದಲ್ಲೇ ಭಾವನೆ ಉಕ್ಕಿ ಹರಿಯುತ್ತದೆ. ಗಾಢ ಸುಖವೆನ್ನಿಸುತ್ತದೆ. ಆನಂದ ಸ್ಫೋಟಗೊಳ್ಳುತ್ತದೆ. ನಾವು ನಿಜಕ್ಕೂ ಸಂತೋಷವಾಗಿರುವ ಕ್ಷಣ ಎಂದರೆ ಇದೇ. ದುರದೃಷ್ಟವಶಾತ್, ಇದು ಹೆಚ್ಚು ಹೊತ್ತಿರುವುದಿಲ್ಲ. ಗಾಢ ಸಂತೋಷವೆನ್ನುವುದು ಕ್ಷಣಿಕ, ತಾತ್ಕಾಲಿಕ ಭಾವ. ಇನ್ನೂ ಒಂದಷ್ಟು ಹೊತ್ತು ಈ ಸುಖದ ಭಾವ ಉಳಿಯಬಹುದು. ಆದರೆ ಆ ಖುಷಿ ಎನ್ನುವುದು ಕೂಡಲೇ ಮರೆಯಾಗಿರುತ್ತದೆ. ಸಿನಿಕನೊಬ್ಬನ ಮಾತಿನಂತೆ “ಬದುಕೆನ್ನುವುದು ಅಲ್ಲಲ್ಲಿ ಖುಷಿಯ ಕ್ಷಣಗಳೆನ್ನುವ ವಿರಾಮವಿರುವ ಸುದೀರ್ಘ ದುಃಖ”

ಹಾಗಿದ್ದರೆ ಈ ಖುಷಿಯ ಕ್ಷಣಗಳನ್ನುಂಟು ಮಾಡುವಂಥದ್ದು ಯಾವುದು? ಇದನ್ನು ತಿಳಿಯಬೇಕೆಂದರೆ ಲಕ್ಷಾಂತರ ವರ್ಷಗಳ ಅವಧಿಯಲ್ಲಿ ನಾವು – ಮಾನವನೆಂಬ ಜೀವಿ – ವಿಕಾಸವಾದ ಹಾದಿಯನ್ನು ಹೊರಳಿ ನೋಡಬೇಕು. ನಮ್ಮ ಬಲು ದೂರದ ಪೂರ್ವಜರು ಹಣ್ಣು, ಕಾಯಿಗಳು ಹಾಗೂ ಕೀಟಗಳನ್ನು ತಿನ್ನುತ್ತಿದ್ದ ಮರ-ವಾಸಿಗಳಾಗಿದ್ದರು. ಮಂಗಗಳಂತೆಯೇ ತಮ್ಮ ನಿತ್ಯ ಜೀವನದಲ್ಲಿ ಇವರು ಇಂತಹ ಖುಷಿಯ ಕ್ಷಣಗಳನ್ನು ಕಾಣುತ್ತಿರಲ್ಲಿಲ. ಆದರೆ ಅನಂತರ ಇವರು ತಮ್ಮ ನಿಕಟ ಸಂಬಂಧಿಗಳಿಂದ  ಹೊರಳಿ, ಬೇರೆಯದೇ ವಿಕಾಸದ ಹಾದಿಯಲ್ಲಿ ನಡೆದು ಬಂದರು. ಮರಗಳಲ್ಲಿ ಹಣ್ಣು ಹೆಕ್ಕುವ ಸುಲಭವಾದ, ಮತ್ತೆ, ಮತ್ತೆ ಮಾಡಬೇಕಾದ ಕಾಯಕವನ್ನು ಬಿಟ್ಟು ಇವರು ಬಯಲುಗಳಲ್ಲಿ ಒಟ್ಟಾಗಿ ಅಟ್ಟಾಡುತ್ತಾ ಬೇಟೆಯಾಡುವ ಶ್ರಮದ ಬದುಕನ್ನು ಆಯ್ದುಕೊಂಡರು. ಈ ಬದಲಾವಣೆಗೆ ಹೊಸ ಮಾನಸಿಕ ಸಾಮರ್ಥ್ಯವೂ ಬೇಕಾಯಿತು. ಸಹಕಾರ, ಬುದ್ದಿವಂತಿಕೆ, ಸಂವಹನ ಮತ್ತು ಧೈರ್ಯ ಹೆಚ್ಚಬೇಕಾಯ್ತು. ಸುದೀರ್ಘ ಕಾಲ ಒಂದೇ ಗುರಿಯತ್ತ ಗಮನ ಕೇಂದ್ರೀಕರಿಸುವ ಏಕಾಗ್ರತೆಯೂ ಬೇಕಾಯಿತು.

ಬಲಶಾಲಿ ಬೇಟೆಗಳನ್ನು ಬಗ್ಗುಬಡೆಯಲು ಸಹಕಾರ ಅವಶ್ಯಕ. ಬೇಟೆಯ ಉಪಾಯಗಳನ್ನು ಹೂಡಲು ಹಾಗೂ ಅಟ್ಟಾಡಿ ಕೊಲ್ಲುವ ತಂತ್ರಗಳನ್ನು ಯೋಜಿಸಲು ಸಂವಹನ ಬೇಕಿತ್ತು. ಧೈರ್ಯವೂ ಬೇಕಾಯ್ತು.  ಮಾನವನಂತಹ ಪುಟ್ಟ ಪ್ರೈಮೇಟು (ಮಂಗ, ವಾನರ, ಮಾನವರನ್ನು ಪ್ರೈಮೇಟುಗಳೆನ್ನುತ್ತಾರೆ) ಮಾರಕ ಬೇಟೆಗಾರನಾಗಬೇಕಾದರೆ ತನ್ನ ಪೂರ್ವಜರಾದ ಮಂಗಗಳಲ್ಲಿ ಇಲ್ಲದ ಅಪಾಯವನ್ನು ಮೈಮೇಲೆದುಕೊಳ್ಳುವ ನಡವಳಿಕೆ ಬೇಕು. ಸ್ವಲ್ಪ ಅಪಾಯದ ಸುಳಿವು ಸಿಕ್ಕರೂ ಮಂಗಗಳು ಮರವೇರಿ  ಸುರಕ್ಷತೆಯತ್ತ ಓಡಿಹೋಗುತ್ತವೆ. ನಮ್ಮ ಪೂರ್ವಜರು ಈ ಅಳುಕಿನ ಪ್ರತಿಕ್ರಿಯೆಯನ್ನು ಅದುಮಿಟ್ಟು, ಬೇಟೆಯಾಡುವಾಗಿನ ಅಪಾಯಗಳನ್ನು ಎದುರಿಸುವ ಸಂಪೂರ್ಣ ಹೊಸತಾದ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕಾಯ್ತು. ಹಣ್ಣು ಹೆಕ್ಕುವುದಕ್ಕೆ ಹೋಲಿಸಿದರೆ ಬೇಟೆಯಾಡುವುದು ಬಲು ದೀರ್ಘವಾದ ಚಟುವಟಿಕೆಯಾದ್ದರಿಂದ ಏಕಾಗ್ರತೆಯೂ ಬೇಕಾಯಿತು. ಪ್ರೈಮೇಟುಗಳಲ್ಲಿ ಕಾಣಬರದ ಒಗ್ಗಟ್ಟು, ಏಕಾಗ್ರತೆ ಹಾಗೂ ಛಲದಿಂದ ಬೆನ್ನತ್ತುವ ಹೊಸ ನಡವಳಿಕೆಗಳು ನಮ್ಮ ಪೂರ್ವಜರು ಬೆಳೆಸಿಕೊಳ್ಳಬೇಕಾಯ್ತು.

ಈ ಬಗೆಯ ಅಪಾಯಕಾರಿ ಆಹಾರಾನ್ವೇಷಣೆಯಲ್ಲಿ ಸಫಲರಾಗಬೇಕೆಂದರೆ ನಾವು  ಇನ್ನಷ್ಟು ಚುರುಕಾಗಬೇಕಾಯ್ತು. ತೀವ್ರ ವ್ಯಾಯಾಮದ ಬಯಕೆ ಅವಶ್ಯಕವಾಯಿತು. ಬೇಟೆಯಾಟದಲ್ಲಿ ಗೆದ್ದಮೇಲೆ ನಮ್ಮ ಸಾಮಾಜಿಕ ಬದುಕಿನಲ್ಲಿ ಹೊಸದೊಂದು ಅಂಶವನ್ನು ಕೂಡಿಸಬೇಕಾಗಿ ಬಂತು. ನಾವು ಆಹಾರವನ್ನು ಹಂಚಿಕೊಳ್ಳಬೇಕಾಯಿತು. ಚರಿತ್ರಪೂರ್ವದ ಮಾನವರನ್ನು ಹಾಲಿವುಡ್ ಚಿತ್ರಗಳಲ್ಲಿ  ಸದಾ ತನ್ನ ಬಳಗದವರ ತಲೆಯನ್ನೇ ಬಡಿಗೆಯಿಂದ ಹೊಡೆಯುತ್ತಿರುವ ಕ್ರೂರ, ಕಾಳಗಜೀವಿಯಾಗಿ ಅದೇಕೆ ಬಿಂಬಿಸುತ್ತಾರೋ ಗೊತ್ತಿಲ್ಲ.  ನಿರ್ಮೊಪಕರೋ, ಅವರ ಮನೋವೈದ್ಯರೋ ಉತ್ತರ ಹೇಳಬೇಕು! ಇಂತಹ ಘಟನೆಗಳು ನಡೆಯುವುದಿಲ್ಲವೆಂದಲ್ಲ. ಈಗಲೂ ಇವು ನಡೆಯಬಹುದು. ಆದರೆ ಇಂತಹ ಘಟನೆಗಳೇ ನಿತ್ಯ ಸಹಜವೆನ್ನಿಸಿಬಿಟ್ಟಿದ್ದರೆ ವಿಕಾಸದ ಪ್ರಾಥಮಿಕ ಹಂತಗಳಲ್ಲಿ ನಾವು ಬದುಕಿ ಉಳಿಯುವುದು ಸಾಧ್ಯವೇ ಇರಲಿಲ್ಲ. ಬಳಗದೊಳಗೆ ಹಿಂಸೆ ಎನ್ನುವುದು ಅಪರೂಪವಿದ್ದಿರಬೇಕು. ಇಲ್ಲದಿದ್ದರೆ ಬರೇ ಗೊಂದಲವಿರುತ್ತಿತ್ತು. ಬಹುಶಃ ಆಗ ಒಬ್ಬರಿನ್ನೊಬ್ಬರ ಜೊತೆಗೆ ಸಹಕರಿಸುವ, ಸಹಾಯ ನೀಡುವ  ಹಾಗೂ ಹಂಚಿಕೊಳ್ಳುವ ಭಾವನೆಗಳೇ ಪ್ರಬಲವಾಗಿದ್ದಿರಬೇಕು. ಇವಿಲ್ಲದೆ ನಾವು ಸುಧಾರಿಸುತ್ತಲೇ ಇರಲಿಲ್ಲ.

ಇಂದು ದಿನಪತ್ರಿಕೆಗಳು, ಟೆಲಿವಿಷನ್ ನೋಡುವಾಗ ಇದೆಂತಹ ಹಿಂಸೆಯ, ಕ್ರೂರವಾದ ಕಾಲ  ಎಂದು ನಮಗೆ ತೋರುತ್ತದೆ. ಆದರೆ ಇದು ತಿರುಚಿದ ಸತ್ಯ ಹಾಗೂ ‘ಉ..ಉ.. ಢಿಶುಂ ಢಿಶುಂ’ ಎಂದು ನಮ್ಮ ಪೂರ್ವಜರನ್ನು ಹಾಲಿವುಡ್   ನಿರ್ಮಾಪಕರು  ಚಿತ್ರಿಸಿರುವ ಸುಳ್ಳಿನಷ್ಟೆ ದೊಡ್ಡದು. ಈಗ ನಾವು ತಲುಪಿರುವ ಜನಸಂಖ್ಯೆಯ ಮಟ್ಟವನ್ನೂ, ನಾವು ಸಹಿಸುವ ಅತಿ ಜನದಟ್ಟಣೆಯನ್ನೂ ಲೆಕ್ಕಿಸಿದರೆ, ನಿಜಕ್ಕೂ ನಾವು ಶಾಂತಿಪ್ರಿಯರು, ಸೌಮ್ಯವಾದ ಅದ್ಭುತ ಜೀವಿಗಳು. ಇದನ್ನು ನಂಬಲು ಅಸಾಧ್ಯ ಎನ್ನಿಸಿತೇ? ಈ ದಿನ ಉದಯವಾದಾಗಿನಿಂದ ಸಂಜೆಯವಿರೆಗೆ ಯಾರಿಂದಲೂ ಪೆಟ್ಟು ತಿನ್ನದೆ ದಿನಗಳೆದ ಲಕ್ಷಾಂತರ, ಕೋಟ್ಯಂತರ ಜನರೆಷ್ಟಿದ್ದಾರೆಂದು ಲೆಕ್ಕ ಹಾಕಿ ನೋಡಿ. ನಮ್ಮ ಪುಣ್ಯ. ಬಹಳಷ್ಟು ಜನ ಹೀಗೇ ಇದ್ದಾರೆ. ನಾವು ಏಳು ಬಿಲಿಯನ್ ಜನರಲ್ಲಿ ಹೀಗೆ ಗುದ್ದಾಡುವವರು ಹಾಗು ಅಪರೂಪಕ್ಕೊಮ್ಮೆ ಕಲ್ಲನ್ನೋ, ಬಾಂಬನ್ನೋ ಬಿಸಾಡುವವರು ಅಷ್ಟಿಷ್ಟು ಇದ್ದೇ ಇರುತ್ತಾರೆ. ಸುದ್ದಿ ಮಾಧ್ಯಮದವರ ಅದೃಷ್ಟ. ಇವರೇ ಅವರಿಗೆ ಸುದ್ದಿ. ಆದರೆ  ಮರೆಯಬೇಡಿ. ನಮ್ಮಲ್ಲಿ ಬಹುತೇಕ ಜನ, ಬಹಳಷ್ಟು ವೇಳೆ, ಇಂತಹ ಯಾವುದೇ ಹಿಂಸೆಯ ಬದಲಿಗೆ ಸಂತೋಷದ ಹುಡುಕಾಟದಲ್ಲೇ ನಿರತರು.

ಬೇಟೆಗಾರನ ಬದುಕಿಗೆ ಹೊರಳಿದ್ದರ ಮತ್ತೊಂದು ಪರಿಣಾಮವೆಂದರೆ ನಮ್ಮ ಕುತೂಹಲ ಹೆಚ್ಚಿದ್ದು. ಹುಚ್ಚೇ ಏನೋ ಎನ್ನುವ ಮಟ್ಟಿಗೆ ನಾವು ನಮ್ಮ ಸುತ್ತಲಿನ ಪ್ರಪಂಚವನ್ನು ಪರೀಕ್ಷಿಸಿ ಅನ್ವೇಷಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡೆವು.  ಮರಿ ಮಂಗಗಳ ಆಟದಲ್ಲಿಯೂ ಇದನ್ನು ಕಾಣುತ್ತೇವೆ.  ಈ ಪ್ರವೃತ್ತಿ ಅವುಗಳು ಪ್ರೌಢವಾಗುವುದರೊಳಗೆ ಮರೆಯಾಗಿಬಿಡುತ್ತದೆ. ಆದರೆ ನಾವು ಮಾತ್ರ ಈ ಮಕ್ಕಳಾಟಿಕೆಯ ಕುತೂಹಲವನ್ನು ದೊಡ್ಡವರಾದಾಗಲೂ ಉಳಿಸಿಕೊಂಡಿದ್ದೇವೆ. ವಯಸ್ಕರಲ್ಲಿ ಇದು ನಮ್ಮ ಪರಿಸರದ ಅಂಶಗಳನ್ನು ವಿಶ್ಲೇಷಿಸಿ, ವರ್ಗೀಕರಿಸುವ ಪ್ರೌಢಗುಣವಾಗಿ ಇದು ಮುಂದುವರೆಯುತ್ತದೆ.  ಬುಡಕಟ್ಟು ಜನರಾಗಿ ನಾವು ಬೇಟೆಗೆ ಬೇಕಾದ ಆ ಜಾಗದ ಅರಿವನ್ನು, ಬೇಟೆಯ ಪ್ರಾಣಿಗಳ ನಡವಳಿಕೆಗಳನ್ನು ಇದರಿಂದಷ್ಟೆ ಅರ್ಥಮಾಡಿಕೊಳ್ಳಬಹುದಾಯ್ತು. ಮೊಸರಿನ ಮೇಲೆ ಕೊಸರಿನಂತೆ ಈ ತೀವ್ರ ಕುತೂಹಲ ಶೋಧ ಪ್ರವೃತ್ತಿಗೆ ಹಾದಿ ಮಾಡಿ ಕೊಟ್ಟಿತು. ಶೋಧಗಳು ಹೊಸ ಸಾಧನಗಳತ್ತ ಕೊಂಡೊಯ್ದವು. ಸಾಧನಗಳು ತಾಂತ್ರಿಕ ಮುನ್ನಡೆಯತ್ತ ಕರೆದೊಯ್ದವು.

ಈ ತಾಂತ್ರಿಕ ಸುಧಾರಣೆಗಳು ಸುಮಾರು ಒಂದು ಮಿಲಿಯನ್ ವರ್ಷಗಳವರೆಗೆ ಬೇಟೆಗಾರ ಕಾಡುಜನರಾಗಿದ್ದ ನಮ್ಮನ್ನು ಬೆರಗುಗೊಳಿಸುವ ಹೊಸ ಪ್ರಪಂಚದ ಹೊಸ್ತಿಲಿನೆಡೆ ಕೊಂಡೊಯ್ದವು. ಬೇಟೆಗಾರ ಆದಿಮಾನವ ಕೃಷಿಕನಾದ. ಬೇಟೆಯ ಪ್ರಾಣಿಗಳನ್ನು ಹಾಗೂ ನಮ್ಮ ಆಹಾರ ಬೆಳೆಗಳನ್ನು ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಿ ನಿಯಂತ್ರಿಸಿದ್ದರಿಂದಾಗಿ ಮೊತ್ತ ಮೊದಲ ಬಾರಿಗೆ ನಮ್ಮ ಬಳಿ ಅವಶ್ಯಕ್ಕಿಂತ ಆಹಾರ ಹೆಚ್ಚಾಯಿತು. ಆಹಾರಾನ್ವೇಷಣೆ ಎಷ್ಟು ಸಮರ್ಥವಾಗಿಬಿಟ್ಟಿತ್ತೆಂದರೆ ಅದಕ್ಕಾಗಿ ಪಂಗಡದ ಎಲ್ಲ ಸದಸ್ಯರ ನೆರವೂ ಬೇಕಿರಲಿಲ್ಲ. ಇದರ ಅರ್ಥವಿಷ್ಟೆ. ಈಗ ವಿಶೇಷ ಕೌಶಲಗಳಿದ್ದವರು ಅದನ್ನು ತೀವ್ರಗತಿಯಿಂದ ಸುಧಾರಿಸಿಕೊಳ್ಳಬಹುದಾಯ್ತು. ನವ ಶಿಲಾಯುಗದ  ಈ ಕ್ರಾಂತಿಯಿಂದಾಗಿ ಹಳ್ಳಿಗಳು, ಪಟ್ಟಣಗಳಾಗಿ, ಪಟ್ಟಣಗಳು ನಗರಗಳಾಗಿ ಬೆಳೆಯುವುದನ್ನು ಕಂಡೆವು. ಆ ಪುಟ್ಟ ಬುಡಕಟ್ಟು ಪಂಗಡಗಳು ಈಗ ಮಹಾಪಂಗಡಗಳಾಗಿ ಹಿಗ್ಗಿದುವು. ಮಾನವನ ಶೋಧಪ್ರಕೃತಿಯ ಬಲವೆನ್ನಿಸಿದ ಕುತೂಹಲಕ್ಕೆ ಲಂಗುಲಗಾಮಿಲ್ಲವಾಯಿತು. ಖುಷಿ ಎನ್ನುವುದು ಹೊಸ ಆಟಿಕೆ, ಹೊಸ ಪದ, ಹೊಸ ವಸ್ತು,  ಹೊಸ ಸಾಧನ, ಹೊಸ ಬಗೆಯ ಸಂಚಾರ, ಹೊಸ ಶೈಲಿಯ ಕಟ್ಟಡವೆಂದಾಯಿತು.  ಹೊಸ ಆಯುಧ ಹಾಗೂ ಹೊಸ ಬಂದೀಖಾನೆಗಳಿಗೂ ಇದೇ ಅರ್ಥ ಬಂದಿದ್ದು  ದುಃಖದ ವಿಷಯ.

ಶಾಂತ ಬೇಟೆಗಾರನೀಗ ಅತಿ ಒತ್ತಡದಲ್ಲಿ ಸಿಕ್ಕಿಕೊಂಡ. ಈ ಹೊಸ, ನಗರವಾಸಿ, ಮಹಾಪಂಗಡ ಜೀವನದಿಂದಾಗಿ ಅವನ ಹಲವು ನಡವಳಿಕೆಗಳು ಅಸೀಮ ಒತ್ತಡಕ್ಕೊಳಗಾದವು. ಮಾನವನೆಂಬ  ಈ ನಗರ-ವಾನರ ಈಗ ಶ್ರೀಮಂತನಾಗಿದ್ದ, ಹಲವು ಭಯಂಕರ ಪ್ರಮಾದಗಳನ್ನೂ ಮಾಡಿದ. ಅವನ ಸಫಲತೆಯ ಕಥೆ ಎಷ್ಟು ಬೇಗ ಓಡುತ್ತಿತ್ತು ಎಂದರೆ ಈ ಹೊಸ ಬಗೆಯ ಬದುಕಿಗೆ ಅವಶ್ಯಕವಾದ ಮಾನಸಿಕ ಸ್ಥಿತಿಯನ್ನು ಬೆಳೆಸಿಕೊಳ್ಳುವುದು ಕಷ್ಟವಾಯಿತು. ಮೊದಲಿಗೆ ಸ್ಪರ್ಧೆ ಹಾಗೂ ಸಹಕಾರಗಳ ನಡುವಣ ಸೂಕ್ಷ್ಮವಾದ ಸಮತೋಲ ಏರುಪೇರಾಯಿತು. ಇದು ಸ್ಪರ್ಧೆಯ ಕಡೆಗೇ ಹೆಚ್ಚು ವಾಲಿತು. ಪುರಾತನ ಪಟ್ಟಣಗಳು ಹಾಗೂ ನಗರಗಳಲ್ಲಿದ್ದ ಬೃಹತ್ ಜನತೆ ಹೆಚ್ಚೆಚ್ಚು ನಿರಾಪ್ತ (impersonal) ಎನ್ನಿಸಿದವು. ಗೆಳೆತನದ ಬಂಧಗಳು ಕಳಚಿಕೊಳ್ಳಲಾರಂಭಿಸಿದುವು. ಸ್ಥಳೀಯವಾಗಿ ಮುಖಂಡರಾದಂತಹವರು ಮೊದಲಿಗಿಂತ ಹೆಚ್ಚು ನಿರ್ದಯತೆಯಿಂದ ತಮ್ಮ ಅಧಿಕಾರವನ್ನು ಪ್ರಯೋಗಿಸಬಹುದಾಯಿತು. ಗುಲಾಮ ವರ್ಗಗಳು ಹುಟ್ಟಿಕೊಂಡವು. ಬಹುತೇಕರಿಗೆ ಆನಂದ ಎನ್ನುವುದು ಅಪರೂಪವಾಯಿತು.. ನಾವು ಎಷ್ಟೋ ಬಾರಿ ಹಾಡಿ ಹೊಗಳುವ ಗ್ರೀಕರ ಸಾಮ್ರಾಜ್ಯವನ್ನು ಕೂಡ ಗುಲಾಮಗಿರಿಯ ಮೇಲೇ ಕಟ್ಟಲಾಗಿತ್ತು.

ಇದರಿಂದ ಕೌಟುಂಬಿಕ ಸಂಬಂಧಗಳಿಗೂ ತೊಂದರೆಯಾಯಿತು. ಬೇಟೆಗಾರರಾಗಿದ್ದಷ್ಟು ಸುದೀರ್ಘ ಕಾಲವೂ ನಾವು ಜೋಡಿ ದಂಪತಿಗಳಾಗಿ ಬದುಕುವತ್ತ ಹೊರಳಿದ್ದೆವು. ಇದೊಂದು ಮಹತ್ತರ ತಿರುವಾಗಿತ್ತು. ಅಂದರೆ ನಮ್ಮ ಪೂರ್ವಜರು ಪ್ರೇಮಿಸಲು ತಯಾರಾಗಿದ್ದರು. ನೆನಪಿಡಿ, ಈ ಬದಲಾವಣೆ ನಿಧಾನವಾಗಿ ಬೆಳೆಯುವ ಸಂತಾನಗಳನ್ನು ಕಾಪಾಡುವುದರತ್ತ ಇಟ್ಟ ಪ್ರಮುಖ ಹೆಜ್ಜೆ. ಗಂಡಸರು ಬೇಟೆಗಾಗಿ ಹೆಚ್ಚೆಚ್ಚು ಹೊತ್ತು ದೂರವಿರುತ್ತಿದ್ದರು ಹಾಗೂ ಮನೆಗೆ ಮರಳಿ ಹೆಂಗಸರು ಹಾಗೂ ಮಕ್ಕಳಿಗೆ ಉಣಿಸು ನೀಡಿ ಪಾಲಿಸಬೇಕಿದ್ದರೆ ಹೆಣ್ಣಿನ ಜೊತೆಗಿನ  ಅವರ ಸಂಬಂಧ ಬಲು ಭದ್ರವಾಗಬೇಕಿತ್ತು.

ನಗರ ಜೀವನದ ಹೊಸ ವ್ಯವಸ್ಥೆಯಲ್ಲಿ, ವಿಶೇಷ ಕೌಶಲ್ಯಗಳ ಬೆಳವಣಿಗೆ ಹಾಗೂ ಕಾಯಕಗಳ ಹಂಚಿಕೆಗಳು ಕಾಣಿಸಿಕೊಂಡ ಫಲ ವ್ಯಾಪಾರ ಹಾಗೂ ಚೌಕಾಶಿತನ ಜೀವನದ ಒಂದು ಅಂಗವಾದುವು. ಇದರೊಟ್ಟಿಗೆ ಕೌಟುಂಬಿಕ ಬಂಧ ಎನ್ನುವುದು ಪ್ರೇಮ ಎನ್ನುವುದರಿಂದ ವ್ಯವಹಾರ ಬಂಧವಾಗಿ ಬದಲಾಯಿತು. ಮದುವೆ ಎನ್ನುವುದು ಹೊಸ ರೀತಿಯ ವ್ಯಾಪಾರವಾಯಿತು. ಇದಕ್ಕೆ ಒಗ್ಗಿಬರದ ಪ್ರೇಮ ಎನ್ನುವ ಬಂಧ ನಿಷ್ಠುರವಾಗಿ ಅದುಮಲ್ಪಟ್ಟಿತು. ಆಪ್ತ ಸಂಬಂಧಗಳಲ್ಲಿ ಅಸಂತೋಷವೆನ್ನುವುದು ಹರಡಿಕೊಂಡಿತು.

ಆದರೂ ಈ ಮನುಷ್ಯ ಎನ್ನುವ ಜೀವಿ ಬಲು ಗಟ್ಟಿ ಬಿಡಿ.  ಹೀಗೆ ನಮ್ಮ ಜೈವಿಕ ಅನುವಂಶೀಯತೆಯ ಪ್ರಧಾನ ಗುಣಗಳಿಗೆ ವಿರುದ್ಧವಾಗಿ ಸಮಾಜದ ಸ್ಥಿತಿಗತಿಗಳು ಎಳೆದಾಡಿದಾಗಲೆಲ್ಲ ನಮ್ಮಲ್ಲಿ ಅಂತರ್ಗತವಾದ ಯಾವುದೋ ಶಕ್ತಿ  ಸ್ವಸ್ಥಾನಕ್ಕೆ ಮರಳಲು ನೆರವಾಗುತ್ತದೆ. ಹತ್ತಾರು ಸಾವಿರ ವರ್ಷಗಳ ಮಾನವನ ಕಥೆಯ ಬೆರಗುಗೊಳಿಸುವ ಅಂಶವೆಂದರೆ ಇದು ನಾವು ಚರಿತ್ರಪೂರ್ವ ಕಾಲದಲ್ಲಿ ಇದ್ದಂತಹ ಸ್ಥಿತಿಗೇ ಮರಳಲು ಪ್ರಯತ್ನಿಸುತ್ತಿರುವ ಸುದೀರ್ಘ ಶ್ರಮ ಎನ್ನಬಹುದು. ಇದ್ದಂತಹ ಸ್ಥಿತಿಯೇ ಹೊರತು ಇದ್ದ ಸ್ಥಿತಿಯಲ್ಲ ಎನ್ನಿ. ಇದರ ಅರ್ಥ ವಿಷ್ಟೆ. ಪ್ರತಿಯೊಂದು ತಾಂತ್ರಿಕ ಬೆಳವಣಿಗೆಯೂ ನಾವು ಮಾನವರಾಟವನ್ನು ಆಡುವುದಕ್ಕೆ ಹೊಸ ಮಾರ್ಗಗಳನ್ನು ಹುಡುಕಬೇಕಾಯ್ತು.

ನಾಗರೀಕತೆ ಎನ್ನುವುದು ಈ ಬೆತ್ತಲೆ ವಾನರ ಹೊತ್ತು ನಡೆದ ಪ್ರಥಮ ಚಿಕಿತ್ಸೆಯ ಹೊರೆ ಎಂದು ಈ ಹಿಂದೆ ಒಮ್ಮೆ ನಾನು ಹೇಳಿದ್ದುಂಟು. ನಾಗರೀಕತೆ ಎನ್ನುವುದು ನಮ್ಮ ಪಾದಗಳಲ್ಲಿ ಬೊಕ್ಕೆಯೇಳಿಸುವಷ್ಟು ಭಾರಿ ಹೊರೆಯಾಗಿದ್ದರಿಂದ ಪ್ರಥಮ ಚಿಕಿತ್ಸೆಯ ಹೊರೆಯೂ ಬೇಕಾಯ್ತು. ಮಾನವನೆಂಬ  ಬೆತ್ತಲೆ ವಾನರ ತಾನು ಧರಿಸಿರುವ ಹೊಸ ಸಂಕೋಲೆಗಳನ್ನು ಕಳಚಿಕೊಳ್ಳದೆಯೇ ಹಳೆಯ ಜೈವಿಕ ಸಂಪ್ರದಾಯಗಳತ್ತ ಮರಳಲು ಸದಾ ಪ್ರಯತ್ನಿಸುವ ಪ್ರಾಣಿ. ಈ ಸೂಕ್ಷ್ಮವಾದ ನಡೆಯಲ್ಲಿ ನಮಗೆ ಭಾಷೆಯ ಬೆಳವಣಿಗೆಯಿಂದ ಲಭಿಸಿದ ಸಾಮರ್ಥ್ಯ ನಮ್ಮ ನೆರವಿಗೆ ಬರುತ್ತದೆ. ನಾವೀಗ ಮಹಾ ಸಂಕೇತಜ್ಞರಾಗಿ ಬಿಟ್ಟಿದ್ದೇವೆ. ನಾವು ಭಾಷೆಯೆಂಬ ಸಂಕೇತವನ್ನು ಬಳಸುವುದಷ್ಟೆ ಅಲ್ಲ, ನಮ್ಮ ಪ್ರತಿಯೊಂದು ಚಟುವಟಿಕೆಯಲ್ಲಿಯೂ ಸಾಂಕೇತಿಕ ಸೂತ್ರಗಳನ್ನು ರಚಿಸುತ್ತೇವೆ. ಹೀಗೆ ಸಂಕೇತಗಳನ್ನು ಸೃಷ್ಟಿಸುವದರಲ್ಲಿ ನಾವು ಎಷ್ಟು ಪರಿಣತರಾಗಿವಿಟ್ಟಿದ್ದೇವೆ ಎಂದರೆ ಒಂದು ಸಾಂಕೇತಿಕ ಸಾಧನೆಯೂ ನಮಗೆ ಖುಷಿ ತರಬಲ್ಲುದು. ಸಾಂಕೇತಿಕವಾಗಿಯೇ ಆದರೂ ಆದಿ ರೂಪದಲ್ಲಿ ಮಾಡುತ್ತಿದ್ದ ಕೆಲಸದ ಮಾದರಿಯನ್ನೋ, ನಕಲನ್ನೋ ಸಾಂಕೇತಿಕವಾಗಿ ನಡೆಸಿ ಅದು ನಿಜವೇ ಏನೋ ಎನ್ನುವಷ್ಟು ಖುಷಿ ಪಡುತ್ತೇವೆ. ಇದಕ್ಕೊಂದು ವೈಯಕ್ತಿಕ ಉದಾಹರಣೆ ಕೊಡುತ್ತೇನೆ. ಪುಸ್ತಕಗಳನ್ನು ಹುಡುಕುವುದು ನನಗೆ ಬಹಳ ಖುಷಿ ಕೊಡುವ ಕೆಲಸ. ಬಹಳ ದಿನಗಳ ಹುಡುಕಾಟದ ಅನಂತರ ನನಗೆ ಬೇಕಾಯಿತೆನ್ನಿಸಿದ ಅಪರೂಪದ ಪುಸ್ತಕವೊಂದು ಸಿಕ್ಕಿತೆನ್ನಿ, ಅದನ್ನು ತೆಗೆದುಕೊಂಡು ಮನೆಗೆ ಹೋಗುವುದು ಆದಿ ರೂಪದಲ್ಲಿ ಪ್ರಾಣಿಗಳನ್ನು ಬೇಟೆಯಾಡಿ ಮನೆಗೆ ಕೊಂಡೊಯ್ಯುತ್ತಿದ್ದುದರ ಸಂಕೇತ. ನನಗೆ ಈ ರೀತಿಯ ಬೇಟೆಯ ಅವಶ್ಯಕತೆ ಇನ್ನೂ ಇದೆ. ಆದರೆ ನನ್ನ ಪೂರ್ವೀಕರಂತೆ ನನ್ನ ಬೇಟೆಯ ಬಯಕೆಯನ್ನು ತಣಿಸಲು ಕಾಡುಪ್ರಾಣಿಗಳನ್ನು ಕೊಲ್ಲಬೇಕಿಲ್ಲ. ಏಕೆಂದರೆ ನಾನೀಗ ಮಾನವನಾಗಿದ್ದೇನೆ.

ಇಂದು ನಮ್ಮ ನಡವಳಿಕೆಗಳಲ್ಲಿ ಬಹುತೇಕ ಇಂತಹ ಆದಿ ನಡವಳಿಕೆಗಳ ಸಂಕೇತ ಸ್ವರೂಪಗಳು. ನಮ್ಮ ಉಳಿವಿಗೆ ಅವಶ್ಯಕವಾದ ಬೇಟೆಯನ್ನು ಬೇಸಾಯ ಕಿತ್ತೊಗೆದಂದಿನಿಂದಲೇ ಇದು ಆರಂಭವಾಯಿತು. ಉಳಿವಿಗಾಗಿ ಬೇಟೆ ಎನ್ನುವುದು ಮರೆಯಾದ ಕೂಡಲೇ, ಅದರ ಜಾಗದಲ್ಲಿ ಬೇಟೆಯೆಂಬ ಆಟ ಬಂತು. ಕಾಲಗಳೆಯಲು ಕಾಡುಪ್ರಾಣಿಗಳನ್ನು ಕೊಲೆಮಾಡಲಾರಂಭಿಸಿದೆವು. ಇಂತಹ ಕೊಲೆಗಡುಕ ಆಟಗಳು ಬೇಟೆಯ ಉನ್ಮಾದವನ್ನು ಉಳಿಸಿದುವು. ಅನಂತರ, ನಗರಗಳು ಹಾಗೂ ಪಟ್ಟಣಗಳು ಇನ್ನೂ ದೊಡ್ಡ, ದೊಡ್ಡದಾಗಿ ಬೆಳೆಯಲಾರಂಭಿಸಿದಾಗ ನಗರದ ಜನತೆ ಇಂತಹ ಓಟಾಟಗಳನ್ನು ಅನುಭವಿಸಲಾರದಾಯಿತಷ್ಟೆ. ಆಗ ಇಂತಹ ಬೇಟೆಯ ಅಪಬ್ರಂಶವೆನ್ನಿಸಿದ ಆಟ ಕಾಣಿಸಿಕೊಂಡಿತು: ಅದುವೇ ರಂಗಸ್ಪರ್ಧೆಗಳು. ಪುರಾತನ ರೋಮ್ ನಲ್ಲಿ ಕೊಲಿಸಿಯಮ್ ನಿರ್ಮಾಣವಾಯಿತು. ಅಲ್ಲಿ ತುಂಬಿಕೊಂಡ ಜನಜಂಗುಳಿಯ ಸಂತೋಷಕ್ಕಾಗಿ ಅಸಂಖ್ಯ ಪ್ರಾಣಿಗಳನ್ನು ತಂದು ಬೇಟೆಯಾಡಲಾಯಿತು. ಒಂಭೈನೂರು ವರ್ಷಗಳ ಹಿಂದೆ ಅದರ ಉದ್ಘಾಟನೆಯ ಸಂದರ್ಭದಲ್ಲಿ ಐದುಸಾವಿರಕ್ಕೂ ಹೆಚ್ಚು ಪ್ರಾಣಿಗಳು ಕೊಲೆಯಾದುವು. ಈ ಬಗೆಯ ಪ್ರಾಣಿಬೇಟೆ ವ್ಯಾಪಕವಾಗಿ ನಡೆಯುತ್ತಿತ್ತು. ಸ್ಪೇನಿನ ಗೂಳಿಕಾಳಗದಂತಹ ರೂಪದಲ್ಲಿ ಈಗಲೂ ಇದು ಉಳಿದುಕೊಂಡಿದೆ. ಬೇಟೆಯಾಡುವುದರ ಪ್ರಾತ್ಯಕ್ಷಿಕೆಯೋ ಎನ್ನುವಂತೆ ಪ್ರತಿವರ್ಷ ಪಾಂಪ್ಲೋನಾದಲ್ಲಿ ನಡೆಯುವ ಗೂಳಿ ಸ್ಪರ್ಧೆಗಳ ಬಗ್ಗೆ ನಿಮಗೆ ಗೊತ್ತೆ ಇರಬೇಕಲ್ಲ!

ನಾಗರೀಕತೆ ಎನ್ನುವುದು ಇಲ್ಲವೇ ಇಲ್ಲವೇನೋ ಎನ್ನುವಂತೆ ಹಲವು ರಾಷ್ಟ್ರಗಳಲ್ಲಿ ಈ ಬಗೆಯ ಬೇಟೆಯಾಟಗಳು ವಿವಿಧ ರೂಪಗಳಲ್ಲಿ ಇನ್ನೂ ಅರಳುತ್ತಲೇ ಇವೆ. ನಮ್ಮಲ್ಲಿ ಈ ಬೇಟೆಯ ಹಂಬಲ ಎಷ್ಟು ಪ್ರಬಲವಾಗಿದೆ ಎಂದರೆ ಈ ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಅದು ತನ್ನ ರಕ್ತಸಿಕ್ತ ಮೂಲರೂಪದಲ್ಲಿ ಸಿಡಿಯಬಹುದು. ಈ ಹಂಬಲವನ್ನು ಹತ್ತಿಕ್ಕಲು ಜನತೆ ತಮ್ಮ ಸಾಂಕೇತಿಕ ಸೂತ್ರಗಳನ್ನು ಇನ್ನೂ ಉನ್ನತ ಮಾನವೀಯ ಮಟ್ಟಕ್ಕೆ ಕೊಂಡೊಯ್ಯಬೇಕಾಗಿದೆ.

ಖುಷಿಯ ವಿಷಯವೆಂದರೆ ಹಳೆಯ ರಕ್ತದೋಕುಳಿಯಾಟಗಳ ಜಾಗೆಯಲ್ಲಿ ಇಂದು ಚೆಂಡಿನಾಟಗಳು ಬಂದಿವೆ. ಪ್ರಾಣಿಗಳನ್ನು ಕೊಲ್ಲುತ್ತಿದ್ದ ತಂಡದ ಬದಲಿಗೆ ಆಟಗಾರರ ತಂಡವಿದೆ. ಪ್ರತಿ ಚೆಂಡಿನಾಟವೂ ಅದರದ್ದೇ ಆದ ಆದಿಮ ಬೇಟೆಯಾಟದ ವಿಶೇಷ ಮಾದರಿಯನ್ನು ರೂಪಿಸಿಕೊಂಡಿದೆ. ಫುಟ್ಬಾಲಿನಲ್ಲಿ ಗೋಲುಗಂಭಗಳು ಬೇಟೆಪ್ರಾಣಿಯ ಸಂಕೇತವಾಗಿವೆ. ಅದನ್ನು ನಾವು ಕೊಲ್ಲಬೇಕು. ಶಸ್ತ್ರವನ್ನು ಬೀಸಿ ಕೊಲ್ಲಲು ಈ ಬೇಟೆ ಸುಲಭ ಈಡು. ಆಟ ಇನ್ನಷ್ಟು ಉತ್ತೇಜಕವೆನ್ನಿಸಬೇಕೆಂದರೆ ಈಡನ್ನು ರಕ್ಷಿಸಬೇಕು. ವಿರೋಧಿ ತಂಡದ ಡಿಫೆಂಡರ್ ಗಳಿಂದ  ಈ ರಕ್ಷಣೆ ದೊರೆಯುತ್ತದೆ. ಸಾಕಷ್ಟು ಗೋಲುಗಳನ್ನು ಗಳಿಸಿದಾಗ (ಅಂದರೆ ಸಾಕಷ್ಟು ಬೇಟೆಗಳನ್ನು ಕೊಂದ ಮೇಲೆ) ಗೆದ್ದ ಟೀಮಿನ ನಕಲು-ಬೇಟೆಗಾರರು ತಾವು ಗೆದ್ದ ಬೇಟೆಯನ್ನು (ಟ್ರೋಫಿ) ತಮ್ಮ ಪಂಗಡದ ನೆಲೆಗೆ ಕೊಂಡೊಯ್ಯುತ್ತಾರೆ. ಅಲ್ಲಿ ಅದನ್ನು ಪಂಗಡದ ಇತರರು, ಅಂದರೆ ತಂಡದ ಬೆಂಬಲಿಗರು, ಕಾಣಲೆಂದು ಟೌನ್ ಹಾಲಿನ ಬಾಲ್ಕನಿಯಲ್ಲಿ   ಪ್ರದರ್ಶನಕ್ಕಿಡುತ್ತಾರೆ. ಈ ಟ್ರೋಫಿಯನ್ನು ತಿನ್ನುವುದಂತೂ ಆಗದು. ಆದರೂ ಫುಟ್ಬಾಲಿನ ಮಹಾ ಸ್ಪರ್ಧೆಗಳಲ್ಲಿ ಗೆದ್ದ ಟ್ರೋಫಿಯನ್ನು ಅನಂತರ ನಡೆಯುವ ಭೋಜನಕೂಟದಲ್ಲಿ ಪಂಕ್ತಿಯ ನಡುವೆ ಇಡುವುದುಂಟು.

ಬೇಟೆಗೂ ಇದಕ್ಕೂ ಇರುವ ಸಾಮ್ಯತೆ ಸ್ಪಷ್ಟ. ವಿವರಗಳು ಬದಲಾಗಿರಬಹುದು. ಆದರೆ ಯೋಜನೆ, ತಂತ್ರಗಾರಿಕೆ, ತಂತ್ರಗಳು ಮತ್ತು ಅಪಾಯಗಳು, ದೈಹಿಕ ಶ್ರಮ ಮತ್ತು ಗಾಯಗಳು, ತಂಡದ ಸಹಕಾರ, ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ ಈಡನ್ನು ಹೊಡೆಯಬೇಕೆನ್ನುವ ಆ ಉನ್ನತ ಗುರಿ, ಈ ಎಲ್ಲ ಮೂಲ ಭಾವನೆಗಳು ಹಾಗೇ ಉಳಿದಿವೆ. ಇಂದಿನ ಎಲ್ಲ ಆಟೋಟಗಳಲ್ಲೆಲ್ಲದರಲ್ಲೂ ಓಡುವುದು ಹಾಗೂ ಗುರಿಯಿಡುವುದು ಇದ್ದೇ ಇದೆ. ಇವೆರಡೂ ಆದಿಮ ಬೇಟೆಯ ಮೂಲ ತತ್ವಗಳು.

ಉತ್ಕಟ ಖುಷಿಯನ್ನು ಪ್ರಕಟಿಸುವ ಭಾವಗಳು ಹೇಗಿರುತ್ತವೆ ಎನ್ನುವುದನ್ನು ಗಮನಿಸಬೇಕಾದರೆ ಪ್ರಮುಖ ಆಟವೊಂದರ ಕೊನೆಯ ಕ್ಷಣದಲ್ಲಿ ಗೆಲುವಿನ ಗೋಲು ಹೊಡೆದಾಗ ಆಟಗಾರರು ಹಾಗೂ ಪ್ರೇಕ್ಷಕರ ನಡವಳಿಕೆಯನ್ನು ಗಮನಿಸಬೇಕು.  ನಮ್ಮ ಪೂರ್ವಜ ಬೇಟೆಗಾರರು ಯಾರೂ ಹೀಗೆ ಅತ್ಯಾನಂದದಿಂದ ಹೀಗೆ ಮೇಲೆ ಹಾರುತ್ತಿದ್ದರೆಂದು ನನಗೆ ಅನಿಸುವುದಿಲ್ಲ. ಇಂದಿನ ಆಟೋಟಗಳು ಆ ಕೊನೆಯ ತೃಪ್ತಿದಾಯಕವಾದ ಖುಷಿಯ ಕ್ಷಣಗಳನ್ನು ಮುಟ್ಟುವಂತಹ ಬೇಟೆಯಾಡುವ ಸಂಕೀರ್ಣ ಕ್ರಿಯೆಯ ಹಂತಗಳನ್ನು ಹೃಸ್ವವಾಗಿಸಿಬಿಟ್ಟಿವೆ. ನಮ್ಮಲ್ಲಿ ಬಹಳ ಜನರಿಗೆ, ಇಂತಹ ಆಟಗಳು ಖುಷಿಯ ಒರಟು ಸೆಲೆಗಳೆನ್ನಿಸಬಹುದು. ಇದಕ್ಕಿಂತಲೂ ನಾಜೂಕಾದ ಹಾಗೂ ಮಾರ್ಮಿಕ ಬೇಟೆಯಾಟಗಳನ್ನು ನಾವು ಇಷ್ಟಪಟ್ಟೇವು. ನಗರದಲ್ಲಿ ವ್ಯಾಪಾರಿ ಹೀಗೆಯೇ ಗಿರಾಕಿಯನ್ನು ‘ಹಿಡಿ’ಯುತ್ತಾನೆ. ನಟನೊಬ್ಬ ತನ್ನ ಅದ್ಭುತ ನಟನೆಯಿಂದ ಪ್ರೇಕ್ಷಕರನ್ನು ‘ಕೊಲ್ಲು’ ತ್ತಾನೆ. ತಾವಿಟ್ಟುಕೊಂಡ ‘ಗುರಿ’ ಯ ಹಣವನ್ನು ಸಂಗ್ರಹಿಸಿದಾಗ ಧರ್ಮಾರ್ಥ ಸಂಸ್ಥೆಗಳ ಸಿಬ್ಬಂದಿಗೆ ಖುಷಿಯಾಗುತ್ತದೆ. ರಾಜಕಾರಣಿ ತನ್ನ ‘ಗುರಿ’ ಬಡವರ ನೋವಿನ ನಿವಾರಣೆ ಎನ್ನುತ್ತಾನೆ.  ಕ್ಯಾನ್ಸರಿಗೆ ಚಿಕಿತ್ಸೆಯನ್ನು ‘ಹುಡುಕು’ ವುದೇ ವಿಜ್ಞಾನಿಯ ಜೀವನದ ಧ್ಯೇಯವಾಗುತ್ತದೆ. ಕಲಾವಿದ ಕ್ಯಾನ್ವಾಸಿನ ಮೇಲೆ ಲೋಪವಿಲ್ಲದ ಚಿತ್ರವನ್ನು ‘ ಸೆರೆ ಹಿಡಿದು’ ಇಡಬೇಕೆಂದು ಬಯಸುತ್ತಾನೆ. ಕೊಲ್ಲು, ಬಡಿ, ಗುರಿಯಿಡು, ಹುಡುಕು, ಸೆರೆ ಹಿಡಿ ಹೀಗೇ ನಾವು ನಮ್ಮ ಪ್ರಮುಖ ಧ್ಯೇಯಗಳನ್ನು ವ್ಯಕ್ತಪಡಿಸಲು ಬಳಸುವ ಹತ್ತು ಹಲವು ಶಬ್ದಗಳು ಬಲು ಅರ್ಥಪೂರ್ಣ.

ನಾವೆಲ್ಲರೂ ಒಂದು ರೀತಿಯಲ್ಲಿ ಮಾರ್ಮಿಕ ಬೇಟೆಗಾರರು. ಬೇರೆ, ಬೇರೆ ವೇಷ ತೊಡುತ್ತೇವೆ ಅಷ್ಟೆ. ನಮ್ಮಲ್ಲಿ ಕೆಲವರು ಹಲವು ವೇ಼ಷಗಳನ್ನು ಧರಿಸಿ, ವಿಭಿನ್ನ ಚಟುವಟಿಕೆಗಳಲ್ಲಿ ಸಂತೋಷವನ್ನು ಹುಡುಕುತ್ತೇವೆ. ಉಳಿದವರು ವಿಶೇಷಜ್ಞರಾಗಿ ಜೀವಮಾನ ಪರ್ಯಂತ ಒಂದೇ ಬೇಟೆಯ ಬೆನ್ನು ಹತ್ತಿ ಹೋಗಲು ಇಚ್ಛಿಸುತ್ತಾರೆ. ಕೆಲವು ಮಾರ್ಮಿಕ ಬೇಟೆಯಾಟ ಬದುಕಿನ ಪೂರ್ತಿ ಇರಬಹುದು. ನಾನು ಈಗ ಸರ್ ಜೇಮ್ಸ್ ಮುರ್ರೇ ಆಕ್ಸ್ ಫರ್ಡ್ ನಿಘಂಟನ್ನು ಸಂಕಲಿಸಿದ ಮನೆಯಲ್ಲಿ ವಾಸವಿದ್ದೇನೆ. ಆತ ಸುಮಾರು ಮೂವತ್ತು ವರ್ಷಗಳ ಕಾಲ ಈ ನಿಘಂಟಿನ ಕಾರ್ಯದಲ್ಲಿ ನಿರತನಾಗಿದ್ದ. ಆತನ ಬೇಟೆ, ಅಂತಿಮ ಗುರಿ, ಜೆಡ್ ಅಕ್ಷರದ ಕೊನೆಯ ಪದ ಇದ್ದಿರಬೇಕು. ಅತ್ಯಂತ ವಿಷಾದದ ಸಂಗತಿ ಎಂದರೆ ಆತ ‘ಟಿ’ ಅಕ್ಷರವನ್ನು ತಲುಪುವ ಮುನ್ನವೇ, ಅಂದರೆ ಚಿರಸ್ಮರಣೀಯವಾದ ಖುಷಿಯನ್ನು ಅನುಭವಿಸುವ ಮುನ್ನವೇ, ಸತ್ತನೆಂದು ತಿಳಿಯುತ್ತದೆ. ಆತ ಸಾಯುವ ವೇಳೆ ಇನ್ನೂ “turndown” (ಟರ್ನ್ ಡೌನ್) ಎನ್ನುವ ಪದದಲ್ಲೇ ಇದ್ದ. “zymurgy” (ಜೈಮುರ್ಜಿ – ಇಂಗ್ಲೀಷ್ ನಿಘಂಟಿನ ಕೊನೆಯ ಪದ) ಯ ವಿವರಣೆಯನ್ನು ಪೂರ್ಣಗೊಳಿಸಿದ ಅಪ್ಪಟ ಸಂತೋಷವನ್ನು ಅನುಭವಿಸಲು ಆತ ಬದುಕಿ ಉಳಿಯಲಿಲ್ಲ. ಆ ಕ್ಷಣ ಎಂತಹ ಉತ್ಕಟ ಆನಂದದ ಕ್ಷಣವಾಗಿರುತ್ತಿತ್ತೋ?!

ಸಂತೋಷವೆನವನುವುದು ಒಬ್ಬೊಬ್ಬರಿಗೆ ಒಂದೊಂದು ತೆರವಷ್ಟೆ. ಆದರೂ ನಾನು ಒಂದೇ ಒಂದು ಬಗೆಯ ಬಗ್ಗೆ ಮಾತನಾಡುತ್ತಿದ್ದೇನೆ. ಬೇಟೆಯಾಡುವ ಆದಿಮ ತುಡಿತವನ್ನು ತೃಪ್ತಿಗೊಳಿಸಿದ್ದರಿಂದ ದೊರೆಯುವ ಖುಷಿಯ ಬಗ್ಗೆಯಷ್ಟೆ ಮಾತನಾಡಿದ್ದೇನೆ. ಈ ತುಡಿತವೇ ಇಂದು ಹಲವು ವಿಧವಾದ ಕ್ರಿಯಾಶೀಲ ಹಾಗೂ ಪರಿಪೂರ್ಣತೆಯ ಚಟುವಟಿಕೆಗಳ ಎತ್ತರವನ್ನು ತಲುಪಿದೆ. ನಾನು ಹೀಗೇಕೆ ಮಾಡಿದೆ ಎಂದರೆ, ನಮ್ಮಲ್ಲಿ ಬಹಳಷ್ಟು ಮಂದಿಯಲ್ಲಿ ಈ ಗುಣ ಕಾಣೆಯಾಗಿರುವುದೇ ಇಂದು ನಾವು ಕಾಣುತ್ತಿರುವ ದುಃಖ, ದುಮ್ಮಾನಗಳಿಗೆ ಕಾರಣ ಅನ್ನುವುದು ನನ್ನ ನಂಬಿಕೆ. ಬದುಕಿನಲ್ಲಿ ಕ್ರಿಯಾಶೀಲತೆ ಹಾಗೂ ಸವಾಲುಗಳನ್ನು ಎದುರಿಸುವವರು ಬಹಳ ಅದೃಷ್ಟವಂತರು. ನಮ್ಮೆದುರಿಗೆ ನಾವು ತಲುಪಬಹುದಾದ ಗುರಿ ಕಾಣುತ್ತಿರುತ್ತದೆ. ನಾವು ಮನುಷ್ಯರು ವಿಕಾಸವಾದಂತೆ, ಅಂದರೆ ಯೋಜನೆಗಳನ್ನು ಹಾಕುತ್ತಾ, ತಂತ್ರಗಳನ್ನು ರೂಪಿಸುತ್ತಾ, ಶ್ರಮಪಟ್ಟು, ಅಪಾಯಗಳನ್ನು (ಕಷ್ಟಗಳನ್ನು) ಎದುರಿಸಿ, ಸಾಧನೆ ಮಾಡುತ್ತ ಬದುಕಬಹುದು. ಆದರೆ ಕೃಷಿಕ್ರಾಂತಿ ಮಾನವ ಜನಾಂಗದ ಬಹುತೇಕ ಜನತೆಯಲ್ಲಿ ಕೆಟ್ಟ ದೋಷವೊಂದನ್ನು ಉಳಿಸಿಬಿಟ್ಟಿದೆ.  ಬಹುತೇಕ ಜನರು ಅವಿರತವಾದ, ಉದಾಸ, ಮರುಕಳಿಸುವಂತಹ ಕೃಷಿ ಕೆಲಸಗಳಲ್ಲಿ ತೊಡಗಿಕೊಂಡರು. ಈಗಲೂ ಹಲವು ದೇಶಗಳಲ್ಲಿ ಇದು ನಡೆಯುತ್ತಲೇ ಇದೆ. ಹುಲ್ಲು ಮೇಯುವ ದನಗಳಿಗೆ ಈ ಬಗೆಯ ಜೀವನ ಒಪ್ಪುವುದಾದರೂ, ಗುರಿಹಿಡಿದು ನಡೆಯುವಷ್ಟು ಬುದ್ಧಿಮತ್ತೆಯಿರುವ ಹೆಣ್ಣು, ಗಂಡುಗಳಿಗಲ್ಲ.

ಕೈಗಾರಿಕಾ ಕ್ರಾಂತಿಯಿಂದಾಗಿ ಪರಿಸ್ಥಿತಿ ಇನ್ನೂ ಹದಗೆಟ್ಟಿತು. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಮೇಲೆ ನೋಡಿದರೆ ಆಕಾಶವೂ ಕಾಣದಂತಾಯ್ತು. ಅವರ ಕೆಲಸ ಇನ್ನಷ್ಟು ಮುಠ್ಠಾಳತನದ್ದೆನಿಸಿತು. ಯಾವುದೇ ಗೊತ್ತು-ಗುರಿ ಅವರ ಕೈಮೀರಿತ್ತು. ಇಂತಹ ಕೆಲಸದಲ್ಲಿ ಯಾವುದೇ ಖುಷಿ ಇರಲಿಲ್ಲ. ಪುರಾತನ ಗ್ರೀಸಿನಲ್ಲಿದ್ದ ಗುಲಾಮಗಿರಿಯನ್ನು ನಾವು ತೊಡೆದುಹಾಕಿದ್ದೆವೇನೋ ಸರಿ. ಆದರೆ ಅದರ ಜಾಗದಲ್ಲಿ ನವೀನ ದಿನಗೂಲಿ ಗುಲಾಮರನ್ನು ಸ್ಥಾಪಿಸಿದೆವು. ಇವರಿಗೆಲ್ಲ ಖುಷಿಯ ಕ್ಷಣ ಎಂಬುದು ಅವರ ಕೆಲಸದಾಚೆಯ ಚಟುವಟಿಕೆಗಳಿಗೆ ಸೀಮಿತವಾಯಿತು.ಆದರೂ ಈ ಕೆಲಸವೇ ಅವರು ಮನೆಗೆ ಎರಡು “ತುತ್ತು” ತರುವಂತೆ ಮಾಡಿದ್ದು. ಅಂದರೆ ಇಷ್ಟೆ. ಈ ನೀರಸ, ಪುನರಾವರ್ತನೆಗೊಳ್ಳುವ ಕೆಲಸ ಆದಿಮ, ರೋಮಾಂಚನಕಾರಿ ಬೇಟೆಗೆ ಪರ್ಯಾಯವೆನಿಸಿತು. ಅವರ ತಲೆಯೊಳಗಿದ್ದ, ವಿಕಾಸದ ಚರಿತ್ರೆಯಲ್ಲೇ ಮಹಾನ್ ಎನ್ನಿಸಿದ, ಮಿದುಳಿಗೆ ಅವಮಾನ ಎನ್ನುವಂತಹ ಕೆಲಸಗಳನ್ನ ಮಾಡುವುದರಲ್ಲೇ ಬಹುತೇಕ ಬದುಕು ಸವೆಸಬೇಕಾಯ್ತು. ಈ ಭಯಂಕರ ಹಿನ್ನೆಡೆಯಿಂದಾಗಿ ಮಾನವತೆಯ ಬೃಹತ್ ಪಾಲು ಸಂತೋಷವನ್ನು ತಮ್ಮ ಬದುಕಿನ ಕೇಂದ್ರದಲ್ಲಿ ಹುಡುಕದೆ, ಹವ್ಯಾಸ, ರಜೆ ಮುಂತಾದ ಬೇರೆ ಯಾವುದೋ ಕೋನದಲ್ಲಿ ಹುಡುಕಬೇಕಾಯಿತು.

ನಾವೀಗ ಇದನ್ನು ತಿದ್ದಿಕೊಳ್ಳುತ್ತಿದ್ದೇವೆ, ಆದರೆ ತುಂಬಾ ನಿಧಾನವಾಗಿ.  ದಿನಗೂಲಿಯ ಗುಲಾಮಿತನದ ಜಾಗೆಯಲ್ಲಿ ನಿರ್ಭಾವುಕ, ಯಾಂತ್ರಿಕ ಮನಸ್ಸನ್ನು ಕಲ್ಲಾಗಿಸುವಂತಹ ಸರಳ ಕೆಲಸಗಳನ್ನು ತಂದಿದ್ದೇವೆ. ಆದಾಯಕ್ಕೆ ತೊಂದರೆ ಇಲ್ಲದಂತೆ ಈ ಬಗೆಯ ನೀರಸ ಪುನರಾವರ್ತಿಸುವ ಉದ್ಯೋಗಗಳ ಪ್ರಮಾಣ ಕಡಿಮೆಯಾಗುವಂತೆ ನೋಡಿಕೊಳ್ಳಬೇಕಾದದ್ದು ಇಂದಿನ ಸಮಾಜದ ಹೊಣೆ. ಸುಧಾರಿತ ತಂತ್ರಜ್ಞಾನಗಳು ಒದಗಿಸುವ ಉನ್ನತ ಕ್ಷಮತೆ ಇದನ್ನು ಸಾಧ್ಯವಾಗಿಸಬಹುದು. ಆದರೆ ನಾವು ಎಲ್ಲಿಯಾದರೂ ಎಡವಿದರೆ ಮುಷ್ಕರಕ್ಕಿಳಿಯದ, ಸಮರ್ಥ ರೋಬೋಗಳು ಲಕ್ಷಾಂತರ ಜನರಿಗೆ ಕೆಲಸವಿಲ್ಲದಂತೆ ಮಾಡುವ ದುರ್ದಿನಗಳನ್ನು ಕಾಣಬೇಕಾದೀತು.  ಹೊಸ ಸುವರ್ಣಯುಗದ ಸಾಧ್ಯತೆಯೇನೋ ಇದೆ. ಇದಕ್ಕಾಗಿ  ನಮ್ಮಲ್ಲಿರುವ ಕಲ್ಪನೆಗಳು, ಚೈತನ್ಯಗಳನ್ನು ಆಕರ್ಷಿಸುವಂತಹ ರಾಜಕೀಯ ಪ್ರಪಂಚ ಬೇಕು. ಮನುಷ್ಯರು ಎಂತಹ ಜೀವಿಗಳು, ಇವರನ್ನು ಖುಷಿಗೊಳಿಸುವುದೇನು ಎನ್ನುವ ಬಗ್ಗೆ ರಾಜಕೀಯ ವ್ಯಕ್ತಿಗಳು ಕಣ್ತೆರೆದು ಕಾಣಲು ಇದು ಪ್ರಸಕ್ತ ಸಮಯ.

ನಮ್ಮ ಈ ಅತಿ ಸಂಕ್ಷಿಪ್ತ ಚರಿತ್ರೆಯ ಪ್ರಕಾರ ಮನುಷ್ಯನಿಗೆ ಖುಷಿ ಕೊಡುವಂತಹ ಮೂಲಗಳು ಹಲವಿವೆ ಎನ್ನುವುದು ಸ್ಪಷ್ಟ. ನಮ್ಮ ಬೇಟೆಗಾರ ಚರಿತ್ರೆಯಿಂದಾಗಿ ಹೊರಹೊಮ್ಮುವ ಮೊದಲನೆಯದನ್ನು “ಈಡಿನ ಖುಷಿ” ಎನ್ನಬಹುದು. ಇದಲ್ಲದೆ ‘ಸ್ಪರ್ಧಾತ್ಮಕ ಸಂತೋಷ”ವೂ ಇದೆ. ಇದು ಗೆಲುವಿನ ಖುಷಿ. ನಾವು ಸಣ್ಣ ಪಂಗಡಗಳಾಗಿ ವಿಕಾಸವಾಗಿ ಬಂದ ಸಾಮಾಜಿಕ ಹಿನ್ನೆಲೆಯಿಂದಾಗಿ ಬಂದದ್ದು. ಇದಕ್ಕೆ ವ್ಯತಿರಿಕ್ತವಾಗಿ “ಸಹಕಾರದ ಆನಂದ”ವೂ ಇದೆ. ಬದುಕಲು ನಾವು ಒಬ್ಬರಿನ್ನೊಬ್ಬರಿಗೆ ನೆರವಾಗಬೇಕಾದ್ದರಿಂದ ಬಂದದ್ದು. ನಮ್ಮ ಮೂಲಭೂತ ಜೈವಿಕ ತುಡಿತಗಳೂ ಉಳಿದುಕೊಂಡಿವೆ. ಊಟ, ಕುಡಿತ, ಸಂಭೋಗ ಹಾಗೂ ಬೆಚ್ಚಗಿರಬೇಕಾದ ಈ ಜೈವಿಕ ಅವಶ್ಯಕತೆಗಳು ಇಂದಿಗೂ ನಮಗೆ :ವಿವಿಧ ಬಗೆಯ ”ಐಂದ್ರಿಯ ಆನಂದ”ವನ್ನು ನೀಡುತ್ತವೆ.  ಇದಲ್ಲದೆ ಹೆಚ್ಚೆಚ್ಚು ಸಂಕೀರ್ಣಗೊಳ್ಳುತ್ತಿರುವ ನಮ್ಮ ಮಿದುಳಿನಿಂದಾಗಿ “ಮಾನಸಿಕ ಸಂತೋಷ”ದ ಸೆಲೆಗಳೂ ಸಿಕ್ಕಿವೆ. ಬುದ್ಧಿವಂತಿಕೆಯನ್ನು ಕೆದಕುವ ಚಟುವಟಿಕೆಗಳನ್ನು ನಡೆಸಿದಾಗ ದೊರೆಯುವ ಪ್ರತಿಫಲ ಇದು.

ಇವು ಸಂತೋಷದ ಕೆಲವು ಪ್ರಮುಖ ವರ್ಗಗಳು. ಇನ್ನೂ ಕೆಲವು ಖುಷಿಯ ಬಗೆಗಳಿವೆ. ಇವೆಲ್ಲವನ್ನೂ ಒಂದೊಂದನ್ನಾಗಿ ಪರಿಶೀಲಿಸೋಣ.

Published in: on ಜನವರಿ 2, 2016 at 8:46 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಸಂತೋಷದ ಸ್ವರೂಪ-ಸಂತೋಷದ ಸೆಲೆ 6

ಈ ಭಯಂಕರ ಹಿನ್ನೆಡೆಯಿಂದಾಗಿ ಮಾನವತೆಯ ಬೃಹತ್ ಪಾಲು ಸಂತೋಷವನ್ನು ತಮ್ಮ ಬದುಕಿನ ಕೇಂದ್ರದಲ್ಲಿ ಹುಡುಕದೆ, ಹವ್ಯಾಸ, ರಜೆ ಮುಂತಾದ ಬೇರೆ ಯಾವುದೋ ಕೋನದಲ್ಲಿ ಹುಡುಕಬೇಕಾಯಿತು.

ನಾವೀಗ ಇದನ್ನು ತಿದ್ದಿಕೊಳ್ಳುತ್ತಿದ್ದೇವೆ, ಆದರೆ ತುಂಬಾ ನಿಧಾನವಾಗಿ.  ದಿನಗೂಲಿಯ ಗುಲಾಮಿತನದ ಜಾಗೆಯಲ್ಲಿ ನಿರ್ಭಾವುಕ, ಯಾಂತ್ರಿಕ ಮನಸ್ಸನ್ನು ಕಲ್ಲಾಗಿಸುವಂತಹ ಸರಳ ಕೆಲಸಗಳನ್ನು ತಂದಿದ್ದೇವೆ. ಆದಾಯಕ್ಕೆ ತೊಂದರೆ ಇಲ್ಲದಂತೆ ಈ ಬಗೆಯ ನೀರಸ ಪುನರಾವರ್ತಿಸುವ ಉದ್ಯೋಗಗಳ ಪ್ರಮಾಣ ಕಡಿಮೆಯಾಗುವಂತೆ ನೋಡಿಕೊಳ್ಳಬೇಕಾದದ್ದು ಇಂದಿನ ಸಮಾಜದ ಹೊಣೆ. ಸುಧಾರಿತ ತಂತ್ರಜ್ಞಾನಗಳು ಒದಗಿಸುವ ಉನ್ನತ ಕ್ಷಮತೆ ಇದನ್ನು ಸಾಧ್ಯವಾಗಿಸಬಹುದು. ಆದರೆ ನಾವು ಎಲ್ಲಿಯಾದರೂ ಎಡವಿದರೆ ಮುಷ್ಕರಕ್ಕಿಳಿಯದ, ಸಮರ್ಥ ರೋಬೋಗಳು ಲಕ್ಷಾಂತರ ಜನರಿಗೆ ಕೆಲಸವಿಲ್ಲದಂತೆ ಮಾಡುವ ದುರ್ದಿನಗಳನ್ನು ಕಾಣಬೇಕಾದೀತು.  ಹೊಸ ಸುವರ್ಣಯುಗದ ಸಾಧ್ಯತೆಯೇನೋ ಇದೆ. ಇದಕ್ಕಾಗಿ  ನಮ್ಮಲ್ಲಿರುವ ಕಲ್ಪನೆಗಳು, ಚೈತನ್ಯಗಳನ್ನು ಆಕರ್ಷಿಸುವಂತಹ ರಾಜಕೀಯ ಪ್ರಪಂಚ ಬೇಕು. ಮನುಷ್ಯರು ಎಂತಹ ಜೀವಿಗಳು, ಇವರನ್ನು ಖುಷಿಗೊಳಿಸುವುದೇನು ಎನ್ನುವ ಬಗ್ಗೆ ರಾಜಕೀಯ ವ್ಯಕ್ತಿಗಳು ಕಣ್ತೆರೆದು ಕಾಣಲು ಇದು ಪ್ರಸಕ್ತ ಸಮಯ.

ನಮ್ಮ ಈ ಅತಿ ಸಂಕ್ಷಿಪ್ತ ಚರಿತ್ರೆಯ ಪ್ರಕಾರ ಮನುಷ್ಯನಿಗೆ ಖುಷಿ ಕೊಡುವಂತಹ ಮೂಲಗಳು ಹಲವಿವೆ ಎನ್ನುವುದು ಸ್ಪಷ್ಟ. ನಮ್ಮ ಬೇಟೆಗಾರ ಚರಿತ್ರೆಯಿಂದಾಗಿ ಹೊರಹೊಮ್ಮುವ ಮೊದಲನೆಯದನ್ನು “ಈಡಿನ ಖುಷಿ” ಎನ್ನಬಹುದು. ಇದಲ್ಲದೆ ‘ಸ್ಪರ್ಧಾತ್ಮಕ ಸಂತೋಷ”ವೂ ಇದೆ. ಇದು ಗೆಲುವಿನ ಖುಷಿ. ನಾವು ಸಣ್ಣ ಪಂಗಡಗಳಾಗಿ ವಿಕಾಸವಾಗಿ ಬಂದ ಸಾಮಾಜಿಕ ಹಿನ್ನೆಲೆಯಿಂದಾಗಿ ಬಂದದ್ದು. ಇದಕ್ಕೆ ವ್ಯತಿರಿಕ್ತವಾಗಿ “ಸಹಕಾರದ ಆನಂದ”ವೂ ಇದೆ. ಬದುಕಲು ನಾವು ಒಬ್ಬರಿನ್ನೊಬ್ಬರಿಗೆ ನೆರವಾಗಬೇಕಾದ್ದರಿಂದ ಬಂದದ್ದು. ನಮ್ಮ ಮೂಲಭೂತ ಜೈವಿಕ ತುಡಿತಗಳೂ ಉಳಿದುಕೊಂಡಿವೆ. ಊಟ, ಕುಡಿತ, ಸಂಭೋಗ ಹಾಗೂ ಬೆಚ್ಚಗಿರಬೇಕಾದ ಈ ಜೈವಿಕ ಅವಶ್ಯಕತೆಗಳು ಇಂದಿಗೂ ನಮಗೆ :ವಿವಿಧ ಬಗೆಯ ”ಐಂದ್ರಿಯ ಆನಂದ”ವನ್ನು ನೀಡುತ್ತವೆ.  ಇದಲ್ಲದೆ ಹೆಚ್ಚೆಚ್ಚು ಸಂಕೀರ್ಣಗೊಳ್ಳುತ್ತಿರುವ ನಮ್ಮ ಮಿದುಳಿನಿಂದಾಗಿ “ಮಾನಸಿಕ ಸಂತೋಷ”ದ ಸೆಲೆಗಳೂ ಸಿಕ್ಕಿವೆ. ಬುದ್ಧಿವಂತಿಕೆಯನ್ನು ಕೆದಕುವ ಚಟುವಟಿಕೆಗಳನ್ನು ನಡೆಸಿದಾಗ ದೊರೆಯುವ ಪ್ರತಿಫಲ ಇದು.

ಇವು ಸಂತೋಷದ ಕೆಲವು ಪ್ರಮುಖ ವರ್ಗಗಳು. ಇನ್ನೂ ಕೆಲವು ಖುಷಿಯ ಬಗೆಗಳಿವೆ. ಇವೆಲ್ಲವನ್ನೂ ಒಂದೊಂದನ್ನಾಗಿ ಪರಿಶೀಲಿಸೋಣ.

______________________________________________

ಟಿಪ್ಪಣಿ: ಇದು ‘ಸಂತೋಷದ ಸೆಲೆ’ ಎನ್ನುವ ಅಧ್ಯಾಯದ ಕೊನೆಯ ಪಾಠ. ಬ್ಲಾಗ್‍ ನಲ್ಲಿ ಇದನ್ನು ತಲೆಕೆಳಗಾಗಿ ಓದಿದಂತೆ ಅನಿಸುವುದರಿಂದ, ನಾಳೆ ಇಡೀ ಅಧ್ಯಾಯವನ್ನು ಹೊಸ ಬ್ಲಾಗ್‍ ರೂಪದಲ್ಲಿ ನೀಡುವೆ.

____________________________________________

This terrible set-back for such a large slice of humanity meant that happiness had to be found in hobbies and holidays, in the corners of their lives rather than in its centre.

 

We are slowly correcting this now, but far too slowly. Eventually computer technology will replace the wage-slaves with unfeeling, mechanical slaves for most of the mind-numbingly simple duties, and it is the task of modern society to see that this has the effect of reducing the amount of boringly repetitive work to a minimum without reducing income. The increased efficiency of our advancing technologies should make this possible, but if we mishandle the situation we may end up with the nightmare of thousands put out of work by efficient, strike-proof robots. The possibility of a new golden age is there for the taking if only the world of politics could attract the more imaginative spirits among us. It is high time that that politicians took the trouble to find out what kind of animal species human beings belong to, and what makes them feel happy.

From this highly condensed history of our species, it is dear that there are a number of primary sources for human happiness. The first is what might be called Target Happiness’ – the kind that stems from our ancient hunting past. There is also ‘Competitive Happiness’, the joy of winning, that is derived from our social background, as we evolved in small tribes. Opposed to this is ‘Cooperative Happiness’, based on our need to support one another to survive. We did not lose our old biological urges – to eat, drink, mate and keep warm – and these are still present to give us our various forms of ‘Sensual Happiness’. In addition, our increasingly complex brain gave us important sources of ‘Cerebral Happiness’, in which acts of intelligence became their own rewards.

These are some of the major categories of happiness and, together with a few others, they make up a simple classification of ‘happiness-types’. It is worth examining them, one by one.

 

Published in: on ಜನವರಿ 2, 2016 at 6:46 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಸಂತೋಷದ ಸ್ವರೂಪ – ಸಂತೋಷದ ಸೆಲೆ5

ನಾವೆಲ್ಲರೂ ಒಂದು ರೀತಿಯಲ್ಲಿ ಮಾರ್ಮಿಕ ಬೇಟೆಗಾರರು. ಬೇರೆ, ಬೇರೆ ವೇಷ ತೊಡುತ್ತೇವೆ ಅಷ್ಟೆ. ನಮ್ಮಲ್ಲಿ ಕೆಲವರು ಹಲವು ವೇ಼ಷಗಳನ್ನು ಧರಿಸಿ, ವಿಭಿನ್ನ ಚಟುವಟಿಕೆಗಳಲ್ಲಿ ಸಂತೋಷವನ್ನು ಹುಡುಕುತ್ತೇವೆ. ಉಳಿದವರು ವಿಶೇಷಜ್ಞರಾಗಿ ಜೀವಮಾನ ಪರ್ಯಂತ ಒಂದೇ ಬೇಟೆಯ ಬೆನ್ನು ಹತ್ತಿ ಹೋಗಲು ಇಚ್ಛಿಸುತ್ತಾರೆ. ಕೆಲವು ಮಾರ್ಮಿಕ ಬೇಟೆಯಾಟ ಬದುಕಿನ ಪೂರ್ತಿ ಇರಬಹುದು. ನಾನು ಈಗ ಸರ್ ಜೇಮ್ಸ್ ಮುರ್ರೇ ಆಕ್ಸ್ ಫರ್ಡ್ ನಿಘಂಟನ್ನು ಸಂಕಲಿಸಿದ ಮನೆಯಲ್ಲಿ ವಾಸವಿದ್ದೇನೆ. ಆತ ಸುಮಾರು ಮೂವತ್ತು ವರ್ಷಗಳ ಕಾಲ ಈ ನಿಘಂಟಿನ ಕಾರ್ಯದಲ್ಲಿ ನಿರತನಾಗಿದ್ದ. ಆತನ ಬೇಟೆ, ಅಂತಿಮ ಗುರಿ, ಜೆಡ್ ಅಕ್ಷರದ ಕೊನೆಯ ಪದ ಇದ್ದಿರಬೇಕು. ಅತ್ಯಂತ ವಿಷಾದದ ಸಂಗತಿ ಎಂದರೆ ಆತ ‘ಟಿ’ ಅಕ್ಷರವನ್ನು ತಲುಪುವ ಮುನ್ನವೇ, ಅಂದರೆ ಚಿರಸ್ಮರಣೀಯವಾದ ಖುಷಿಯನ್ನು ಅನುಭವಿಸುವ ಮುನ್ನವೇ, ಸತ್ತನೆಂದು ತಿಳಿಯುತ್ತದೆ. ಆತ ಸಾಯುವ ವೇಳೆ ಇನ್ನೂ “turndown” (ಟರ್ನ್ ಡೌನ್) ಎನ್ನುವ ಪದದಲ್ಲೇ ಇದ್ದ. “zymurgy” (ಜೈಮುರ್ಜಿ – ಇಂಗ್ಲೀಷ್ ನಿಘಂಟಿನ ಕೊನೆಯ ಪದ) ಯ ವಿವರಣೆಯನ್ನು ಪೂರ್ಣಗೊಳಿಸಿದ ಅಪ್ಪಟ ಸಂತೋಷವನ್ನು ಅನುಭವಿಸಲು ಆತ ಬದುಕಿ ಉಳಿಯಲಿಲ್ಲ. ಆ ಕ್ಷಣ ಎಂತಹ ಉತ್ಕಟ ಆನಂದದ ಕ್ಷಣವಾಗಿರುತ್ತಿತ್ತೋ?!

ಸಂತೋಷವೆನ್ವುನುದು ಒಬ್ಬೊಬ್ಬರಿಗೆ ಒಂದೊಂದು ತೆರವಷ್ಟೆ. ಆದರೂ ನಾನು ಒಂದೇ ಒಂದು ಬಗೆಯ ಬಗ್ಗೆ,  ಬೇಟೆಯಾಡುವ ಆದಿಮ ತುಡಿತವನ್ನು ತೃಪ್ತಿಗೊಳಿಸಿದ್ದರಿಂದ ದೊರೆಯುವ ಖುಷಿಯ ಬಗ್ಗೆಯಷ್ಟೆ ಮಾತನಾಡಿದ್ದೇನೆ. ಈ ತುಡಿತವೇ ಇಂದು ಹಲವು ವಿಧವಾದ ಕ್ರಿಯಾಶೀಲ ಹಾಗೂ ಪರಿಪೂರ್ಣತೆಯ ಚಟುವಟಿಕೆಗಳ ಎತ್ತರವನ್ನು ತಲುಪಿದೆ. ನಾನು ಹೀಗೇಕೆ ಮಾಡಿದೆ ಎಂದರೆ, ನಮ್ಮಲ್ಲಿ ಬಹಳಷ್ಟು ಮಂದಿಯಲ್ಲಿ ಈ ಗುಣ ಕಾಣೆಯಾಗಿರುವುದೇ ಇಂದು ನಾವು ಕಾಣುತ್ತಿರುವ ದುಃಖ, ದುಮ್ಮಾನಗಳಿಗೆ ಕಾರಣ ಅನ್ನುವುದು ನನ್ನ ನಂಬಿಕೆ. ಬದುಕಿನಲ್ಲಿ ಕ್ರಿಯಾಶೀಲತೆ ಹಾಗೂ ಸವಾಲುಗಳನ್ನು ಎದುರಿಸುವವರು ಬಹಳ ಅದೃಷ್ಟವಂತರು. ನಮ್ಮೆದುರಿಗೆ ನಾವು ತಲುಪಬಹುದಾದ ಗುರಿ ಕಾಣುತ್ತಿರುತ್ತದೆ. ಇಂತಹವರು ಮನುಷ್ಯರು ವಿಕಾಸವಾದ ರೀತಿಗೆ ಒಪ್ಪುವಂತೆ, ಅಂದರೆ ಯೋಜನೆಗಳನ್ನು ಹಾಕುತ್ತಾ, ತಂತ್ರಗಳನ್ನು ರೂಪಿಸುತ್ತಾ, ಶ್ರಮಪಟ್ಟು, ಅಪಾಯಗಳನ್ನು (ಕಷ್ಟಗಳನ್ನು) ಎದುರಿಸಿ, ಸಾಧನೆ ಮಾಡುತ್ತ ಬದುಕಬಹುದು. ಆದರೆ ಕೃಷಿಕ್ರಾಂತಿ ಮಾನವ ಜನಾಂಗದ ಬಹುತೇಕ ಜನತೆಯಲ್ಲಿ ಕೆಟ್ಟ ದೋಷವೊಂದನ್ನು ಉಳಿಸಿಬಿಟ್ಟಿದೆ.  ಬಹುತೇಕ ಜನರು ಅವಿರತವಾದ, ಉದಾಸ, ಮರುಕಳಿಸುವಂತಹ ಕೃಷಿ ಕೆಲಸಗಳಲ್ಲಿ ತೊಡಗಿಕೊಂಡರು. ಈಗಲೂ ಹಲವು ದೇಶಗಳಲ್ಲಿ ಇದು ನಡೆಯುತ್ತಲೇ ಇದೆ. ಹುಲ್ಲು ಮೇಯುವ ದನಗಳಿಗೆ ಈ ಬಗೆಯ ಜೀವನ ಒಪ್ಪುವುದಾದರೂ, ಗುರಿಹಿಡಿದು ನಡೆಯುವಷ್ಟು ಬುದ್ಧಿಮತ್ತೆಯಿರುವ ಹೆಣ್ಣು, ಗಂಡುಗಳಿಗಲ್ಲ.

ಕೈಗಾರಿಕಾ ಕ್ರಾಂತಿಯಿಂದಾಗಿ ಪರಿಸ್ಥಿತಿ ಇನ್ನೂ ಹದಗೆಟ್ಟಿತು. ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ತಲೆಯೆತ್ತಿ  ನೋಡಿದರೆ ಆಕಾಶವೂ ಕಾಣದಂತಾಯ್ತು. ಅವರ ಕೆಲಸ ಇನ್ನಷ್ಟು ಯಾಂತ್ರಿಕದ್ದೆನಿಸಿತು. ಯಾವುದೇ ಗೊತ್ತು-ಗುರಿ ಅವರ ಕೈಯಳತೆಯಲ್ಲಿರಲಿಲ್ಲ. ಇಂತಹ ಕೆಲಸದಲ್ಲಿ ಯಾವುದೇ ಖುಷಿ ಇರಲಿಲ್ಲ. ಪುರಾತನ ಗ್ರೀಸಿನಲ್ಲಿದ್ದ ಗುಲಾಮಗಿರಿಯನ್ನು ನಾವು ತೊಡೆದುಹಾಕಿದ್ದೆವೇನೋ ಸರಿ. ಆದರೆ ಅದರ ಜಾಗದಲ್ಲಿ ನವೀನ ದಿನಗೂಲಿ ಗುಲಾಮರನ್ನು ಸ್ಥಾಪಿಸಿದೆವು. ಇವರಿಗೆಲ್ಲ ಖುಷಿಯ ಕ್ಷಣ ಎಂಬುದು ಅವರ ಕೆಲಸದಾಚೆಯ ಚಟುವಟಿಕೆಗಳಿಗೆ ಸೀಮಿತವಾಯಿತು.ಆದರೂ ಈ ಕೆಲಸವೇ ಅವರು ಮನೆಗೆ ಎರಡು “ತುತ್ತು” ತರುವಂತೆ ಮಾಡಿದ್ದು. ಅಂದರೆ ಇಷ್ಟೆ. ಈ ನೀರಸ, ಪುನರಾವರ್ತನೆಗೊಳ್ಳುವ ಕೆಲಸ ಆದಿಮ, ರೋಮಾಂಚನಕಾರಿ ಬೇಟೆಗೆ ಪರ್ಯಾಯವೆನಿಸಿತು. ಅವರ ತಲೆಯೊಳಗಿದ್ದ, ವಿಕಾಸದ ಚರಿತ್ರೆಯಲ್ಲೇ ಮಹಾನ್ ಎನ್ನಿಸಿದ ಮಿದುಳಿಗೆ ಅವಮಾನ ಎನ್ನುವಂತಹ ಕೆಲಸಗಳನ್ನ ಮಾಡುವುದರಲ್ಲೇ ಬಹುತೇಕ ಬದುಕು ಸವೆಸಬೇಕಾಯ್ತು.

_____________________________________________________

ಟಿಪ್ಪಣಿ: ಹೊಸ ವರ್ಷದ ಶುಭಾಷಯಗಳು

ಮೂಲದಲ್ಲಿ ‘mindless”  ಎನ್ನುವ ಪದವಿದೆ. ಇದಕ್ಕೆ ಮನಸ್ಸಿಲ್ಲದ ಮನಸ್ಸಿನಿಂದ ಅನ್ನಬಹುದಿತ್ತೇನೋ? ಯಾಂತ್ತಿಕ ಎಂದು ಬರೆದಿದ್ದೇನೆ. ಇನ್ನೊಂದು ಕಡೆ, “brought home the bacon”  ಎನ್ನುವ ವಾಕ್ಯವಿದೆ. ಇದು ಉಣಿಸನ್ನು ತಂದದ್ದನ್ನು ವಿವರಿಸುವ ಪದಪುಂಜ. ಮಾರಿಸ್‍ ಈ ಪದಪುಂಜದಲ್ಲಿ ಬೇಟೆಯ ಸಾಂಕೇತಿಕತೆಯನ್ನು ಕಂಡಿದ್ದಾನೆ. ಆದರೆ ಇದಕ್ಕೆ ಸಮಾನವಾದ, ಕನ್ನಡ ನುಡಿಗಟ್ಟು ಸಿಗಲಿಲ್ಲ. (ನನಗೆ ಗೊತ್ತಿರಲಿಲ್ಲ ಎನ್ನುವುದು ಒಪ್ಪುವ ಮಾತು).  “ತುತ್ತು ಹೊತ್ತು ತರುವುದು” ಅಂತ ಬರೆದಿದ್ದೇನೆ. ನಿಮ್ಮ ಕಮೆಂಟ್‍ ಬರಲಿ.

___________________________________________________

We are all symbolic hunters, wearing funny hats. Some of us wear several hats and find happiness in a variety of pursuits (and there is another hunting word: pursuit). Others prefer to specialize and may spend a whole lifetime doggedly chasing after a single prey. Some types of symbolic hunt can take a whole lifetime. I am at present living in the house in which the Oxford English Dictionary was compiled by Sir James Murray. He spent over thirty years working on the huge dictionary and his goal, his ultimate prey, must have been to reach the end of the letter Z. It is with great sadness, a sense of a monumental happiness lost, that one discovers that he died at the letter T. He was working on the word ‘turndown’ at the time and never lived to experience the pure joy of completing the definition of ‘zymurgy’. W hat a climactic moment of happiness that would have been.

 

Happiness means many things to different people, and yet I seem to have been dwelling largely on one type. I have been stressing the happiness that comes from satisfying our basic urge to hunt down prey, which has been transformed and elevated into so many fulfilling and creative pursuits today. I have done this because I believe that a great deal of the unhappiness we see now has been caused by a loss of this quality in the lives of so many of us. Those of us who have

creative lives full of variety and challenge, with visible goals at which we can aim our efforts – we are the lucky ones. We can live in the way humans evolved to live: planning, striving, achieving, taking risks. But the agricultural revolution left a

terrible blight on a large slice of humanity. Large numbers of individuals were, and in some countries still are, condemned to endless, boring, repetitive toil in the fields. The work was fit for grass-chewing cattle but not for intelligent, goal oriented, inventive men and women.

 

With the industrial revolution, the situation grew worse. For the factory workers, there wasn’t even a sky above them as they toiled. Their jobs became even more mindless, and any sort of endproduct goal was beyond them. There was no joy to be had in such labour. We may have abolished the real slaves of ancient Greece, but all we did was to replace them with the wage-slaves of modern times. For them, moments of happiness had to be confined exclusively to activities outside their work. And yet it was their work that ‘brought home the bacon’. In other words, it was their boring, repetitive work that was supposed to be substituting for the thrills of the primeval hunt. The major part of their lives was spent in activities that were insulting to the great brains that nestled inside their skulls: the greatest brains in the whole history of evolution.

 

Published in: on ಜನವರಿ 1, 2016 at 6:43 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಸಂತೋಷದ ಸ್ವರೂಪ – ಸಂತೋಷದ ಸೆಲೆ4

ನಾಗರೀಕತೆ ಎನ್ನುವುದು ಇಲ್ಲವೇ ಇಲ್ಲವೇನೋ ಎನ್ನುವಂತೆ ಹಲವು ರಾಷ್ಟ್ರಗಳಲ್ಲಿ ಈ ಬಗೆಯ ಬೇಟೆಯಾಟಗಳು ವಿವಿಧ ರೂಪಗಳಲ್ಲಿ ಇನ್ನೂ ಅರಳುತ್ತಲೇ ಇವೆ. ನಮ್ಮಲ್ಲಿ ಈ ಬೇಟೆಯ ಹಂಬಲ ಎಷ್ಟು ಪ್ರಬಲವಾಗಿದೆ ಎಂದರೆ ಈ ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಅದು ತನ್ನ ರಕ್ತಸಿಕ್ತ ಮೂಲರೂಪದಲ್ಲಿ ಸಿಡಿಯಬಹುದು. ಈ ಹಂಬಲವನ್ನು ಹತ್ತಿಕ್ಕಲು ಜನತೆ ತಮ್ಮ ಸಾಂಕೇತಿಕ ಸೂತ್ರಗಳನ್ನು ಇನ್ನೂ ಉನ್ನತ ಮಾನವೀಯ ಮಟ್ಟಕ್ಕೆ ಕೊಂಡೊಯ್ಯಬೇಕಾಗಿದೆ.

ಖುಷಿಯ ವಿಷಯವೆಂದರೆ ಹಳೆಯ ರಕ್ತದೋಕುಳಿಯಾಟಗಳ ಜಾಗೆಯಲ್ಲಿ ಇಂದು ಚೆಂಡಿನಾಟಗಳು ಬಂದಿವೆ. ಪ್ರಾಣಿಗಳನ್ನು ಕೊಲ್ಲುತ್ತಿದ್ದ ತಂಡದ ಬದಲಿಗೆ ಆಟಗಾರರ ತಂಡವಿದೆ. ಪ್ರತಿ ಚೆಂಡಿನಾಟವೂ ಅದರದ್ದೇ ಆದ ಆದಿಮ ಬೇಟೆಯಾಟದ ವಿಶೇಷ ಮಾದರಿಯನ್ನು ರೂಪಿಸಿಕೊಂಡಿದೆ. ಫುಟ್ಬಾಲಿನಲ್ಲಿ ಗೋಲುಗಂಭಗಳು ಬೇಟೆಪ್ರಾಣಿಯ ಸಂಕೇತವಾಗಿವೆ. ಅದನ್ನು ನಾವು ಕೊಲ್ಲಬೇಕು. ಶಸ್ತ್ರವನ್ನು ಬೀಸಿ ಕೊಲ್ಲಲು ಈ ಬೇಟೆ ಸುಲಭ ಈಡು. ಆಟ ಇನ್ನಷ್ಟು ಉತ್ತೇಜಕವೆನ್ನಿಸಬೇಕೆಂದರೆ ಈಡನ್ನು ರಕ್ಷಿಸಬೇಕು. ವಿರೋಧಿ ತಂಡದ ಡಿಫೆಂಡರ್ ಗಳಿಂದ  ಈ ರಕ್ಷಣೆ ದೊರೆಯುತ್ತದೆ. ಸಾಕಷ್ಟು ಗೋಲುಗಳನ್ನು ಗಳಿಸಿದಾಗ (ಅಂದರೆ ಸಾಕಷ್ಟು ಬೇಟೆಗಳನ್ನು ಕೊಂದ ಮೇಲೆ) ಗೆದ್ದ ಟೀಮಿನ ನಕಲು-ಬೇಟೆಗಾರರು ತಾವು ಗೆದ್ದ ಬೇಟೆಯನ್ನು (ಟ್ರೋಫಿ) ತಮ್ಮ ಪಂಗಡದ ನೆಲೆಗೆ ಕೊಂಡೊಯ್ಯುತ್ತಾರೆ. ಅಲ್ಲಿ ಅದನ್ನು ಪಂಗಡದ ಇತರರು, ಅಂದರೆ ತಂಡದ ಬೆಂಬಲಿಗರು, ಕಾಣಲೆಂದು ಟೌನ್ ಹಾಲಿನ ಬಾಲ್ಕನಿಯಲ್ಲಿ   ಪ್ರದರ್ಶನಕ್ಕಿಡುತ್ತಾರೆ. ಈ ಟ್ರೋಫಿಯನ್ನು ತಿನ್ನುವುದಂತೂ ಆಗದು. ಆದರೂ ಫುಟ್ಬಾಲಿನ ಮಹಾ ಸ್ಪರ್ಧೆಗಳಲ್ಲಿ ಗೆದ್ದ ಟ್ರೋಫಿಯನ್ನು ಅನಂತರ ನಡೆಯುವ ಭೋಜನಕೂಟದಲ್ಲಿ ಪಂಕ್ತಿಯ ನಡುವೆ ಇಡುವುದುಂಟು.

ಬೇಟೆಗೂ ಇದಕ್ಕೂ ಇರುವ ಸಾಮ್ಯತೆ ಸ್ಪಷ್ಟ. ವಿವರಗಳು ಬದಲಾಗಿರಬಹುದು. ಆದರೆ ಯೋಜನೆ, ತಂತ್ರಗಾರಿಕೆ, ತಂತ್ರಗಳು ಮತ್ತು ಅಪಾಯಗಳು, ದೈಹಿಕ ಶ್ರಮ ಮತ್ತು ಗಾಯಗಳು, ತಂಡದ ಸಹಕಾರ, ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ ಈಡನ್ನು ಹೊಡೆಯಬೇಕೆನ್ನುವ ಆ ಉನ್ನತ ಗುರಿ, ಈ ಎಲ್ಲ ಮೂಲ ಭಾವನೆಗಳು ಹಾಗೇ ಉಳಿದಿವೆ. ಇಂದಿನ ಎಲ್ಲ ಆಟೋಟಗಳಲ್ಲೆಲ್ಲದರಲ್ಲೂ ಓಡುವುದು ಹಾಗೂ ಗುರಿಯಿಡುವುದು ಇದ್ದೇ ಇದೆ. ಇವೆರಡೂ ಆದಿಮ ಬೇಟೆಯ ಮೂಲ ತತ್ವಗಳು.

ಉತ್ಕಟ ಖುಷಿಯನ್ನು ಪ್ರಕಟಿಸುವ ಭಾವಗಳು ಹೇಗಿರುತ್ತವೆ ಎನ್ನುವುದನ್ನು ಗಮನಿಸಬೇಕಾದರೆ ಪ್ರಮುಖ ಆಟವೊಂದರ ಕೊನೆಯ ಕ್ಷಣದಲ್ಲಿ ಗೆಲುವಿನ ಗೋಲು ಹೊಡೆದಾಗ ಆಟಗಾರರು ಹಾಗೂ ಪ್ರೇಕ್ಷಕರ ನಡವಳಿಕೆಯನ್ನು ಗಮನಿಸಬೇಕು.  ನಮ್ಮ ಪೂರ್ವಜ ಬೇಟೆಗಾರರು ಯಾರೂ ಹೀಗೆ ಅತ್ಯಾನಂದದಿಂದ ಹೀಗೆ ಮೇಲೆ ಹಾರುತ್ತಿದ್ದರೆಂದು ನನಗೆ ಅನಿಸುವುದಿಲ್ಲ. ಇಂದಿನ ಆಟೋಟಗಳು ಆ ಕೊನೆಯ ತೃಪ್ತಿದಾಯಕವಾದ ಖುಷಿಯ ಕ್ಷಣಗಳನ್ನು ಮುಟ್ಟುವಂತಹ ಬೇಟೆಯಾಡುವ ಸಂಕೀರ್ಣ ಕ್ರಿಯೆಯ ಹಂತಗಳನ್ನು ಹೃಸ್ವವಾಗಿಸಿಬಿಟ್ಟಿವೆ. ನಮ್ಮಲ್ಲಿ ಬಹಳ ಜನರಿಗೆ, ಇಂತಹ ಆಟಗಳು ಖುಷಿಯ ಒರಟು ಸೆಲೆಗಳೆನ್ನಿಸಬಹುದು. ಇದಕ್ಕಿಂತಲೂ ನಾಜೂಕಾದ ಹಾಗೂ ಮಾರ್ಮಿಕ ಬೇಟೆಯಾಟಗಳನ್ನು ನಾವು ಇಷ್ಟಪಟ್ಟೇವು. ನಗರದಲ್ಲಿ ವ್ಯಾಪಾರಿ ಹೀಗೆಯೇ ಗಿರಾಕಿಯನ್ನು ‘ಹಿಡಿ’ಯುತ್ತಾನೆ. ನಟನೊಬ್ಬ ತನ್ನ ಅದ್ಭುತ ನಟನೆಯಿಂದ ಪ್ರೇಕ್ಷಕರನ್ನು ‘ಕೊಲ್ಲು’ ತ್ತಾನೆ. ತಾವಿಟ್ಟುಕೊಂಡ ‘ಗುರಿ’ ಯ ಹಣವನ್ನು ಸಂಗ್ರಹಿಸಿದಾಗ ಧರ್ಮಾರ್ಥ ಸಂಸ್ಥೆಗಳ ಸಿಬ್ಬಂದಿಗೆ ಖುಷಿಯಾಗುತ್ತದೆ. ರಾಜಕಾರಣಿ ತನ್ನ ‘ಗುರಿ’ ಬಡವರ ನೋವಿನ ನಿವಾರಣೆ ಎನ್ನುತ್ತಾನೆ.  ಕ್ಯಾನ್ಸರಿಗೆ ಚಿಕಿತ್ಸೆಯನ್ನು ‘ಹುಡುಕು’ ವುದೇ ವಿಜ್ಞಾನಿಯ ಜೀವನದ ಧ್ಯೇಯವಾಗುತ್ತದೆ. ಕಲಾವಿದ ಕ್ಯಾನ್ವಾಸಿನ ಮೇಲೆ ಲೋಪವಿಲ್ಲದ ಚಿತ್ರವನ್ನು ‘ ಸೆರೆ ಹಿಡಿದು’ ಇಡಬೇಕೆಂದು ಬಯಸುತ್ತಾನೆ. ಕೊಲ್ಲು, ಬಡಿ, ಗುರಿಯಿಡು, ಹುಡುಕು, ಸೆರೆ ಹಿಡಿ ಹೀಗೇ ನಾವು ನಮ್ಮ ಪ್ರಮುಖ ಧ್ಯೇಯಗಳನ್ನು ವ್ಯಕ್ತಪಡಿಸಲು ಬಳಸುವ ಹತ್ತು ಹಲವು ಶಬ್ದಗಳು ಬಲು ಅರ್ಥಪೂರ್ಣ.

____________________________________________________

ಟಿಪ್ಪಣಿ: ಮೂಲದಲ್ಲಿ ಇರುವ Businessman makes a ‘killing’ ಎನ್ನುವ ವಾಕ್ಯದಲ್ಲಿ ಕಿಲ್ಲಿಂಗ‍ ಶಬ್ದಕ್ಕೆ ಇರುವ ಸಾಂದರ್ಭಿಕ ಅರ್ಥವನ್ನು ಪೂರ್ಣವಾಗಿ ಕನ್ನಡದಲ್ಲಿ ಹಿಡಿದಿಡಿಯಲು ಕಷ್ಟವಾಯಿತು. ಆದರೂ ಪ್ರಯತ್ನಿಸಿದ್ದೇನೆ. ಇಲ್ಲಿ ಒಂದು ವಿಷಯ ಚರ್ಚಾರ್ಹ. ಮಾರಿಸ್‍ ಹೇಳುವ ಹಾಗೆ ಇಂಗ್ಲೀಷಿನಲ್ಲಿ ಬೇಟೆಯಲ್ಲಿ ಬಳಸುವ ಪದಗಳನ್ನೇ ಸಾಂಕೇತಿಕವಾಗಿ ನಿತ್ಯ ಜೀವನದಲ್ಲಿ ಬಳಸುತ್ತಿರಬಹುದು. ಇವಕ್ಕೆ ಪರ್ಯಾಯವಾಗಿ ಭಾರತೀಯ ಪ್ರಜ್ಞೆಯಲ್ಲಿಯೂ ಬೇಟೆಯ ಪದಗಳನ್ನೇ ಬಳಸುತ್ತೇವೆಯೇ? ಇಲ್ಲಿ ನಾನು ಭಾಷಾಂತರಕ್ಕೆಂದು ಕೆಲವು ಪದಗಳನ್ನು ಬಳಸಿದ್ದೇನೆ. ಸಾಂದರ್ಭಿಕವಾಗಿ ಅವು ಸರಿ ಎಂತಲೂ ಅನಿಸುತ್ತಿವೆ. ಆದರೆ ನಿಜವಾಗಿಯೂ ಅಂತಹ ಪದಗಳೆಷ್ಟಿವೆ? ಹೇಗೆ ಬಳಸುತ್ತೇವೆ? ಇದು ಕುತೂಹಲದ ಪ್ರಶ್ನೆ.

____________________________________________________

In many countries, sport-hunting still flourishes in a variety of forms, as though the civilizing process had never occurred. The hunting urge is so strong in us that even in the twenty-first century it can still explode in its bloody, original form, and people still need help to raise their symbolic equations to a more humane level.

 

Happily, the old arena blood sports have largely been replaced by arena ball sports. The squads of animal killers have been replaced by teams of sportsmen. Each ball sport has developed its own highly stylized version of the primitive hunt. In football, the prey has become a goal-mouth that has to be symbolically killed with a football. Because the target is too easy to hit with the missile, it has to be protected to make the game exciting. This protection is provided by the defending players of an opposing team. When enough goals have been scored (enough prey has been killed), the winning team of pseudo-hunters carries off a trophy and takes it back to their tribal headquarters, where it is displayed to their tribal followers from the balcony of the local town hall. This trophy, although inedible, sits symbolically on the table at the banquet that follows a great football triumph.

 

The hunting analogy is clear enough. The details have all changed, but the basic mood is still there: the planning and strategy, the tactics and dangers, the physical effort and injury, the group cooperation and, above all, the climactic aiming at a target. In fact, nearly all modern sports involve either aiming or chasing: the two fundamental elements of the primeval hunt.

 

If you want to watch the postures and expressions of intense, delirious happiness, watch the actions of the players and the fans when a last-minute winning goal is scored in an important match. I doubt if any primeval hunter ever leapt in the air

with such abandoned joy. Modern sport has recreated in an abstract form a complex hunting sequence leading to rare moments of consummatory happiness.

For many of us, these sporting events may seem rather crude as sources of inspiring happiness. We may prefer more subtle and complex substitutes for the hunt. The businessman chooses to make a ‘killing’ in the city; the actor goes on stage to ‘slay’ his audience; the charity workers are delighted when they have raised enough money to meet their ‘target’; the politician announces that to relieve the suffering of the poor is his ‘aim’; the research scientist devotes his life to ‘tracking dawn’ a cure for cancer; the artist tries to ‘trap’ on canvas the perfect picture, and so on and so on. The words we use to express our major motivations are revealing: killing, slay, target, aim, tracking down, trap.

 

Published in: on ಡಿಸೆಂಬರ್ 31, 2015 at 6:43 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಸಂತೋಷದ ಸ್ವರೂಪ – ಸಂತೋಷದ ಸೆಲೆ 3

ಇದರಿಂದ ಕೌಟುಂಬಿಕ ಸಂಬಂಧಗಳಿಗೂ ತೊಂದರೆಯಾಯಿತು. ಬೇಟೆಗಾರರಾಗಿದ್ದಷ್ಟು ಸುದೀರ್ಘ ಕಾಲವೂ ನಾವು ಜೋಡಿ ದಂಪತಿಗಳಾಗಿ ಬದುಕುವತ್ತ ಹೊರಳಿದ್ದೆವು. ಇದೊಂದು ಮಹತ್ತರ ತಿರುವಾಗಿತ್ತು. ಅಂದರೆ ನಮ್ಮ ಪೂರ್ವಜರು ಪ್ರೇಮಿಸಲು ತಯಾರಾಗಿದ್ದರು. ನೆನಪಿಡಿ, ಈ ಬದಲಾವಣೆ ನಿಧಾನವಾಗಿ ಬೆಳೆಯುವ ಸಂತಾನಗಳನ್ನು ಕಾಪಾಡುವುದರತ್ತ ಇಟ್ಟ ಪ್ರಮುಖ ಹೆಜ್ಜೆ. ಗಂಡಸರು ಬೇಟೆಗಾಗಿ ಹೆಚ್ಚೆಚ್ಚು ಹೊತ್ತು ದೂರವಿರುತ್ತಿದ್ದರು ಹಾಗೂ ಮನೆಗೆ ಮರಳಿ ಹೆಂಗಸರು ಹಾಗೂ ಮಕ್ಕಳಿಗೆ ಉಣಿಸು ನೀಡಿ ಪಾಲಿಸಬೇಕಿದ್ದರೆ ಹೆಣ್ಣಿನ ಜೊತೆಗಿನ  ಅವರ ಸಂಬಂಧ ಬಲು ಭದ್ರವಾಗಬೇಕಿತ್ತು.

ನಗರ ಜೀವನದ ಹೊಸ ವ್ಯವಸ್ಥೆಯಲ್ಲಿ, ವಿಶೇಷ ಕೌಶಲ್ಯಗಳ ಬೆಳವಣಿಗೆ ಹಾಗೂ ಕಾಯಕಗಳ ಹಂಚಿಕೆಗಳು ಕಾಣಿಸಿಕೊಂಡ ಫಲ ವ್ಯಾಪಾರ ಹಾಗೂ ಚೌಕಾಶಿತನ ಜೀವನದ ಒಂದು ಅಂಗವಾದುವು. ಇದರೊಟ್ಟಿಗೆ ಕೌಟುಂಬಿಕ ಬಂಧ ಎನ್ನುವುದು ಪ್ರೇಮ ಎನ್ನುವುದರಿಂದ ವ್ಯವಹಾರ ಬಂಧವಾಗಿ ಬದಲಾಯಿತು. ಮದುವೆ ಎನ್ನುವುದು ಹೊಸ ರೀತಿಯ ವ್ಯಾಪಾರವಾಯಿತು. ಇದಕ್ಕೆ ಒಗ್ಗಿಬರದ ಪ್ರೇಮ ಎನ್ನುವ ಬಂಧ ನಿಷ್ಠುರವಾಗಿ ಅದುಮಲ್ಪಟ್ಟಿತು. ಆಪ್ತ ಸಂಬಂಧಗಳಲ್ಲಿ ಅಸಂತೋಷವೆನ್ನುವುದು ಹರಡಿಕೊಂಡಿತು.

ಆದರೂ ಈ ಮನುಷ್ಯ ಎನ್ನುವ ಜೀವಿ ಬಲು ಗಟ್ಟಿ ಬಿಡಿ.  ಹೀಗೆ ನಮ್ಮ ಜೈವಿಕ ಅನುವಂಶೀಯತೆಯ ಪ್ರಧಾನ ಗುಣಗಳಿಗೆ ವಿರುದ್ಧವಾಗಿ ಸಮಾಜದ ಸ್ಥಿತಿಗತಿಗಳು ಎಳೆದಾಡಿದಾಗಲೆಲ್ಲ ನಮ್ಮಲ್ಲಿ ಅಂತರ್ಗತವಾದ ಯಾವುದೋ ಶಕ್ತಿ  ಸ್ವಸ್ಥಾನಕ್ಕೆ ಮರಳಲು ನೆರವಾಗುತ್ತದೆ. ಹತ್ತಾರು ಸಾವಿರ ವರ್ಷಗಳ ಮಾನವನ ಕಥೆಯ ಬೆರಗುಗೊಳಿಸುವ ಅಂಶವೆಂದರೆ ಇದು ನಾವು ಚರಿತ್ರಪೂರ್ವ ಕಾಲದಲ್ಲಿ ಇದ್ದಂತಹ ಸ್ಥಿತಿಗೇ ಮರಳಲು ಪ್ರಯತ್ನಿಸುತ್ತಿರುವ ಸುದೀರ್ಘ ಶ್ರಮ ಎನ್ನಬಹುದು. ಇದ್ದಂತಹ ಸ್ಥಿತಿಯೇ ಹೊರತು ಇದ್ದ ಸ್ಥಿತಿಯಲ್ಲ ಎನ್ನಿ. ಇದರ ಅರ್ಥ ವಿಷ್ಟೆ. ಪ್ರತಿಯೊಂದು ತಾಂತ್ರಿಕ ಬೆಳವಣಿಗೆಯೂ ನಾವು ಮಾನವರಾಟವನ್ನು ಆಡುವುದಕ್ಕೆ ಹೊಸ ಮಾರ್ಗಗಳನ್ನು ಹುಡುಕಬೇಕಾಯ್ತು.

ನಾಗರೀಕತೆ ಎನ್ನುವುದು ಈ ಬೆತ್ತಲೆ ವಾನರ ಹೊತ್ತು ನಡೆದ ಪ್ರಥಮ ಚಿಕಿತ್ಸೆಯ ಹೊರೆ ಎಂದು ಈ ಹಿಂದೆ ಒಮ್ಮೆ ನಾನು ಹೇಳಿದ್ದುಂಟು. ನಾಗರೀಕತೆ ಎನ್ನುವುದು ನಮ್ಮ ಪಾದಗಳಲ್ಲಿ ಬೊಕ್ಕೆಯೇಳಿಸುವಷ್ಟು ಭಾರಿ ಹೊರೆಯಾಗಿದ್ದರಿಂದ ಪ್ರಥಮ ಚಿಕಿತ್ಸೆಯ ಹೊರೆಯೂ ಬೇಕಾಯ್ತು. ಮಾನವನೆಂಬ  ಬೆತ್ತಲೆ ವಾನರ ತಾನು ಧರಿಸಿರುವ ಹೊಸ ಸಂಕೋಲೆಗಳನ್ನು ಕಳಚಿಕೊಳ್ಳದೆಯೇ ಹಳೆಯ ಜೈವಿಕ ಸಂಪ್ರದಾಯಗಳತ್ತ ಮರಳಲು ಸದಾ ಪ್ರಯತ್ನಿಸುವ ಪ್ರಾಣಿ. ಈ ಸೂಕ್ಷ್ಮವಾದ ನಡೆಯಲ್ಲಿ ನಮಗೆ ಭಾಷೆಯ ಬೆಳವಣಿಗೆಯಿಂದ ಲಭಿಸಿದ ಸಾಮರ್ಥ್ಯ ನಮ್ಮ ನೆರವಿಗೆ ಬರುತ್ತದೆ. ನಾವೀಗ ಮಹಾ ಸಂಕೇತಜ್ಞರಾಗಿ ಬಿಟ್ಟಿದ್ದೇವೆ. ನಾವು ಭಾಷೆಯೆಂಬ ಸಂಕೇತವನ್ನು ಬಳಸುವುದಷ್ಟೆ ಅಲ್ಲ, ನಮ್ಮ ಪ್ರತಿಯೊಂದು ಚಟುವಟಿಕೆಯಲ್ಲಿಯೂ ಸಾಂಕೇತಿಕ ಸೂತ್ರಗಳನ್ನು ರಚಿಸುತ್ತೇವೆ. ಹೀಗೆ ಸಂಕೇತಗಳನ್ನು ಸೃಷ್ಟಿಸುವದರಲ್ಲಿ ನಾವು ಎಷ್ಟು ಪರಿಣತರಾಗಿವಿಟ್ಟಿದ್ದೇವೆ ಎಂದರೆ ಒಂದು ಸಾಂಕೇತಿಕ ಸಾಧನೆಯೂ ನಮಗೆ ಖುಷಿ ತರಬಲ್ಲುದು. ಸಾಂಕೇತಿಕವಾಗಿಯೇ ಆದರೂ ಆದಿ ರೂಪದಲ್ಲಿ ಮಾಡುತ್ತಿದ್ದ ಕೆಲಸದ ಮಾದರಿಯನ್ನೋ, ನಕಲನ್ನೋ ಸಾಂಕೇತಿಕವಾಗಿ ನಡೆಸಿ ಅದು ನಿಜವೇ ಏನೋ ಎನ್ನುವಷ್ಟು ಖುಷಿ ಪಡುತ್ತೇವೆ. ಇದಕ್ಕೊಂದು ವೈಯಕ್ತಿಕ ಉದಾಹರಣೆ ಕೊಡುತ್ತೇನೆ. ಪುಸ್ತಕಗಳನ್ನು ಹುಡುಕುವುದು ನನಗೆ ಬಹಳ ಖುಷಿ ಕೊಡುವ ಕೆಲಸ. ಬಹಳ ದಿನಗಳ ಹುಡುಕಾಟದ ಅನಂತರ ನನಗೆ ಬೇಕಾಯಿತೆನ್ನಿಸಿದ ಅಪರೂಪದ ಪುಸ್ತಕವೊಂದು ಸಿಕ್ಕಿತೆನ್ನಿ, ಅದನ್ನು ತೆಗೆದುಕೊಂಡು ಮನೆಗೆ ಹೋಗುವುದು ಆದಿ ರೂಪದಲ್ಲಿ ಪ್ರಾಣಿಗಳನ್ನು ಬೇಟೆಯಾಡಿ ಮನೆಗೆ ಕೊಂಡೊಯ್ಯುತ್ತಿದ್ದುದರ ಸಂಕೇತ. ನನಗೆ ಈ ರೀತಿಯ ಬೇಟೆಯ ಅವಶ್ಯಕತೆ ಇನ್ನೂ ಇದೆ. ಆದರೆ ನನ್ನ ಪೂರ್ವೀಕರಂತೆ ನನ್ನ ಬೇಟೆಯ ಬಯಕೆಯನ್ನು ತಣಿಸಲು ಕಾಡುಪ್ರಾಣಿಗಳನ್ನು ಕೊಲ್ಲಬೇಕಿಲ್ಲ. ಏಕೆಂದರೆ ನಾನೀಗ ಮಾನವನಾಗಿದ್ದೇನೆ.

ಇಂದು ನಮ್ಮ ನಡವಳಿಕೆಗಳಲ್ಲಿ ಬಹುತೇಕ ಇಂತಹ ಆದಿ ನಡವಳಿಕೆಗಳ ಸಂಕೇತ ಸ್ವರೂಪಗಳು. ನಮ್ಮ ಉಳಿವಿಗೆ ಅವಶ್ಯಕವಾದ ಬೇಟೆಯನ್ನು ಬೇಸಾಯ ಕಿತ್ತೊಗೆದಂದಿನಿಂದಲೇ ಇದು ಆರಂಭವಾಯಿತು. ಉಳಿವಿಗಾಗಿ ಬೇಟೆ ಎನ್ನುವುದು ಮರೆಯಾದ ಕೂಡಲೇ, ಅದರ ಜಾಗದಲ್ಲಿ ಬೇಟೆಯೆಂಬ ಆಟ ಬಂತು. ಕಾಲಗಳೆಯಲು ಕಾಡುಪ್ರಾಣಿಗಳನ್ನು ಕೊಲೆಮಾಡಲಾರಂಭಿಸಿದೆವು. ಇಂತಹ ಕೊಲೆಗಡುಕ ಆಟಗಳು ಬೇಟೆಯ ಉನ್ಮಾದವನ್ನು ಉಳಿಸಿದುವು. ಅನಂತರ, ನಗರಗಳು ಹಾಗೂ ಪಟ್ಟಣಗಳು ಇನ್ನೂ ದೊಡ್ಡ, ದೊಡ್ಡದಾಗಿ ಬೆಳೆಯಲಾರಂಭಿಸಿದಾಗ ನಗರದ ಜನತೆ ಇಂತಹ ಓಟಾಟಗಳನ್ನು ಅನುಭವಿಸಲಾರದಾಯಿತಷ್ಟೆ. ಆಗ ಇಂತಹ ಬೇಟೆಯ ಅಪಬ್ರಂಶವೆನ್ನಿಸಿದ ಆಟ ಕಾಣಿಸಿಕೊಂಡಿತು: ಅದುವೇ ರಂಗಸ್ಪರ್ಧೆಗಳು. ಪುರಾತನ ರೋಮ್ ನಲ್ಲಿ ಕೊಲಿಸಿಯಮ್ ನಿರ್ಮಾಣವಾಯಿತು. ಅಲ್ಲಿ ತುಂಬಿಕೊಂಡ ಜನಜಂಗುಳಿಯ ಸಂತೋಷಕ್ಕಾಗಿ ಅಸಂಖ್ಯ ಪ್ರಾಣಿಗಳನ್ನು ತಂದು ಬೇಟೆಯಾಡಲಾಯಿತು. ಒಂಭೈನೂರು ವರ್ಷಗಳ ಹಿಂದೆ ಅದರ ಉದ್ಘಾಟನೆಯ ಸಂದರ್ಭದಲ್ಲಿ ಐದುಸಾವಿರಕ್ಕೂ ಹೆಚ್ಚು ಪ್ರಾಣಿಗಳು ಕೊಲೆಯಾದುವು. ಈ ಬಗೆಯ ಪ್ರಾಣಿಬೇಟೆ ವ್ಯಾಪಕವಾಗಿ ನಡೆಯುತ್ತಿತ್ತು. ಸ್ಪೇನಿನ ಗೂಳಿಕಾಳಗದಂತಹ ರೂಪದಲ್ಲಿ ಈಗಲೂ ಇದು ಉಳಿದುಕೊಂಡಿದೆ. ಬೇಟೆಯಾಡುವುದರ ಪ್ರಾತ್ಯಕ್ಷಿಕೆಯೋ ಎನ್ನುವಂತೆ ಪ್ರತಿವರ್ಷ ಪಾಂಪ್ಲೋನಾದಲ್ಲಿ ನಡೆಯುವ ಗೂಳಿ ಸ್ಪರ್ಧೆಗಳ ಬಗ್ಗೆ ನಿಮಗೆ ಗೊತ್ತೆ ಇರಬೇಕಲ್ಲ!

________________________________________________

ಟಿಪ್ಪಣಿ: ಮೊನ್ನೆಯಷ್ಟೆ ಕೇಂದ್ರ ಸರಕಾರ ತಮಿಳುನಾಡಿನಲ್ಲಿ ಪ್ರತಿವರ್ಷ ನಡೆಯುವ ಗೂಳಿ ಕಾಳಗ ಜಲ್ಲಿಕಟ್ಟಿನಂತಹ ಸ್ಪರ್ಧೆಗಳಿಗೆ ಅನುಮತಿ ನೀಡಿದೆ. ಜಲ್ಲಿಕಟ್ಟು, ಕರಾವಳಿಯ ಕಂಬಳ, ಉತ್ತರ ಕರ್ನಾಟಕದ ಕೆಲವೆಡೆ ನಡೆಯುವ ಎತ್ತಿನ ಜೊತೆಗಿನ ಕಾಳಗ ಇವನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.

ನಾಗರೀಕತೆ ಬೆಳೆದಿದ್ದರೂ,  ಎಲ್ಲೆಡೆಯೂ ಮಾನವನ ಆದಿರೂಪ ಹಾಗೇ  ಉಳಿದುಕೊಂಡಿದೆ ಎನ್ನುವುದಕ್ಕೆ ಇವು ಪುರಾವೆ. ಅಲ್ಲವೇ?

___________________________________________________

Family relationships also suffered. In our long hunting phase we had made an important biological shift towards pair-bonding. In other words, our ancestors became programmed to fall in love. This was a vital step in the protection of the slow-growing young – especially when you recall that the males were away for long periods of time

on the hunt and had to be tightly bonded to their females in order to return to the home base to feed and care for them and their offspring.

In the new urban structure, with specialization and division of labour having led to  trading and bargaining as a way of life, it was inevitable that family ties would also become a matter of business rather than love. Arranged marriages became a new trading device. Love bonds that did not suit them were ruthlessly suppressed. More unhappiness spread in this important realm of intimate personal relations.

But the human animal is amazingly resilient. Every time new social trends began to pull us away from the central themes of our biological inheritance, some inner strength in our human nature helped to tug us back again. And the surprising feature of the last ten thousand years of the human story is that it has been a long struggle to return to a social condition similar to that in which we had existed in prehistoric times. Similar, but not, of course, the same. Each new technical advance has meant that we have had to find a new way of playing the game of being human.

I once described civilization as a first-aid kit carried on the shoulders of the naked ape, which was so heavy that it caused blisters on his feet – that required first aid.. The naked ape, the human animal, is always trying to get back to its biological norm, but without giving up its new trappings. We are aided in this delicate operation by an ability that stems from our linguistic developments. For we have become great symbolizers. We not only use symbolic speech, but also make symbolic equations  in every sphere of our activities. And we are so good at symbolizing that we can experience an intense happiness from a symbolic success, a happiness just as real as if we were engaged in the original, primeval model of which the symbolic act is a copy. To give a personal example, one of my great joys is going on a book-hunt. Finding a rare book I desperately want after a long search, acquiring it and carrying it home with me, is a symbolic equivalent of a primeval hunt for prey. Yes, I still need to hunt because I am human, but no, I do not have to kill a wild animal to satisfy my ancient biological hunting urge.

A vast proportion of the activities we engage in today are symbolic substitutes for the primeval hunt. This began as soon as the agricultural revolution removed hunting as a survival device. As soon as survival-hunting vanished. it was replaced by sporthunting in which wild beasts were slaughtered as a pastime. The thrill of the chase was retained by the invention of blood sports. Later, when great towns and cities began to grow bigger and bigger, the urban population found itself unable to enjoy the chase, so the hunt was brought into the cities in a corrupted form: the arena display. The Coliseum was built in ancient Rome, and huge numbers of animals were brought there to be slain for the pleasure of the packed audience. On its opening day, nineteen hundred years ago, no fewer than five thousand animals perished. This form of slaughter became widespread and still lingers on in a modified form as the Spanish bullfight. And we all know about the annual bull-running in Pamplona, which dramatically recreates the dangers of the hunt.

Published in: on ಡಿಸೆಂಬರ್ 30, 2015 at 7:21 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ